Author: Bosstv News Desk

ಬೆಂಗಳೂರು: ಹೊಸ ವರ್ಷಾಚರಣೆಗೆ ಎಲ್ಲೆಡೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ಮಧ್ಯೆ ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ. ಮಹಾರಾಷ್ಟ್ರ ಎಎನ್‌ಟಿಎಫ್‌ನಿಂದ ಬೆಂಗಳೂರಲ್ಲಿ ಡ್ರಗ್ಸ್ (Bengaluru Drugs) ಫ್ಯಾಕ್ಟರಿ ಸೀಜ್ ಮಾಡಲಾಗಿದೆ. ಬರೋಬ್ಬರಿ 55.88 ಕೋಟಿ ರೂ. ಮೌಲ್ಯದ ಎಂಡಿ ಸಿಂಥೆಟಿಕ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಎಎನ್‌ಟಿಎಫ್-ಮಹಾರಾಷ್ಟ್ರ ಮಾದಕ ವಸ್ತು ನಿಗ್ರಹ ದಳ ಕಾರ್ಯಾಚರಣೆ ನಡೆಸಿತ್ತು. ಕೋಟಿ, ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. 1.5 ಕೋಟಿ ರೂ. ಮೌಲ್ಯದ ಡ್ರಗ್ಸ ಸೀಜ್ ಆಗಿತ್ತು. ಅಲ್ಲಿ ಅಬ್ದುಲ್ಲ ಖಾದರ್ ಶೇಕ್ ಬಂಧಿತ ಆರೋಪಿ. ವಿಚಾರಣೆ ನಂತರ ಬೆಳಗಾವಿಯ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಬಂಧಿಸಲಾಗಿತ್ತು. ಪಾಟೀಲ್ ಮಾಹಿತಿ ಮೇರೆಗೆ ಬೆಂಗಳೂರಿನ ಮೂರು ಕಡೆ ದಾಳಿ ನಡೆದಿತ್ತು. ಇಲ್ಲಿ ರಾಜಸ್ಥಾನದ ಸೂರಜ್ ರಮೇಶ್ ಯಾದವ್ ಮತ್ತು ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಅರೆಸ್ಟ್ ಆಗಿದ್ದಾರೆ. ಆರ್‌ಜೆ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿದೆ. ಹೊರಮಾವು, ಯರಪ್ಪನಹಳ್ಳಿ, ಕಣ್ಣೂರು ಬಳಿ ಡ್ರಗ್ಸ್ ಫ್ಯಾಕ್ಟರಿ…

Read More

ನೆಲಮಂಗಲ: ಸಹೋದರಿಯರಿಬ್ಬರ ಬಾಳಿಗೆ ರಾಕ್ಷಸನಾಗಿದ್ದ ಕ್ರೂರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲವ್, ಸೆಕ್ಸ್, ದೋಖಾ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ಪೊಲೀಸರು ಆರೋಪಿ ಶುಭಾಂಶು ಶುಕ್ಲಾ(27) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಸಂತ್ರಸ್ತ ಯುವತಿಯಿಂದ ಲಕ್ಷಾಂತರ ಹಣ ಬೆದರಿಸಿ ಪಡೆದಿರುವ ಜೊತೆಗೆ, ಆಕೆಯ ಮನೆಯಲ್ಲಿದ್ದ ಚಿನ್ನಾಭರಣವನ್ನು ಕದ್ದಿದ್ದ. ಯುವತಿಯ ಸಹೋದರಿ ಮೇಲೂ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದ ಎನ್ನಲಾಗಿದೆ. ಬಂಧಿತನು ಮೊದಲು ಸಂತ್ರಸ್ತೆಯ ಸಹೋದರಿಯಾದ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಬಾಲಕಿ ಸಹೋದರಿಯನ್ನ ಪ್ರೀತಿ ಬಲೆಯಲ್ಲಿ ಬೀಳಿಸಿದ್ದ. ಆನಂತರ ಆ ಯುವತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದ. ಈತನ ಮಾತು ನಂಬಿದ್ದ ಯುವತಿ, ಮುಂಬೈನಲ್ಲಿ ಕೆಲಸ ಸಿಕ್ಕಿದೆ ಎಂದು ಮನೆಯವರನ್ನು ನಂಬಿಸಿದ್ದಳು. ನಂತರ ಫ್ಲ್ಯಾಟ್ನಲ್ಲಿ ಶುಭಾಂಶು ಮತ್ತು ಯುವತಿ ಲಿವಿನ್ ರಿಲೇಷನ್ಶಿಪ್ನಲ್ಲಿದ್ದರು ಎಂದು ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ಶುಭಾಂಶುಗೆ ಮೊದಲೇ ಮದುವೆಯಾಗಿರುವ ಬಗ್ಗೆ ಸಂತ್ರಸ್ತೆಗೆ ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದಾಗ ಆಕೆಯ ಜೊತೆ ತಾನು ವಿಚ್ಛೇದನ ಪಡೆದುಕೊಳ್ಳುತ್ತೇನೆ. ನಿನ್ನ ಮದುವೆಯಾಗಿ…

Read More

ವಿಜಯಪುರ: ದೂರು ನೀಡಲು ಬಂದವಳನ್ನೇ ಪೊಲೀಸ್ ಪಟಾಯಿಸಿರುವ ಘಟನೆ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿವಾಹಿತ ಮಹಿಳೆಯ ಸಂಸಾರ ಹಾಳು ಮಾಡಿರುವ ಆರೋಪ ಕೇಳಿ ಬಂದಿದೆ. ಭೀಮಾಶಂಕರ ಹೋಳ್ಕರ ಎಂಬಾತನ ಪತ್ನಿಯನ್ನು ಪಟಾಯಿಸಿ ಅವರ ಸಂಸಾರದಲ್ಲಿ ದೊಡ್ಡ ಬಿರುಗಾಳಿ ಬೀಸುವಂತೆ ಮಾಡಿದ್ದಾನೆ. 10 ವರ್ಷಗಳ ಹಿಂದೆ ಭೀಮಾಶಂಕರ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಅನುರಾಧ ಎಂಬುವವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ. ತಂದೆಯನ್ನು ಕಳೆದುಕೊಂಡಿರುವ ಭೀಮಾಶಂಕರ, ತಾಯಿ, ಪತ್ನಿ ಮತ್ತು ಮಕ್ಕಳ ಜೊತೆಗೆ ವಾಸವಿದ್ದರು. ಐದು ವರ್ಷಗಳ ನಂತರ ಗಂಡ-ಹೆಂಡತಿ ಮಧ್ಯೆ ಜಗಳ ಹಿನ್ನೆಲೆ ಅನುರಾಧಾ ಆಲಮೇಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ವೇಳೆ ವಿಚಾರಣೆ ನೆಪದಲ್ಲಿ ಆಲಮೇಲ ಠಾಣೆಯ ಎಎಸ್ಐ ಆಗಿದ್ದ ಮನೋಹರ ಕಂಚಗಾರ ಅನುರಾಧ ಮೊಬೈಲ್ ನಂಬರ್ ಪಡೆದುಕೊಂಡಿದ್ದರು. ದೂರಿನ ವಿಷಯವನ್ನೇ ಮುಂದಿಟ್ಟುಕೊಂಡು ಆಕೆಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಆ ಸ್ನೇಹ ಅನೈತಿಕ ಸಂಬಂಧವಾಗಿ ಬದಲಾಗಿದೆ. 2023ರಲ್ಲಿ ಭೀಮಾಶಂಕರ ಪತ್ನಿ…

Read More

ಚಾಮರಾಜನಗರ: ಗಸ್ತು ತಿರುಗುವಾಗ ಹುಲಿ ದಾಳಿಗೆ ಫಾರೆಸ್ಟ್ ವಾಚರ್ ಬಲಿಯಾಗಿರುವ ಘಟನೆ ನಡೆದಿದೆ. ಈ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮರಳಹಳ್ಳ ವ್ಯಾಪ್ತಿಯಲ್ಲಿ ನಡೆದಿದೆ. ಸಣ್ಣ ಹೈದ (56) ಸಾನ್ನಪ್ಪಿರುವ ಸಿಬ್ಬಂದಿ ಎನ್ನಲಾಗಿದೆ. ಸ್ಥಳಕ್ಕೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸಿಸಿಎಫ್ ಪ್ರಭಾಕರನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಣ್ಣ ಹೈದ, ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ನ ಮರಳಹಳ್ಳದ ಕಳ್ಳಬೇಟೆ ತಡೆ ಶಿಬಿರದಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಪ್ರತಿದಿನ ಮರಳಹಳ್ಳ ಕ್ಯಾಂಪ್ ಸುತ್ತಮುತ್ತ ಗಸ್ತು ತಿರುಗುತ್ತಿದ್ದರು. ಎಂದಿನಂತೆ ತನ್ನ ಕ್ಯಾಂಪ್ನ 4 ಜನ ಸಿಬ್ಬಂದಿ ಜೊತೆ ಗಸ್ತಿಗೆ ಹೋಗಿದ್ದರು. ಹುಲ್ಲು ಬೀಜಗಳನ್ನು ಆಯುತ್ತಿದ್ದಾಗ ಹುಲಿಯೊಂದು ಏಕಾಏಕಿ ದಾಳಿ ನಡೆಸಿದೆ. ಕೂಡಲೇ ಸಿಬ್ಬಂದಿ ಕೂಗಿದ ಪರಿಣಾಮ ಹುಲಿ ಪರಾರಿಯಾಗಿದೆ, ಆದರೆ ಗಂಭೀರವಾಗಿ ಗಾಯಗೊಂಡಿದ್ದ ಸಣ್ಣ ಹೈದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಎಫ್ ಹಾಗೂ ಮುಖ್ಯಸ್ಥ ಪ್ರಭಾಕರನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ…

Read More

ಉಡುಪಿ: ಮೂರು ಕಡೆಯಿಂದ ಸುತ್ತುವರೆದೂ ಮಹಿಳೆಯರಿಂದ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಕಳ್ಳಿಯ ಗ್ಯಾಂಗ್ ನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (Puttur) ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳಿಯರು ಹೆಜಮಾಡಿಯ ಗರಡಿ ನೇಮೋತ್ಸವದಲ್ಲಿ ಮೂರು ಕಡೆ ಸುತ್ತುವರೆದು ವೃದ್ಧೆಯ ಚಿನ್ನ ಎಗಿರಿಸಿದ್ದರು. ತಮಿಳುನಾಡಿನ ಶೀಥಲ್, ಕಾಳಿಯಮ್ಮ, ಮಾರಿಯಮ್ಮ ಬಂಧಿತರು. ಇವರು ತಾವೇ ಗದ್ದಲ ಸೃಷ್ಟಿಸಿ ಕಳ್ಳತನ ಮಾಡುತ್ತಿದ್ದರು. ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಎಗರಿಸಿದ್ದರು.ಕಳ್ಳಿಯರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಕುರಿತು ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಕಳ್ಳಿಯರನ್ನು ಬಂಧಿಸಿದ್ದಾರೆ.

Read More

ಮಂಡ್ಯ: ಜನಜಾನುವಾರುಗಳ ಮೇಲೆ ದಾಳಿ ಮಾಡಿ ಜನರ ನಿದ್ದೆಗೆಡಿಸಿದ್ದ ಚಿರತೆ (Leopard) ಕೊನೆಗೂ ಸೆರೆ ಸಿಕ್ಕಿದೆ. ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನ ಹರದನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಜಾನುಪಾರಗಳ ಮೇಲೆ ದಾಳಿ ನಡೆಸುತ್ತಿತ್ತು. ಹೀಗಾಗಿ ಜನ ಬೆಚ್ಚಿ ಬಿದ್ದಿದ್ದರು. ಮನೆಯಿಂದ ಹೊರಗೆ ಹೋಗಲು ಕೂಡ ಭಯ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈಗ ಚಿರತೆ ಬೋನಿಗೆ ಬಿದ್ದಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆಯು ಈ ಭಾಗದ ಹಲವಾರು ನಾಯಿಗಳನ್ನ ಎಳೆದೊಯ್ದು ತಿಂದಿದ್ದನ್ನ ನೋಡಿದ್ದ ಗ್ರಾಮಸ್ಥಱು ನಾಗಮಂಗಲ ತಾಲೂಕು ಅರಣ್ಯ ಇಲಾಖೆಯವರಿಗೆ ದೂರು ಸಲ್ಲಿಸಿದ್ದರು. ಅರಣ್ಯ ಇಲಾಖೆಯವರು ಬೊಮ್ಮನಹಳ್ಳಿ ಗ್ರಾಮದ ಹತ್ತಿರ ಬೋನು ಇಟ್ಟಿದ್ದರು. ಅರಣ್ಯ ಇಲಾಖೆಯವರ ಕಾರ್ಯಕ್ಕೆ ಜನರು ಖುಷಿ ಪಡುತ್ತಿದ್ದಾರೆ.

Read More

ಚಿಕ್ಕಬಳ್ಳಾಪುರ: ಪತ್ನಿ ಇದ್ದರೂ ಬೇರೆಯೊಬ್ಬಳ ಸಂಘ ಮಾಡಿ ಈಗ ವ್ಯಕ್ತಿ ನೇಣುಹಾಕಿಕೊಂಡು (Suicide) ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದಲ್ಲಿ ನಡೆದಿದೆ. ಬಾಲಾಜಿ ಸಿಂಗ್ (30) ಮೃತ ದುರ್ದೈವಿ. ಬಾಲಾಜಿ ಸಿಂಗ್ ಗೆ 8 ವರ್ಷಗಳ ಹಿಂದೆಯೇ ಮದುವೆಯಾಗಿದ್ದ. ಕಾರುಗಳನ್ನು ಬಾಡಿಗೆಗೆ ಬಿಟ್ಟು ಅದರಿಂದ ಬರುವ ಹಣದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದ. ಆದರೆ, ಇತ್ತೀಚೆಗೆ ಪರಸ್ತ್ರಿ ಸಂಘ ಮಾಡಿದ್ದ. ಬಾಲಾಜಿಗೆ ಈಗಾಗಲೇ ಮದುವೆಯಾಗಿ ಮಗು ಇದ್ದರೂ ಶಿಡ್ಲಘಟ್ಟ ಮೂಲದ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಷಯ ಬಾಲಾಜಿ ಸಿಂಗ್ ಪತ್ನಿಗೆ ಗೊತ್ತಾಗಿ ಗಲಾಟೆಗಳು ಆಗಿವೆ. ಇದರಿಂದ ಬಾಲಾಜಿ ಮಹಿಳೆಯಿಂದ ದೂರವಾಗಿ ಪತ್ನಿ ಮಕ್ಕಳ ಜತೆ ಇರಲು ನಿರ್ಧರಿಸಿದ್ದ. ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಮಾತ್ರ ಆತನನ್ನು ಬಿಟ್ಟಿಲ್ಲ. ಹನಿಟ್ರ್ಯಾಪ್ ಮಾಡಿ ಆತನನ್ನು ಹೆದರಿಸುತ್ತಿದ್ದಳು ಎನ್ನಲಾಗಿದೆ. ಈ ವಿಚಾರದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಪದೇ ಪದೇ ಫೋನ್ ಮಾಡಿ ಕಿರುಕುಳ,…

Read More

ಮುಂಬೈ: ಪಾಪಿ ತಾಯಿಯೋರ್ವಳು ಮರಾಠಿ (Marathi) ಭಾಷೆ ಮಾತನಾಡಿಲ್ಲ ಎಂಬ ಕಾರಣಕ್ಕೆ ತನ್ನ ಹೆತ್ತ ಕುಡಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ನವಿ ಮುಂಬೈನ ಕಲಾಂಬೋಲಿಯಲ್ಲಿ ನಡೆದಿದೆ. 6 ವರ್ಷದ ಮಗಳನ್ನೇ ತಾಯಿ(woman) ಕತ್ತು ಹಿಸುಕಿ ಕೊಂದಿದ್ದಾಳೆ. ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ 30 ವರ್ಷದ ಮಹಿಳೆ ಮಗಳ ಸಾವನ್ನು ಹೃದಯಾಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಳು. ಸಂಶಯಗೊಂಡ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮನವಿ ಮಾಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಉಸಿರಾಟಕ್ಕೆ ಅಡಚಣೆ ಉಂಟಾಗಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಆನಂತರ ಮಹಿಳೆಯ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ. ಮಗುವಿನ ಅಜ್ಜಿ ಕೊಲೆ ನಡೆದ ದಿನನ ಮನೆಗೆ ಭೇಟಿ ನೀಡಿದ್ದರು. ಆದರೆ ಮೊಮ್ಮಗಳನ್ನು ಭೇಟಿಯಾಗಲು ಸಾಧ್ಯವಾಗದೇ ಮರಳಿ ಹೋಗಿದ್ದರು. ಅಂದು ಸಂಜೆ ಪತಿ ಮನೆಗೆ ಬಂದಾಗ ಮಗಳು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಮಗುವಿಗೆ ಹೃದಯಾಘಾತವಾಗಿದೆ ಎಂದೇ ಮಹಿಳೆ ಎಲ್ಲರಿಗೂ ಹೇಳುತ್ತಿದ್ದಳು. ಇದನ್ನು ಗಮನಿಸಿದ ಪೊಲೀಸರಿಗೆ ಸಂಶಯ ಉಂಟಾಗಿ,…

Read More

ಬೆಳಗಾವಿ: ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ(Kodimutt Sri) ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜ್ಯದ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿನ ಸಿಎಂ ಕುರ್ಚಿ ಫೈಟ್ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಸಕ್ರಾಂತಿ ಕಳೆಯಬೇಕು, ಅರಸನ ಭಂಡಾರ ಬಜೆಟ್‌ ಆಗಬೇಕು. ಸಕ್ರಾಂತಿವರೆಗೂ ಯಾವುದೇ ಬದಲಾವಣೆ ಇಲ್ಲ. ಹಾಲುಮತದವರು ಅವರಾಗಿಯೇ ಕೆಳಗೆ ಇಳಿಯಬೇಕು. ಇಲ್ಲಲವಾದರೆ ಅವರನ್ನು ಇಳಿಸಲು ಆಗುವುದಿಲ್ಲ ಎಂದಿರುವ ಅವರು ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಸದ್ಯಕ್ಕೆ ಸಿಎಂ ಆಗುವುದಿಲ್ಲ ಅಂದಿದ್ದಾರೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಟ್ಟರೆ ಮಾತ್ರ ಆಗುತ್ತಾರೆ ಎಂಬ ರೀತಿಯಲ್ಲಿ ಭವಿಷ್ಯ ನುಡಿದಿದ್ದಾರೆ. ಹಾಲುಮತ ಸಮಾಜದವರಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟದ ಕೆಲಸ. ಸ್ವತಃ ಸಿದ್ದರಾಮಯ್ಯ ಅವರೇ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಬೇರೆಯರಿಗೆ ಅವಕಾಶ ಸಿಗಬಹುದು ಎಂದಿದ್ದಾರೆ.

Read More

2026ರ ಜನವರಿಯಲ್ಲಿ ಆರಂಭವಾಗುವ u19 ಟಿ20 ವಿಶ್ವಕಪ್‌ ಗಾಗಿ ಭಾರತ ತಂಡವನ್ನು ಬಿಸಿಸಿಐ ಘೋಷಿಸಿದೆ. ಹಿರಿಯ ವಿಶ್ವಕಪ್ ಗೂ ಮುನ್ನ U19 ವಿಶ್ವಕಪ್ ಆರಂಭವಾಗಲಿದೆ. ಹೀಗಾಗಿ ಇಂದು ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಭಾರತೀಯ ತಂಡವನ್ನು ಘೋಷಿಸಿದೆ. ಇದರಲ್ಲಿ 14 ವರ್ಷದ ಸ್ಟಾರ್ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಸೇರಿದ್ದು, ಎಂದಿನಂತೆ ಆಯುಷ್ ಮ್ಹಾತ್ರೆಗೆ ಮತ್ತೊಮ್ಮೆ ತಂಡದ ನಾಯಕತ್ವ ನೀಡಲಾಗಿದೆ. ಜ. 15ರಂದು ಯುನೈಟೆಡ್ ಸ್ಟೇಟ್ಸ್ ವಿರುದ್ಧದ ಗುಂಪು ಪಂದ್ಯದೊಂದಿಗೆ ಭಾರತ ತನ್ನ ಅಭಿಯಾನ ಆರಂಭಿಸಲಿದೆ.ಭಾರತ ತಂಡ: ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ), ವೈಭವ್ ಸೂರ್ಯವಂಶಿ, ಆರನ್ ಜಾರ್ಜ್, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂಡು, ಹರ್ವಂಶ್ ಸಿಂಗ್, ಆರ್‌ಎಸ್ ಅಂಬರೀಶ್, ಕಾನಿಷ್ಕ್ ಚೌಹಾಣ್, ಖಿಲಾನ್ ಪಟೇಲ್, ಮೊಹಮ್ಮದ್ ಎನಾನ್, ಹೆನಿಲ್ ಪಟೇಲ್, ಡಿ.ದೀಪೇಶ್, ಕಿಶನ್ ಕುಮಾರ್ ಸಿಂಗ್, ಉದ್ಧವ್ ಮೋಹನ್ ಸ್ಥಾನ ಪಡೆದಿದ್ದಾರೆ.

Read More