ರೇಣುಕಾಸ್ವಾಮಿ ಕೊಲೆ ಕೇಸ್​ನ ಆರೋಪಿಗಳಾದ Darshan ಹಾಗೂ Pavithra ಇಂದು ಕೋರ್ಟ್‌ಗೆ ಹಾಜರಾಗಿದ್ರು.. ಆದ್ರೆ, ಕೋರ್ಟ್‌ಗೆ ಹಾಜರಾದ ವೇಳೆ ಪವಿತ್ರಾ ಹಾಗೂ ದರ್ಶನ್‌ ಮಧ್ಯೆ ಎರಡು ಘಟನೆ ನಡೆದಿದೆ.. ಅದೇನಂದ್ರೆ, ಪವಿತ್ರಾ ಹಠ ಮಾಡಿ ದರ್ಶನ್‌ ಫೋನ್‌ ನಂಬರ್‌ ಪಡೆದಿದ್ದು.. ಮತ್ತು ಕೈ ಕೈ ಹಿಡಿದು ಮಾತಾಡಿರುವ ಬಗ್ಗೆ ವರದಿಯಾಗಿದೆ.. ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ 57ನೇ ಸಿಸಿಹೆಚ್​ ಕೋರ್ಟ್​ನಲ್ಲಿ ನಡೆದಿದೆ. ಈ ವೇಳೆ ಒಂದಷ್ಟು ಅಪರೂಪದ ಘಟನೆಗಳು ನಡೆದಿವೆ..

ಇನ್ನು, ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ 17 ಜನರನ್ನು ಪೊಲೀಸರು ಬಂಧಿಸಿದ್ದರು. ಈಗಾಗಲೇ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಜಾಮೀನು ನೀಡುವಾಗ ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿತ್ತು. ಅವುಗಳ ಪೈಕಿ ಕೋರ್ಟ್​ಗೆ ಹಾಜರಿ ಹಾಕಬೇಕು ಅನ್ನೋದು ಕೂಡ ಪ್ರಮುಖ ಷರತ್ತಾಗಿತ್ತು. ಅದರಂತೆ ಪವನ್ ಹೊರತುಪಡಿಸಿ ಮತ್ತೆಲ್ಲಾ ಆರೋಪಿಗಳು ಕೋರ್ಟ್​ಗೆ ಹಾಜರಿ ಹಾಕಿದ್ದಾರೆ.

ಕೋರ್ಟ್​ ಹಾಲ್​ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಕೋರ್ಟ್​ನಲ್ಲಿ ಅಕ್ಕ-ಪಕ್ಕದಲ್ಲಿ ನಿಂತಿದ್ದರು. ಅಷ್ಟೇ ಅಲ್ಲ, ಕೋರ್ಟ್​ನಿಂದ ಹೊರ ಬರುವಾಗ ದರ್ಶನ್​ ಕೈನ ಪವಿತ್ರಾ ಹಿಡಿದುಕೊಂಡಿದ್ದರು ಅಂತಾ ಹೇಳಲಾಗ್ತಿದೆ.. ಕೋರ್ಟ್​ನಿಂದ ಹೊರಹೋಗುವಾಗ ಜನ ಜಂಗುಳಿ ಇತ್ತು. ಈ ಕಾರಣಕ್ಕೆ ದರ್ಶನ್ ಹಾಗೂ ಪವಿತ್ರಾ ಕೈ ಕೈ ಹಿಡಿದು ಬಂದ ಬಗ್ಗೆ ವರದಿ ಆಗಿದೆ. ಇನ್ನು, ಪವಿತ್ರಾ ಹಠ ಮಾಡಿದ್ದಕ್ಕೆ ದರ್ಶನ್ ಅವರು ತಮ್ಮ ಮೊಬೈಲ್​ ಸಂಖ್ಯೆಯನ್ನೂ ನೀಡಿದ್ದಾರೆ ಅಂತಾ ಹೇಳಲಾಗುತ್ತಿದೆ..

Also Read: Darshan, Pavithra Gowda : ಕೋರ್ಟ್‌ನಲ್ಲಿ ದರ್ಶನ್‌ ಪವಿತ್ರಾ ಮುಖಾಮುಖಿ!

ಮತ್ತೊಂದೆಡೆ, ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಪವಿತ್ರಾಗೌಡಗೆ ಟಾಂಗ್‌ ಕೊಟ್ಟಿದ್ದಾರೆ.. ಇನ್‌ಸ್ಟಾಗ್ರಾಮ್‌ನಲ್ಲಿ ದಿನಕರ್‌ ಪತ್ನಿ ಹಾಗೂ ಅತ್ತೆಯ ಜೊತೆಗಿರುವ ಫೋಟೋವನ್ನು ಸ್ಟೋರಿ ಹಾಕಿದ್ದಾರೆ.. ಮಧ್ಯದಲ್ಲಿ ಅತ್ತೆ ಮೀನಮ್ಮ ನಿಂತಿದ್ರೆ, ಅಕ್ಕಪಕ್ಕ ವಿಜಯಲಕ್ಷ್ಮೀ ಹಾಗೂ ದಿನಕರ್‌ ಪತ್ನಿ ನಿಂತಿದ್ದಾರೆ. ಈ ಫೋಟೋ ಶೇರ್‌ ಮಾಡುವ ಮೂಲಕ ತೂಗುದೀಪ ಅವರಿಗೆ ಇಬ್ಬರೇ ಸೊಸೆಯಂದಿರು ಅನ್ನೋ ಸಂದೇಶ ರವಾನಿಸಿದ್ದಾರೆ ಅಂತಾ ಹೇಳಲಾಗ್ತಿದೆ..

Share.
Leave A Reply