Subscribe to Updates
Get the latest creative news from FooBar about art, design and business.
Author: chandrakant
ಸಾಂಸ್ಕೃತಿಕವಾಗಿ ಸಮೃದ್ಧವಾಗಿರೋ ನಮ್ಮ ಕರ್ನಾಟಕದ ವೈಭವವನ್ನು ಜನರಿಗೆ ತಿಳಿಸೋಕೆ ಆರಂಭಿಸಿದ ಸ್ಟಾರ್ ಸುವರ್ಣದ ಹೆಮ್ಮೆಯ ಕಥೆ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ. ಕಥೆಯೊಂದು ಜನರ ಮನ ಮುಟ್ಬೇಕು ಅಂದ್ರೆ ಅದರಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಛಾಪು ಇರಬೇಕು. ಕರುನಾಡ ಸಂಸ್ಕೃತಿ ಹಾಸು ಹೊಕ್ಕಾಗಿರೋ ಕಥೆಯನ್ನು ನಾವು ಆಯ್ಕೆ ಮಾಡುವಾಗ ನಮ್ಮಲ್ಲಿದ್ದ ಉದ್ದೇಶವೊಂದೇ ನಮ್ಮ ನೆಲದ ಕಥೆಯನ್ನ ಪ್ರತಿಯೊಬ್ಬ ಕನ್ನಡಿಗನೂ ಅರಿಯಬೇಕು ಎಂಬುದು. ಪೌರಾಣಿಕ ಕಥಾಹಂದರ ಹೊಂದಿರೋ ಉಧೋ ಉಧೋ ಶ್ರೀ ರೇಣುಕಾ-ಯಲ್ಲಮ್ಮರ ಕಥೆಯು ಇಂದು ದೇಶದ ಬೇರೆ ಬೇರೆ ಭಾಗಗಳಲ್ಲಿರುವ ಕನ್ನಡಿಗರ ಮನ ಗೆದ್ದಿದೆ. ವಿಭಿನ್ನ ಪ್ರಯೋಗ, ಪೌರಾಣಿಕ ಹಿನ್ನೆಲೆಯ ಜೊತೆಗಿನ ಈ ಜರ್ನಿ ಇಂದು 1000 ಸಂಚಿಕೆಗಳ ದಾಖಲೆಗೆ ಸಾಕ್ಷಿಯಾಗಿದೆ. ಪ್ರತಿ ನಿತ್ಯ ನಮ್ಮ ರೇಣುಕಾ – ಯಲ್ಲಮ್ಮರ ಬಗೆಗಿನ ಕಥೆಯ ಬಗ್ಗೆ ಮೆಸೇಜುಗಳು, ಫೀಡ್‌ಬ್ಯಾಕ್‌ಗಳು ಬಂದಾಗ ಈ ಪಯಣದ ಬಗ್ಗೆ ಖುಷಿಯಾಗುತ್ತದೆ. ರೇಣುಕಾ – ಯಲ್ಲಮ್ಮರ ಕಥೆಗಳು ನಿಮ್ಮ ಮನ ಮುಟ್ಟಿದೆ ಎಂಬುದೇ ನಮ್ಮ ಗೆಲುವನ್ನು ಸೂಚಿಸುತ್ತೆ.…
ಕಡುಬಡತನದಲ್ಲಿ ಹುಟ್ಟಿ ಬೆಳೆದು ಉನ್ನತ ಹುದ್ದೆ ಅಲಂಕರಿಸಿದ್ದ ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಆದ್ರೆ, ಅವರ ನಿಧನ ಇಡೀ ಕರುನಾಡಿನ ಮನ ಮಿಡಿಯುವಂತೆ ಮಾಡಿದೆ. ಅವರ ಕಾರ್ಯವೈಖರಿಯಿಂದಲೇ ಸದ್ದು ಮಾಡಿದ್ದ ಮಹಾಂತೇಶ್ ಬೀಳಗಿ ಅವರ ಸಾಧನೆ, ಅವರು ಆಡಿದ್ದ ಮಾತುಗಳು ಈಗ ಹೆಚ್ಚು ಸದ್ದು ಮಾಡುತ್ತಿವೆ. ಈ ಹಿಂದೆ ಬೆಸ್ಕಾಂನ ಎಂಡಿ ಆಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಾರು ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಸೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಸೇರಿ ಐವರ ಜೊತೆ ಮಹಾಂತೇಶ್ ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕೆಂದು ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ರು. ಈ ವೇಳೆ, ಏಕಾಏಕಿ ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ಪಲ್ಟಿಯಾಗಿ ಮಹಾಂತೇಶ್ ಜೀವ ಬಿಟ್ಟಿದ್ದಾರೆ. ಇನ್ನು, ಮಹಾಂತೇಶ್ ಬೀಳಗಿಯವರ ಊರು ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣ. ಕಡುಬಡತನದಲ್ಲಿ ಹುಟ್ಟಿದ್ದ ಮಹಾಂತೇಶ್ ಐಎಎಸ್ ಅಧಿಕಾರಿಯಾಗಿದ್ದೇ ರೋಚಕ. ಡಿಗ್ರಿವರೆಗೂ ರಾಮದುರ್ಗದಲ್ಲಿ ಓದಿದ್ದ…
ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿಗಳ ಆಟ ರೋಚಕ ತಿರುವು ಪಡೆದುಕೊಳ್ತಿದೆ. ಅದ್ರಲ್ಲೂ ಶೋನ ಪ್ರಮುಖ ಆಕರ್ಷಣೆ ಗಿಲ್ಲಿ ನಟನಿಗೆ ಈಗ ಸಂಕಷ್ಟ ಎದುರಾಗಿದೆ. ದಿನವಿಡೀ ಮಾತಾಡುವ ಸಾಮರ್ಥ್ಯ ಇರುವ ಗಿಲ್ಲಿ ಈಗ ಬಾಯಿ ಮುಚ್ಕೊಂಡಿರುವ ಸಂದಿಗ್ಧ ಪರಿಸ್ಥಿತಿ ಬಂದೊಂದಗಿದೆ. ಯಾಕಂದ್ರೆ, ಗಿಲ್ಲಿ ನಟನಿಗೆ ಕಳೆದ ಸೀಸನ್‌ನ ಸ್ಪರ್ಧಿಗಳು, ಸಖತ್ ಕ್ವಾಟ್ಲೆ ಕೊಟ್ಟಿದ್ದು, ಸ್ಟ್ರಿಕ್ಟ್ ಆಗಿ ವಾರ್ನಿಂಗ್ ಮಾಡಿದ್ದಾರೆ. ಯೆಸ್.. ದೊಡ್ಮನೆಗೆ ಬಿಗ್‌ಬಾಸ್ ಸೀಸನ್ 11ರ ಫೈರ್ ಬ್ರ್ಯಾಂಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ರಜತ್ ಬುಜ್ಜಿ, ತ್ರಿವಿಕ್ರಮ್, ಉಗ್ರಂ ಮಂಜು, ಚೈತ್ರಾ ಕುಂದಾಪುರ ಹಾಗೂ ಮೋಕ್ಷಿತಾ ಪೈ ಅಬ್ಬರ ಜೋರಾಗಿದೆ. ಇವರ ಮುಂದೆ, ಇಡೀ ಮನೆಯ ಸದಸ್ಯರನ್ನ ಗೋಳೋಯ್ಕೊಳ್ತಿದ್ದ ಗಿಲ್ಲಿ ಈಗ ಥಂಡಾ ಹೊಡೆದಿದ್ದಾರೆ. ಹೌದು.. ಉಗ್ರಂ ಮಂಜು ಮದ್ವೆ ಬಗ್ಗೆ ಬಿಗ್‌ಬಾಸ್ ಅನೌನ್ಸ್ ಮಾಡುತ್ತಾರೆ. ನಮ್ಮ ನಲ್ಮೆಯ ಮಹಾರಾಜ ಮಂಜು ಅವರಿಗೆ ಮದ್ವೆ ಫಿಕ್ಸ್ ಆಗಿದೆ ಅಂತಾ ಹೇಳ್ತಾರೆ. ಇದನ್ನ ಕೇಳಿದ ಸದಸ್ಯರು ಕೂಡ ಸ್ಪೆಷಲ್ ವಿಶ್ ಮಾಡಿದಾಗ ಉಗ್ರಂ…
ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹವನ್ನು ಹಠಾತ್ತನೆ ಮುಂದೂಡಿದ್ದರಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನವೆಂಬರ್ 23ರ ಭಾನುವಾರ ಸ್ಮೃತಿ ಅವರ ತಂದೆಯ ಆರೋಗ್ಯ ಹದಗೆಟ್ಟಿತ್ತು. ಹೃದಯಾಘಾತದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಹೊರಬಿತ್ತು. ನಂತರ ಸ್ಮೃತಿ ಅವರ ವಿವಾಹವನ್ನು ಮುಂದೂಡಿದ್ದರು. ಮದುವೆಯ ಸಂಭ್ರಮದಲ್ಲಿರಬೇಕಾಗಿದ್ದ ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಇದೀಗ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರ ತಂದೆ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಾದ ಬಳಿಕ ತಮ್ಮ ಮದುವೆಗೆ ಸಂಬಂಧಿಸಿದ ಆಚರಣೆಗಳ ಎಲ್ಲ ಇನ್‌ಸ್ಟಾಗ್ರಾಂ ಪೋಸ್ಟ್‌ಗಳನ್ನು ತೆಗೆದುಹಾಕಿದ್ದುು, ಇದೀಗ ವ್ಯಾಪಕ ಕುತೂಹಲ ಮನೆಮಾಡಿದೆ. ಅಲ್ಲದೆ, ತಮ್ಮ ಭಾವಿ ಪತಿಯಾದ ಪಲಾಶ್ ಮುಚ್ಚಲ್ ಕೂಡ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಬಳಿಕ ಬಿಡುಗಡೆಯಾಗಿದ್ದಾರೆ. ಇದೀಗ ಸ್ಮೃತಿ ಅವರು ಮದುವೆ ಮತ್ತು ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಎಲ್ಲ ವಿಡಿಯೋಗಳನ್ನು, ಪಲಾಶ್ ಅವರು ಪ್ರಪೋಸ್ ಮಾಡಿದ್ದ ವಿಡಿಯೋವನ್ನು ಕೂಡ ಅಳಿಸಲಾಗಿದೆ. ಸಹ ಆಟಗಾರ್ತಿಯರಾದ ಜೆಮಿಮಾ ರೊಡ್ರಿಗಸ್ ಮತ್ತು…
ಅಯ್ಯೋ ಮೆಟ್ಲು ಹತ್ತೋಕ್ ಆಗಲ್ಲ ಕಾಲು ನೋಯುತ್ತೆ. ಕೈ ಕಾಲುಗಳಲ್ಲಿ ಸೆಳೆತ ಬರುತ್ತೆ, ಸುಸ್ತು- ಆಯಾಸ ಅಂತೂ ಕಟ್ಟಿಟ್ಟ ಬುತ್ತಿ. ವಯಸ್ಸಾಕ್ತಿದ್ ಹಾಗೆ ಮೂಳೆಗಳು ವೀಕ್ ಆಗೋದ್ಯಾಕ್ ಗೊತ್ತಾ? ಮೂಳೆಗಳ ಮಧ್ಯೆ ಕೊಲಾಜೆನ್ ಎನ್ನುವಂತಹ ಕಂಪೌಂಡ್ ಇರುತ್ತೆ. ಇದು ಅಂಟಿನ ರೀತಿ ಕೆಲ್ಸ ಮಾಡುತ್ತೆ. ಅಂದ್ರೆ ಮೂಳೆಗಳನ್ನ ಜೋಡಿಸಿಟ್ಟುಕೊಳ್ಳುವಲ್ಲಿ ಸಹಾಯ ಮಾಡುತ್ತೆ. ವಯಸ್ಸು 25 ಆಗ್ತಿದ್ದಂತೆ ಕೊಲಾಜೆನ್ ಎಂಬ ಅಂಟು ಕಡಿಮೆ ಆಗ್ತಾ ಹೋಗುತ್ತೆ. ಪ್ರತೀ ವರ್ಷ ಒಂದೊಂದು ಪರ್ಸೆಂಟ್ ಕೊಲಾಜೆನ್ ಕಡಿಮೆಯಾಗುತ್ತೆ. ಹೀಗಾಗಿ 50-60 ವಯಸ್ಸಾಗ್ತಿದ್ದಂತೆ ಮೂಳೆಗಳು ವೀಕ್ ಆಗೋದು, ಸೆಳೆತ ಬರೋದು, ಅರ್ಥ್ರೈಟಿಸ್ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ವೆ. ಇದಿಕ್ಕೆ ಸೊಲ್ಯೂಷನ್ ನಿಮ್ಮ ಅಡುಗೆ ಮನೆಯಲ್ಲಿದೆ. ಈ 8 ಪವರ್‌ಫುಲ್ ತರಕಾರಿಗಳನ್ನ ನೀವು ತಿನ್ನೋದ್ರಿಂದ ನಿಮ್ಮ ಮೂಳೆಗಳ ಆರೋಗ್ಯ ವೃದ್ಧಿಯಾಗುತ್ತೆ. ಕ್ಯಾಬೇಜ್ ನಡೆಯೋವಾಗ ಕಾಲುಗಳಲ್ಲಿ ಕಟ್, ಕಟ್ ಸೌಂಡ್ ಬರೋದು ಅಥವಾ ಮಸಲ್ ಕ್ರ್ಯಾಂಪ್ಸ್ ಉಂಟಾಗೋದು ಈ ರೀತಿಯ ಸಮಸ್ಯೆಗಳಿರೋರು ಕ್ಯಾಬೇಜ್‌ಅನ್ನ ವಾರದಲ್ಲಿ 2 ಬಾರಿ ಸೇವಿಸಿ. ಇದನ್ನ…
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಸಂವಿಧಾನಾತ್ಮಕ ಸಂಸ್ಥೆಗಳನ್ನು, ವಿಶೇಷವಾಗಿ ಭಾರತದ ಚುನಾವಣಾ ಆಯೋಗವನ್ನು ಹಾಳುಗೆಡವಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಒಟ್ಟು 272 ಗಣ್ಯ ನಾಗರಿಕರು ಬಹಿರಂಗ ಪತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಗಣ್ಯರಲ್ಲಿ 16 ನ್ಯಾಯಾಧೀಶರು, 123 ನಿವೃತ್ತ ಅಧಿಕಾರಿಗಳು ಮತ್ತು 133 ನಿವೃತ್ತ ಸಶಸ್ತ್ರ ಪಡೆಗಳ ಅಧಿಕಾರಿಗಳು ಸೇರಿದ್ದಾರೆ. ರಾಷ್ಟ್ರೀಯ ಸಂವಿಧಾನಾತ್ಮಕ ಪ್ರಾಧಿಕಾರಗಳ ಮೇಲಿನ ದಾಳಿ ಎಂಬ ಶೀರ್ಷಿಕೆಯ ಈ ಪತ್ರವು ನವೆಂಬರ್ 18, 2025 ರಂದು ಪ್ರಕಟಗೊಂಡಿದ್ದು, ವಿರೋಧ ಪಕ್ಷದ ನಾಯಕರು ಪ್ರಮುಖ ಸಂಸ್ಥೆಗಳ ವಿರುದ್ಧ ವಿಷಕಾರಿ ಹೇಳಿಕೆ ಮತ್ತು ರಾಜಕೀಯ ಕಥನಗಳನ್ನು ಮುಂದುವರಿಸಲು ಪ್ರಚೋದನಕಾರಿ ಹಾಗೂ ಆಧಾರರಹಿತ ಆರೋಪಗಳನ್ನು ಬಳಸುತ್ತಿದ್ದಾರೆ ಎಂದು ತೀವ್ರವಾಗಿ ಟೀಕಿಸಿದೆ. ಸಶಸ್ತ್ರ ಪಡೆಗಳು, ನ್ಯಾಯಾಂಗ, ಸಂಸತ್ತು ಮತ್ತು ಇತರ ಸಾಂವಿಧಾನಿಕ ಪ್ರಾಧಿಕಾರಗಳ ಮೇಲೆ ಟೀಕೆ ಮಾಡಿದ ನಂತರ ಈಗ ಕಾಂಗ್ರೆಸ್ ಪಕ್ಷವು ವ್ಯವಸ್ಥಿತ ಮತ್ತು ದುರುದ್ದೇಶ ಪೂರ್ವಕ ಟೀಕೆಗಳ ಮೂಲಕ ಚುನಾವಣಾ ಆಯೋಗವನ್ನು ಗುರಿಯಾಗಿಸಿದೆ ಎಂದು…
ನವೆಂಬರ್ ಕ್ರಾಂತಿಯ ಚೆಂಡು ಈಗ ರಾಷ್ಟ್ರ ರಾಜಧಾನಿ ದಿಲ್ಲಿ ತಲುಪಿದೆ. ಸಿಎಂ ಬದಲಾವಣೆಯ ಬಿರುಗಾಳಿ ಕೈ ನಾಯಕರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಮನೆವರೆಗೂ ಬಂದು ನಿಂತಿದೆ. ಒಂದೊಮ್ಮೆ ಹೈಕಮಾಂಡ್ ನಾಯಕರು ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ಆದರೆ ರಾಜ್ಯದಲ್ಲಿ ದೊಡ್ಡ ಸುನಾಮಿಯೇ ಭುಗಿಲೇಳಲಿದೆ. ಆದ್ರೆ, ಆ ಸುನಾಮಿ ಭುಗಿಲೇಳುವ ಮೊದಲೇ ಸಿಎಂ ಸ್ಥಾನದ ಆಕಾಂಕ್ಷೆಯಲ್ಲಿರುವ ಡಿಕೆಶಿ ವಿರುದ್ಧ ರಾಹುಲ್ ಗಾಂಧಿ ಫುಲ್ ಗರಂ ಆಗಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಹಾಗಾದ್ರೆ, ಡಿಕೆಶಿ ವಿರುದ್ಧ ರಾಹುಲ್ ಕೋಪಗೊಂಡಿದ್ಯಾಕೆ? ಆಪತ್‌ಕಾಲದಲ್ಲಿ ಪಕ್ಷದ ಬಲಗೈ ಬಂಟನಂತಿದ್ದ ಡಿಕೆಶಿ ಮೇಲೆ ಹೈಕಮಾಂಡ್ ಮುನಿಸು ಯಾಕೆ? ವಿಧಾನಸಭೆಯಲ್ಲಿ ನಡೆದುಕೊಂಡ ಅದೊಂದು ರೀತಿ ಹೈಕಮಾಂಡ್ ಕಣ್ಣು ಕೆಂಪಾಗಿಸಿತಾ ಅನ್ನೋದನ್ನು ಹೇಳ್ತೀವಿ. ಅದಕ್ಕೂ ಮೊದಲು ಬಾಸ್ ಟಿವಿ ಕನ್ನಡ ಚಾನೆಲ್‌ನ್ನ ಸಬ್‌ಸ್ಕ್ರೈಬ್ ಮಾಡಿ. ಬಿಹಾರ ಎಲೆಕ್ಷನ್ ಸೋಲಿನ ಫಲಿತಾಂಶದ ಬಳಿಕ ಅಂದ್ರೆ ಶನಿವಾರ ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಭೇಟಿ ಮಾಡಿದ್ದರು. ಈ ವೇಳೆ ಸಿದ್ದರಾಮಯ್ಯ ಕ್ಯಾಬಿನೆಟ್…
ಕ್ರೀಡಾಪಟುಗಳು ವೇಗವಾಗಿ ಚೇತರಿಸಿಕೊಳ್ಳಲು ಮತ್ತು ಉತ್ಸಾಹದಿಂದ ಸಕ್ರಿಯರಾಗಿರಲು ಫಿಸಿಯೋಥೆರಪಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಹೇಳಿದರು. ಬೆಂಗಳೂರಿನ MCECHS ಲೇಔಟ್‌ನಲ್ಲಿ ‘ಡಾ. ನಿವ್ ಅವರ ಸ್ಪೋರ್ಟ್ಸ್ ಫಿಸಿಯೋಥೆರಪಿ ಕ್ಲಿನಿಕ್’ ಅನ್ನು ಉದ್ಘಾಟಿಸಿ ಮಾತನಾಡಿದ ಗಾಯಕ್ವಾಡ್ ಅವರು, ಫಿಸಿಯೋಥೆರಪಿ ದೈಹಿಕ ಚೇತರಿಕೆಗೆ ಸಹಾಯ ಮಾಡುವುದಲ್ಲದೆ, ಕ್ರೀಡಾಪಟುಗಳಲ್ಲಿ ಆತ್ಮವಿಶ್ವಾಸ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ಕ್ರೀಡಾಪಟುಗಳು ಆದಷ್ಟು ಬೇಗ ಕ್ರೀಡಾ ಚಟುವಟಿಕೆಗಳಿಗೆ ಮರಳಲು ಫಿಸಿಯೋಥೆರಪಿ ಬೆಂಬಲದ ಅಗತ್ಯವಿದೆ, ಆದ್ದರಿಂದ ಫಿಸಿಯೋಥೆರಪಿಸ್ಟ್‌ಗಳು ವಿಶೇಷವಾಗಿ ಸ್ಪೋರ್ಟ್ಸ್ ಫಿಸಿಯೋಥೆರಪಿಸ್ಟ್‌ಗಳು ಗಾಯಗೊಂಡ ಕ್ರೀಡಾಪಟುಗಳು ತ್ವರಿತವಾಗಿ ಆಟಕ್ಕೆ ಮರಳಲು ಸಹಾಯ ಮಾಡುತ್ತಾರೆ. ಈ ಕಾರಣಕ್ಕಾಗಿ ಕ್ರಿಕೆಟ್ ಮತ್ತು ಇತರೆ ಕ್ರೀಡೆಗಳಲ್ಲಿ ಮೈದಾನದ ಒಳಗೆ ಮತ್ತು ಹೊರಗೆ ಫಿಸಿಯೋಥೆರಪಿಸ್ಟ್‌ಗಳ ಪಾತ್ರ ಬಹಳ ಮುಖ್ಯವಾಗಿದೆ. ಈ ಕ್ಲಿನಿಕ್ ಖಂಡಿತವಾಗಿಯೂ ಆಟಗಾರರಿಗೆ ಮೌಲ್ಯಯುತ ಬೆಂಬಲವಾಗಿ ಕಾರ್ಯನಿರ್ವಹಿಸುತ್ತದೆ. ಡಾ. ನಿವೇದಾ ಅವರ ಉತ್ತಮ ಮತ್ತು ಅನುಭವಿ ಚಿಕಿತ್ಸೆಯಿಂದಾಗಿ ಕ್ರೀಡಾಪಟುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಖಂಡಿತವಾಗಿಯೂ ಸಾಧ್ಯವಾಗುತ್ತದೆ ಎಂದು ಅವರು…
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಯುವತಿ ಗಾಯಕಿಯೊಬ್ಬರು ಗೆಲ್ಲುವ ಮೂಲಕ ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿದ್ದಾರೆ. ಕೇವಲ 25 ವಯಸ್ಸಿಗೆ ಶಾಸಕಿಯಾಗಿ ವಿಧಾನಸಭೆಗೆ ಆಯ್ಕೆ ಆಗಿದ್ದು, ರಾಜಕೀಯ ದಿಗ್ಗಜರ ಗಮನ ಸೆಳೆದಿದ್ದಾರೆ. ಹೌದು.. ಇಷ್ಟಕ್ಕೂ ಆ ಯುವ ಶಾಸಕಿ ಬೇರೆ ಯಾರೂ ಅಲ್ಲ. ಮೈಥಿಲಿ ಠಾಕೂರ್. ವಯಸ್ಸು ಕೇವಲ 25.. ಖ್ಯಾತ ಜಾನಪದ ಗಾಯಕಿಯಾಗಿರುವ ಮೈಥಿಲಿ ಆಲಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ರು. ಬಿಜೆಪಿ ಗೆಲುವನ್ನೇ ಕಂಡಿರದ ಅಲಿನಗರ ಕ್ಷೇತ್ರದಲ್ಲಿ ಈಗ ಯುವ ಗಾಯಕಿ ಗೆದ್ದು ಬೀಗಿದ್ದು, ಬಿಜೆಪಿ ಹೈಕಮಾಂಡ್‌ನ್ನೇ ಬೆರಗುಗೊಳಿಸಿದ್ದಾರೆ. ಇನ್ನು, ಮೈಥಿಲಿ ಠಾಕೂರ್, ಉತ್ತರ ಮತ್ತು ಮಧ್ಯ ಭಾರತದಾದ್ಯಂತ ಫೇಮಸ್ ಆಗಿದ್ದಾರೆ. ವಿಶೇಷವಾಗಿ ಬಿಹಾರದ ಸುತ್ತಮುತ್ತ, ಠಾಕೂರ್ ಅವರು ತಮ್ಮ ಪ್ರದರ್ಶನಗಳಿಂದಾಗಿ ಜನರನ್ನು ಆಕರ್ಷಿಸಿದ್ದಾರೆ. ಭೋಜ್‌ಪುರಿ, ಹಿಂದಿ ಮತ್ತು ಸೂಫಿ ಹಾಡು ಹಾಡುವುದರಲ್ಲಿ ಖ್ಯಾತಿ. ಸಾಂಪ್ರದಾಯಿಕ ಸೋಹರ್, ಭೋಜ್‌ಪುರಿ ನಿರ್ಗುಣ್ ಗೀತ್, ರಾಮ-ಸೀತಾ ವಿವಾಹ ಗೀತ್, ಭಜನೆಗಳು, ಛಠ್ ಗೀತ್, ಅರೆ-ಶಾಸ್ತ್ರೀಯ ಕಜ್ರಿ, ಹೋರಿ, ಚೈತಿ, ಗಜಲ್ ಮತ್ತು ಸೂಫಿ ಹಾಡು ಹಾಡುವುದರಲ್ಲಿ ಎತ್ತಿದ…
ಮರಗಳೇ ನನ್ನ ಮಕ್ಕಳು ಎಂದು ಪೋಷಿಸಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಬದುಕಿನ ಪಯಣ ಮುಗಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ 114 ವರ್ಷಕ್ಕೆ ಉಸಿರು ಚೆಲ್ಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಜಯನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಧ್ಯಾಹ್ನ ನಿಧನ ಹೊಂದಿದ್ದಾರೆ. ಇನ್ನು, ರಸ್ತೆ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಮರಗಳೇ ನನ್ನ ಮಕ್ಕಳು ಅಂತಾ ಸಾಲು ಮರದ ತಿಮ್ಮಕ್ಕ ಪೋಷಿಸಿದ್ದರು. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ತಿಮ್ಮಕ್ಕ ಅವರ ಮಹತ್ತರ ಸಾಧನೆಗೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ರಾಜ್ಯೋತ್ಸವ ಪ್ರಶಸ್ತಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ, 2010ನೇ ಸಾಲಿನ ಪ್ರತಿಷ್ಠಿತ ನಾಡೋಜ ಸೇರಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. 2020ರಲ್ಲಿ ಕರ್ನಾಟಕ ಕೇಂದ್ರೀಯ ವಿವಿ ತಿಮ್ಮಕ್ಕನವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇನ್ನು, ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ 1911ರ ಜೂನ್ 30ರಂದು ಜನಿಸಿದ್ದ…