ಬಿಗ್‌ಬಾಸ್ ಮಿಡ್ ಸೀಸನ್ ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ.. ಮೊದಲೇ ಹೇಳಿದಂತೆ ಅನಿರೀಕ್ಷಿತವಾದುದನ್ನು ನಿರೀಕ್ಷಿಸಿ ಎಂಬ ಮಾತಿನಂತೆ ದೊಡ್ಮನೆಯಲ್ಲಿ ದೊಡ್ಡ ಬೆಳವಣಿಗೆ ನಡೀತಿದೆ. ಗ್ರ್ಯಾಂಡ್ ಫಿನಾಲೆಗೆ ಕೆಲವು ಸ್ಪರ್ಧಿಗಳಿಗೆ ಎಕ್ಸಿಟ್ ಬಾಗಿಲು ತೆರೆಯುತ್ತದೆ ಅನ್ನೋ ಚರ್ಚೆ ಜೋರಾಗಿದ್ದು, ಆ ಸ್ಪರ್ಧಿಗಳು ಯಾರ್ಯಾರು ಅನ್ನೋದು ಭಾರಿ ಕುತೂಹಲ ಕೆರಳಿಸಿದೆ.

ಈಗಾಗಲೇ ಗ್ರ್ಯಾಂಡ್ ಫಿನಾಲೆ ಮೊದಲ ದಿನದ ಪ್ರೋಮೊ ಕೂಡ ಬಂದಿದೆ. ಮನೆ ಸೇರಿರುವ ದೆವ್ವ ಓಡಿಸಲು ಕಿಚ್ಚ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ದೊಡ್ಮನೆಯಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿಗೌಡ, ಜಾಹ್ನವಿ ಸೇರಿ ಕತ್ತಿ ಮಸೆಯುತ್ತಿರುವುದು ಗುಟ್ಟಾಗೇನು ಉಳಿದಿಲ್ಲ. ಇದೆಲ್ಲದರ ಮಧ್ಯೆ ದೊಡ್ಮನೆಯಿಂದ ಯಾರು ಎಲಿಮಿನೇಟ್ ಆಗ್ತಾರೆ? ಅವರ ಬದಲಿಗೆ ಯಾರು ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರೆ ಅನ್ನೋದು ಕೂಡ ಭಾರಿ ಚರ್ಚೆ ಹುಟ್ಟು ಹಾಕಿದೆ.
ಬಿಗ್‌ಬಾಸ್ ಸೀಸನ್ 12ಕ್ಕೆ ಒಟ್ಟು 19 ಮಂದಿ ಎಂಟ್ರಿ ಕೊಟ್ಟಿದ್ದರು. ಅವರ ಪೈಕಿ ಇಬ್ಬರು ಸ್ಪರ್ಧಿಗಳಾದ ಆರ್.ಜೆ.ಅಮಿತ್ ಹಾಗೂ ಕರಿಬಸಪ್ಪ ಎಲಿಮಿನೇಟ್ ಆಗಿದ್ದು, ಈ ವಾರದ ಮಧ್ಯದಲ್ಲೇ ಸತೀಶ್ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ಸದ್ಯ ದೊಡ್ಮನೆಯಲ್ಲಿ 16 ಸ್ಪರ್ಧಿಗಳು ಇದ್ದಾರೆ. ಆದ್ರೀಗ ಅಚ್ಚರಿ ಸಂಗತಿ ಅಂದ್ರೆ ಗ್ರ್ಯಾಂಡ್ ಫಿನಾಲೆಯಲ್ಲಿ ನಾಲ್ಕೈದು ಜನ ಹೊರ ಬರುವ ಸಾಧ್ಯತೆ ದಟ್ಟವಾಗಿದೆ.

ಈ ಬಾರಿ ಬಿಗ್‌ಬಾಸ್ ಮನೆ ಒಳಗೆ ಹೋಗಲು ನ್ಯೂಸ್ ಆಂಕರ್ ದಿವ್ಯಾ ವಸಂತ, ಕಿರುತೆರೆ ನಟಿ ಶ್ವೇತಾ ಪ್ರಸಾದ್, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸುಧಾಕರ್ ಸೇರಿ ಸಾಕಷ್ಟು ಜನರ ಹೆಸರು ಕೇಳಿಬಂದಿತ್ತು. ಅವರ್ಯಾರು ಮನೆ ಒಳಗೆ ಹೋಗಲಿಲ್ಲ. ನಟಿ ಶ್ವೇತಾ ಪ್ರಸಾದ್ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಕಲರ್ಸ್ ಕನ್ನಡ ಕ್ವಾಟ್ಲೆ ಕಿಚನ್ ಶೋ ವಿನ್ನರ್ ರಾಘವೇಂದ್ರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಯೊಳಗೆ ಹೋಗ್ತಾರೆ ಎನ್ನಲಾಗ್ತಿದೆ. ಕಾಂತಾರ-1 ಚಿತ್ರದ ಖಡಕ್ ಪಾತ್ರದಲ್ಲಿ ಕೂಡ ರಘು ನಟಿಸಿದ್ದಾರೆ.
