Author: chandrakant

ರಾಜ್ಯದಲ್ಲಿ ಎಲ್ಲ ಮಕ್ಕಳಿಗೂ ನಾನು ವಿಜ್ಞಾನಿ, ಹೊಸ ಹೊಸ ಆವಿಷ್ಕಾರ ಮಾಡಬೇಕು ಎಂಬ ಕನಸು ಇರುತ್ತದೆ. ಆದರೆ ಅನೇಕ ಮಕ್ಕಳಿಗೆ ಸರಿಯಾದ ಸೌಲಭ್ಯದ ಕೊರತೆಯ ಕಾರಣ ವಿಜ್ಞಾನಿಕ ಶಿಕ್ಷಣದಿಂದ ವಂಚಿತರಾಗುತ್ತಾರೆ. ಗುಣಮಟ್ಟದ ಶಿಕ್ಷಣ, ಆರ್ಥಿಕ ಸಮಸ್ಯೆ, ಸೌಕರ್ಯಗಳ ಕೊರತೆ, ಹೀಗೆ ಹತ್ತು ಹಲವು ಸಮಸ್ಯೆಗಳು ಕಾಡುತ್ತವೆ. ಇಂತಹ ವಿದ್ಯಾರ್ಥಿಗಳು ವಂಚಿತರಾಗದೆ ಉತ್ತಮ ಶಿಕ್ಷಣ ಪಡೆದು ವಿಜ್ಞಾನಿ ಆಗಬೇಕು ಎಂಬ ಆಶಯದೊಂದಿಗೆ ಹುಲಿಕಲ್‌ ನಟರಾಜ್‌ ಸಹಯೋಗದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ʼನಾನು ವಿಜ್ಞಾನಿʼ ಎಂಬ 8 ದಿನಗಳ ತರಬೇತಿ ಶಿಬಿರವನ್ನ ಹಮ್ಮಿಕೊಂಡಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬ್ಯಾಸೆಂಟ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಈ ಶಿಬಿರ ಅಕ್ಟೋಬರ್‌ 1ರಂದು ಆರಂಭವಾಗಿ 9ರಂದು ಯಶಸ್ವಿಯ ತೆರೆ ಕಂಡಿತು. ಆರ್ಯಭಟ ಕರ್ನಾಟಕ, ಭಾರತ್‌ ಡೊಮ್‌ ಕರ್ನಾಟಕ, ಇಸ್ರೋ ಭಾರತ ಸರ್ಕಾರ, ಇಂಟರ್‌ನ್ಯಾಷನಲ್‌ ಲಯನ್ಸ್‌ ಕ್ಲಬ್‌, 317 ಎಫ್‌, ಭಾರತ ಸ್ಕೌಟ್ ಮತ್ತು ಗೈಡ್ಸ್‌ ಕರ್ನಾಟಕ, ಭಾರತ ಸೇವಾ ದಳ ಕರ್ನಾಟಕ, ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆ…

Read More

ಗಿಲ್ಲಿ ಹಾರ್ಟ್‌ಗೆ ಚಿಟ್ಟೆ ಬಿಟ್ಟ ಕಾವ್ಯಾ.. ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಕಾವ್ಯಾ ಕಣ್ಣು ನೋಡಿ ಹೆದರಿದ ಗಿಲ್ಲಿ ನಟ. ಬಿಗ್‌ಬಾಸ್‌ ಒಳಗೆ ಹೊರಗೆ ಸಖತ್‌ ಸೌಂಡ್‌ ಮಾಡಿದ ಜೋಡಿ ಮಧ್ಯೆ ಆಗಿದ್ದೇನು? ನಿಜಕ್ಕೂ ಗಿಲ್ಲಿಗೆ ಕಾವ್ಯಾನ ಮೇಲೆ ಲವ್‌ ಆಗಿದ್ಯಾ? ಕಿಚ್ಚನ ಮುಂದೆ ಹೇಳಿದ ಮಾತು ನಿಜಾನಾ? ವಾರಕ್ಕೂಂದು ಶಾಕಿಂಗ್‌ ನ್ಯೂಸ್‌ನಿಂದ ಸದಾ ಸದ್ದು ಮಾಡೋ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್.‌ ಅದ್ರಲ್ಲೂ ಲವ್‌ ಸ್ಟೋರಿಗಳಿಂದ ಸೌಂಡ್‌ ಮಾಡೋದೆ ಜಾಸ್ತಿ. ಸದ್ಯ ಈ ಸಲ ಕೂಡ ಹೊಸ ಲವ್‌ ಸ್ಟೋರಿ ಹುಟ್ಟಿಕೊಂಡಿದ್ದು, ಗಿಲ್ಲಿ-ಕಾವ್ಯಾ ಜೋಡಿ ಕರುನಾಡ ತುಂಬಾ ಸಖತ್‌ ಸೌಂಡ್‌ ಮಾಡ್ತಿದೆ. ನಟರಾಜ್‌ ಅಲಿಯಾಸ್‌ ಗಿಲ್ಲಿ ನಟ ಹಾಗೂ ಕಾವ್ಯಾ ಬಿಗ್‌ಬಾಸ್‌ಗೆ ಬಂದ ಮೊದಲ ದಿನದಿಂದಲ್ಲೂ ಮೋಡಿ ಮಾಡೋಕೆ ಶುರು ಮಾಡಿದ್ರು. ಗಿಲ್ಲಿ ನಟ ಹಾಗೂ ಕಾವ್ಯಾ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಇದಕ್ಕೆ ಕಾರಣ ಆಗಿದ್ದು, ಒಂಟಿ-ಜಂಟಿ ಆಟ. ಈ ಟಾಸ್ಕ್‌ನಲ್ಲಿ ಕಾವ್ಯಾ ಹಾಗೂ ಗಿಲ್ಲಿ ಜಂಟಿ…

Read More

RSS ಶತಮಾನೋತ್ಸವ ಪೂರೈಸಿದೆ. ಇಂಥ ಸಂದರ್ಭದಲ್ಲಿ ಸಂಘದ ಮೇಲೆ ಸಾಲು ಸಾಲು ಆರೋಪಗಳು ಕೇಳಿಬರುತ್ತಿದೆ. ಕೆಲ ದಿನಗಳ ಹಿಂದೆ ಕೇರಳದ ಟೆಕ್ಕಿಯೊಬ್ಬ ಆರ್.ಎಸ್.ಎಸ್ ಕಾರ್ಯಕರ್ತರಿಂದ ನಿರಂತರ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆ ಮನನೊಂದು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿತ್ತು. ಈ ಕುರಿತಾಗಿ ಪ್ರತಿಕ್ರಿಯಿಸಿದ್ದ ಸಚಿವ ಪ್ರಿಯಾಂಕ್‌ ಖರ್ಗೆ RSSನ ಮೇಲೆ ಗಂಭೀರ ಆರೋಪ ಮಾಡಿದ್ದರು. ಕೇವಲ ಕೇರಳ ಮಾತ್ರವಲ್ಲ ಇಲ್ಲೂ ಸಹ RSSನ ನಾಯಕರಿಂದ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದಿದ್ದರು. ಆರ್‌.ಎಸ್‌.ಎಸ್‌ ಸಂಘದ ಶಿಬಿರಕ್ಕೆ ಸರ್ಕಾರಿ ಜಾಗ ಕೊಡಬಾರದು, ಕರ್ನಾಟಕದಲ್ಲಿ ಸಂಘವನ್ನ ಬ್ಯಾನ್‌ ಮಾಡಬೇಕು ಎಂಬ ಮಾತನಾಡಿದ್ದು, ಇದರಿಂದಾಗಿ ರೊಚ್ಚಿಗೆದ್ದ RSS ಕೆಲ ಯುವಕರು ಸಚಿವ ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಕರೆ ಮಾಡಿದ್ದಾರೆ. ಕರೆ ಮಾಡಿ ಮನ ಬಂದಂತೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಯಲ್ಲಿ ಈ ವಿಷಯದ ಬಗ್ಗೆ ಟ್ವೀಟ್‌ ಮಾಡಿದ್ದಾರೆ. RSS ಯುವಕರ ಮತ್ತು ಮಕ್ಕಳ…

Read More

ಜೀ ಕನ್ನಡ ಕುಟುಂಬ ಅವಾರ್ಡ್ಸ್-2025 ವೀಕೆಂಡ್‌ನಲ್ಲಿ ವೀಕ್ಷಕರಿಗೆ ಮನರಂಜನೆಯ ಸಡಗರ ನೀಡಲು ಬರುತ್ತಿದೆ. ಅಕ್ಟೋಬರ್ 15ರಂದು ಕನ್ನಡ ಕಿರುತೆರೆಯ ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಜೀ ಕನ್ನಡ ವಾಹಿನಿಯ ಸಂಬಂಧಗಳನ್ನು ಸಂಭ್ರಮಿಸುವ ಅತೀದೊಡ್ಡ ಹಬ್ಬ ʼಜೀ ಕನ್ನಡ ಕುಟುಂಬ ಅವಾರ್ಡ್ಸ್-2025ʼ ಕ್ಷಣಗಣನೆ ಶುರುವಾಗಿದೆ. ಕೋಟಿ ಕಣ್ಣುಗಳು ಕಾತುರತೆಯಿಂದ ಕಾಯುತ್ತಿದ್ದ ಎಂಟರ್ಟೈನ್ಮೆಂಟ್‌ನ ಮಹಾಪರ್ವ ಇದೇ ತಿಂಗಳ 17, 18 ಮತ್ತು 19 ರಂದು ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಸಂಜೆ 6:30 ರಿಂದ ಪ್ರಸಾರ ಆಗಲಿದೆ. ಇನ್ನು ಈ ಕಾರ್ಯಕ್ರಮವನ್ನು ಹೆಸರಾಂತ ನಿರೂಪಕರಾದ ಅಕುಲ್ ಬಾಲಾಜಿ ಮತ್ತು ನಿರೂಪಕಿ ಅನುಶ್ರೀ ಅವರು ನಡೆಸಿಕೊಡಲಿದ್ದಾರೆ. ಈ ವರ್ಷದ ಜೀ ಕನ್ನಡ ಕುಟುಂಬ ಅವಾರ್ಡ್ಸ್‌ನಲ್ಲಿ ಫೇವರಿಟ್ ನಟ, ಫೇವರಿಟ್ ನಟಿ, ಫೇವರಿಟ್ ಜೋಡಿ, ಫೇವರಿಟ್ ಸೀರಿಯಲ್, ಫೇವರಿಟ್ ರಿಯಾಲಿಟಿ ಶೋ ಮತ್ತು ಫೇವರಿಟ್ ನಿರೂಪಕ/ನಿರೂಪಕಿ ಅನ್ನುವ ಪ್ರಮುಖ 6 ಕೆಟಗರಿಗಳು ಇರಲಿವೆ. ಈ 6 ಪ್ರಮುಖ ವಿಭಾಗಗಳ ಜೊತೆಗೆ ಇನ್ನೂ ಅನೇಕ ವಿಭಾಗಗಳಲ್ಲಿ…

Read More

ಬಿಗ್‌ಬಾಸ್‌ ಟ್ವಿಸ್ಟ್‌ಗೆ ಸುಸ್ತಾದ ಬಿಗ್‌ ಕಿಲಾಡಿಗಳು.. ಒಂದು ಕಡೆ ಮಿಡ್ ಸೀಸನ್ ಫಿನಾಲೆಗೆ ಮುಹೂರ್ತ.. ಇನೊಂದು ಕಡೆ ಮಾಸ್‌ ಎಲಿಮಿನೇಷನ್‌ಗೆ ಟೈಮ್‌ ಬಾಂಬ್ ಫಿಕ್ಸ್‌!.. ‌ಅಷ್ಟಕ್ಕೂ ಬಿಗ್‌ಬಾಸ್‌ ಮಾಡಿರೋ ಆ ಮಾಸ್ಟರ್‌ ಪ್ಲಾನ್‌ ಏನು? ದೊಡ್ಮನೆಯಲ್ಲಿ ಉಳಿಯೋದ್ಯಾರು? ಹೋಗೋದು ಯಾರು? ವೈಲ್ಡ್ ಕಾರ್ಡ್ ಎಂಟ್ರಿಗಳ ಸುರಿಮಳೆ ಆಗುತ್ತಾ? ಎಂಬ ಕುತುಹಲಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಮೂರನೇ ವಾರಕ್ಕೆ ಕಾಲಿಟ್ಟಿದೆ. ಇದೇ ವಾರ ಸಿಸನ್‌ನ ಮೊದಲ ಫಿನಾಲೆ ಕೂಡ ನಡೆಯಲಿದೆ. ಹಾಗಾಗಿ, ಸ್ಪರ್ಧಿಗಳಿಗೆ ಸಖತ್ ಟ್ವಿಸ್ಟ್‌ಗಳು ಎದುರಾಗುವುದು ಖಚಿತ. ಸದ್ಯ ಬಿಗ್ ಬಾಸ್ ನೀಡಿರುವ ಒಂದು ಶಾಕ್‌ಗೆ 13 ಸ್ಪರ್ಧಿಗಳು ಫುಲ್‌ ದಂಗಾಗಿದ್ದಾರೆ. ಅಲ್ಲದೆ, ಜಂಟಿ – ಒಂಟಿ ಆಟಕ್ಕೆ ಬ್ರೇಕ್‌ ನೀಡಿರುವ ಬಿಗ್ ಬಾಸ್‌ ಹೊಸ ಮಾಸ್ಟರ್‌ ಪ್ಲಾನ್‌ ರೆಡಿ ಮಾಡಿದ್ದಾರೆ. ಹೌದು, ಈ ವಾರದ ನಾಮಿನೇಷನ್ ಪ್ರಕ್ರಿಯೆ ಸೈಲೆಂಟ್ ಆಗಿಯೇ ನಡೆದಿದ್ದು, ದೊಡ್ಡ ಇಂಪ್ಯಾಕ್ಟ್ ಮಾಡಿದೆ. ನಾಲ್ವರು ಫೈನಲಿಸ್ಟ್‌ಗಳನ್ನು ಹೊರತುಪಡಿಸಿ, ಮಿಕ್ಕ 13 ಸ್ಪರ್ಧಿಗಳನ್ನು…

Read More

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ ಸರಣಿಯನ್ನು ಭಾರತ ಗೆದ್ದುಬೀಗಿದೆ.. ಎರಡನೇ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ 2-0 ಅಂತರದಿಂದ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ.. ತವರಲ್ಲಾಗಲಿ, ಹೊರದೇಶದಲ್ಲಾಗಲಿ ಭಾರತ ಟೆಸ್ಟ್‌ ಮಾದರಿಯಲ್ಲಿ ತನ್ನ ಪರಾಕ್ರಮವನ್ನು ಮುಂದುವರಿಸಿದೆ.. ಇದೀಗ ಸರಣಿ ಗೆಲುವಿನ ಬಳಿಕ ಭಾರತ ವಿಶ್ವ ದಾಖಲೆ ನಿರ್ಮಿಸಿದೆ.. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಒಂದೇ ತಂಡದ ವಿರುದ್ಧ ಸತತ ಅತ್ಯಧಿಕ ಸರಣಿ ಗೆದ್ದ ತಂಡಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೆ ಏರಿದೆ.. ಇಲ್ಲೀವರೆಗೆ ಈ ರೆಕಾರ್ಡ್‌ ಸೌತ್‌ ಆಫ್ರಿಕಾ ಹೆಸರಲ್ಲಿತ್ತು.. 1998 ರಿಂದ 2024 ರವರೆಗೆ ಸೌತ್‌ ಆಫ್ರಿಕಾ ವೆಸ್ಟ್ ಇಂಡೀಸ್ ವಿರುದ್ಧ ಸತತ 10 ಟೆಸ್ಟ್‌ ಸರಣಿಗಳನ್ನು ಗೆದ್ದಿತ್ತು.. ಆದ್ರೆ ಇದೀಗ ಭಾರತ 2002ರಿಂದ ವೆಸ್ಟ್‌ ಇಂಡೀಸ್ ವಿರುದ್ಧ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದು ದಾಖಲೆ ನಿರ್ಮಿಸಿದೆ.. ಈ ಮೂಲಕ ಒಂದೇ ತಂಡದ ವಿರುದ್ಧ ಸತತ 10 ಟೆಸ್ಟ್‌ ಸರಣಿಗಳನ್ನು ಗೆದ್ದ 2ನೇ ತಂಡವಾಗಿದೆ.. ಮತ್ತೊಂದು…

Read More

ಕಲಿಯುಗದ ಕುಡುಕ ಅಂತಲೇ ಉತ್ತರ ಕರ್ನಾಟಕದ ಜನಮಾನಸದಲ್ಲಿ ಹಾಸ್ಯದ ಬೇರೂರಿದ್ದ ರಂಗಕರ್ಮಿ ರಾಜು ತಾಳಿಕೋಟಿ ಈಗ ಕಾಮಿಡಿ ದೋಣಿಯಲ್ಲಿ ಮುಳುಗಿ ಮರೆಯಾಗಿದ್ದಾರೆ. ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಲೆಯನ್ನೇ ಜೀವವಾಗಿಸಿಕೊಂಡಿದ್ದ ರಾಜು ತಾಳಿಕೋಟೆ 59 ವಯಸ್ಸಿಗೆ ಬಾರದೂರಿಗೆ ಪಯಣಿಸಿದ್ದಾರೆ. ಆದರೆ ರಾಜು ತಾಳಿಕೋಟೆ ಬದುಕೇ ಒಂದು ಅದ್ಭುತ ಪ್ರೇಮ ಕಾವ್ಯ. ಇಬ್ಬರ ಹೆಂಡಿರ ಮುದ್ದಿನ ಗಂಡನಾಗಿ, ಹಾಸ್ಯ ಕಲಾವಿದನಾಗಿ ಮಿಂಚಿದ ಅವರ ಜೀವನ ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿಯುವಂಥದ್ದು.ರಾಜು ತಾಳಿಕೋಟೆಗೆ ಹೃದಯಾಘಾತ ಸಂಭವಿಸಿತ್ತು. ಉಡುಪಿಯ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ನಿನ್ನೆ ಚಿಕಿತ್ಸೆ ಫಲಿಸದೇ ರಾಜು ತಾಳಿಕೋಟೆ ಇಹಲೋಕ ತ್ಯಜಿಸಿದ್ದಾರೆ. ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಲಕ್ಷಾಂತರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಇಂಥಾ ಹೊತ್ತಿನಲ್ಲಿ ರಾಜು ತಾಳಿಕೋಟೆ ಅವರ ವೈಯಕ್ತಿಕ ಬದುಕಿನ ಸಂಗತಿಗಳು ಗಮನ ಸೆಳೆಯುತ್ತಿವೆ. ಇಬ್ಬರ ಹೆಂಡಿರ ಮುಂದಿನ ಗಂಡನಾಗಿದ್ದ ರಾಜು ತಾಳಿಕೋಟೆ ಇಬ್ಬರ ಜೊತೆಗೂ ಅನ್ಯೋನ್ಯವಾಗಿದ್ದರು. ಇನ್ನೊಂದು ಇಂಟರೆಸ್ಟಿಂಗ್‌ ವಿಚಾರ ಅಂದ್ರೆ ಇಬ್ಬರು ಹೆಂಡಿರ ಹೆಸರೂ ಒಂದೇ ಅನ್ನೋದು.…

Read More

ಆರ್.ಎಸ್.ಎಸ್‌ಗೆ ನೂರು ವರ್ಷದ ಬೆನ್ನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಆರ್.ಎಸ್.ಎಸ್ ಕಾರ್ಯಕರ್ತರಿಂದ ನಿರಂತರ ಲೈಂಗಿಕ ಕಿರುಕುಳ ಹಿನ್ನಲೆಯಲ್ಲಿ ಮನನೊಂದ ಟೆಕ್ಕಿಯೊಬ್ಬ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕೇರಳದ ತಿರುವನಂತಪುರಂ ಲಾಡ್ಜ್‌ವೊಂದರಲ್ಲಿ ಟೆಕ್ಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆನಂದ್ ಆತ್ಮಹತ್ಯೆಗೆ ಶರಣಾಗಿರುವ ಟೆಕ್ಕಿ. ಸಾವಿಗೂ ಮುನ್ನ ಆನಂದ್‌ ಇನ್‌ಸ್ಟಾಗ್ರಾಂನಲ್ಲಿ ಡೆತ್‌ನೋಟ್ ಬರೆದಿಟ್ಟಿದ್ದು, ಆರ್.ಎಸ್.ಎಸ್ ಸದಸ್ಯರಿಂದ ತನಗೆ ನಿರಂತ ಲೈಂಗಿಕ ಕಿರುಕುಳ ನೀಡಲಾಗಿದೆ. ಬಾಲ್ಯದಿಂದಲೂ ತಾನು ದೌರ್ಜ್ಯನ್ಯಕ್ಕೊಳಗಾಗಿದ್ದು, ಮಾನಸಿಕವಾಗಿ ನೊಂದಿದ್ದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದು ಭಾರೀ ಸಂಚಲನ ಮೂಡಿಸಿದೆ. ಇನ್ನೂ ಈ ಕುರಿತಾಗಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರ ಟೆಕ್ಕಿ ಮೇಲೆ ಲೈಂಗಿಕ ಕಿರುಕುಳ ನೀಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದಿದ್ದು, ತನಿಖೆಗೆ RSS ನಾಯಕರು ಸಹಕರಿಸಬೇಕು ಮತ್ತು RSSನ ನಾಯಕರ ಕೂಡ ಈ ಆರೋಪದ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಆನಂದ್‌ ಅಜಿ ಬರೆದಿರುವ ಪತ್ರದಲ್ಲಿ…

Read More

ರಂಗಭೂಮಿ ಕಲಾವಿದ, ಕಲಿಯುಗದ ಕುಡುಕ ನಾಟಕದ ಖ್ಯಾತಿಯ ರಾಜು ತಾಳಿಕೋಟೆ ವಿಧಿವಶರಾಗಿದ್ದಾರೆ. ಹೃದಯಾಘಾದಿಂದ ಮಣಿಪಾಲ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಕೊನೆಯುಸಿರೆಳೆದಿದ್ದಾರೆ. ಯೋಗರಾಜ್ ಭಟ್ ಅವರ ಮನಸಾರೆ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯರಾಗಿದ್ದರು. ಬಳಿಕ ಪಂಚರಂಗಿ, ಮತ್ತೊಂದ್ ಮದುವೇನಾ..!, ಮೈನಾ ಸೇರಿದಂತೆ ಹಲವಾರು ಸಿನಿಮಾಗಳ ಮೂಲಕ ಮನೆಮಾತಾಗಿದ್ದರು. ಅಲ್ಲದೇ ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ ಏಳರ ಸ್ಪರ್ಧಿ ಕೂಡ ಆಗಿದ್ರು. ರಾಜು ತಾಳಿಕೋಟಿಯವರ ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ ಎಂದಾಗಿತ್ತು. ವಿಜಯಪುರ ಜಿಲ್ಲೆಯ ಚಿಕ್ಕ ಸಿಂದಗಿ ಮೂಲದವರಾಗಿದ್ದ ರಾಜು ತಾಳಿಕೋಟಿ ಅವರು ಕೇವಲ ನಟನಾಗಿರದೆ, ತಾಳಿಕೋಟಿಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲಿಕರೂ ಆಗಿದ್ದರು. ಸೆಪ್ಟೆಂಬರ್‌ನಲ್ಲಿ ಖ್ಯಾತ ಹಾಸ್ಯನಟ, ನಾಟಕಕಾರ ಯಶವಂತ ಸರದೇಶಪಾಂಡೆಯವರು ನಿಧನರಾಗಿದ್ದರು. ಇದೀಗ ರಂಗಭೂಮಿಯ ಮತ್ತೊಂಡು ಕೊಂಡಿ ಕಳಚಿದ್ದು, ರಾಜು ತಾಳಿಕೋಟಿಯವರ ನಿಧನಕ್ಕೆ ಕನ್ನಡ ಚಿತ್ರರಂಗ ಮತ್ತು ಉತ್ತರ ಕರ್ನಾಟಕದ ರಂಗಭೂಮಿ ಕಂಬನಿ ಮಿಡಿದಿದೆ.

Read More

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಎರಡು ವಾರ ಮುಗಿಸಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಎರಡನೇ ವಾರದಲ್ಲಿ ಸ್ವಲ್ಪ ಅಡೆತಡೆ ಉಂಟಾದ್ರೂ ಈಗ ಬಿಗ್‌ಬಾಸ್‌ ಮತ್ತೆ ಹಳೇ ಟ್ರ್ಯಾಕ್‌ಗೆ ಬಂದಿದೆ. ಆದ್ರೀಗ ಬಿಗ್‌ಬಾಸ್‌ ಮತ್ತೊಂದು ರೋಚಕ ತಿರುವು ನೀಡಲು ಸಜ್ಜಾಗಿದೆ. ಅದೇನಂದ್ರೆ ಮಿಡ್‌ ಸೀಸನ್‌ ಫಿನಾಲೆ.. ಹೌದು.. ಎಕ್ಸ್‌ಪೆಕ್ಟ್‌ ದಿ ಅನ್‌ಎಕ್ಸ್‌ಪೆಕ್ಟೆಡ್‌ ಅನ್ನೋ ಥೀಮ್‌ನಲ್ಲಿ ಶುರುವಾಗಿರುವ ಬಿಗ್‌ಬಾಸ್‌ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಡುತ್ತಿದ್ದು, ಸ್ಪರ್ಧಿಗಳಿಗೆ ದಿಗಿಲು ಬಡಿದಂತಾಗಿದೆ. ಬಿಗ್‌ಬಾಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಫಿನಾಲೆ ನಡೆಯುತ್ತಿದ್ದು, ಸ್ಪರ್ಧಿಗಳಿಗೆ ನಡುಕ ಶುರುವಾಗಿದೆ. ಯಾಕಂದ್ರೆ, ಈ ಫಿನಾಲೆಯಲ್ಲಿ ಹಲವು ಸ್ಪರ್ಧಿಗಳಿಗೆ ಗೇಟ್‌ಪಾಸ್‌ ನೀಡಲಾಗುತ್ತೆ ಎನ್ನಲಾಗುತ್ತಿದೆ. ಅಶ್ವಿನಿಗೌಡ, ಗಿಲ್ಲಿ ನಟ, ಕಾವ್ಯ ಶೈವ, ಜಾಹ್ನವಿ, ಮಲ್ಲಮ್ಮ, ಕಾಕ್ರೋಚ್‌ ಸುಧಿ, ಮಾಳು ನಿಪನಾಳ್‌ ಹಾಗೂ ಸ್ಪಂದನಾ ಸೇರಿ ಕೆಲವರ ಸ್ಥಾನ ಸದ್ಯಕ್ಕೆ ಭದ್ರವಾಗಿದೆ ಎನ್ನಲಾಗ್ತಿದೆ. ಆದ್ರೆ, ಉಳಿದ ಬಹುತೇಕರು ಡೇಂಜರ್‌ ಝೋನ್‌ನಲ್ಲಿ ಇದ್ದಾರೆ. ಹೀಗಾಗಿ, ಇವರಿಗೆಲ್ಲಾ ಬಿಗ್‌ಬಾಸ್‌ ಎಲಿಮಿನೇಷನ್‌ ಶಾಕ್‌ ನೀಡ್ತಾರಾ ಅನ್ನೋದು ಭಾರಿ ಕುತೂಹಲ…

Read More