Author: chandrakant

ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗಧಿಯಾಗಿದೆ. ಬಿಹಾರ ರಾಜ್ಯದ 243 ವಿಧಾನಸಭೆ ಚುನಾವಣೆಗೆ 2 ಹಂತಗಳಲ್ಲಿ ಮತದಾನ ನಡೆಯಲಿದೆ.. ನವೆಂಬರ್‌ 6ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ನವೆಂಬರ್‌ 11ರಂದು ಎರಡನೇ ಹಂತರ ವೋಟಿಂಗ್‌ ನಡೆಯಲಿದೆ. ನವೆಂಬರ್‌ 14ರಂದು 243 ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ ಅಂತಾ ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್‌ ಮಾಹಿತಿ ನೀಡಿದ್ದಾರೆ. ಇನ್ನು, ಬಿಹಾರದಲ್ಲಿ ಒಟ್ಟು 7.43 ಕೋಟಿ ಮತದಾರರು ಇದ್ದಾರೆ. ಈ ಪೈಕಿ 3.92 ಕೋಟಿ ಪುರುಷ ಮತದಾರರಿದ್ರೆ, 3.50 ಕೋಟಿ ಮಹಿಳೆಯರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ. ಈಗಾಗಲೇ ಬಿಹಾರದಲ್ಲಿ ಜೆಡಿಯು ಹಾಗೂ ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿದೆ. ಜೆಡಿಯು ನಾಯಕ ನಿತೀಶ್‌ಕುಮಾರ್‌ ಸಿಎಂ ಆಗಿದ್ದು ಈ ಎಲೆಕ್ಷನ್‌ನಲ್ಲೂ ಮೈತ್ರಿ ಮುಂದುವರಿದಿದೆ. ಎನ್‌ಡಿಎ ಕೂಟ ಗೆಲ್ಲಿಸಲು ಪ್ರಧಾನಿ ಮೋದಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಮತ್ತೊಂದೆಡೆ, ಆರ್‌ಜೆಡಿ ಕಾಂಗ್ರೆಸ್‌ ಮೈತ್ರಿಕೂಟ ಕೂಡ ಅಧಿಕಾರಕ್ಕೇರಲು ಭರ್ಜರಿ ಪ್ಲ್ಯಾನ್‌ ಮಾಡಿದೆ. ಕಾಂಗ್ರೆಸ್‌ ಬೆಂಬಲದೊಂದಿಗೆ ಲಾಲೂ ಪ್ರಸಾದ್‌ ಯಾದವ್‌ ಪುತ್ರ ತೇಜಸ್ವಿ ಯಾದವ್‌…

Read More

ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಜೋಡೆತ್ತುಗಳು. ಜೊತೆಯಾಗಿ ಕ್ರಿಕೆಟ್ ಕರಿಯರ್ ಆರಂಭಿಸದಿದ್ರೂ, ಟಿ20, ಟೆಸ್ಟ್​ ಕ್ರಿಕೆಟ್​​​ ಕರಿಯರ್​​ಗೆ ಅಂತ್ಯ ಹಾಡಿದ್ದು ಜೊತೆಯಾಗಿಯೇ. ಇದೀಗ ಏಕದಿನ ಕ್ರಿಕೆಟ್​ನಿಂದಲೂ ಜೊತೆಯಾಗಿಯೇ ಸೈಡ್ ಲೈನ್ ಆಗ್ತಿದ್ದಾರಾ ಎಂಬ ಅನುಮಾನ ಮೂಡಿಸಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಸೆಲೆಕ್ಷನ್ ಕಮಿಟಿ ರೋಹಿತ್​ಗೆ ಕ್ಯಾಪ್ಟನ್ಸಿಯಿಂದ ಕೊಕ್​ ಕೊಟ್ಟಿದೆ. ಇದ್ರಿಂದ ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಸೈಡ್​ ಲೈನ್ ಆಗ್ತಿದ್ದಾರಾ ಎಂಬ ಅನುಮಾನ ಹುಟ್ಟಿದೆ. ರೋಹಿತ್, ವಿರಾಟ್​ 2027ರ ಏಕದಿನ ವಿಶ್ವಕಪ್ ಗೆಲ್ಲುವ​​ ಕನಸಿನಲ್ಲಿದ್ದಾರೆ. ಆದ್ರೆ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ಆಸೆಗೆ ಬಿಸಿಸಿಐ ತಣ್ಣೀರು ಎರಚಲು ಮುಂದಾಗಿದೆ. ಆಸ್ಟ್ರೇಲಿಯಾ ಸರಣಿ ನಂತರ ಸೈಡ್​ಲೈನ್​ ಮಾಡುವ ಉದ್ದೇಶ ಹೊಂದಿರುವ ಬಿಸಿಸಿಐ, ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕೆಂದು ಸೂಚಿಸಿದೆ. ಪರೋಕ್ಷವಾಗಿ ರನ್​ ಗಳಿಸಿದರಷ್ಟೇ ಟೀಮ್ ಇಂಡಿಯಾದಲ್ಲಿ ಸ್ಥಾನ ಎಂಬ ಎಚ್ಚರಿಕೆ ಸಂದೇಶ ನೀಡಿದೆ. ಹೀಗಾಗಿ ರೋಹಿತ್ ಶರ್ಮಾ ಮತ್ತು…

Read More

ಸರ್ವೋಚ್ಛ ನ್ಯಾಯಾಲಯದ ಇತಿಹಾಸದಲ್ಲೇ ಅಮಾನವೀಯ, ವಿಲಕ್ಷಣ ಘಟನೆಯೊಂದು ನಡೆದಿದೆ. ಸುಪ್ರೀಂಕೋರ್ಟ್‌ನ ಸಿಜೆಐ ಪೀಠದತ್ತ ವಕೀಲರೊಬ್ಬರು ಶೂ ಎಸೆದಿದ್ದಾರೆ.. ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರಿದ್ದ ಪೀಠದತ್ತ ವಕೀಲ ಕಿಶೋರ್‌ ರಾಕೇಶ್ ಶೂ ಎಸೆದು ದುರ್ವರ್ತನೆ ತೋರಿದ್ದಾರೆ.. ಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುವಾಗಲೇ ವಕೀಲ ಕಿಶೋರ್‌ ರಾಕೇಶ್‌ ಕೂಗಾಡುತ್ತ ದಾಳಿಗೆ ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಸನಾತನ ಧರ್ಮದ ಅವಮಾನ ಸಹಿಸಲು ಸಾಧ್ಯವಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿ ಶೂ ಎಸೆದಿದ್ದಾರೆ.. ಸದ್ಯ ಶೂ ಎಸೆಯಲು ಯತ್ನಿಸಿದ ವಕೀಲನ ಕಿಶೋರ್‌ ರಾಕೇಶ್‌ನನ್ನ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಕೈಗೊಂಡಿದ್ದಾರೆ.. ಸದ್ಯ ಈ ವಿಚಾರ ದೇಶಾದ್ಯಂತ ಭಾರಿ ಸಂಚಲನಕ್ಕೆ ಕಾರಣವಾಗಿದೆ. Read Also : ಜಾಹ್ನವಿ ಡಿವೋರ್ಸ್‌ ಕಹಾನಿಗೆ ರೋಚಕ ಟ್ವಿಸ್ಟ್‌ : ಪತ್ನಿ ವಿರುದ್ಧ ಸಿಡಿದೆದ್ದ ಮಾಜಿ ಪತಿ ಕಾರ್ತಿಕ್!‌

Read More

ಬಿಗ್‌ಬಾಸ್‌ ಮನೆಯ ಮೊದಲ ವಾರದ ಎಲಿಮಿನೇಷನ್‌ ಮುಗಿದಿದೆ. ಪ್ರತಿ ಬಾರಿ ಒಬ್ಬರು ಮಾತ್ರ ಎಲಿಮಿನೇಟ್‌ ಆಗುತ್ತಿದ್ದರು. ಈ ಬಾರಿ ಒಂಟಿ-ಜಂಟಿ ಆಟ ಇದ್ದಿದ್ದರಿಂದ ಎಲಿಮಿನೇಷನ್‌ ಕೂಡ ಜಂಟಿಯಾಗಿ ನಡೆದಿದೆ. ಬಿಗ್‌ಬಾಸ್‌ ಮನೆಗೆ ಜಂಟಿಯಾಗಿಯೇ ಎಂಟ್ರಿ ಕೊಟ್ಟಿದ್ದ ಆರ್‌ಜೆ ಅಮಿತ್‌ ಹಾಗೂ ಬಾಡಿಬಿಲ್ಡರ್‌ ಕರಿಬಸಪ್ಪ ಮೊದಲ ವಾರದಲ್ಲೇ ತಮ್ಮ ಕಳಪೆ ಪ್ರದರ್ಶನದಿಂದ ಎಲಿಮಿನೇಷನ್‌ ಆಗಿದ್ದಾರೆ. ಕರಿಬಸಪ್ಪ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಾಗ ಸಿಕ್ಕಾಪಟ್ಟೆ ಜೋಶ್‌ನಲ್ಲಿದ್ದರು. ಎಲಿಮಿನೇಷನ್‌ ಅಂದ ಕೂಡಲೇ ತುಸು ಮಂಕಾದರೂ, ಉತ್ಸಾಹದಿಂದ ಹೊರನಡೆದಿದ್ದಾರೆ. ಈ ಸೀಸನ್‌ನ ಮೊದಲ ವಾರ ಅಮಿತ್-ಕರಿಬಸಪ್ಪ ಬಿಗ್‌ಬಾಸ್‌ ಜರ್ನಿ ಮುಗಿಸಿದ್ದಾರೆ.ಸೂಪರ್‌ ಸಂಡೇ ವಿತ್‌ ಬಾದ್‌ಶಾ ಸುದೀಪ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್‌ ಬಿಗ್‌ಬಾಸ್‌ ಸ್ಪರ್ಧಿಗಳನ್ನು ಎಂದಿನಂತೆ ವಿಚಾರಿಸಿಕೊಂಡರು. ಈ ವಾರದ ಕಳಪೆ ಆಟ ಆಡಿದವರ ಪೈಕಿ ಆರ್‌ಜೆ ಅಮಿತ್‌ ಹಾಗೂ ಕರಿಬಸಪ್ಪ ಅವರನ್ನು ಎಲಿಮಿನೇಟ್‌ ಮಾಡಲಾಗಿದೆ. ಪ್ರೇಕ್ಷಕರಿಂದಲೂ ನಿರೀಕ್ಷಿತ ಬೆಂಬಲ ಸಿಗದ ಕಾರಣ ಜಂಟಿಯಾಗಿಯೇ ಮನೆಯಿಂದ ಹೊರಬಂದಿದ್ದಾರೆ. ಬಾಡಿ ಬಿಲ್ಡಿಂಗ್‌ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ಕರಿಬಸಪ್ಪ ಅವರು ಮೊದಲ…

Read More

ಕನ್ನಡ ಬಿಗ್‌ಬಾಸ್‌ ಸೀಸನ್‌ 12ರ ಕಾವು ಜೋರಾಗಿದೆ. ದೊಡ್ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಕಾದಾಟ ತೀವ್ರಗೊಂಡಿದೆ. ಸ್ಥಾನ ಉಳಿಸಿಕೊಳ್ಳೋಕೆ ಅಂತಾ ದೊಡ್ಮನೆ ಸದಸ್ಯರು ಒಬ್ಬರಾದ್ಮೇಲೆ ಒಬ್ಬರನ್ನು ಬಾವಿಗೆ ತಳ್ಳುತ್ತಿದ್ದಾರೆ. ಇದ್ರ ಮಧ್ಯೆ ನಿನ್ನೆಯಷ್ಟೇ ಡಬಲ್‌ ಎಲಿಮಿನೇಷನ್‌ ಆಗಿದ್ದು, ಆರ್‌ಜೆ ಅಮಿತ್ ಮತ್ತು ಕರಿಬಸಪ್ಪ ಒಂದೇ ವಾರಕ್ಕೆ ಎಲಿಮಿನೇಟ್‌ ಆಗಿದ್ದಾರೆ. ಇದ್ರ ಮಧ್ಯೆ ದೊಡ್ಮನೆಯ ಮತ್ತೊಬ್ಬ ಸ್ಪರ್ಧಿ ಜಾನ್ವಿ ಡಿವೋರ್ಸ್‌ ಕಹಾನಿ ಭಾರಿ ಚರ್ಚೆಯಾಗುತ್ತಿದೆ.ನ್ಯೂಸ್‌ ಆಂಕರ್‌ ಆಗಿದ್ದ ಜಾಹ್ನವಿ ಡಿವೋರ್ಸ್‌ ಮ್ಯಾಟರ್‌ ಎಲ್ಲರಿಗೂ ಗೊತ್ತೇ ಇದೆ. ಆದ್ರೀಗ ಜಾಹ್ನವಿ ಬಿಗ್‌ಬಾಸ್‌ ಶೋನಲ್ಲಿ ತಮ್ಮ ಡಿವೋರ್ಸ್‌ ಬಗ್ಗೆ ಮನ ಬಿಚ್ಚಿ ಮಾತಾಡಿದ್ದಾರೆ. ತಮ್ಮ ವೈವಾಹಿಕ ಜೀವನದ ಕುರಿತು ಮಾತನಾಡಿದ್ದ ನಿರೂಪಕಿ ಜಾಹ್ನವಿ ತಮ್ಮ ಪತಿಗೆ ಅಕ್ರಮ ಸಂಬಂಧ ಇತ್ತು. ಹಾಗಾಗಿ ತಾವು ವಿಚ್ಛೇದನ ನೀಡಿದ್ದಾಗಿ ಹೇಳಿಕೊಂಡಿದ್ದರು. ಅಲ್ಲದೇ, ಡಿವೋರ್ಸ್ ಆಗುವ ಮುಂಚೆಯೇ ಅವರಿಗೆ ಮದುವೆ ಆಗಿ ಮಗು ಇದ್ದ ವಿಚಾರ ಗೊತ್ತಾಯ್ತು. ಅವರು ಮದುವೆಯಾಗಿದ್ದು ಬೇರೆ ಯಾರು ಅಲ್ಲ.. ಆಕೆ ನನ್ನ ಫ್ರೆಂಡ್‌ ಅಂತಾ ಜಾಹ್ನವಿ…

Read More

ಮುಗ್ದ ಮನಸ್ಸು, ಯಾರಿಗೂ ಕೇಡು ಬಯಸದ ಪರಿಶುದ್ಧ ಹೃದಯ, ಬೆಳೆದಿದ್ದು ಕಡುಬಡತನದಲ್ಲಿ ಆದ್ರೂ ಈಗ ಬಿಗ್‌ಬಾಸ್‌ ಮನೆಯಲ್ಲಿ ಸಖತ್‌ ಸೌಂಡ್‌ ಮಾಡ್ತಿರೋ ಮಲ್ಲಮ್ಮ ಯಾರು? ಉತ್ತರ ಕರ್ನಾಟಕದಿಂದ ಬಿಗ್‌ಬಾಸ್‌ ಮನೆಗೆ ಬಂದಿದ್ದು ಹೇಗೆ? ಮಲ್ಲಮ್ಮ ಬದುಕಿನಲ್ಲಿ ಪಟ್ಟಿರೋ ಕಷ್ಟಗಳೇನು ಗೊತ್ತಾ? ಕಳೆದ ಬಾರಿ ಉತ್ತರ ಕರ್ನಾಟಕ ಪ್ರತಿಭೆ ಹನುಮಂತ ಅವರಿಗೆ ಬಿಗ್ ಬಾಸ್​ನಲ್ಲಿ ಅವಕಾಶ ನೀಡಲಾಗಿತ್ತು. ದೊಡ್ಮನೆಗೆ ಬಂದಿದ್ದೂ ಅಲ್ಲದೆ, ಗೆದ್ದು ಕಪ್‌ ಕೊಂಡೊಯ್ದರು. ಅದ್ರಂತೆ ಈ ಬಾರಿ ಮಲ್ಲಮ್ಮ ಅವರು ಬಿಗ್ ಬಾಸ್​ಗೆ ಬಂದಿದ್ದಾರೆ. ಮಲ್ಲಮ್ಮ ಅವರು ಉತ್ತರ ಕರ್ನಾಟಕದ ಪ್ರತಿಭೆ. ಯಾದಗಿರಿ ಜಿಲ್ಲೆಯ, ಸುರಪುರ ತಾಲೂಕಿನ ಸಣ್ಣ ಹಳ್ಳಿಯವರು. ಅವರು ತಮ್ಮ ಮಾತಿನ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದರು. ಸದ್ಯ ಬಿಗ್‌ಬಾಸ್‌ ಅಖಾಡದಲ್ಲಿ ಸೌಂಡ್‌ ಮಾಡ್ತಿರೋ ಮಲ್ಲಮ್ಮ ಪಟ್ಟಿರುವ ಕಷ್ಟ ಅಷ್ಟಿಲ್ಲ. ಬಿಲ್ಡಿಂಗ್ ಕೆಲಸ, ಹೊಲದ ಕೆಲಸ.. ಎಲ್ಲಾ ತರಹದ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಮಲ್ಲಮ್ಮಗೆ 15ನೇ ವಯಸ್ಸಿಗೆ ಮದುವೆ ಮಾಡಿದ್ರಂತೆ. ಆಮೇಲೆ ಇಬ್ಬರು ಮಕ್ಕಳು,…

Read More

ಹಿರಿಯ ಪತ್ರಕರ್ತ, ಲೇಖಕ ಹಾಗೂ ಸಂಪಾದಕರಾಗಿದ್ದ ಟಿ.ಜೆ.ಎಸ್. ಜಾರ್ಜ್ ನಿಧನರಾಗಿದ್ದಾರೆ. 6 ದಶಕಗಳಿಗೂ ಹೆಚ್ಚು ಕಾಲ ತೀಕ್ಷ್ಣ ಲೇಖನಿಗಳ ಮೂಲಕ ಭಾರತೀಯ ಹಾಗೂ ಅಂತರರಾಷ್ಟ್ರೀಯ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದ ಜಾರ್ಜ್, ತಮ್ಮ ಧೈರ್ಯಶಾಲಿ ಧ್ವನಿ ಮತ್ತು ಅಸಾಧಾರಣ ಸಂಪಾದಕೀಯ ದೃಷ್ಟಿಕೋನಕ್ಕಾಗಿ ಹೆಸರುವಾಸಿಯಾಗಿದ್ದರು. 1975ರಲ್ಲಿ ಹಾಂಗ್‌ಕಾಂಗ್‌ನಲ್ಲಿ ಏಷ್ಯಾವೀಕ್ ಇಂಗ್ಲಿಷ್ ವಾರಪತ್ರಿಕೆಯನ್ನು ಸ್ಥಾಪಿಸಿ ಅದರ ಸ್ಥಾಪಕ ಸಂಪಾದಕರಾಗಿದ್ದ ಜಾರ್ಜ್, ಏಷ್ಯಾದ ಆಗುಹೋಗುಗಳನ್ನು ಜಾಗತಿಕ ಮಟ್ಟದಲ್ಲಿ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತಕ್ಕೆ ಮರಳಿದ ನಂತರ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ “ಪಾಯಿಂಟ್ ಆಫ್ ವ್ಯೂ” ಎಂಬ ತಮ್ಮ ಜನಪ್ರಿಯ ಅಂಕಣದ ಮೂಲಕ ಭ್ರಷ್ಟಾಚಾರ, ಸಾಮಾಜಿಕ ಅನ್ಯಾಯ ಮತ್ತು ಧಾರ್ಮಿಕ ಅಸಹಿಷ್ಣುತೆಯ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದರು. 25 ವರ್ಷಗಳ ಕಾಲ ಅವರು ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದು, 97ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. 1,300 ವಾರಗಳ ಕಾಲ ನಿರಂತರ ಅಂಕಣ ಬರೆದಿದ್ದ ಇವರು ನೂರಾರು ಪತ್ರಕರ್ತರಿಗೆ ಮಾರ್ಗದರ್ಶನ ನೀಡಿದ್ದರು. ಸಾಹಿತ್ಯ ಮತ್ತು ಶಿಕ್ಷಣಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ 2011…

Read More

ಧನು ಮಾಡಿದ ಎಡವಟ್ಟು ಉಗ್ರಾವತಾರ ತಾಳಿದ ಕಾಕ್ರೋಚ್‌.. ಸೋಲಿನ ಮೇಲೆ ಸೋಲು.. ಬಿಗ್‌ ಸ್ಪರ್ಧಿಗಳ ಟೈಮೇ ಸರಿ ಇಲ್ಲ. ಅಷ್ಟಕ್ಕೂ ದೊಡ್ಮನೆ ಗಲಾಟೆಗೆ ಕಾರಣ ಏನು? ಬಿಗ್​ಬಾಸ್ ಮನೆಯಲ್ಲಿ ಇವತ್ತೂ ಕೂಡ ಸ್ಪರ್ಧಿಗಳ ಮಧ್ಯೆ ಜಗಳ ನಡೆದಿದೆ. ಗಿಲ್ಲಿ ನಟ, ಕಾವ್ಯ, ಅಶ್ವಿನಿ ಗೌಡ, ಅಭಿಷೇಕ್​, ಧ್ರುವಂತ್, ಧನುಷ್‌ಗೌಡ ನಡುವಿನ ಜಗಳ ವಿಚಾರ ಹೆಚ್ಚು ಸೌಂಡ್ ಮಾಡ್ತಿತ್ತು. ಆದರೆ ಇವತ್ತಿನ ಸಂಚಿಕೆಯಲ್ಲಿ ಚಂದ್ರಪ್ರಭ ಹಾಗೂ ಕಾಕ್ರೋಚ್‌, ಧನು ವಿರುದ್ಧ ಉಗ್ರವತಾರ ತಾಳಿದ್ದಾರೆ. ಬಿಗ್‌ಬಾಸ್ ಮಹಾ ಆಟದಲ್ಲಿ ಜಂಟಿ ಹಾಗೂ ಒಂಟಿ ಎಂಬ 2 ತಂಡಗಳನ್ನು ರಚಿಸಿರುವುದು ಗೊತ್ತೇ ಇದೆ. ಎರಡೂ ತಂಡಗಳ ಮಧ್ಯೆ ಕಾಲ ಕಾಲಕ್ಕೆ ಟಾಸ್ಕ್ ನಡೆಯುತ್ತದೆ. ಈಗ 3ನೇ ವಾರದಲ್ಲಿ ನಡೆಯುವ ಫಿನಾಲೆಗೆ ಫೈನಲಿಸ್ಟ್ ಆಯ್ಕೆ ಮಾಡಲು ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ಗೆ ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಉಸ್ತುವಾರಿ ಆಗಿದ್ದರು. ಆದ್ರೆ ಉಸ್ತುವಾರಿ ಮಾಡುವಾಗ ನಡೆದ ತಪ್ಪಿನಿಂದ ಇಡೀ ಮನೆ ಅಲ್ಲೋಲ…

Read More

ಇಷ್ಟು ದಿನ ತಣ್ಣಗಾಗಿದ್ದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಈಗ ಮತ್ತೆ ಭುಗಿಲೆದ್ದಿದೆ. ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರೊಬ್ಬರು ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವ ಮೂಲಕ ಮತ್ತೊಮ್ಮೆ ಕಿಚ್ಚು ಹಚ್ಚಿದ್ದಾರೆ. ಹೌದು.. ಹಿರಿಯ ಕಾಂಗ್ರೆಸ್‌ ಮುಖಂಡ, ಶಾಸಕ ರಾಜು ಕಾಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಡಿಮ್ಯಾಂಡ್‌ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿರುವ ರಾಜು ಕಾಗೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ತಪ್ಪೇನು ಅಂತಾ ಹೇಳಿದ್ದಾರೆ. ಈ ಮೂಲಕ ಮತ್ತೆ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಬೇಕು ಎನ್ನುವ ಕೂಗನ್ನು ಮುನ್ನೆಲೆಗೆ ತಂದಿದ್ದಾರೆ. ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಶಾಸಕ ರಾಜು ಕಾಗೆ, ಉತ್ತರ ಕರ್ನಾಟಕ ಭಾಗಕ್ಕೆ ಪ್ರತೇಕ ರಾಜ್ಯ ಸ್ಥಾನ ಬೇಕು ಎಂಬ ಕೂಗು ಇಂದು ನಿನ್ನೆಯದಲ್ಲ. ಇದು ದಶಕಗಳ ಕೂಗು. ದಕ್ಷಣ ಕರ್ನಾಟಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಪ್ರದೇಶ ಅನೇಕ ಮೂಲಸೌಕರ್ಯಗಳಿಂದ ವಂಚಿತವಾದ ಪ್ರದೇಶ. ಬಡತನ, ಅನರಕ್ಷತೆ, ಇನ್ನಿತರ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಅದಲ್ಲದೇ ರಾಜಕೀಯವಾಗಿಯೂ ಉತ್ತರ ಕರ್ನಾಟಕ,…

Read More

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಕಳೆದ ಭಾನುವಾರಷ್ಟೇ ಗ್ರ್ಯಾಂಡ್‌ ಲಾಂಚ್ ಆಗಿದೆ. ‌ಆದ್ರೆ, ಬಿಗ್‌ಬಾಸ್‌ ಶುರುವಾದ ಒಂದೇ ದಿನದಲ್ಲಿ ಕರಾವಳಿ ಪುಟ್ಟಿ ರಕ್ಷಿತಾ ಶೆಟ್ಟಿ ಎಲಿಮಿನೇಟ್‌ ಆಗಿದ್ದು, ಫ್ಯಾನ್ಸ್‌ಗೆ ಬರಸಿಡಿಲೇ ಬಡಿದಂತಾಗಿತ್ತು. ಒಂದೇ ದಿನಕ್ಕೆ ಬಂದ ಪುಟ್ಟ ಹೋದ ಪುಟ್ಟ ಅಂತಾ ಅವಮಾನ ಮಾಡಿದ್ರು ಅಂತಾ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯಾಗಿತ್ತು.. ಇದ್ದೊಬ್ಬ ಝನ್‌ ಜೀ ಕೂಡ ಎಕ್ಸಿಟ್‌ ಆಗೋಯ್ತಲ್ಲ ಅಂತಾ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದ್ರೀಗ ಬಿಗ್‌ಬಾಸ್‌ ಅಡ್ಡಾದಿಂದಲೇ ಗುಡ್‌ನ್ಯೂಸ್‌ ಒಂದು ಹೊರಬಿದ್ದಿದೆ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿಗಳಾಗಿ ಹೋದ 19 ಮಂದಿಯಲ್ಲಿ ಓರ್ವ ಸ್ಪರ್ಧಿಯನ್ನು ಒಂದು ದಿನ ಕಳೆಯುವುದರೊಳಗೆ ಎಲಿಮಿನೇಟ್ ಮಾಡಿ ಹೊರಗೆ ಕಳುಹಿಸಲಾಗಿದೆ. ಆದರೆ ಇದು ಕೂಡ ಒಂದು ಗಿಮಿಕ್ಕಾ? ಅಂತಾ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಯಾಕೆಂದರೆ, ತಮಿಳು ಬಿಗ್ ಬಾಸ್‌ನಲ್ಲೂ ಹಿಂಗೆ ಆಗಿತ್ತು. ಇದೇ ರೀತಿ ರಕ್ಷಿತಾ ಶೆಟ್ಟಿಯನ್ನು ವಾಪಸ್‌ ಕರೆಸಿಕೊಳ್ತಾರಾ ಅಂತೆಲ್ಲಾ ಚರ್ಚೆಯಾಗುತ್ತಿದೆ. ಇನ್ನು ಕಳೆದ ವರ್ಷ ನಡೆದ ಬಿಗ್…

Read More