ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy) ಪ್ರಕರಣಕ್ಕೆ ಇಂದಿಗೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಮಗನನ್ನು ಕಳೆದುಕೊಂಡಿರುವ ರೇಣುಕಾಸ್ವಾಮಿ ಕುಟುಂಬಸ್ಥರು ಕಣ್ಣೀರಿಡುತ್ತಲೇ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪುತ್ರ ಶೋಕ ನಿರಂತರವಾಗಿದ್ದು ಎಂದೂ ಮರೆಯಲಾಗಲ್ಲ. ಮೊಮ್ಮಗನ ಆರೈಕೆ ಆಟ ಪಾಠದಲ್ಲಿ ನೋವನ್ನು ಮರೆಯುತ್ತಿದ್ದೇವೆ ಎಂದು ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವನಗೌಡ್ರು ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯ ಸರ್ಕಾರ ಭರವಸೆ ಕೊಟ್ಟಂತೆ ನಡೆದಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸರ್ಕಾರ ಪ್ರಕರಣವನ್ನು ಫಾಸ್ಟ್ ಟ್ರಾಕ್ ಮೂಲಕ ನಡೆಸಬೇಕು. ಮಾನವೀಯ ನೆಲೆಗಟ್ಟಿನಲ್ಲಿ ನಮ್ಮ ಸೊಸೆಗೆ ನೌಕರಿ ವ್ಯವಸ್ಥೆ ಮಾಡಬೇಕು. ನಮಗೆ ಕಾನೂನು, ಸರ್ಕಾರ ಪೊಲೀಸ್ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ಆದರೆ ಸೊಸೆಗೆ ನೌಕರಿ ಕೊಡಲು ಕಾನೂನು ಪ್ರಕಾರ ಬರಲ್ಲ ಅಂದಿದ್ದಾರೆ.

ತಂದೆ-ತಾಯಿಯಾಗಿ ನಾವು ಹೇಳೋದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅನ್ನೋದು. ನಟ ದರ್ಶನ್ ಅವರು ಜೈಲಿಂದ ಹೊರ ಬಂದ ಮೇಲೆ ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ. ಒಂದು ವೇಳೆ ಸಂಪರ್ಕಕ್ಕೆ ಬಂದ್ರೆ ಆ ವಿಚಾರ ಬೇರೆ. ನಮ್ಮ ಹಿರಿಯರು ಅಂತಹ ಪ್ರಸಂಗದಲ್ಲಿ ತೀರ್ಮಾನ‌ ಮಾಡುತ್ತಾರೆ ಎಂದು ಶಿವನಗೌಡ್ರು ಹೇಳಿದ್ದಾರೆ.

Share.
Leave A Reply