ಅಫ್ಘಾನಿಸ್ತಾನದಲ್ಲಿ ಪ್ರಯಾಣಿಕರಿದ್ದ ಬಸ್‌ ಟ್ರಕ್‌ ಹಾಗೂ ಬೈಕ್‌‌ಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತ ಸಂಭವಿಸಿದೆ. ಈ ದುರಂತ ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದಿದೆ. ಪ್ರಯಾಣಿಕರಿದ್ದ ಬಸ್‌ ಟ್ರಕ್ ಮತ್ತು  ಬೈಕ್​​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಬಸ್‌ಗೆ ಬೆಂಕಿ ಆವರಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಕೆನ್ನಾಲಿಗೆ ಇಡೀ ಬಸ್‌ ಸುಟ್ಟು ಭಸ್ಮವಾಗಿದ್ದು, ಘಟನೆಯಲ್ಲಿ 71 ಮಂದಿ ಸಜೀವ ದಹನರಾಗಿದ್ದಾರೆ.

ಅಫ್ಘಾನಿಸ್ತಾನದಲ್ಲಿ ವಲಸಿಗರನ್ನು ಈ ಬಸ್‌ ಹೊತ್ತೊಯ್ಯುತ್ತಿತ್ತು. ಈ ಭೀಕರ ಅಪಘಾತದಲ್ಲಿ ಪ್ರಯಾಣಿಕರ ಮೃತದೇಹಗಳು ಸುಟ್ಟು ಕರಕಲಾಗಿವೆ. ನೋಡ ನೋಡುತ್ತಲೇ ಜನರು ಸುಟ್ಟು ಕರಕಲಾಗಿದ್ದಾರೆ. 17 ಮಕ್ಕಳು ಸೇರಿದಂತೆ ಕನಿಷ್ಠ 71 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌ ಇರಾನ್‌ನಿಂದ ಗಡಿಪಾರು ಮಾಡಲಾದ ಅಫ್ಘನ್ನರನ್ನು ಹೊತ್ತೊಯ್ಯುತ್ತಿತ್ತು. ವಲಸಿಗರಿದ್ದ ಬಸ್‌ ಗಡಿ ದಾಟಿದ ನಂತರ ಕಾಬೂಲ್ ಕಡೆಗೆ ಪ್ರಯಾಣಿಸುತ್ತಿತ್ತು ಎಂದು ಪ್ರಾಂತೀಯ ಅಧಿಕಾರಿ ಮೊಹಮ್ಮದ್ ಯೂಸುಫ್ ಸಯೀದಿ ಎಎಫ್‌ಪಿಗೆ ತಿಳಿಸಿದ್ದಾರೆ.

Read Also : ರಾಜಸ್ಥಾನದ ಬೆಡಗಿಗೆ.. ಮಿಸ್‌ ಯೂನಿವರ್ಸ್‌ ಇಂಡಿಯಾ ಕಿರೀಟ..!

Share.
Leave A Reply