Author: chandrakant

ಹೊಸ ಚಾನೆಲ್ ಜೀ ಪವರ್ ನಲ್ಲಿ ಅಕುಲ್ ಬಾಲಾಜಿ ನಡೆಸಿಕೊಡುತ್ತಿರುವ ಹಳ್ಳಿ ಪವರ್ ಎಲ್ಲರ ಜನಮನ್ನಣೆ ಗಳಿಸಿದೆ. ಇನ್ನು ಇಷ್ಟು ದಿನ ಒಂದು ಗಂಟೆಗಳ ಕಾಲ ಪ್ರಸಾರ ಆಗುತ್ತಿದ್ದ ‘ಹಳ್ಳಿ ಪವರ್’ ಜನರಿಗೆ ಮನರಂಜನೆ ನೀಡಲು ಇನ್ನು ಮುಂದೆ ಒಂದೂವರೆ ಗಂಟೆಗಳ ಕಾಲ ಪ್ರಸಾರ ಆಗುತ್ತಿದೆ. ಎಕ್ಸ್ಟ್ರಾ ಮನರಂಜನೆಯೊಂದಿಗೆ ಇನ್ನು ಮುಂದೆ ‘ಹಳ್ಳಿ ಪವರ್’ ಪ್ರತಿದಿನ ರಾತ್ರಿ 8:30 ರಿಂದ 10 ಗಂಟೆಯ ವರೆಗೆ ಪ್ರಸಾರ ಆಗಲಿದೆ. ಸಿಟಿಯಲ್ಲಿ ಬೆಳೆದ ಹುಡುಗಿಯರು ತಮ್ಮ ಆಧುನಿಕ ಜೀವನಶೈಲಿಯನ್ನು ತ್ಯಜಿಸಿ ಹಳ್ಳಿ ಯುವತಿಯರಂತೆ ಜೀವನ ನಡೆಸುವುದೇ ‘ಹಳ್ಳಿ ಪವರ್’ ಶೋ. ಇಲ್ಲಿ ಹಳ್ಳಿಯ ದಿನನಿತ್ಯದ ಕೆಲಸಗಳನ್ನು ಸ್ಪರ್ಧಿಗಳಿಗೆ ಟಾಸ್ಕ್ ರೂಪದಲ್ಲಿ ನೀಡಲಾಗುತ್ತದೆ. ಇನ್ನು ಈ ಶೋ ನಲ್ಲಿ ಸಿಟಿ ಹುಡುಗಿಯರು ಹಳ್ಳಿಯಲ್ಲಿ ಹೇಗೆ ಜೀವನ ನಡೆಸಲಿದ್ದಾರೆ ಎಂಬುದೇ ಈ ಶೋನ ಹೈಲೆಟ್ ಆಗಿರಲಿದೆ. ರಗಡ್ ರಶ್ಮಿ, ಸೋನಿಯಾ ಜೋಸೆಫ್, ಟೆಲಿನ್ ಮಹಿಮಾ, ಗಾನವಿ ಗೌಡ, ಕಾವ್ಯ, ಗಗನಾ ಮೂರ್ತಿ, ದಿಯಾ ಅರಸ್, ಮೋನಿಷಾ ಪುಟ್ಟಮದು,…

Read More

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯಾನಕ ಬಾಂಬ್‌ ಬ್ಲಾಸ್ಟ್‌ ಸಂಭವಿಸಿದ್ದು, 9 ಜನರು ಬಲಿಯಾಗಿದ್ದಾರೆ. ಐತಿಹಾಸಿಕ ಕೆಂಪುಕೋಟೆ ಬಳಿ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದು, ಉಗ್ರರ ಕೈವಾಡ ಇರೋ ಶಂಕೆ ವ್ಯಕ್ತವಾಗಿದೆ. ಈ ಸ್ಫೋಟದ ಹಿಂದೆ ವೈದ್ಯನೊಬ್ಬನ ಪಾತ್ರ ಇದೆ ಅಂತಾ ಹೇಳಲಾಗ್ತಿದೆ. ಶಂಕಿತ ಡಾ. ಉಮರ್‌ ಮೊಹಮ್ಮದ್‌ ಎಂಬಾತನೇ ಕಾರು ಡ್ರೈವ್‌ ಮಾಡಿಕೊಂಡು ಬಂದು ಸ್ಫೋಟಿಸಿದ್ದಾನೆ ಅನ್ನೋ ಮಾಹಿತಿ ಹೊರಬಿದ್ದಿದೆ. ಹರಿಯಾಣ ನೋಂದಣಿ ಹೊಂದಿದ್ದ HR 26 CE7674 ಹುಂಡೈ i20 ಕಾರನ್ನು ಈ ಉಮರ್‌ ಮಾಸ್ಕ್‌ ಧರಿಸಿ ಚಲಾಯಿಸುತ್ತಿದ್ದ. ಕಾರು ಸಾಗಿದ ಎಲ್ಲಾ ಮಾರ್ಗಗಳ ಸಿಸಿಟಿವಿ ಪರಿಶೀಲನೆ ನಡೆಸಲಾಗಿದೆ. ಸ್ಫೋಟಗೊಂಡಿದ್ದ ಕಾರು 3 ಗಂಟೆಗಳ ಕಾಲ ಆ ಸ್ಥಳದಲ್ಲಿದ್ದರೂ ಒಮ್ಮೆಯೂ ಚಾಲಕ ಕಾರಿನಿಂದ ಕೆಳಗಿಳಿದಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕಾರು ಮಧ್ಯಾಹ್ನ 3.19 ಕ್ಕೆ ಕೆಂಪು ಕೋಟೆ ಪಾರ್ಕಿಂಗ್ ಸ್ಥಳಕ್ಕೆ ಬಂದು ನಿಂತಿದ್ದು, ಸಂಜೆ 6.30ರವರೆಗೆ ಅಲ್ಲಿಯೇ ನಿಂತಿತ್ತು ಅಂತಾ ಹೇಳಲಾಗ್ತಿದೆ. ಇನ್ನು, ಬಾಂಬ್‌ ಸ್ಫೋಟಿಸಿದ ಉಮರ್‌ ಚರಿತ್ರೆಯೇ…

Read More

ಕುಂದಾನಗರಿ ಕದನದಲ್ಲಿ ಮತ್ತೊಮ್ಮೆ ಜಾರಕಿಹೊಳಿ ಬ್ರದರ್ಸ್‌ ಮೇಲುಗೈ ಸಾಧಿಸಿದ್ದಾರೆ. ಪ್ರತಿಷ್ಠಿತ‌ ಬೆಳಗಾವಿ ಡಿಸಿಸಿ ಬ್ಯಾಂಕ್ ಎಲೆಕ್ಷನ್‌ನಲ್ಲಿ ಜಾರಕಿಹೊಳಿ ಬ್ರದರ್ಸ್​​​ಗೆ ಬಹುಮತ ಸಿಕ್ಕಿದೆ. ಸತೀಸ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ಸೇರಿ ಎದುರಾಳಿ ರಮೇಶ್ ಕತ್ತಿ ಬಣಕ್ಕೆ ಸೋಲಿನ ರುಚಿ ತೋರಿಸಿದೆ. ಅಚ್ಚರಿ ಅಂದ್ರೆ ಕಾಂಗ್ರೆಸ್‌ ಸರ್ಕಾರದ ಸಚಿವ ಸತೀಶ್‌ ಜಾರಕಿಹೊಳಿ ಬಿಜೆಪಿ ನಾಯಕರ ಜತೆಗೂಡಿ ಬಿಜೆಪಿ ಅಭ್ಯರ್ಥಿಗೆ ಡಿಸಿಸಿ ಬ್ಯಾಂಕ್‌ ಪಟ್ಟ ಕಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ. ಹೌದು.. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಣ್ಣಸಾಹೇಬ್ ಜೊಲ್ಲೆ, ಉಪಾಧ್ಯಕ್ಷರಾಗಿ ರಾಜು ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಚುನಾವಣೆ ಸಂದರ್ಭದಲ್ಲೇ ಜಾರಕಿಹೊಳಿ ಬ್ರದರ್ಸ್, ಈ ಬಾರಿ ಲಿಂಗಾಯತ ನಾಯಕರನ್ನೇ ಡಿಸಿಸಿ ಬ್ಯಾಂಕ್​​​ ಅಧ್ಯಕ್ಷರನ್ನ ಮಾಡುತ್ತೇವೆ ಅಂತಾ ಘೋಷಿಸಿದ್ದರು. ಅದರಂತೆ ಇದೀಗ ಬಿಜೆಪಿ ಮಾಜಿ ಸಂಸದ ಅಣ್ಣಸಾಹೇಬ್ ಜೊಲ್ಲೆ ಅವರನ್ನೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸುವಲ್ಲಿ ಸಕ್ಸಸ್‌ ಆಗಿದ್ದಾರೆ. ಇದರೊಂದಿಗೆ ಜಾರಕಿಹೊಳಿ ಬ್ರದರ್ಸ್ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಅಂತಾ ರಾಜಕೀಯ ವಲಯದಲ್ಲಿ ಭಾರಿ…

Read More

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಎಲಿಮಿನೇಟ್‌ ಆಗಬೇಕಿದ್ದ ರಿಷಾ ಸೇಫ್‌ ಆಗಿ ಚಂದ್ರ ಪ್ರಭ ಎಲಿಮಿನೇಟ್‌ ಆಗಿದ್ದಾರೆ. ಹೌದು.. ಬಿಗ್​​ಬಾಸ್​ ಮನೆಯಿಂದ ಚಂದ್ರಪ್ರಭ ಹೊರಬಿದ್ದಿದ್ದಾರೆ. 6 ವಾರಗಳ ಕಾಲ ಬಿಗ್​ಬಾಸ್ ಮನೆಯಲ್ಲಿದ್ದ ಚಂದ್ರಪ್ರಭ, ಟಾಸ್ಕ್‌ಗಳಲ್ಲಿ ಸರಿಯಾಗಿ ಪ್ರದರ್ಶನ ತೋರದೇ ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿ ಹೊರಬಂದಿದ್ದಾರೆ. ಇನ್ನು, ಕಿಚ್ಚ ಸುದೀಪ್ ಅವರೇ ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದರು. ವಾರದ ಮಧ್ಯೆ ಮನೆಯಿಂದ ಬಂದಿದ್ದ ಲೆಟರ್​ ಪಡೆಯುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಕೆಲವರು ಎಲಿಮಿನೇಷನ್​ನಿಂದ ಪಾರಾಗಿದ್ದರು. ಕೊನೆಯಲ್ಲಿ ಈ ವಾರ ಬಿಗ್‌ಬಾಸ್ ಮನೆಯಲ್ಲಿ 10 ಮಂದಿ ನಾಮಿನೇಟ್ ಆಗಿದ್ದರು.. ಅವರಲ್ಲಿ ಚಂದ್ರಪ್ರಭ ಕೂಡ ಒಬ್ಬರಾಗಿದ್ದರು. ಕಾಕ್ರೋಚ್ ಸುಧಿ, ಧ್ರುವಂತ್, ಗಿಲ್ಲಿ ನಟ, ಸೂರಜ್ ಸಿಂಗ್, ಅಶ್ವಿನಿಗೌಡ, ಚಂದ್ರಪ್ರಭ, ರಾಶಿಕಾ ಶೆಟ್ಟಿ, ಧನುಷ್, ರಕ್ಷಿತಾ ಶೆಟ್ಟಿ, ಸ್ಪಂದನಾ ಸೋಮಣ್ಣ ಅವರು ನಾಮಿನೇಟ್ ಆಗಿದ್ದರು. ಸುದೀಪ್ ಅವರು ವೋಟ್ ಪ್ರಕಾರ, ಒಬ್ಬೊಬ್ಬರನ್ನೇ ಸೇವ್ ಮಾಡುತ್ತ ಬಂದರು. ಕೊನೆಯಲ್ಲಿ ಕಾಕ್ರೋಚ್ ಸುಧೀ, ಚಂದ್ರಪ್ರಭ ಉಳಿದುಕೊಂಡಿದ್ದರು.…

Read More

ಜೀವನೋಪಾಯಕ್ಕಾಗಿ ದಿನಗೂಲಿ ಕೆಲಸ ಮಾಡುತ್ತಿದ್ದ ಪೋಷಕರ ಕನಸಿಗೆ ಚಿಗುರೊಡೆಯುವಂತೆ, ಚೌಲಿಹಳ್ಳಿ ಗ್ರಾಮದ ಸಂದೀಪ ಎಲ್. ಅವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಅದ್ಭುತ ಸಾಧನೆಯನ್ನು ದಾಖಲಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲೂಕಿನ ಅತ್ಯಂತ ಸರಳ ಕುಟುಂಬದಲ್ಲಿ ಹುಟ್ಟಿ ಬೆಳೆದ ಸಂದೀಪ ಅವರು, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಶಿವಮೊಗ್ಗ ಇವರು ನೀಡುವ ಡಾಕ್ಟರೇಟ್ (ಪಿ.ಎಚ್.ಡಿ) ಪದವಿಗೆ ಪಾತ್ರರಾಗಿದ್ದಾರೆ. ಕೂಲಿ ಕಾರ್ಮಿಕರಾದ ಶ್ರೀ ಲೋಕೇಶ್ವರಪ್ಪ ಹಾಗೂ ಶ್ರೀಮತಿ ತಿಪ್ಪಮ್ಮ ದಂಪತಿಗಳ ಪುತ್ರನಾದ ಸಂದೀಪ ಅವರು, ಬಡತನದ ನಡುವೆಯೂ ಗಟ್ಟಿಯಾದ ಕನಸು, ದುಡಿಮೆ ಮತ್ತು ಅಧ್ಯಯನಶೀಲತೆಯನ್ನು ಜೀವವೈಖರಿಯಾಗಿಸಿಕೊಂಡಿದ್ದರು.‘ಶಿಕ್ಷಕರ ಶಿಕ್ಷಣ ಸಂಸ್ಥೆಗಳ ಸಾಂಸ್ಥಿಕ ವಾತಾವರಣ, ಪ್ರಶಿಕ್ಷಕರ ವೃತ್ತಿ ನೈತಿಕತೆ ಮತ್ತು ಪ್ರಶಿಕ್ಷಕರ-ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಸಂಬಂಧಗಳ ಅಧ್ಯಯನ’ ಎಂಬ ಗಂಭೀರ ಅಕಾಡೆಮಿಕ್ ವಿಷಯದ ಮೇಲೆ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿಗೆ ಅರ್ಹತೆ ಪಡೆದಿದ್ದಾರೆ.ಇವರ ಸಂಶೋಧನೆಗೆ ಕುವೆಂಪು ವಿಶ್ವವಿದ್ಯಾಲಯದ ಖ್ಯಾತ ಶಿಕ್ಷಣಶಾಸ್ತ್ರ ತಜ್ಞರಾದ ಪ್ರೊ. ಜಗನ್ನಾಥ್ ಕೆ. ಡಾಂಗೆ ಅವರು ಮಾರ್ಗದರ್ಶಕರಾಗಿದ್ದಾರೆ. “ವಿದ್ಯೆ ಎಂದರೆ ಸಂಪತ್ತು; ಬಡತನ ಎಂದರೆ ಅಡ್ಡಿ ಅಲ್ಲ”…

Read More

ನವೆಂಬರ್ 3, 2025 ರಂದು ಮಸ್ಸಾಚುಸೆಟ್ಸ್ ನ ಬೋಸ್ಟನ್ ನಲ್ಲಿ, ಬೋಸ್ಟನ್ ಗ್ಲೋಬಲ್ ಫೋರಂ ಮತ್ತು ಎಐ ವರ್ಲ್ಡ್ ಸೊಸೈಟಿ 2025 ರ ವರ್ಲ್ಡ್ ಲೀಡರ್ ಫಾರ್ ಪೀಸ್ ಆಂಡ್ ಸೆಕ್ಯೂರಿಟಿ ಪ್ರಶಸ್ತಿಯನ್ನು ಗುರುದೇವ್ ಶ್ರೀ ಶ್ರೀ ರವಿ ಶಂಕರರಿಗೆ ನೀಡಿದ್ದಾರೆ. ಜಾಗತಿಕ ಶಾಂತಿಸ್ಥಾಪನೆಗಾಗಿ, ಸಮನ್ವಯತೆಗಾಗಿ ಮತ್ತು ಮಾನವತ್ವದ ನಾಯಕತ್ವಕ್ಕಾಗಿ ಗುರುದೇವರು ನೀಡಿರುವ ಅಸಾಧಾರಣವಾದ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು. ವರ್ಲ್ಡ್ ಲೀಡರ್ ಫಾರ್ ಪೀಸ್ ಆಂಡ್ ಸೆಕ್ಯೂರಿಟಿ ಪ್ರಶಸ್ತಿಯ ಹತ್ತನೆಯ ವಾರ್ಷಿಕೋತ್ಸವ ಇದಾಗಿದ್ದು , ಜಾಗತಿಕ ಶಾಂತಿ ಮತ್ತು ನೈತಿಕ ಪ್ರಗತಿಯನ್ನು ಮುನ್ನಡೆಸುವಲ್ಲಿ ನೈತಿಕ ಧೈರ್ಯ, ದೂರದೃಷ್ಟಿಯ ಆಡಳಿತ ಮತ್ತು ಸಹಾನುಭೂತಿಯನ್ನು ಸಾಕಾರಗೊಳಿಸುವ ಜಾಗತಿಕ ನಾಯಕರಿಗೆ ಮಾತ್ರ, ವಿಶೇಷ ಗೌರವವನ್ನು ನೀಡುವ ಸಲುವಾಗಿ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಇದು ಪ್ರಾರಂಭವಾದಾಗಿನಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ದಿಗ್ಗಜರೆಂದರೆ, 2015ರಲ್ಲಿ ಜಪಾನ್‌ನ ಅಬೆ ಮತ್ತು ಜರ್ಮನಿಯ ಆಂಜೆಲ ಮರ್ಕಲ್ ; 2016 ರಲ್ಲಿ ಯುಎನ್ ನ ಮಾಜಿ ಸೆಕ್ರೆಟರಿ ಜೆನರಲ್…

Read More

ಕಲರ್ಸ್ ಕನ್ನಡ ಕನ್ನಡ ರಾಜ್ಯೋತ್ಸವವನ್ನು ತನ್ನ ಧಾರಾವಾಹಿಗಳಲ್ಲಿಯೂ ವಿಶಿಷ್ಟವಾಗಿ ಆಚರಿಸಲಿದೆ. ಕತೆಗಳಲ್ಲಿ ಕನ್ನಡತನ ತರುವ ಈ ಪ್ರಯತ್ನವನ್ನು ಪ್ರೋಮೋದಲ್ಲಿ ನೋಡಿರುವ ಕನ್ನಡದ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಒಟ್ಟಿನಲ್ಲಿ ನವೆಂಬರ್ ತಿಂಗಳು ಪೂರ್ತಿ ಕನ್ನಡದ ಸಂಭ್ರಮ ಕಲರ್ಸ್ ಕನ್ನಡದ ಧಾರಾವಾಹಿಗಳಲ್ಲಿ ಜೋರಾಗಿ ನಡೆಯಲಿದೆ. ಅದರ ವಿವರಗಳು ಹೀಗಿವೆ. ರಾಮಾಚಾರಿ: ಚಾರು ದೇವಸ್ಥಾನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ ಮತ್ತು ಮಗುವಿಗೆ ಅರಿಶಿನ ಮತ್ತು ಕುಂಕುಮದಿಂದ ಕೂಡಿದ ಕನ್ನಡ ಧ್ವಜದ ಬಣ್ಣದ ಸೀರೆ ಹಾಕಲಾಗುತ್ತದೆ. ರಾಮಾಚಾರಿ ತನ್ನ ಮಗುವಿನ ಜನ್ಮವನ್ನು ಕನ್ನಡ ತಾಯಿ ಭುವನೇಶ್ವರಿಯ ಆಶೀರ್ವಾದ ಎಂದು ಹೇಳಿ ಅವನು ಮಾಡುವ ಪ್ರತಿಜ್ಞೆ ಏನು? ಪ್ರೇಮ ಕಾವ್ಯ: ಕನ್ನಡ ರಾಜ್ಯೋತ್ಸವ ಆಚರಣೆಗಾಗಿ ಆಸ್ಪತ್ರೆಯಲ್ಲಿ ಹಬ್ಬದ ಅಲಂಕಾರ ಮಾಡಲಾಗುತ್ತದೆ. ಧನರಾಜ್, ರಾಮ್ ಮತ್ತು ಶ್ರಿಯಾ ವೇದಿಕೆಗೆ ಆಹ್ವಾನಿತರಾಗಿರುತ್ತಾರೆ ಮತ್ತು ರಾಮ್ ತನ್ನ ಹಳ್ಳಿಗೆ ಮಾಡಿದ ಸೇವೆಗೆ ಹೆಮ್ಮೆಪಡುತ್ತಾನೆ—ಅವನಿಗೆ ಹಲವಾರು ವಿದೇಶಿ ಅವಕಾಶಗಳಿದ್ದರೂ ಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾನೆ. ರಾಮ್ ರಾಜ್ಯದ ಪ್ರೀತಿ ಮತ್ತು ಭಾಷೆಯ ಬಗ್ಗೆ ಭಾವುಕನಾಗಿ ಮಾತನಾಡುತ್ತಾನೆ.ಆಗ…

Read More

ಮಾಜಿ ಸಚಿವ, ಕಾಂಗ್ರೆಸ್‌ ಶಾಸಕ ಎಚ್.ವೈ ಮೇಟಿ ಅವರು ನಿಧನ ಹೊಂದಿದ್ದಾರೆ. ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆ ಪಡೆಯುತ್ತಿದ್ರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಎಚ್.ವೈ ಮೇಟಿ ಇಂದು ನಿಧನರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಎಚ್.ವೈ ಮೇಟಿ ಅವರು ತೀವ್ರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಹುಲ್ಲಪ್ಪ ಯಮನಪ್ಪ ಮೇಟಿ 2023ರ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ವೀರಣ್ಣ ಚರಂತಿಮಠರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಈ ಹಿಂದೆ 2013ರಿಂದ 2016 ರವರೆಗಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಎಚ್‌.ವೈ ಮೇಟಿ ಅಬಕಾರಿ ಖಾತೆ ಮಂತ್ರಿಯಾಗಿದ್ದರು. ಆ ವೇಳೆ ಲೈಂಗಿಕ ಹಗರಣದಲ್ಲಿ ಸಿಲುಕಿ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಎಚ್.ವೈ ಮೇಟಿ ಸಾವಿನ ಸುದ್ದಿ ಕೇಳಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಈ ಕುರಿತಾಗಿ ಸಿ.ಎಂ ಸಿದ್ದರಾಮಯ್ಯ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿ ಕಂಬನಿ…

Read More

ದೊಡ್ಮನೆ ಫ್ಯಾನ್ಸ್‌ಗೆ ಶಾಕ್‌ ಕೊಟ್ಟ ಬಿಗ್‌ಬಾಸ್‌, ಬಿಗ್‌ ಸ್ಪರ್ಧಿಗಳ ಮಹಾತಾಯಿ ಬಿಗ್‌ಬಾಸ್‌ ಮನೆಯಿಂದ ಔಟ್‌!, ಮಲ್ಲಮ್ಮನಿಗೆ ವಿಶೇಷ ಗೌರವ ಕೊಟ್ಟ ಬಿಗ್‌ಬಾಸ್‌. ಮಲ್ಲಮ್ಮ ಔಟ್‌ ಆಗಲು ಕಾರಣ ಏನು..? ಬಿಗ್‌ಬಾಸ್‌ ಮನೆಯಿಂದ ಈ ವಾರ ಯಾರು ಹೋಗುತ್ತಾರೆ? ಮಲ್ಲಮ್ಮ ಮನೆಯಿಂದ ಹೋಗ್ತಾರಾ? ಮಾಳು ನಿಪ್ಪನಾಳ್ ಹೋಗ್ತಾರಾ? ಯಾರು ಹೋಗ್ತಾರೆ? ಈ ಒಂದು ಪ್ರಶ್ನೆಗೆ ಸುದೀಪ್ ಉತ್ತರ ಕೊಟ್ಟಿದ್ದಾರೆ.ಭಾನುವಾರ ನಡೆದ ಎಪಿಸೋಡ್‌ನಲ್ಲಿ ನೋಮಿನೇಟ್‌ ಆದ ಸ್ಪರ್ಧಿಗಳಲ್ಲಿ ಬಾಟಮ್‌ ಎರಡರಲ್ಲಿ ಮಲ್ಲಮ್ಮ ಮತ್ತು ಮಾಳು ಇದ್ದರು, ಎಪಿಸೋಡ್‌ನ ಕೊನೆಯಲ್ಲಿ ಮಾತು ಕಥೆ ಮುಗಿಸಿದ ಕಿಚ್ಚ ಬ್ರೇಕ್ ಹೋಗೋ ಮಂಚೆ ಒಂದು ಮಾತು ಹೇಳಿದ್ದರು. ಮಾಳು ನಿಪನಾಳ್ ಇಲ್ಲವೆ ಮಲ್ಲಮ್ಮ ಅವರಲ್ಲಿ ಒಬ್ಬರು ಮನೆಗೆ ಹೋಗುತ್ತಾರೆ. ಯಾರ್ VT ಪ್ಲೇ ಆಗುತ್ತದೆಯೋ ಅವರು ಮನೆಯಿಂದ ಹೋಗುತ್ತಾರೆ ಅನ್ನೋದನ್ನ ಸುದೀಪ್ ಹೇಳಿದ್ದರು. ಮನೆಯ TV ಯಲ್ಲಿ ಮಲ್ಲಮ್ಮನ ವಿಡಿಯೋ ಪ್ಲೇ ಆದ ಕಾರಣ ಮಲ್ಲಮ್ಮ ಮನೆಯಿಂದ ಹೊರಹೋಗಿದ್ದಾರೆ. ಹೊರ ಬರುವ ವೇಳೆ ಇತರೆ ಸ್ಪರ್ಧಿಗಳು ತಂಬಾ ಭಾವುಕರಾದರು.…

Read More

ಭಾರತ ಮಹಿಳಾ ತಂಡ 2025ರ ಏಕದಿನ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2005ರಲ್ಲಿ ಆಸ್ಟ್ರೇಲಿಯಾ ಮತ್ತು 2017 ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ವಿಶ್ವಕಪ್​ ಫೈನಲ್‌ನಲ್ಲಿ ಸೋಲು ಕಂಡಿದ್ದ ಭಾರತ ತಂಡ, ಕೊನೆಗೂ ತವರಿನಲ್ಲಿ ಮೊದಲ ವಿಶ್ವಕಪ್ ತನ್ನದಾಗಿಸಿಕೊಂಡಿದೆ. ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ, ಭಾರತೀಯ ಮಹಿಳಾ ತಂಡವು ಇತಿಹಾಸ ನಿರ್ಮಿಸಿತು. 52 ವರ್ಷಗಳ ವಿಶ್ವಕಪ್ ಬರ ನೀಗಿಸಿಕೊಂಡ ಭಾರತ ತಂಡಕ್ಕೆ ಅದ್ಭುತ ಜಯ ಸಿಕ್ಕಿದ್ದು, ಕಫ್‌ ಗೆದ್ದ ಸಿಂಹಿಣಿಯರ ಪಡೆಗೆ ಪ್ರಪಂಚದಾದ್ಯಂತ ಶುಭಾಶಯಗಳು ಮಹಾಪೂರ ಹರಿದುಬಂದಿದೆ. ಈ ಗೆಲುವು ಭಾರತ ಮಹಿಳಾ ತಂಡಕ್ಕೆ ಹಣದ ಸುರಿಮಳೆಯನ್ನು ಸುರಿಸಿದೆ. ಹರ್ಮನ್​ಪ್ರೀತ್ ಕೌರ್​ ನೇತೃತ್ವದ ಟೀಂ ಇಂಡಿಯಾ, ಚೊಚ್ಚಲ ಏಕದಿನ ವಿಶ್ವಕಪ್​​ಗೆ ಮುತ್ತಿಟ್ಟಿದೆ. ಫೈನಲ್‌​​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಭಾರತದ ವನಿತೆಯರು ಐತಿಹಾಸಿಕ ಸಾಧನೆ ಮಾಡಿದ್ದು, ದೇಶದಲ್ಲಿ ಹರ್ಷೋದ್ಘಾರ ಮೊಳಗಿದೆ. ನವಿ ಮುಂಬೈನ ಡಿ.ವೈ ಪಾಟೀಲ್​ ಸ್ಟೇಡಿಯಂ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಟಾಸ್​​…

Read More