Author: chandrakant

ಸ್ಯಾಂಡಲ್‌ವುಡ್‌ನ ಅತಿದೊಡ್ಡ ಮನರಂಜನಾ ಹಬ್ಬ ಬಹು ನಿರೀಕ್ಷಿತ ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌(QPL) ಎರಡನೇ ಆವೃತ್ತಿಗೆ ಕೌಂಟ್‌ಡೌನ್‌ ಶುರುವಾಗಿದೆ. ಈಗಾಗ್ಲೇ ತಂಡಗಳ ಹರಾಜು, ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆದಿದೆ. ಅಕ್ಟೋಬರ್‌ 25ರಂದು ಕ್ಯೂಪಿಎಲ್ ಸೀಸನ್‌ 2 ಕ್ರೀಡೋತ್ಸವದ ಮೆಗಾ ಬಿಡ್ಡಿಂಗ್‌ ಯಶಸ್ವಿಯಾಗಿ ನಡೆದಿದೆ. ಕ್ಯೂಪಿಎಲ್‌ ಎರಡನೇ ಸೀಸನ್‌ನ ಜರ್ಸಿ, ಟ್ರೋಫಿ ಅನಾವರಣ ಮಾಡಲಾಗಿದ್ದು, ಒಲಿಂಪಿಕ್ಸ್‌ ಪದಕ ವಿಜೇತೆ ಅಂಜುಬಾಬಿ ಜಾರ್ಜ್‌, FIBA ASIA & ಕರ್ನಾಟಕ ಒಲಿಂಪಿಕ್ಸ್‌ ಅಸೋಸಿಯೇಷನ್‌ ಅಧ್ಯಕ್ಷರಾದ ಡಾ.ಕೆ. ಗೋವಿಂದರಾಜ್‌, ಕ್ಯೂಪಿಎಲ್‌ ಸಂಸ್ಥಾಪಕರಾದ ಮಹೇಶ್‌ಗೌಡ ಹಾಗೂ ಜನಪ್ರಿಯ ನಟ ಮತ್ತು ಸಹ ಸಂಸ್ಥಾಪಕರಾದ ಪ್ರಮೋದ್‌ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ರು. ಕಳೆದ ವರ್ಷ ಯಶಸ್ವಿಯಾಗಿ ನಡೆದ ಮೊದಲ ಆವೃತ್ತಿಗೆ ಸಿಕ್ಕ ಭರ್ಜರಿ ಪ್ರತಿಕ್ರಿಯೆ ನಂತರ ಈ ಸಲದ ಆವೃತ್ತಿಯಲ್ಲಿ 12 ಹೊಸ ಕ್ರೀಡೆಗಳನ್ನು ಸೇರಿಸಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ 10 ತಂಡಗಳಿದ್ದು, ಅಕ್ಟೋಬರ್‌ 25ರಂದು ನಡೆದ ಬಿಡ್‌ನಲ್ಲಿ ಪ್ರತಿಷ್ಠಿತ ಉದ್ಯಮಿಗಳು ತಂಡಗಳನ್ನು ಖರೀದಿಸಿದ್ದಾರೆ. ಅದೇ ದಿನದಂದು ಆಟಗಾರ್ತಿಯರ…

Read More

ಖಾಲಿ ಹೊಟ್ಟೆಯಲ್ಲಿ ಕೆಲವೊಂದು ಹಣ್ಣುಗಳನ್ನ ತಿನ್ನುವುದರಿಂದ ಆರೋಗ್ಯ ಸುಧಾರಣೆಯಾಗುವುದು ಮಾತ್ರವಲ್ಲದೇ ಸಾಕಷ್ಟು ಆರೋಗ್ಯ ಸಮಸ್ಯೆಗಳು ಹತ್ತಿರಕ್ಕೂ ಸುಳಿಯುವುದಿಲ್ಲ. ಅದರಲ್ಲೂ ಪಪ್ಪಾಯಿ ಖಾಲಿ ಹೊಟ್ಟೆಯಲ್ಲಿ ತಿನ್ನಲು ಉತ್ತಮವಾದ ಹಣ್ಣುಗಳಲ್ಲಿ ಒಂದಾಗಿದೆ. ಇದು ಪಪೈನ್ ಎಂಬ ಕಿಣ್ವವನ್ನು ಹೊಂದಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಗುಣಪಡಿಸಬಹುದು. ಪಪ್ಪಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ನಿಯಾಸಿನ್, ಮೆಗ್ನೀಸಿಯಮ್, ಕ್ಯಾರೋಟಿನ್, ಫೈಬರ್, ಫೋಲೇಟ್, ಪೊಟ್ಯಾಸಿಯಮ್, ತಾಮ್ರ, ಕ್ಯಾಲ್ಸಿಯಂ ಅಂಶಗಳಿವೆ. ಇದು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಅಲ್ಲದೇ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಇದರ ಹೊರತಾಗಿ ಇನ್ನೂ ಸಾಕಷ್ಟು ಆರೋಗ್ಯ ಪ್ರಯೋಜನಗಳು ಪಪ್ಪಾಯಿ ಸೇವನೆಯಿಂದ ಲಭಿಸುತ್ತವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದರ ಲಾಭಗಳೇನು? ಮಲಬದ್ಧತೆಗೆ ಒಳ್ಳೆಯದು ಮಲಬದ್ಧತೆ ಸಮಸ್ಯೆ ಅನುಭವಿಸುತ್ತಾ ಇರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ತಿನ್ನುವುದರಿಂದ ತುಂಬಾ ಪ್ರಯೋಜನಕಾರಿಯಾಗಿದೆ. ಪಪ್ಪಾಯಿಯಲ್ಲಿ ಫೈಬರ್ ಸಮೃದ್ಧವಾಗಿರುವುದರಿಂದ, ಇದು ಮಲವನ್ನು ಮೃದುಗೊಳಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು…

Read More

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಯಾರೂ ಊಹಿಸದ ಘಟನೆಗಳು ಸಾಕಷ್ಟು ನಡೆಯುತ್ತಿವೆ. ಮೂರನೇ ವಾರದಲ್ಲೇ ಬಿಗ್ ಬಾಸ್ ಫಿನಾಲೆ ನಡೆಯಿತು. ಇದರಲ್ಲಿ ವಿನ್ ಆದ ಸುಧಿಗೆ ಮುಂಬರುವ ಯಾವುದೇ ಒಂದು ನಾಮಿನೇಷನ್​ನಿಂದ ಬಚಾವ್ ಆಗುವ ಅಧಿಕಾರ ನೀಡಲಾಯಿತು. ಇನ್ನು, ಒಬ್ಬರನ್ನು ವಾರದ ಮಧ್ಯದಲ್ಲಿ ಹಾಗೂ ಮತ್ತಿಬ್ಬರನ್ನು ವಾರಾಂತ್ಯದಲ್ಲಿ ಎಲಿಮಿನೇಟ್ ಮಾಡಲಾಯಿತು. ಈಗ ಮೂವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿರುವಾಗಲೇ ಬಿಗ್ ಬಾಸ್‌ನಿಂದ ಮಲ್ಲಮ್ಮ ಹೊರ ನಡೆದಿದ್ದಾರೆ ಎಂಬ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಹೌದು ಮಲ್ಲಮ್ಮ ಎಲಿಮಿನೇಟ್‌ ಆಗೋಕೆ ಕಾರಣ ಏನಂದ್ರೆ, ಮಲ್ಲಮ್ಮ ಅವರಿಗೆ ವಯಸ್ಸಾಗಿದೆ. ಆದಾಗ್ಯೂ ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಠಕ್ಕರ್ ಕೊಡೋ ರೀತಿಯಲ್ಲಿ ಆಟ ಆಡುತ್ತಿದ್ದರು. ಕೆಲವು ನಿಯಮಗಳು, ಆಟದ ವಿಚಾರಗಳು ಅವರಿಗೆ ಅರ್ಥ ಆಗದೇ ಇದ್ದರು ಅವರಿಗೆ ಸೂಕ್ಷ್ಮತೆಗಳು ತಿಳಿಯುತ್ತಿತ್ತು. ಅವರು ಅನೇಕರ ಫೇವರಿಟ್ ಸ್ಪರ್ಧಿ ಆಗಿದ್ದರು. ಆದರೆ, ಈಗ ವೈಯಕ್ತಿಕ ಕಾರಣಗಳಿಂದ ಅವರು ದೊಡ್ಮನೆಯಿಂದ ಹೊರ ಹೋಗಿದ್ದಾರೆ ಎಂಬ ಸುದ್ದಿ…

Read More

ಬಿಗ್‌ಬಾಸ್‌ನಲ್ಲಿ ಬಿಗ್‌ ಟ್ವಿಸ್ಟ್‌!, ದೊಡ್ಮನೆ ಜೋಡೆತ್ತುಗಳ ನಡುವೆ ನಡೀತು ಬಿಗ್‌ ವಾರ್‌.. ಅಶ್ವಿನಿ ಗೌಡ ಜೊತೆ ಟು ಬಿಟ್ಟ ಜಾನ್ವಿ.. ಅಷ್ಟಕ್ಕೂ ಅಶ್ವಿನಿಗೌಡ, ಜಾನ್ವಿ ದೂರ ಆಗಲು ಕಾರಣವೇನು? ಬಿಗ್‌ಬಾಸ್‌ ಮನೆಯಲ್ಲಿ ಆಗಿದ್ದೇನು? ಕನ್ನಡದ ಬಿಗ್ ರಿಯಾಲಿಟಿ ಶೋ, ಕಿಚ್ಚ ಸುದೀಪ್ ಅವರು ನಡೆಸಿಕೊಡುವಂತಹ ಬಿಗ್ ಬಾಸ್​ ರಂಗೇರಿದ್ದು ಮನೆಯಲ್ಲಿ ಯಾರ್ ಮೇಲೆ ಯಾರು ಜಗಳ ಮಾಡುತ್ತಾರೋ ಗೊತ್ತಾಗುತ್ತಿಲ್ಲ. ಇಷ್ಟು ದಿನ ಕುಚಿಕು ಗೆಳತಿಯರಂತೆ ಓಡಾಡಿಕೊಂಡಿದ್ದ ಜಾಹ್ನವಿ ಹಾಗೂ ಅಶ್ವಿನಿಗೌಡ ಮಧ್ಯೆ ದೊಡ್ಡ ಬೆಂಕಿ ಹೊತ್ತಿಕೊಂಡಿದೆ. ಬಿಗ್​ಬಾಸ್ ಮನೆಯಲ್ಲಿ ಇಬ್ಬರ ನಡುವೆ ಮಾತಿನ ಸಮರವೇ ನಡೆದಿದೆ. ಹೌದು… ಬಿಗ್‌ಬಾಸ್‌ ತಮ್ಮ ಎದುರಾಳಿ ಸ್ಪರ್ಧಿ ದೊಡ್ಮನೆಯಲ್ಲಿ ಇರಲು ಯಾಕೆ ಯೋಗ್ಯರಲ್ಲ ಎಂದು ತಿಳಿಸುವಂತೆ ಪ್ರಶ್ನೆ ಮಾಡಿದ್ದರು. ಇದಕ್ಕೆ ಮನೆಯಲ್ಲಿ ಮೊದಲು ಮಾತನಾಡಿದ ಅಶ್ವಿನಿ ಗೌಡ, ಜಾಹ್ನವಿ ಜೊತೆಗಿನ ಸ್ನೇಹದಿಂದ ನನಗೆ ಕಳಂಕ ಬಂದಿದೆ ಎಂದು ನೇರವಾಗಿಯೇ ಡಿಚ್ಚಿ ಕೊಟ್ರು. ಈ ವೇಳೆ ಎದುರುತ್ತರ ಕೊಟ್ಟ ಜಾಹ್ನವಿ ನಿಮ್ಮ ಆಟನ ನೀವು ಆಡುತ್ತಿದ್ದೀರಾ, ನನ್ನ…

Read More

ಭಾರತೀಯ ರೈಲ್ವೇಯಲ್ಲಿ ಕೆಲಸ ಖಾಲಿ ಇದ್ದು ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ರೈಲ್ವೆ ನೇಮಕಾತಿ ಮಂಡಳಿಯು ಈ ಬಾರಿ ಗ್ರಾಜುಯೇಟ್ ಮತ್ತು ಅಂಡರ್ ಗ್ರಾಜುಯೇಟ್ ವರ್ಗಗಳಲ್ಲಿ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆ ಕೈಗೊಂಡಿದೆ. ಇದರ ಮೂಲಕ ಪದವೀಧರರು ಹಾಗೂ ಪದವಿಪೂರ್ವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಒಟ್ಟು 8850 ಹುದ್ದೆಗಳು ಲಭ್ಯವಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅಪ್ಲೈ ಮಾಡ್ಬಹುದು. ಪದವೀಧರ ವರ್ಗಕ್ಕೆ 5817 ಹುದ್ದೆಗಳು ಮತ್ತು ಪದವಿಪೂರ್ವ ವರ್ಗಕ್ಕೆ 3058 ಹುದ್ದೆಗಳು ಮೀಸಲಾಗಿವೆ. ಪದವೀಧರ ಹುದ್ದೆಗಳಿಗೆ 18ರಿಂದ 33 ವರ್ಷಗಳ ವಯೋಮಿತಿ ಹಾಗೂ ಪದವಿಪೂರ್ವ ಹುದ್ದೆಗಳಿಗೆ 18ರಿಂದ 30 ವರ್ಷಗಳ ವಯೋಮಿತಿ ಅನ್ವಯಿಸುತ್ತೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ ನೀಡಲಾಗಿದೆ. ಗ್ರಾಜುವೇಟ್‌ ವರ್ಗದ ಅಭ್ಯರ್ಥಿಗಳು ಅಕ್ಟೋಬರ್‌ 21ರಿಂದ ನವೆಂಬರ್ 20ರವರೆಗೆ ಹಾಗೂ ಅಂಡರ್‌ಗ್ರಾಜುವೇಟ್‌ ವರ್ಗದ ಅಭ್ಯರ್ಥಿಗಳು ಅಕ್ಟೋಬರ್ 28ರಿಂದ ನವೆಂಬರ್ 27ರವರೆಗೆ ಅರ್ಜಿಯನ್ನ ಸಲ್ಲಿಸಬಹುದು. ಸಾಮಾನ್ಯ, ಓಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು 500 ರೂ. ಪಾವತಿಸಬೇಕು. ಎಸ್‌ಸಿ, ಎಸ್‌ಟಿ, ಮಹಿಳಾ, ದಿವ್ಯಾಂಗ…

Read More

ಯುಪಿಐ ವರ್ಕ್‌ ಆಗ್ತಿಲ್ಲ, ಇಂಟರ್‌ನೆಟ್‌ ಸ್ಲೋ ಇದೆ, ರೀಚಾರ್ಜ್‌ ಕಾಲಿ ಆಗಿದೆ… ಇನ್ಮೇಲೆ ಈ ರೀತಿಯ ಸಮಸ್ಯೆಗಳಲ್ಲಿ ನೀವು ಸಿಕ್‌ ಹಾಕೊಳೋ ಅವಶ್ಯಕತೆ ಇಲ್ಲ. ಯಾಕಂದ್ರೆ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ ಡಿಜಿಟಲ್ ರೂಪಾಯಿಯನ್ನ ಇಂಟ್ರಡ್ಯೂಸ್‌ ಮಾಡ್ತಾ ಇದೆ. ಇದ್ರ ಸ್ಪೆಷಾಲಿಟಿ ಏನು ಅಂದ್ರೆ, ಇಂಟರ್‌ನೆಟ್‌ ಅಥವಾ ಮೊಬೈಲ್‌ ನೆಟ್‌ವರ್ಕ್‌ ಇಲ್ಲದೇ ನೀವು ಡಿಜಿಟಲ್‌ ಪೇಮೆಂಟ್‌ಗಳನ್ನ ಮಾಡ್ಬಹುದು. ಯಾವ ರೀತಿ ಯುಪಿಐ QR ಕೋಡ್‌ಅನ್ನ ಸ್ಕ್ಯಾನ್‌ ಮಾಡ್ತಿರೋ ಅದೇ ರೀತಿ ಸ್ಕ್ಯಾನ್‌ ಅಥವಾ ಟ್ಯಾಪ್‌ ಮಾಡಿದ್ರೆ ಆಯ್ತು ನಿಮ್ಮ ಟ್ರ್ಯಾನ್ಸಾಕ್ಷನ್‌ ಸಕ್ಸಸ್‌ಫುಲ್‌ ಆಗುತ್ತೆ. ಇನ್ನು, ದೇಶದ ಹಲವಾರು ಬ್ಯಾಂಕುಗಳಲ್ಲಿ ಡಿಜಿಟಲ್ ರೂಪಾಯಿಯನ್ನು ವ್ಯಾಲೆಟ್ ಆಗಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇದನ್ನು SBI, ICICI ಬ್ಯಾಂಕ್, IDFC ಫಸ್ಟ್ ಬ್ಯಾಂಕ್, ಯೆಸ್ ಬ್ಯಾಂಕ್, HDFC ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಕೆನರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಫೆಡರಲ್…

Read More

ಬಿಗ್‌ಬಾಸ್ ಮಿಡ್‌ ಸೀಸನ್ ಗ್ರ್ಯಾಂಡ್‌ ಫಿನಾಲೆಗೆ ‌ಕೌಂಟ್‌ಡೌನ್‌ ಶುರುವಾಗಿದೆ.. ಮೊದಲೇ ಹೇಳಿದಂತೆ ಅನಿರೀಕ್ಷಿತವಾದುದನ್ನು ನಿರೀಕ್ಷಿಸಿ ಎಂಬ ಮಾತಿನಂತೆ ದೊಡ್ಮನೆಯಲ್ಲಿ ದೊಡ್ಡ ಬೆಳವಣಿಗೆ ನಡೀತಿದೆ. ಗ್ರ್ಯಾಂಡ್‌ ಫಿನಾಲೆಗೆ ಕೆಲವು ಸ್ಪರ್ಧಿಗಳಿಗೆ ಎಕ್ಸಿಟ್‌ ಬಾಗಿಲು ತೆರೆಯುತ್ತದೆ ಅನ್ನೋ ಚರ್ಚೆ ಜೋರಾಗಿದ್ದು, ಆ ಸ್ಪರ್ಧಿಗಳು ಯಾರ್ಯಾರು ಅನ್ನೋದು ಭಾರಿ ಕುತೂಹಲ ಕೆರಳಿಸಿದೆ. ಈಗಾಗಲೇ ಗ್ರ್ಯಾಂಡ್‌ ಫಿನಾಲೆ ಮೊದಲ ದಿನದ ಪ್ರೋಮೊ ಕೂಡ ಬಂದಿದೆ. ಮನೆ ಸೇರಿರುವ ದೆವ್ವ ಓಡಿಸಲು ಕಿಚ್ಚ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ದೊಡ್ಮನೆಯಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿಗೌಡ, ಜಾಹ್ನವಿ ಸೇರಿ ಕತ್ತಿ ಮಸೆಯುತ್ತಿರುವುದು ಗುಟ್ಟಾಗೇನು ಉಳಿದಿಲ್ಲ. ಇದೆಲ್ಲದರ ಮಧ್ಯೆ ದೊಡ್ಮನೆಯಿಂದ ಯಾರು ಎಲಿಮಿನೇಟ್‌ ಆಗ್ತಾರೆ? ಅವರ ಬದಲಿಗೆ ಯಾರು ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಡ್ತಾರೆ ಅನ್ನೋದು ಕೂಡ ಭಾರಿ ಚರ್ಚೆ ಹುಟ್ಟು ಹಾಕಿದೆ. ಬಿಗ್‌ಬಾಸ್‌ ಸೀಸನ್‌ 12ಕ್ಕೆ ಒಟ್ಟು 19 ಮಂದಿ ಎಂಟ್ರಿ ಕೊಟ್ಟಿದ್ದರು. ಅವರ ಪೈಕಿ ಇಬ್ಬರು ಸ್ಪರ್ಧಿಗಳಾದ ಆರ್.ಜೆ.ಅಮಿತ್‌ ಹಾಗೂ ಕರಿಬಸಪ್ಪ ಎಲಿಮಿನೇಟ್‌ ಆಗಿದ್ದು, ಈ ವಾರದ ಮಧ್ಯದಲ್ಲೇ…

Read More

EPFO ಗ್ರಾಹಕರಿಗೆ ಭರ್ಜರಿ ನ್ಯೂಸ್.. ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಏಳು ಕೋಟಿಗೂ ಹೆಚ್ಚು ಚಂದಾದಾರರಿಗೆ ಶೇಕಡಾ ನೂರರಷ್ಟು ಪಿಎಪ್‌ ವಿದ್‌ಡ್ರಾವಲ್‌ಗೆ ಅವಕಾಶ ಕೊಟ್ಟಿದೆ. ಇನ್ಮೇಲೆ ಸದಸ್ಯರು ಭವಿಷ್ಯ ನಿಧಿಯಲ್ಲಿ ಅರ್ಹ ಬಾಕಿ ಮೊತ್ತದ 100%ವರೆಗೆ ಸಂಗ್ರಹಿಸಲು ಸಾಧ್ಯವಾಗುತ್ತೆ. ಇದರಲ್ಲಿ ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರ ಪಾಲೂ ಸೇರಿದೆ. ಇನ್ನು ವಿದ್‌ಡ್ರಾವಲ್‌ ಲಿಮಿಟ್‌ಗೂ ಕೂಡ ರಿಲ್ಯಾಕ್ಸೇಷನ್‌ ನೀಡಲಾಗಿದೆ. ಈ ಮೊದ್ಲು ವಿವಾಹ ಮತ್ತು ಶಿಕ್ಷಣಕ್ಕೆ ಕೇವಲ ಮೂರು ಬಾರಿ ಮಾತ್ರ ವಿದ್‌ಡ್ರಾ ಮಾಡೋದಿಕ್ಕೆ ಅವಕಾಶ ಇತ್ತು. ಈ ಮಿತಿಯನ್ನ ಸಡಿಲಗೊಳಿಸಲಾಗಿದ್ದು, ಇದೀಗ ಶಿಕ್ಷಣ ಹಿಂಪಡೆಯುವಿಕೆಗೆ 10 ಬಾರಿ ಮತ್ತು ಮದುವೆಗೆ ಐದು ಬಾರಿ ವಿದ್‌ಡ್ರಾ ಮಾಡ್ಬಹುದು. ಇನ್ನು, ಪಾರ್ಷಿಯಲ್‌ ವಿದ್‌ಡ್ರಾವಲ್‌ಗೆ ಉದ್ಯೋಗಿ ಕನಿಷ್ಠ 12 ತಿಂಗಳುಗಳ ಕಾಲ ಸೇವೆಯನ್ನ ಸಲ್ಲಿಸಿರಬೇಕು. ಅಂದ್ರೆ ಕೆಲಸಕ್ಕೆ ಜಾಯಿನ್‌ ಆಗಿ ಮಿನಿಮಮ್‌ ಒಂದು ವರ್ಷ ಆಗಿರ್ಬೇಕು. ಈ ಹಿಂದೆ, ವಿಶೇಷ ಸಂದರ್ಭಗಳಲ್ಲಿ ಅಂದ್ರೆ ನೈಸರ್ಗಿಕ ವಿಕೋಪ, ಸಂಸ್ಥೆಗಳ ಮುಚ್ಚುವಿಕೆ, ನಿರಂತರ ನಿರುದ್ಯೋಗ, ಸಾಂಕ್ರಾಮಿಕ ರೋಗ…

Read More

ದೀಪಾವಳಿ ಹಬ್ಬದ ಸಲುವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಕ್ಕೆ 2500 ವಿಶೇಷ ಬಸ್‌ಗಳು ಅಕ್ಟೋಬರ್‌ 17ರಿಂದ 26ರವರೆಗೆ ಕಾರ್ಯನಿರ್ವಹಿಸಲಿವೆ. ಮೆಜೆಸ್ಟಿಕ್‌, ಮೈಸೂರು ರಸ್ತೆ ಬಸ್‌‍ ನಿಲ್ದಾಣ ಮತ್ತು ಶಾಂತಿ ನಗರ ನಿಲ್ದಾಣದಿಂದ ಅ.17 ರಿಂದ 20ರ ವರೆಗೆ ಬಸ್‌‍ಗಳು ಹೊರಡಲಿವೆ. ಇನ್ನು, ರಾಜ್ಯ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಅ.22 ರಿಂದ 26 ರ ವರೆಗೆ ಬೆಂಗಳೂರಿಗೆ ವಿಶೇಷ ಬಸ್‌‍ಗಳು ಬರಲಿವೆ. ಜೊತೆಗೆ ರಿಸರ್ವೇಷನ್‌ ಸೌಲಭ್ಯ ಕೂಡ ಇರಲಿದೆ. www.ksrtc karnataka.gov.in ವೆಬ್‌ಸೈಟ್‌ ಮುಖಾಂತರ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದಾಗಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದಲ್ಲಿ ಶೇ. 5 ರಷ್ಟು ರಿಯಾಯಿತಿ ಕೂಡ ನೀಡಲಾಗುತ್ತೆ. ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ KSRTC ವೆಬ್‌ಸೈಟ್‌ಗೆ ಭೇಟಿ ನೀಡಿ. Read…

Read More