ಸೈಬರ್‌ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿವೆ. ಯುಪಿಐ ಸ್ಕ್ಯಾಮ್‌, ಸ್ಪ್ಯಾಮ್‌ ಕಾಲ್ಸ್‌, ಅನ್‌ನೋನ್‌ ಪಾರ್ಸಲ್‌ ಡೆಲಿವರಿ, ವಾಟ್ಸಾಪ್‌ ಲಿಂಕ್‌, ಇನ್ಸ್ಟಾಗ್ರಾಂ ಹ್ಯಾಕ್‌ ಹೀಗೆ ವಿವಿಧ ಆಯಾಮಗಳ ಮೂಲಕ ಜನರನ್ನ ಬಲೆಗೆ ಬೀಳಿಸಲು ಹೊಂಚು ಹಾಕಿ ಕಾಯ್ತಿರುತ್ತಾರೆ. ಅವಕಾಶ ಸಿಕ್ಕರೆ ಸಾಕು ನಿಮಗೆ ಗೊತ್ತೆ ಆಗದಂತೆ ನಿಮ್ಮ ಪರ್ಸನಲ್‌ ಡಿಟೇಲ್‌ ಡಾಟಾವನ್ನೇ ನುಂಗಿ ನೀರು ಕುಡಿಯುತ್ತಾರೆ. ಆನ್‌ಲೈನ್‌ ದೋಖಾ ಪ್ರಕರಣಗಳಿಗೆ ಜನ ರೋಸಿ ಹೋಗಿದ್ದಾರೆ. ಈಗ ನಡೆದಿರೋದು ಚಿಕ್ಕ ಪುಟ್ಟ ವಂಚನೆ ಅಲ್ಲಾ ರಾಜ್ಯದಲ್ಲಿ ನಡೆದಿರೋ ಅತೀ ದೊಡ್ಡ ವಂಚನೆ ಪ್ರಕರಣ.

ರಾಜ್ಯದಲ್ಲಿ ಅತಿದೊಡ್ಡ ಸೈಬರ್ ವಂಚನೆ ಪ್ರಕರಣ ನಡೆದಿದ್ದು, ಬೆಂಗಳೂರಿನ ಪ್ರತಿಷ್ಠಿತ ಕ್ರಿಪ್ಟೋ ಕರೆನ್ಸಿ ಕಂಪನಿ ನೆಬಿಲೋ ಟೆಕ್ನಾಲಜೀಸ್‌ ಅನ್ನು ವಂಚಕರು ಹ್ಯಾಕ್ ಮಾಡಿದ್ದು, ಬರೋಬ್ಬರಿ 378 ಕೋಟಿ ಎಗರಿಸಿದ್ದಾರೆ. ನೆಬಿಲೋ ಟೆಕ್ನಾಲಜೀಸ್‌ ಕಂಪೆನಿ ಬಗ್ಗೆ ಅನೇಕ ಜನರಿಗೆ ಗೊತ್ತಿದೆ. ಇದೊಂದು ಕ್ರಿಪ್ಟೋ ಕರೆನ್ಸಿ ಎಕ್ಸ್ ಚೇಂಜ್ ಮಾಡುವ ಕಂಪನಿಯಾಗಿದ್ದು ಇದನ್ನ ಸೈಬರ್ ವಂಚಕರು ಹ್ಯಾಕ್ ಮಾಡಿದ್ದಾರೆ. ಹ್ಯಾಕ್ ಮಾಡಿ ಬರೋಬ್ಬರಿ 378 ಕೋಟಿ ಹಣವನ್ನು ದೋಚಿದ್ದು ಸದ್ಯ ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯನ್ನ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಕಂಪನಿಯ ಉದ್ಯೋಗಿ ರಾಹುಲ್ ಅಗರ್ವಾಲ್ ನನ್ನು ಬಂಧಿಸಲಾಗಿದೆ. ಕಂಪನಿ ಈತನಿಗೆ ನೀಡಿದ್ದ ಲ್ಯಾಪ್ ಟಾಪ್ ಮೂಲಕವೇ ಸೈಬರ್ ವಂಚಕರು ಕಂಪನಿ ಸರ್ವರ್ ಹ್ಯಾಕ್ ಮಾಡಿ 378 ಕೋಟಿ ದೋಚಿದ್ದಾರೆ ಎಂದು ತಿಳಿದು ಬಂದಿದ್ದು, ತನಿಖೆ ಮುಂದುವರೆದಿದೆ..

Share.
Leave A Reply