Author: chandrakant

 ಅಂತರ್ಜಲ ಮಟ್ಟ ಕ್ಷೀಣಿಸುತ್ತಿರುವುದು, ಸರೋವರಗಳು ಕಣ್ಮರೆಯಾಗುತ್ತಿರುವುದು ಮತ್ತು ಕಾವೇರಿ ನದಿಯ ಮೇಲೆ ಅತಿಯಾದ ಅವಲಂಬನೆಯೊಂದಿಗೆ, ಬೆಂಗಳೂರಿನ ನೀರಿನ ಬಿಕ್ಕಟ್ಟು ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ದಿ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಸುವರ್ಣಮುಖಿ ನದಿ ಪುನರುಜ್ಜೀವನ ಜಾಗೃತಿ ಮತ್ತು ಕ್ರಿಯಾ ಕಾರ್ಯಾಗಾರವು ಸರ್ಕಾರಿ ನಾಯಕರು, ವಿಜ್ಞಾನಿಗಳು ಮತ್ತು ಸಮುದಾಯ ಪ್ರತಿನಿಧಿಗಳನ್ನು ಒಟ್ಟುಗೂಡಿಸಿ ಕಾರ್ಯಸಾಧ್ಯ ಪರಿಹಾರಗಳನ್ನು ರೂಪಿಸಿತು. ನೈಸರ್ಗಿಕ ಜಲ ಮರುಪೂರಣವನ್ನು ಪುನಃಸ್ಥಾಪಿಸುವುದು, ಪ್ರಕೃತಿ ಆಧಾರಿತ ವಿಧಾನಗಳ ಮೂಲಕ ಮಾಲಿನ್ಯವನ್ನು ನಿಭಾಯಿಸುವುದು ಮತ್ತು ದೀರ್ಘಕಾಲೀನ ನೀರಿನ ಸುರಕ್ಷತೆಗಾಗಿ ಸಮುದಾಯಗಳನ್ನು ಸಜ್ಜುಗೊಳಿಸುವುದರ ಮೇಲೆ ಚರ್ಚೆಗಳು ಮಾಡಲಾಗಿದೆ. ಜಾಗತಿಕ ಮಾನವತಾವಾದಿ ನಾಯಕರಾದ ಗುರುದೇವ್ ಶ್ರೀ ಶ್ರೀ ರವಿ ಶಂಕರ್ ಅವರ, ಭಾರತದಲ್ಲಿ ನಶಿಸುತ್ತಿರುವ ನದಿಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಭಾರತವನ್ನು ಜಲಸಂಪನ್ಮೂಲವನ್ನಾಗಿ ಮಾಡುವ ದೃಷ್ಟಿಕೋನದಿಂದ ಪ್ರೇರಿತರಾಗಿ, ದಿ ಆರ್ಟ್ ಆಫ್ ಲಿವಿಂಗ್, ಕರ್ನಾಟಕ ಸರ್ಕಾರ ಮತ್ತು ಐಐಎಂ ಬೆಂಗಳೂರು ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ನೀರಿನ ಭವಿಷ್ಯಕ್ಕಾಗಿ ನೀತಿಗತ ದೃಷ್ಟಿಕೋನಗಳು, ಪಾರಂಪರಿಕ ಜ್ಞಾನ ಮತ್ತು ನಾಗರಿಕರ ಸಹಭಾಗಿತ್ವಗಳನ್ನು ಮಾರ್ಗಸೂಚಿಯಲ್ಲಿ…

Read More

ಸ್ವಯಂ ಘೋಷಿತ ಶಾಂತಿ ಧೂತ ಡೊನಾಲ್ಡ್‌ ಟ್ರಂಪ್‌ಗೆ ಭಾರಿ ಹಿನ್ನಡೆ ಉಂಟಾಗಿದೆ. ನೊಬೆಲ್‌ ಶಾಂತಿ ಪುರಸ್ಕಾರದ ನಿರೀಕ್ಷೆಯಲ್ಲಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್‌ ಕನಸು ಭಗ್ನವಾಗಿದೆ.. ಇಂಡಿಯಾ-ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ನಡುವಿನ 7 ಯುದ್ಧವನ್ನು ನಿಲ್ಲಿಸಿದ್ದೇನೆ. ಹೀಗಾಗಿ, ನನಗೆ ನೊಬೆಲ್‌ ಶಾಂತಿ ಪ್ರಶಸ್ತಿ ಸಿಗಬೇಕು ಅಂತಾ ಟ್ರಂಪ್‌ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಆದ್ರೆ, ನೊಬೆಲ್‌ ಶಾಂತಿ ಪ್ರಶಸ್ತಿ ಆಯ್ಕೆ ಮಂಡಳಿ ಸದಸ್ಯರು ಟ್ರಂಪ್‌ ಹೆಸರನ್ನು ಪರಿಗಣಿಸಿಲ್ಲ. ಬದಲಾಗಿ ವೆನಿಜುವೆಲಾ ದೇಶದ ಮರಿಯಾ ಕೊರಿನಾ ಮಚಾಡೋಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ. ಮರಿಯಾ ಕೊರಿನಾ ಮಚಾಡೋ ವೆನಿಜುವೆಲಾದ ವಿರೋಧ ಪಕ್ಷದ ನಾಯಕಿಯಾಗಿದ್ದು, ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ನಡೆಸಿದ ಕಾರಣಕ್ಕಾಗಿ ನೊಬೆಲ್ ಶಾಂತಿ ಪುರಸ್ಕಾರ ಒಲಿದು ಬಂದಿದೆ. ಉದ್ಯಮಿಯೂ ಆಗಿರುವ ಮರಿಯಾ, ಕೈಗಾರಿಕಾ ಇಂಜಿನಿಯರ್‌ ಆಗಿದ್ದಾರೆ. ವೆನಿಜುವೆಲಾ ಉಕ್ಕಿನ ಮಹಿಳೆ ಅಂತಲೇ ಗುರುತಿಸಿಕೊಂಡಿದ್ದಾರೆ. ಅಲ್ಲಿನ ಸರ್ವಾಧಿಕಾರದ ವಿರುದ್ಧ ದಶಕಗಳ ಕಾಲ ಹೋರಾಟ ನಡೆಸಿದ್ದಾರೆ. ಪ್ರಶಸ್ತಿ ವಿಜೇತಕರಿಗೆ ನಗದು ಬಹುಮಾನ ಹಾಗೂ ಚಿನ್ನದ ಪದಕ ನೀಡಲಾಗ್ತಿದ್ದು,…

Read More

ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಎರಡು ವಾರ ಆಗುತ್ತ ಬರುತ್ತಿದೆ. ಸಾಮಾನ್ಯವಾಗಿ ಹೊಸ ಸೀಸನ್ ಶುರುವಾದಾಗ ಮೊದಲ ಎರಡು ವಾರ ಎಲ್ಲರೂ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಪರಸ್ಪರ ಪ್ರೀತಿಯಿಂದ ಮಾತನಾಡಿಕೊಂಡು ಸಮಯ ಕಳೆಯುತ್ತಾರೆ. ಜಗಳಗಳ ಸನ್ನಿವೇಶ ಮೂರು ವಾರಗಳ ನಂತರ ಶುರುವಾಗುತ್ತೆ. ಆದರೆ, ಈ ಬಾರಿಯ ಬಿಗ್ ಬಾಸ್​ ಸೀಸನ್ ಹಿಂದಿನಂತಿಲ್ಲ.. ಶೋ ಪ್ರಾರಂಭವಾದ ಎರಡೇ ದಿನಕ್ಕೆ ಜಗಳ ಶುರುವಾಗಿತ್ತು. ನಂತರ ಪ್ರತಿದಿನ ದೊಡ್ಮನೆಯೊಳಗೆ ಜಗಳಗಳು ನಡೆಯುತ್ತಲೇ ಇದೆ. ಬಿಗ್ ಬಾಸ್ ಒಂದು ದಿನ ಸ್ಥಗಿತಗೊಂಡ ನಂತರ ಪುನಃ ಸ್ಪರ್ಧಿಗಳು ಮನೆಯೊಳಗೆ ಬಂದಿದ್ದು, ನಂತರ ಜಗಳಗಳ ಕಾವು ಮತ್ತಷ್ಟು ಏರಿದೆ. ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಬೆಂಕಿ ಹತ್ತಿಕೊಂಡಿದ್ದು ಡಾಗ್ ಸತೀಶ್ ಹಾಗೂ ಚಂದ್ರಪ್ರಭಾ ನಡುವೆ. ಅಸಲಿಗೆ ಇವರಿಬ್ಬರು ಜಂಟಿಗಳು, ಜೊತೆಯಾಗಿಯೇ ಇರಬೇಕು. ಆದರೆ, ಚಂದ್ರಪ್ರಭಾ ಅವರಿಗೆ ಸತೀಶ್ ಅವರನ್ನು ಸಹಿಸಿಕೊಂಡು ಪಿತ್ತ ನೆತ್ತಿಗೇರಿದೆ. ಇದು ಜಗಳಕ್ಕೆ ಕಾರಣವಾಗಿದೆ. ಕಳೆದ ವೀಕೆಂಡ್​ನಲ್ಲಿ ಜಂಟಿ ಸದಸ್ಯರಿಗೆ ನಿಮ್ಮ ಪಾರ್ಟ್ನರ್…

Read More

ಬಿಗ್‌ಬಾಸ್‌ ಶೋ ನಡೆಯುತ್ತಿದ್ದ ಜಾಲಿವುಡ್‌ ಸ್ಟುಡಿಯೋಗೆ ಬೀಗ ಜಡಿದ ನಂತರ ಸ್ಪರ್ಧಿಗಳಿಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಶೋ ಶುರುವಾಗುತ್ತಾ ಇಲ್ವಾ ಅನ್ನೋ ಚಿಂತೆ ಒಂದ್ಕಡೆಯಾದ್ರೆ, ಮನೆಯವರನ್ನ ನೋಡ್ಬೇಕು ಅಂತಾ ಮತ್ತೊಂದು ಚಿಂತೆ.. ಆದ್ರೆ, ಸದ್ಯಕ್ಕಂತೂ ಇವರೆಡೂ ಅಸಾಧ್ಯವಾದುದು. ಇದರ ಮಧ್ಯೆ ರೆಸಾರ್ಟ್‌ಗೆ ಶಿಫ್ಟ್‌ ಆಗಿರುವ ಸ್ಪರ್ಧಿಗಳು, ಯಾರ ಸಂಪರ್ಕಕ್ಕೆ ಸಿಗದಂತೆ ಗೃಹ ಬಂಧನದಲ್ಲಿ ಇಟ್ಟಂತಾಗಿದೆ.. ಹೌದು.. ಬಿಗ್​​ಬಾಸ್ ಮನೆಯಲ್ಲಿದ್ದ ಎಲ್ಲ 17 ಸ್ಪರ್ಧಿಗಳನ್ನು ಸ್ಥಳಾಂತರ ಮಾಡಲಾಗಿದ್ದು, ಎಲ್ಲರನ್ನೂ ರಾಮನಗರದ ಬಳಿಕ ಈಗಲ್​​ಟನ್ ರೆಸಾರ್ಟ್​​ನಲ್ಲಿ ಇರಿಸಲಾಗಿದೆ. ಆದರೆ ರೆಸಾರ್ಟ್​​​ನಲ್ಲಿಯೂ ಸಹ ಬಿಗ್​​ಬಾಸ್ ಸ್ಪರ್ಧಿಗಳಿಗೆ ಕೆಲವು ಕಠಿಣ ನಿಯಮಗಳನ್ನು ಹೇರಲಾಗಿದ್ದು, ಅಲ್ಲಿಯೂ ಬಿಗ್​​ಬಾಸ್ ಸ್ಟೈಲ್‌ನಲ್ಲೇ ಶೋ ನಡೆಸಲಾಗುತ್ತಿದೆ. ಈಗಲ್‌ಟನ್ ರೆಸಾರ್ಟ್​​​ನಲ್ಲಿ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, 17 ಸ್ಪರ್ಧಿಗಳನ್ನು 12 ಕೋಣೆಗಳಲ್ಲಿ ಇರಿಸಲಾಗಿದೆ. ನಿನ್ನೆ ರೆಸಾರ್ಟ್​​ಗೆ ಕರೆದುಕೊಂಡು ಬಂದ ಬಳಿಕ ಸ್ಪರ್ಧಿಗಳೊಟ್ಟಿಗೆ ಬಿಗ್​​ಬಾಸ್ ಆಯೋಜಕರು ಸಭೆ ನಡೆಸಿದ್ದು, ಪರಿಸ್ಥಿತಿ ವಿವರಿಸಿದ್ದಾರೆ. ಎಲ್ಲ ಸ್ಪರ್ಧಿಗಳ ಮನೆಯವರಿಗೆ ಮಾಹಿತಿ ನೀಡಿರುವುದಾಗಿ ಸ್ಪರ್ಧಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ರೆಸಾರ್ಟ್​​ನಲ್ಲಿ ಇದ್ದಾಗಲೂ…

Read More

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಶುರುವಾಗಿ ಹನ್ನೊಂದೇ ದಿನಕ್ಕೆ ಕ್ಲೋಸ್‌ ಆಗಿದೆ.. ಬಿಗ್‌ಬಾಸ್‌ ನಡೆಯುತ್ತಿದ್ದ ಜಾಲಿವುಡ್‌ ಸ್ಟುಡಿಯೋಗೆ ರಾಮನಗರ ಜಿಲ್ಲಾಡಳಿತ ಬೀಗ ಜಡಿದು ಬಿಟ್ಟಿದೆ. ಸದ್ಯ ಸ್ಪರ್ಧಿಗಳನ್ನೆಲ್ಲಾ ರೆಸಾರ್ಟ್‌ವೊಂದರಲ್ಲಿ ಇರಿಸಿದ್ದು, ಯಾರ ಸಂಪರ್ಕಕ್ಕೂ ಸಿಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದೆಲ್ಲದರ ಮಧ್ಯೆ ಇದೀಗ ನಟ್ಟು ಬೋಲ್ಟ್‌ನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬಿಗ್‌ಬಾಸ್‌ ಶೋ ಸ್ಥಗಿತದ ಹಿಂದೆ ರಾಜ್ಯದ ಪವರ್‌ಫುಲ್‌ ಮಿನಿಸ್ಟರ್‌ ಒಬ್ಬರ ಸೇಡು ಇದೆಯಾ ಅನ್ನೋ ಪ್ರಶ್ನೆ ಎದ್ದಿದೆ. ಬಿಗ್‌ಬಾಸ್‌ ಕನ್ನಡ ಶೋ ಸ್ಥಗಿತದ ವಿಚಾರ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.. ನಟ ಕಿಚ್ಚ ಸುದೀಪ್‌ ನಿರೂಪಣೆ ಮಾಡ್ತಿದ್ದ ಬಿಗ್‌ಬಾಸ್‌ ಶೋಗೆ ನಟ್‌ ಬೋಲ್ಟ್‌ ಜಡಿಯಲಾಗಿದೆ.. ಇದ್ರ ಹಿಂದೆ ರಾಜ್ಯದ ಪವರ್‌ಫುಲ್‌ ಮಿನಿಸ್ಟರ್‌ ಒಬ್ಬರ ಕೈವಾಡ ಇದೆ ಅಂತಾ ಜೆಡಿಎಸ್‌ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದೆ. ಅದರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತಾಡಿರುವ ವಿಡಿಯೋ ಹಾಕಿದ್ದು, ಬಿಗ್‌ಬಾಸ್‌ ಶೋ ಬಂದ್‌ ಮಾಡಿ ಸೇಡು ತೀರಿಸಿಕೊಂಡ ನಟ್‌ ಬೋಲ್ಟ್‌ ಮಿನಿಸ್ಟರ್‌ ಅಂತಾ ಆರೋಪಿಸಿದೆ.…

Read More

ಕಾಯಿಲೆ ಬಂದಾಗ ವಾಸಿ ಮಾಡಿಕೊಳ್ಳೋದಕ್ಕೆ ಏನೇನು ತಿನ್ನಬೇಕು ಅಂತಾ ಒಂದಷ್ಟು ಲಿಸ್ಟ್‌ ಮಾಡಿಕೊಂಡಿರ್ತೀವಿ. ಇದರ ಜೊತೆಗೆ ಏನು ತಿನ್ನಬಾರದು ಅನ್ನೋದು ಕೂಡಗೊತ್ತಿರಬೇಕು. ಆಗ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳೋದಿಲ್ಲ. ಕೆಲವೊಮ್ಮೆ ನಾವು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸಿ ಸೇವಿಸುವ ಆಹಾರಗಳು ನಮ್ಮ ದೇಹಕ್ಕೆ ಅಥವಾ ದೇಹಕ್ಕೆ ಬಂದಿರುವ ಕಾಯಿಲೆಗೆ ಹಿಡಿಸದೇ ಇರಬಹುದು. ಅದರಲ್ಲೂ ಇತ್ತೀಚೆಗೆ ಥೈರಾಯ್ಡ್‌ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಥೈರಾಯ್ಡ್ ಕುತ್ತಿಗೆಯಲ್ಲಿರುವ ಒಂದು ಸಣ್ಣ ಗ್ರಂಥಿಯಾಗಿದ್ದು, ಇದು ಚಿಟ್ಟೆಯ ರೆಕ್ಕೆಗಳಂತೆ ಕಾಣುತ್ತದೆ. ಇದರ ಕೆಲಸ ಹಾರ್ಮೋನುಗಳು ಚಯಾಪಚಯ ಮತ್ತು ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಥೈರಾಯ್ಡ್ ಹಾರ್ಮೋನುಗಳು ಗ್ರಂಥಿಯಿಂದ ಬಿಡುಗಡೆಯಾಗುತ್ತವೆ ಮತ್ತು ರಕ್ತದ ಮೂಲಕ ದೇಹದ ಜೀವಕೋಶಗಳಿಗೆ ಚಲಿಸುತ್ತವೆ. ಈ ಕಾರಣದಿಂದಾಗಿ ದೇಹವು ಬೆಳವಣಿಗೆಯಾಗುತ್ತದೆ, ಮೂಳೆ ರಚನೆ, ಲೈಂಗಿಕ ಬೆಳವಣಿಗೆ ನಡೆಯುತ್ತದೆ ಮತ್ತು ದೇಹದ ಅನೇಕ ಕಾರ್ಯಗಳನ್ನು ನಿಯಂತ್ರಿಸಲಾಗುತ್ತದೆ. ಥೈರಾಯ್ಡ್‌ ರೋಗಿಗಳಿಗೆ ಈ ಆಹಾರಗಳು ವಿಷಕ್ಕೆ ಸಮ! ಸೋಯಾದಿಂದ ತಯಾರಿಸಿದ ಆಹಾರಗಳು ಸೋಯಾ ಹಾಗೂ ಸೋಯಾ ಬಳಸಿ ತಯಾರಿಸಿದ ಆಹಾರಗಳಿಂದ ಥೈರಾಯ್ಡ್‌ ರೋಗಿಗಳು…

Read More

ಈಗಿನ ಬ್ಯುಸಿ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ತುಂಬಾ ಕಷ್ಟ. ಆದ್ರೆ ಅಷ್ಟೇ ಮುಖ್ಯ. ಎಲ್ಲರೂ ಸಮಯ ಉಳಿಸಲು, ಹಣ ಉಳಿಸಲು ಹಾಕು ಎಫರ್ಟ್‌ಅನ್ನ ಆರೋಗ್ಯದ ಮೇಲೆ ಕೊಂಚವಾದ್ರೂ ಹಾಕಿದರೆ ಕಾಯಿಲೆಗಳು ದೂರ ಉಳಿಯುತ್ವೆ. ದಿನನಿತ್ಯದ ಜೀವನದಲ್ಲಿ ನಾವು ಮಾಡುವ ಚಿಕ್ಕಪುಟ್ಟ ತಪ್ಪುಗಳು ಎಷ್ಟೋ ಬಾರಿ ಅನಾರೋಗ್ಯದ ದೊಡ್ಡ ಕಾರಣವಾಗ್ಬಹುದು. ಹೀಗಾಗಿ ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬೇಕು. ಅದರಲ್ಲೂ ಬೆಳಗ್ಗೆ ನಮ್ಮ ದಿನಚರಿ ಯಾವ ರೀತಿ ಇರುತ್ತದೆ ಅನ್ನೋದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಸಾಮಾನ್ಯವಾಗಿ ಬೆಳಗ್ಗೆ ಖಾಲಿ ಹೊಟ್ಟೆಗೆ ಟೀ ಕಾಫಿ ಕುಡಿಯುವ ಅಭ್ಯಾಸ ತುಂಬಾ ಜನರಿಗೆ ಇದೆ. ಈ ಅಭ್ಯಾಸ ಒಳ್ಳೇದಾ? ಕೆಟ್ಟದ್ದಾ? ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏನ್‌ ಕುಡಿದ್ರೆ ನಾವು ದಿನವಿಡೀ ಎನರ್ಜೆಟಿಕ್‌ ಆಕ್ಟಿವ್‌ ಆಗಿರ್ತೀವಿ? ಹಾಗೆ ಯಾವ ಡ್ರಿಂಕ್‌ಗಳು ನಮ್ಮ ಪ್ರೊಡಕ್ಟಿವಿಟಿಯನ್ನ ಕಡಿಮೆ ಮಾಡುತ್ವೆ ಇವೆಲ್ಲವನ್ನ ತಿಳ್ಕೊಳೋಣ. ಖಾಲಿ ಹೊಟ್ಟೆಯಲ್ಲಿ ಇವುಗಳನ್ನ ಕುಡಿದ್ರೆ ಡೇಂಜರ್!‌ ಚಹಾ/ಕಾಫಿ ಆಗ್ಲೆ ಹೇಳಿರೋಹಾಗೆ ರಾತ್ರಿ ನೀವು ಏನನ್ನೂ ಸೇವಿಸದೇ…

Read More

ಬಿಗ್‌ಬಾಸ್‌ ಕನ್ನಡ ಸೀಸನ್‌-12 ರಿಯಾಲಿಟಿ ಶೋಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಕಾರ್ಯಕ್ರಮ ಶುರುವಾಗಿ ವಾರವಷ್ಟೇ ಕಳೆದಿದೆ. ಭಾನುವಾರವಷ್ಟೇ ಮೊದಲ ಎಲಿಮಿನೇಷನ್‌ ಆಗಿ ಇಬ್ಬರು ಮನೆಯಿಂದ ಹೊರಬಂದಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದುಕೊಳ್ಳುವಷ್ಟರಲ್ಲೇ ರಾಜ್ಯ ಸರ್ಕಾರ ಬಿಗ್‌ಬಾಸ್‌ಗೆ ಬಿಗ್‌ ಶಾಕ್‌ ನೀಡಿದೆ. ತಕ್ಷಣ ಬಿಗ್‌ಬಾಸ್‌ ಕಾರ್ಯಕ್ರಮ ಬಂದ್‌ ಮಾಡುವಂತೆ ಖಡಕ್‌ ಸೂಚನೆ ನೀಡಿದೆ. ಬಿಗ್‌ಬಾಸ್ ಹೌಸ್‌ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿದೆ. ಬೆಂಗಳೂರು ಹೊರವಲಯದ ಬಿಡದಿ ಹೋಬಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ವೆಲ್ಸ್ ಸ್ಟುಡಿಯೋಸ್ ಮತ್ತು ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕನ್ನಡದ ಬಿಗ್‌ಬಾಸ್ ಶೋ ನಡೆಯುತ್ತಿದೆ. ಬಿಡದಿ ಹೋಬಳಿಯ ಇಂಡಸ್ಟ್ರಿಯಲ್ ಏರಿಯಾದ ಪ್ಲಾಟ್ ಸಂಖ್ಯೆ 24 ಮತ್ತು 25ರಲ್ಲಿ ಸ್ಟುಡಿಯೋ ನಿರ್ಮಿಸಿ ಮನರಂಜನೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಪ್ರದೇಶದಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಯಾವುದೇ ಸಂಸ್ಕರಣೆಯಿಲ್ಲದೆ ಆವರಣದ ಹೊರಗೆ ಬಿಡಲಾಗುತ್ತಿದೆ. ಇದರಿಂದಗಿ ಈ ಪ್ರದೇಶದ ಸುತ್ತಮುತ್ತಲಿನ ಪರಿಸರದಲ್ಲಿ ಮಾಲಿನ್ಯವಾಗುತ್ತಿದೆ. ಇಲ್ಲಿಯ ನಿರ್ವಹಣೆಯೂ ತುಂಬಾ ಕಳಪೆಯಾಗಿದೆ. ನೀರು ಹರಿವು ಮಾರ್ಗದ ಚಾರ್ಟ್ ಸಿದ್ಧಪಡಿಸಿಲ್ಲ.…

Read More

ಪ್ರಾದೇಶಿಕ ಪಕ್ಷದ ಮಾಸ್‌ ಲೀಡರ್‌.. ಜೆಡಿಎಸ್‌ ಪಕ್ಷದಲ್ಲಿ ಹೊಸ ಕಿಚ್ಚಿನ ಜನಕ.. ರೈತರ ಪಾಲಿನ ದೇವರು ಅಂತಾನೇ ಫೇಮಸ್‌ ಆಗಿರೋ ನಾಯಕ ಅಂದ್ರೆ ಅದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ.. ಸೆಡ್ಡು ಹೊಡೆದು ವಾಕ್ಸಮರಕ್ಕೆ ನಿಂತ್ರೆ ಗಂಟೆಗಟ್ಟಲೇ ನಿರರ್ಗಳವಾಗಿ ಸರ್ಕಾರದ ವಿರುದ್ಧ ಮಾತಿನ ಮತಾಪು ಸಿಡಿಸ್ತಾ ಇದ್ರು.. ಆದ್ರೆ ಕಳೆದ ಕೆಲ ಸಮಯದಿಂದ ಹೆಚ್‌ಡಿಕೆ ಫುಲ್‌ ಸೈಲೆಂಟ್‌ ಆಗಿಬಿಟ್ಟಿದ್ರು.. ಕುಗ್ಗಿ ಹೋದ ದೇಹ.. ಹೊಳಪಿಲ್ಲದ ಮುಖ.. ಏರುಧ್ವನಿಯೇ ಇಲ್ಲದ ಮಾತು… ಹೀಗೆ ಕುಗ್ಗಿಹೋಗಿದ್ದ ಕುಮಾರಸ್ವಾಮಿಯವರನ್ನು ಕಂಡು ಅಭಿಮಾನಿಗಳೆಲ್ಲಾ ಆತಂಕಕ್ಕೊಳಗಾಗಿದ್ರು.. ಆದ್ರೆ ಇದೀಗ ಅವರ ಆರೋಗ್ಯ ವಿಚಾರದಲ್ಲಿ ಬಿಗ್‌ ಅಪ್ಡೇಟ್‌ ಸಿಕ್ಕಿದೆ.. ಯಾರೂ ಊಹಿಸಿರದ ರೀತಿಯಲ್ಲಿ ಕುಮಾರಸ್ವಾಮಿ ಆರೋಗ್ಯದಲ್ಲಿ ಬದಲಾವಣೆ ಆಗಿದೆ.. ಕುಮಾರಸ್ವಾಮಿಯವರ ಆರೋಗ್ಯದ ಬಗ್ಗೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿತ್ತು.. ಅವರು ಕೂಡ ಕೇಂದ್ರ ಸಚಿವರಾದ ಮೇಲೆ ರಾಜ್ಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ರು.. ಎಚ್‌ಡಿಕೆಯವರು ಸೊರಗಿದಂತೆ ಕಾಣುತ್ತಿದ್ದುದರಿಂದ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳಲ್ಲಿ ಅಂತೂ ಜನರು ಗಾಬರಿಗೊಂಡು ಕಮೆಂಟ್ಸ್‌ ಹಾಕ್ತಿದ್ರು.. ಬೇಗ ಚೇತರಿಸಿಕೊಳ್ಳಿ…

Read More

ಕನ್ನಡದ ಯುವ ನಟಿಗೆ ನಿರ್ಮಾಪಕ ಹಾಗೂ ನಟ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಸಂಭಾವನೆಯ ಹಣ ನೀಡದೆ ವಂಚಿಸಿದ್ದ ಆರೋಪದ ಮೇಲೆ ಹೇಮಂತ್ ಕುಮಾರ್‌ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ನಟಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಕಾಟದಿಂದ ಬೇಸತ್ತ ನೊಂದ ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತನಗಾದ ನೋವು ತೋಡಿಕೊಂಡಿದ್ದಾರೆ. 2022ರಲ್ಲಿ ಹೇಮಂತ್ ನಟಿಯನ್ನು ಪರಿಚಯಿಸಿಕೊಂಡಿದ್ದ. ತಾನು ನಿರ್ಮಿಸುತ್ತಿರುವ ರಿಚ್ಚಿ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ನೀಡುವುದಾಗಿ ಹೇಳಿ ಆಫರ್ ನೀಡಿದ್ದ. ಈ ಸಂಬಂಧ, ನಟಿಗೆ 2 ಲಕ್ಷ ರೂಪಾಯಿ ಸಂಭಾವನೆ ನೀಡುವುದಾಗಿ ಅಗ್ರಿಮೆಂಟ್ ಕೂಡ ಆಗಿತ್ತು. ಆರಂಭದಲ್ಲಿ ಮುಂಗಡವಾಗಿ 60 ಸಾವಿರ ಹಣವನ್ನು ಸಹ ಹೇಮಂತ್ ನೀಡಿದ್ದ. ಆದರೆ, ಸಿನಿಮಾ ಶೂಟಿಂಗ್ ಪದೇಪದೆ ತಡ ಆಗಿದ್ದರಿಂದ ನಟಿಗೆ ಬೇಸರವಾಗಿತ್ತು. ಈ ಸಂದರ್ಭದಲ್ಲಿ ಆರೋಪಿ ಹೇಮಂತ್‌ನ ವಿಕೃತ ಮನಸು ಬಯಲಾಗಿದೆ. ಚಿತ್ರದಲ್ಲಿ ಅಶ್ಲೀಲ ಬಟ್ಟೆಗಳನ್ನು ಧರಿಸುವಂತೆ ಮತ್ತು ಅಸಭ್ಯವಾಗಿ…

Read More