Author: chandrakant

ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಕಾಂತಾರ ಚಾಪ್ಟರ್‌ 1 ಸಿನಿಮಾ ಇನ್ನೇನು ಎರಡೇ ದಿನಗಳಲ್ಲಿ ರಿಲೀಸ್‌ ಆಗಲಿದೆ. ಇಂತಹ ಮಹತ್ವದ ಸಂದರ್ಭದಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿರುವ ನಿರ್ಧಾರದಿಂದ ಭಾರತೀಯ ಸಿನಿಮಾ ಸೇರಿದಂತೆ ವಿದೇಶಿ ಚಲನಚಿತ್ರಗಳಿಗೆ ಭಾರೀ ಹೊಡೆತ ಬಿದ್ದಿದೆ.. ಅಮೆರಿಕದ ಚಲನಚಿತ್ರೋದ್ಯಮವನ್ನು ವಿದೇಶಿ ರಾಷ್ಟ್ರಗಳು ಕದಿಯುತ್ತಿವೆ ಎಂದು ಆರೋಪಿಸಿರುವ ಟ್ರಂಪ್‌, ಯುನೈಟೆಡ್ ಸ್ಟೇಟ್ಸ್ ಹೊರಗೆ ನಿರ್ಮಿಸಲಾದ ಎಲ್ಲಾ ಚಲನಚಿತ್ರಗಳ ಮೇಲೆ 100% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಕಾಂತಾರದ ಮೊದಲ ಭಾಗ ಬಿಡುಗಡೆಯಾದಾಗ, ಕೇವಲ ಭಾರತೀಯರು ಮಾತ್ರವಲ್ಲದೆ ವಿದೇಶದಲ್ಲಿರುವ ಕನ್ನಡಿಗರಿಂದಲೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದ್ರಲ್ಲಿ ಅಮೆರಿಕದಲ್ಲಿ ಸಿನಿಮಾಗೆ ಉತ್ತಮ ಬೆಂಬಲ ಸಿಕ್ಕಿತ್ತು. ಹೀಗಾಗಿ ಕಾಂತಾರ ಚಾಪ್ಟರ್‌ 1 ಮೇಲೂ ಕೂಡ ಇದೇ ನಿರೀಕ್ಷೆಯನ್ನ ಇರಿಸಲಾಗಿತ್ತು. ಆದರೆ ಟ್ರಂಪ್‌ ಅವರ ಈ ನಿರ್ಧಾರ ಕಾಂತಾರ ಕಲೆಕ್ಷನ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಮೆರಿಕವು ಭಾರತೀಯ ಸಿನಿಮಾಗಳಿಗೆ ಪ್ರಮುಖ ವಿದೇಶಿ ಮಾರುಕಟ್ಟೆಯಾಗಿದೆ. ಉದ್ಯಮದ ಮೂಲಗಳ ಪ್ರಕಾರ, ಭಾರತೀಯ ಸಿನಿಮಾಗಳ ಒಟ್ಟು ವಿದೇಶಿ…

Read More

ಅದ್ಧೂರಿ ಟ್ರೈಲರ್‌ ಮೂಲಕ ಧೂಳೆಬ್ಬಿಸಿರುವ ಕಾಂತಾರ ಚಾಪ್ಟರ್‌ 1 ಸಿನಿಮಾ ಪ್ರೇಕ್ಷಕರ ನಿರೀಕ್ಷೆಯನ್ನ ಡಬಲ್‌ ಆಗಿಸಿದೆ. ಅಕ್ಟೋಬರ್‌ 2ರಂದು ಕಾಂತಾರ ಚಾಪ್ಟರ್‌ 1 ವರ್ಲ್ಡ್‌ ವೈಡ್‌ ರಿಲೀಸ್‌ ಆಗಿ ಅಬ್ಬರಿಸಲು ಸಜ್ಜಾಗಿದ್ದು, ಈ ನಡುವೆ ಟಿಕೆಟ್‌ ಬುಕಿಂಗ್‌ ಕೂಡ ಶುರುವಾಗಿದೆ. ಸೆಪ್ಟೆಂಬರ್‌ 26 ಮಧ್ಯಾಹ್ನ 12.29ರಿಂದ ಟಿಕೆಟ್‌ ಬುಕಿಂಗ್‌ ಶುರುವಾಗಿದ್ದು ಇಲ್ಲಿಯವರೆಗೆ 1.9ಲಕ್ಷ ಟಿಕೆಟ್‌ಗಳು ಮಾರಟವಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಬಹುದೊಡ್ಡ ಮಟ್ಟದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ತೆರೆಕಾಣಲಿದ್ದು ಭಾರತದಾದ್ಯಂತ 7000ಕ್ಕೂ ಹೆಚ್ಚು ಸ್ಕ್ರೀನ್​​ಗಳಲ್ಲಿ ಬಿಡುಗಡೆ ಆಗಲಿದೆ. ಕನ್ನಡ ಮಾತ್ರವಲ್ಲದೇ ಒಟ್ಟು 7 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ. ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ 200 ರೂಪಾಯಿ ಮೀರಬಾರದು ಎಂದು ಇತ್ತೀಚೆಗೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಅದರ ವಿರುದ್ಧ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಮತ್ತು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದ್ದವು. ಆದ್ದರಿಂದ ಸರ್ಕಾರದ ಆದೇಶಕ್ಕೆ ಹೈಕೋರ್ಟ್​ ಮಧ್ಯಂತರ ತಡೆ ನೀಡಿತ್ತು. ಹೀಗಾಗಿ ಕಾಂತಾರ ಚಾಪ್ಟರ್…

Read More

ಸದ್ಯ ಮಹಿಳಾ ವಿಶ್ವಕಪ್‌ನ ಕ್ರೇಜ್‌ ಇಂದಿನಿಂದ ಶುರುವಾಗಿದೆ.. ಅದ್ರಲ್ಲೂ ವಿಶೇಷ ಅಂದ್ರೆ ನಮ್ಮ ಭಾರತ, ಶ್ರೀಲಂಕಾ ಜೊತೆ ಸೇರಿ ಐಸಿಸಿ ಏಕದಿನ ವಿಶ್ವಕಪ್‌ನ ಜಂಟಿ ಆತಿಥ್ಯ ವಹಿಸಿದೆ.. 13ನೇ ಆವೃತ್ತಿಯ ವಿಶ್ವಕಪ್‌ ಪಂದ್ಯಗಳು ಇಂದಿನಿಂದಲೇ ಆರಂಭವಾಗಲಿದ್ದು, ಮೊದಲ ದಿನವೇ ಭಾರತ ಹಾಗೂ ಶ್ರೀಲಂಕಾ ತಂಡಗಳು ಸೆಣೆಸಾಡುತ್ತಿವೆ… ಮಹಿಳಾ ವಿಶ್ವಕಪ್‌ ನವೆಂಬರ್‌ 2ರವರೆಗೆ ನಡೆಯಲಿದ್ದು, ಒಟ್ಟು 8 ಟೀಮ್‌ಗಳು ಭರ್ಜರಿ ಕಾಳಗ ನಡೆಸಲಿವೆ.. ಇನ್ನೂ ಎಲ್ಲಾ ತಂಡಗಳು ಒಂದೇ ಗುಂಪಿನಲ್ಲಿ ಮುಖಾಮುಖಿಯಾಗಲಿದ್ದು ಪ್ರಸ್ತುತ ಟೂರ್ನಿ ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದೆ.. ಲೀಗ್‌ನ 28 ಪಂದ್ಯಗಳ ಪೈಕಿ 11 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.. ಇನ್ನೊಂದು ವಿಶೇಷ ಅಂದ್ರೆ ಚಾಂಪಿಯನ್‌ ಆದ ತಂಡಕ್ಕೆ ಬರೋಬ್ಬರಿ ₹39.55 ಕೋಟಿ ರು. ನಗದು ಬಹುಮಾನ ಸಿಗಲಿದೆ.. ಮುಖ್ಯವಾಗಿ 1978ರಿಂದ ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ ಮಹಿಳಾ ತಂಡ 2005 ಹಾಗೂ 2017ರಲ್ಲಿ ರನ್ನರ್‌ ಅಪ್‌ ಆಗಿದ್ದು ಬಿಟ್ರೆ ಇದುವರೆಗೂ ಚಾಂಪಿಯನ್‌ ಆಗಿಲ್ಲ.. ಹೀಗಾಗಿ 47 ವರ್ಷಗಳಿಂದ ಟ್ರೋಫಿಯ ಕನಸು ಕಾಣುತ್ತಿರುವ…

Read More

ಬಿಗ್‌ಬಾಸ್‌ ಶುರುವಾದ ಮೊದಲ ದಿನವೇ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮುಂಬೈ ಮೂಲದ ತುಳುನಾಡ ಚೆಲುವೆ ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಮೊದಲ ದಿನವೇ ದೊಡ್ಡ ಟ್ವಿಸ್ಟ್ ಕೊಟ್ಟಿರುವ ಬಿಗ್‌ಬಾಸ್ ರಕ್ಷಿತಾಗೆ ಗೇಟ್‌ಪಾಸ್ ನೀಡಿದ್ದು, ಸದ್ಯ ದೊಡ್ಮನೆ ಅಭಿಮಾನಿಗಳು ಬಿಗ್‌ಬಾಸ್‌ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಬಿಗ್‌ಬಾಸ್ ಶೋ ಅದ್ಧೂರಿಯಾಗಿ ಟೇಕಾಫ್‌ ಆಗಿದೆ. ಆದರೆ ಆರಂಭದಲ್ಲೇ ಬಿಗ್ ಎಲಿಮಿನೇಷನ್ ಮೂಲಕ ಶಾಕ್ ನೀಡಿದ್ದಾರೆ. ಮೊದಲ ದಿನ ಒಟ್ಟು 19 ಜನರು ಬಿಗ್‌ಬಾಸ್ ಮನೆ ಒಳಗೆ ಕಾಲಿಟ್ಟಿದ್ದರು. ಆದರೆ ಆ ದಿನವೇ ಒಬ್ಬರನ್ನು ಎಲಿಮಿನೇಟ್ ಮಾಡಲಾಗಿದೆ. ತುಳುನಾಡಿನಿಂದ ಬಂದ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರಿಗೆ ಗೇಟ್​ ಪಾಸ್ ನೀಡಲಾಗಿದೆ. ಇದರಿಂದ ಎಲ್ಲರಿಗೂ ಶಾಕ್ ಆಗಿದೆ. ಈ ಬಗ್ಗೆ ಕರಾವಳಿ ಫ್ಯಾನ್ಸ್‌ ಆಕ್ರೋಶ ಹೊರಹಾಕಿದ್ದಾರೆ. ಬಿಗ್‌ಬಾಸ್‌ ಸ್ಪರ್ಧಿಗಳ ಕುತಂತ್ರಕ್ಕೆ ರಕ್ಷಿತಾ ಶೆಟ್ಟಿಗೆ ಅನ್ಯಾಯ ಜೊತೆಗೆ ಅವಮಾನ ಮಾಡಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ. ಬಿಗ್‌ಬಾಸ್‌ ಮನೆಯಿಂದ ಯಾರು ಹೊರಗೆ ಹೋಗಬೇಕು ಅಂತ ಬಿಸಿ ಬಿಸಿ ಚರ್ಚೆ…

Read More

ದೇಶದಲ್ಲಿ ಆನ್​ಲೈನ್ ಮೂಲಕ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈಗ ಆ ವಂಚಕರ ಕಣ್ಣು ದೇವಸ್ಥಾನಗಳ ಮೇಲೂ ಬಿದ್ದದೆ. ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ ಹೀಗೆ ಅನೇಕ ಪ್ರಸಿದ್ಧ ದೇವಾಲಯಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ತೆರದು ಜನರಿಂದ ದುಡ್ಡನ್ನ ಪೀಕಿ ಪಂಗನಾಮ ಹಾಕಲಾಗುತ್ತಿತ್ತು. ಹೀಗೆ ನಕಲಿ ವೆಬ್‌ಸೈಟ್‌ ಮೂಲಕ ಕೋಟ್ಯಂತರ ರುಪಾಯಿ ವಂಚಿಸಿರುವ ಘಟನೆ ನಮ್ಮ ರಾಜ್ಯದಲ್ಲೇ ನಡೆದಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಶೃಂಗೇರಿ ಮಠ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದ ಮತ್ತು ವಿಶೇಷ ಪೂಜೆಯ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ತೆಲಂಗಾಣ ಮೂಲದ ಸುದೀಪ್ ಹಾಗೂ ಅನಿಲ್ ಕುಮಾರ್ ಎಂಬವರನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು Www.Devaseva.com ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ತೆರೆದಿದ್ದು, ಅದರ ಮೂಲಕ ದೇಶದ ಮತ್ತು ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಹೆಸರು ಬಳಸಿ ವಿಶೇಷ ಪೂಜೆ, ಪ್ರಸಾದ, ಸೇವೆಗಳ ಹೆಸರಿನಲ್ಲಿ ಹಣ ಪಡೆದು ಭಕ್ತರನ್ನು ವಂಚಿಸುತ್ತಿದ್ದರು. ಈ ಕುರಿತಾಗಿ ಹೊರನಾಡು…

Read More

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಶುರುವಾಗಿ ಕೇವಲ ಒಂದು ದಿನಕ್ಕೆ ಅತಿದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮೊದಲ ದಿನವೇ ಯಾರೂ ಊಹಿಸಿರದ ಎಲಿಮಿನೇಷನ್‌ ನಡೆದಿದೆ. ಭಾನುವಾರವಷ್ಟೇ ಬಿಗ್‌ಬಾಸ್‌ ಮನೆಗೆ ಕಾಲಿಟ್ಟ ಸ್ಪರ್ಧಿ ರಕ್ಷಿತಾ ಶೆಟ್ಟಿ ಒಂದೇ ದಿನಕ್ಕೆ ತಮ್ಮ ಬಿಗ್‌ಬಾಸ್‌ ಪಯಣ ಮುಗಿಸಿದ್ದಾರೆ. ಶೋಗೆ ಹೋಗಾಯ್ತು ಎಂದು ಖುಷಿಪಡುವಷ್ಟರಲ್ಲೇ ಸ್ಪರ್ಧಿಗಳಿಗೆ ಎಲಿಮಿನೇಷನ್‌ ಶಾಕ್‌ ಕೊಟ್ಟಿರುವ ಬಿಗ್‌ ಬಾಸ್‌ ಮೊದಲ ಸ್ಪರ್ಧಿಗೆ ಮೊದಲ ದಿನವೇ ಟಾಟಾ ಹೇಳಿದ್ದಾರೆ. ಮುಂಬೈ ಮೂಲದ ತುಳುನಾಡ ಚೆಲುವೆ ಪುಟ್ಟ ಪೋರಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಮೊದಲ ದಿನವೇ ದೊಡ್ಡ ಟ್ವಿಸ್ಟ್ ಕೊಟ್ಟಿರುವ ಬಿಗ್ ಬಾಸ್ ರಕ್ಷಿತಾಗೆ ಗೇಟ್‌ಪಾಸ್ ನೀಡಿದ್ದಾರೆ.. ಆದ್ರೆ ಶಾಕಿಂಗ್ ಕಾರಣವೊಂದು ರೀವೀಲ್ ಆಗಿದೆ.. ಬಿಗ್ ಬಾಸ್ ಕನ್ನಡ 12ರಲ್ಲಿ ಒಂಟಿ ವರ್ಸಸ್ ಜಂಟಿ ಟಾಸ್ಕ್ ಇರುವುದು ಗೊತ್ತೇ ಇದೆ. ಯಾರು ಒಂಟಿಯಾಗಬೇಕು, ಯಾರು ಜಂಟಿಯಾಗಬೇಕು ಎಂಬುದನ್ನು ಆಡಿಯೆನ್ಸ್ ತೀರ್ಮಾನ ಮಾಡಿ ಕಳುಹಿಸಿದ್ದಾರೆ. ಸ್ಪರ್ಧಿಗಳು ಒಂಟಿಗಳಾಗಿ, 5 ಸ್ಪರ್ಧಿಗಳು ಜಂಟಿಗಳಾಗಿ ಹಾಗೂ…

Read More

ಈಗಿನ ನಮ್ಮ ಲೈಫ್‌ಸ್ಟೈಲ್‌ ಯಾವ್‌ ಥರ ಆಗಿದೆ ಅಂದ್ರೆ ಕೈತುಂಬಾ ಸಂಬಳ ಬರ್ತಿದ್ರೂ ಕೂಡ ಮನೆ ಊಟ ತಿನ್ನೋಕೆ ಆಗ್ತಿಲ್ಲ. ಅಡುಗೆ ಮಾಡೋಕೆ ಟೈಮಿಲ್ಲ. ಹೀಗಾಗಿ ಹೋಟೆಲ್‌ ಫುಡ್‌ಗೆ ಡಿಪೆಂಡ್‌ ಆಗಿದ್ದೀವಿ. ಇದ್ರಿಂದ ಕಾಯಿಲೆಗಳು ಬರೋದು ಸಾಮಾನ್ಯ. ಹಾಗಂತ ಉಪವಾಸ ಅಂತೂ ಕೂರೋಕಾಗಲ್ಲ. ಹಾಗಿದ್ರೆ ಆರೋಗ್ಯ ಚನ್ನಾಗಿರ್ಬೇಕು ಅಂದ್ರೆ ಏನ್‌ ಮಾಡ್ಬೇಕು? ಅನ್ನೋ ಚಿಂತೆ ಬಿಟ್‌ ಬಿಡಿ. ಇವತ್ತು ನಾವು ಆರೋಗ್ಯವನ್ನ ಇಂಪ್ರೂವ್‌ ಮಾಡ್ಕೊಳೋದಿಕ್ಕೆ ಫಾಲೋ ಮಾಡ್ಬೇಕಾಗಿರುವಂತಹ ಒಂದು ಗೋಲ್ಡನ್‌ ರೂಲ್‌ ಬಗ್ಗೆ ಮಾತಾಡೋಣ. ಈ ರೂಲ್‌ಅನ್ನ ನೀವು ನಿಮ್ಮ ಲೈಫ್‌ಸ್ಟೈಲ್‌ನಲ್ಲಿ ಇಂಕ್ಲೂಡ್‌ ಮಾಡ್ಕೊಂಡ್ರೆ 90% ಕಾಯಿಲೆಗಳು ನಿಮ್‌ ಹತ್ರಕ್ಕೂ ಸುಳಿಯೋದಿಲ್ಲ. ನೀವು ಹೆಲ್ದಿ, ಫಿಟ್‌ ಹಾಗೂ ಸ್ಯಾಟಿಫೈಡ್‌ ಲೈಫನ್ನ ಎಂಜಾಯ್‌ ಮಾಡ್ಬೋದು. ನೀವು ಊಟ ಮಾಡೋ ಮುಂಚೆ ಈ ಒಂದು ಸೂಪರ್‌ ಫುಡ್‌ಅನ್ನ ತಿಂದ್ರೆ, ಹೋಟೆಲ್‌ ಫುಡ್‌ ಅಥವಾ ಅನ್‌ಹೆಲ್ದಿ ಫುಡ್‌ನಿಂದ ಏನೇನ್‌ ಡ್ಯಾಮೇಜ್‌ ನಿಮ್‌ ದೇಹಕ್ಕೆ ಆಗುತ್ತಲ್ಲ ಅದು 50% ಕಡಿಮೆ ಆಗುತ್ತೆ. ಇನ್ನೂ ಕೆಲವ್ರಿಗೆ 100% ವರ್ಕ್‌…

Read More

ಕನ್ನಡ ರಂಗಭೂಮಿ ಹಾಗೂ ಚಿತ್ರರಂಗಕ್ಕೆ ದೊಡ್ಡ ಆಘಾತ ಎದುರಾಗಿದೆ. ರಾಜ್ಯದ ಹಿರಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಖ್ಯಾತ ನಾಟಕಕಾರ ಹಾಗೂ ಸಾಮಾಜಿಕ ಚಿಂತಕ ಶ್ರೀ ಯಶವಂತ ಸರದೇಶಪಾಂಡೆ ಅವರು ಉತ್ತರ ಕರ್ನಾಟಕ ಭಾಷೆ ಶೈಲಿಯಲ್ಲಿ ಅನೇಕ ನಾಟಕಗಳನ್ನು ರಚಿಸಿ, ಅಭಿನಯಿಸಿದ್ದಾರೆ. ಯಶವಂತ ಸರದೇಶಪಾಂಡೆ ಕಲೆ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಜರಾಮರ. ಕಮಲ್‌ ಹಾಸನ್‌ ಹಾಗೂ ರಮೇಶ್‌ ಅಭಿನಯದ ರಾಮ ಶಾಮ ಭಾಮ ಚಿತ್ರದ ಉತ್ತರ ಕರ್ನಾಟಕದ ಸಂಭಾಷಣೆಯಿಂದ ಯಶವಂತ ಸರದೇಶಪಾಂಡೆ ಜನಪ್ರಿರಾಗಿದ್ದರು. ಕನ್ನಡದ ಹಲವು ಚಿತ್ರಗಳಲ್ಲಿ ಕಾಮಿಡಿ ನಟರಾಗಿ ನಟಿಸಿದ್ದರು. ಇಂದು ಬೆಳಿಗ್ಗೆ ಧಾರವಾಡದಿಂದ ಬೆಂಗಳೂರಿಗೆ ಬಂದಿದ್ದ ಸರದೇಶಪಾಂಡೆ, ಎದೆ ನೋವು ಕಾಣಿಸಿಕೊಂಡ ಕಾರಣ ಬನ್ನೇರುಘಟ್ಟ ಬಳಿಯ fortis ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿ ಆಗದೆ ವಿಧಿವಶರಾಗಿದ್ದಾರೆ. ಇನ್ನೂ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್…

Read More

ರಾಮ ಶಾಮ ಭಾಮ ಸಿನಿಮಾ ಯಾರಿಗೊತ್ತಿಲ್ಲ ಹೇಳಿ. ಸ್ಯಾಂಡಲ್‌ವುಡ್‌ನ ಬೆಸ್ಟ್‌ ಹಾಸ್ಯ ಚಲನಚಿತ್ರಗಳಲ್ಲಿ ಇದೂ ಕೂಡ ಒಂದು. ಈ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಸಂಭಾಷಣೆ ಬರೆದಿದ್ದ ಖ್ಯಾತ ನಾಟಕಕಾರ ಹಾಗೂ ಸಾಮಾಜಿಕ ಚಿಂತಕ ಶ್ರೀ ಯಶವಂತ ಸರದೇಶಪಾಂಡೆ ಅವರು ವಿಧಿವಶರಾಗಿದ್ದಾರೆ. ಇವತ್ತು ಬೆಳಿಗ್ಗೆ ಧಾರವಾಡದಿಂದ ಬೆಂಗಳೂರಿಗೆ ಸರದೇಶಪಾಂಡೆ ಬಂದಿದ್ದರು. ಎದೆ ನೋವು ಕಾಣಿಸಿಕೊಂಡ ಕಾರಣ ಬನ್ನೇರುಘಟ್ಟದ fortis ಆಸ್ಪತ್ರೆ ಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ 10 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಬಾಲ್ಯದಿಂದಲೇ ರಂಗಭೂಮಿಯತ್ತ ಅಪಾರ ಒಲವು ಬೆಳೆಸಿಕೊಂಡಿದ್ದ ಯಶವಂತ ಸರದೇಶಪಾಂಡೆ ಅವರಿಗೆ 60 ವರ್ಷ ವಯಸ್ಸಾಗಿತ್ತು. ಕಲೆ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಯಶವಂತ ಸರದೇಶಪಾಂಡೆ ಅವರು ಉತ್ತರ ಕರ್ನಾಟಕ ಭಾಷೆಯ ಶೈಲಿಯಲ್ಲಿ ಅನೇಕ ನಾಟಕಗಳನ್ನು ರಚಿಸಿ, ಅಭಿನಯಿಸಿದ್ದರು. ಅಲ್ಲದೇ ಕನ್ನಡದ ಹಲವು ಚಿತ್ರಗಳಲ್ಲಿ ಕಾಮಿಟಿ ನಟರಾಗಿ ನಟಿಸಿದ್ದರು. ಮುಂಬರುವ ಅಕ್ಟೋಬರ್ 18ರಂದು ಡಾ ಪ್ರವೀಣ್ ಗೊಡಖಿ೦ಡಿ ರಚನೆಯ ‘ಕೊಳಲು.com(edy)’ ಎಂಬ ಹೊಸ ನಾಟಕದಲ್ಲಿ ಯಶವಂತ…

Read More

ಬಿಗ್‌ಬಾಸ್‌ ಮೊದಲ ದಿನವೇ ಬಿಗ್‌ ಟ್ವಿಸ್ಟ್‌!, ಬಿಗ್‌ಬಾಸ್‌ ಮಾತಿಗೆ ಎಲ್ಲಾ ಸ್ಪರ್ಧಿಗಳು ಏನ್‌ ಮಾಡಿದ್ರು ಗೊತ್ತಾ?, ಇನ್ನು ಬಂದು ಒಂದು ದಿನನೂ ಆಗಿಲ್ಲ, ಆಗಲ್ಲೇ ಬಿಗ್‌ಬಾಸ್‌ ಮನೆಯಲ್ಲಿ ಅಲ್ಲೋಲ ಕಲ್ಲೋಲ. ದೊಡ್ಮನೆ ಒಳಗೆ ಹೋದ 19 ಜನಕ್ಕೆ ಮೊದಲ ದಿನವೇ ಶಾಕ್ ಆಗಿದೆ. ನಾನು ನಿಮ್ಮನ್ನ ಸ್ವಾಗತ ಮಾಡೋಕೆ ಬಂದಿಲ್ಲ. ನಿಮ್ಮಲ್ಲಿರೋ 19 ಜನರಲ್ಲಿ ಒಬ್ಬರನ್ನ ಮನೆಗೆ ಕಳಿಸಲು ಬಂದಿದ್ದೇನೆ. ಆ ಒಬ್ಬರು ಯಾರು ಅನ್ನೋದನ್ನ ನೀವೇ ಪರಸ್ಪರ ಚರ್ಚೆ ಮಾಡಿ ಹೊರಗೆ ಕಳಿಸಿ ಅಂತಲೇ ಬಿಗ್ ಬಾಸ್ ಹೇಳಿದ್ದಾರೆ. ಹಾಗಾಗಿಯೇ ಸ್ಪರ್ಧಿಗಳಲ್ಲಿ ಟೆಕ್ಷನ್ ಕ್ರಿಯೇಟ್ ಆಗಿದ್ದು, ಮೊದಲ ದಿನವೇ ಮನೆಗೆ ಹೋಗೋದು ಯಾರು? ಅನ್ನೊ ಸಸ್ಪೆನ್ಸ್ ಕ್ರಿಯೇಟ್‌ ಆಗಿದೆ. ಕಳೆದ 11 ಸೀಸನ್‌ಗಳಲ್ಲಿ ಇಲ್ಲಿವರೆಗೂ ಇಷ್ಟೊಂದು ಜನ ಮನೆ ಒಳಗೆ ಹೋಗಿರಲಿಲ್ಲ. ಈ ಸಲ ಬೇರೇನೆ ಇರುತ್ತದೆ ಅಂತ ಬಿಗ್ ಬಾಸ್ ಹೋಸ್ಟ್ ಸುದೀಪ್ ಪ್ರೋಮೋದಲ್ಲಿಯೇ ಮೊದಲೇ ಹೇಳಿದ್ದಾರೆ. ಅದಕ್ಕೆನೆ 19 ಜನ ಮನೆ ಒಳಗೆ ಹೋಗಿ ಆಶ್ಚರ್ಯ ಮೂಡಿಸಿದ್ದಾರೆ.…

Read More