Subscribe to Updates
Get the latest creative news from FooBar about art, design and business.
Author: Bosstv News Desk
ಬೆಂಗಳೂರು: ಕಿಚ್ಚ ಯುದ್ಧಕ್ಕೆ ಸಿದ್ಧ ಎನ್ನುತ್ತಿದ್ದಂತೆ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಶುರುವಾಗಿತ್ತು. ಸುದೀಪ್ ಫ್ಯಾನ್ಸ್ ಹಾಗೂ ದರ್ಶನ್ ಫ್ಯಾನ್ಸ್ ಮಧ್ಯೆ ವಾರ್ ಶುರುವಾಗಿತ್ತು. ಈ ವೇಳೆ ವಿಜಯಲಕ್ಷ್ಮೀ ವಿರುದ್ಧ ಕೆಲವು ಕಿಡಿಗೇಡಿಗಳು ಕೆಟ್ಟ ಕಮೆಂಟ್ ಮಾಡುತ್ತಿದ್ದಾರೆಂದು ಸಿಸಿಬಿಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಕಿಡಿಗೇಡಿಗಳ ಬಂಧನಕ್ಕೆ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಸೈಬರ್ ಪೊಲೀಸ್ ಠಾಣೆಯಲ್ಲಿ ಬುಧವಾರ ವಿಜಯಲಕ್ಷ್ಮೀ ದೂರು ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಕಿಡಿಗೇಡಿಗಳು ಭಯಬಿದ್ದು, ಸಾಮಾಜಿಕ ಜಾಲತಾಣಗಳಲ್ಲಿನ ತಮ್ಮ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ. ಹಲವು ಡಿಲಿಟ್ ಮಾಡಿದ್ದಾರೆ ಎನ್ನಲಾಗಿದೆ. ವಿಜಯಲಕ್ಷ್ಮಿ ಹಾಗೂ ಅವರ ಕುಟುಂಬದ ಸದಸ್ಯರನ್ನು ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ 150ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಹಾಕಿರುವುದು ಕಂಡು ಬಂದಿದೆ. ಕೆಲ ಖಾತೆಗಳಲ್ಲಿದ್ದ ಪೋಸ್ಟ್‌ಗಳು ಡಿಲೀಟ್ ಆಗಿವೆ. ವಿಜಯಲಕ್ಷ್ಮಿ ಅವರ ದೂರು ಆಧರಿಸಿ ಯೋಗಿ ಕಿಚ್ಚ, ಮಿ.ಅನಾಥ, ಮಹಿ ಕಿಚ್ಚ, ವಿರಾಟ್ ಕಿಚ್ಚ ಎಂಬ ಖಾತೆ ಸೇರಿದಂತೆ 18 ಇನ್‌ಸ್ಟಾಗ್ರಾಮ್ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಂತಹ…
ವಿಜಯಪುರ: ದೇಶದಲ್ಲಿ ಬಾಂಗ್ಲಾ ವಲಸಿಗರು, ರೊಹಿಂಗ್ಯಾಗಳಿದ್ದಾರೆ. ಅವರೆನ್ನೆಲ್ಲ ದೇಶದಿಂದ ಹೊರಹಾಕಲು ಕೇಂದ್ರ ಸರ್ಕಾರ ಕೆಲಸ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಎಸ್ ಐಆರ್ ಜಾರಿ ಮಾಡಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಐಆರ್ ಜಾರಿಗೆ ಬಂದ ನಂತರವೇ ವಲಸಿಗರು ಹಾಗೂ ರೊಹಿಂಗ್ಯಾಗಳಿಗೆ ಸಾಕಷ್ಟು ತೊಂದರೆಯಾಗಿದೆ. ಇದರೊಂದಿಗೆ ಅವರಿಗೆಲ್ಲ ಸಹಾಯ ಮಾಡುವವರನ್ನು ಕೂಡ ಹೊರಗೆ ಹಾಕಬೇಕು. ನಮ್ಮ ರಾಜ್ಯದಲ್ಲೂ ಇಂತಹವರು ಅನೇಕರಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಎಸ್‌ಐಆರ್ ಜಾರಿ ಮಾಡಬೇಕು ಎಂದು ಹೇಳಿದ್ದಾರೆ.ವಿಜಯಪುರದಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಇಂತಹ ಜನರಿದ್ದಾರೆ. ಈ ನಕಲಿ ಮತದಾರರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ.
ದಾವಣಗೆರೆ: ರೈತರೊಬ್ಬರು ಬೆಳೆ ಉಳಿಸಿಕೊಳ್ಳಲು ಹೋಗಿ ಸಜೀವವಾಗಿ ದಹನವಾಗಿರುವ ಘಟನೆಯೊಂದು ನಡೆದಿದೆ.ದಾವಣಗೆರೆಯಲ್ಲಿ (Davanagere) ಅಗ್ನಿ ದುರಂತ ಸಂಭವಿಸಿದ್ದು, ತಾನು ಬೆಳೆದಿದ್ದ ತಾಳೆ ಬೆಳೆಯನ್ನು ರಕ್ಷಣೆ ಮಾಡಲು ಹೋಗಿ ರೈತ ಸಜೀವ ದಹನವಾಗಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕುರುವ ಗ್ರಾಮದಲ್ಲಿ ನಡೆದಿದೆ. ಚಿತ್ರದುರ್ಗ (Chitradruga) ಜಿಲ್ಲೆ ಹಿರಿಯೂರಿನ ಗೊರ್ಲತ್ತು ಕ್ರಾಸ್ಬಳಿ ಬಸ್ ಅಗ್ನಿ ದುರಂತದಲ್ಲಿ 6 ಜನ ಸಜೀವವಾಗಿ ದಹನಗೊಂಡು ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಈಗ ರೈತ ಬೆಳೆ ಉಳಿಸಿಕೊಳ್ಳಲು ಹೋಗಿ ಸಜೀವವಾಗಿ ದಹನಗೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುರುವ ಗ್ರಾಮದ ಈಶ್ವರಪ್ಪ (75) ಸಜೀವ ದಹನವಾದ ರೈತ. ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ತಾಳೆ ಮರ ಬೆಳೆಯಲಾಗಿತ್ತು. ಆದರೆ ತಾಳೆ ಮರಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ತಾನೇ ಬೆಳೆದ ಬೆಳೆ ಕಾಪಾಡಲು ಹೋಗಿ ಈಶ್ವರಪ್ಪ ಸಜೀವವಾಗಿ ದಹನಗೊಂಡಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.…
ಚಂದನವನದಲ್ಲಿ ಕಿಚ್ಚ ಸಾರಿದ ಯುದ್ಧದಿಂದಾಗಿ ಸ್ಟಾರ್ ವಾರ್ ಶುರುವಾಗಿದೆ. ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಾರ್ ಶುರು ಮಾಡಿದ್ದಾರೆ. ಈ ಮಧ್ಯೆ ನಾನು ದರ್ಶನ್ ಗೆ ಏನೂ ಅಂದಿಲ್ಲ ಅಂತಾ ಸುದೀಪ್ ಸ್ಪಷ್ಟನೆ ನೀಡಿದರೂ ವಾರ್ ಮಾತ್ರ ನಿಲ್ಲುತ್ತಿಲ್ಲ. ಇತ್ತ ವಿಜಯಲಕ್ಷ್ಮೀ ದರ್ಶನ್, ಕೆಟ್ಟ ಕಮೆಂಟ್ ಹಾಕುವವರ ವಿರುದ್ಧ ಸಿಸಿಬಿಗೆ ದೂರು ಸಲ್ಲಿಸಿದ್ದಾರೆ. ಇದರಲ್ಲಿ ಸುದೀಪ್ ಫ್ಯಾನ್ಸ್ ಗಳೇ ಹೆಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೆಲ್ಲ ಗಮನಿಸಿದ ಶಿವಣ್ಣ ಗರಂ ಆಗಿದ್ದಾರೆ. ಶಿವರಾಜ್‌ಕುಮಾರ್ (Shiva Rajkumar) ಅಭಿನಯದ `45′ ಸಿನಿಮಾ ಕೂಡ ಇಂದು ತೆರೆ ಕಂಡಿದೆ. ಇನ್ನೊಂದೆಡೆ ಸುದೀಪ್ ಅಭಿನಯದ ಮಾರ್ಕ್ ತೆರೆಗೆ ಅಪ್ಪಳಿಸಿದೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಮ, ಯಾರ ಮನೆಯನ್ನೂ ಒಡೆಯೋಕೆ ಹೋಗಬಾರದು. ಯಾರ ಭಾವನೆಗಳ ಜೊತೆಗೂ ಆಟ ಆಡಬಾರದು. ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು. ಬದುಕೋಣ, ಬದುಕೋಕೆ ಬಿಡೋಣ ಎಂಬ ಭಾವನೆ ಎಲ್ಲರಿಗೂ ಇರಬೇಕು. ಸಮಾಜ ಇಷ್ಟೇ.…
ಲಕ್ನೋ: ನಾಯಿ ದೀರ್ಘಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದೆ ಎಂದು ಮನನೊಂದ ಸಹೋದರಿಯರಿಬ್ಬರು ಫಿನೈಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯು ಲಕ್ನೋದ ದೌಡಾ ಪ್ರದೇಶದಲ್ಲಿ ನಡೆದಿದೆ. ಸಹೋದರಿಯರಿಬ್ಬರೂ ಪದವೀಧರರು ಎನ್ನಲಾಗಿದೆ. ಆದರೆ, ನಾಯಿ ಹಲವು ದಿನಗಳಿಂದ ನೋವು ಪಡುವುದನ್ನು ಕಂಡು ಮನನೊಂದು ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಹಲವು ದಿನಗಳಿಂದ ಸಹೋದರಿಯರಿಬ್ಬರೂ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸಹೋದರಿಯರು 2014 ರಿಂದಲೂ ದೀರ್ಘಕಾಲದ ಖಿನ್ನತೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ತಮ್ಮ ಸಾಕು ನಾಯಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಅದರ ಸ್ಥಿತಿ ಸುಧಾರಿಸದ ಕಾರಣ ಇಬ್ಬರೂ ತೀವ್ರ ಭಾವನಾತ್ಮಕ ಒತ್ತಡ ಹಾಗೂ ಮನೋವೇದನೆಗೆ ಒಳಗಾಗಿದ್ದರು. ತಾಯಿ ಹೊರಗೆ ಹೋದಾಗ ಫಿನೈಲ್ ಸೇವಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ತಾಯಿ ಹೊರಗಿನಿಂದ ಬರುತ್ತಿದ್ದಂತೆ ಮಕ್ಕಳು ಒದ್ದಾಡುವುದನ್ನು ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಢಾಕಾ: ಅವಿವೇಕಿ ಬಾಂಗ್ಲಾದ ಅಂತ್ಯಕಾಲ ಸಮೀಪಿಸಿದಂತಿದೆ. ಅಲ್ಲಿನ ಹಿಂಸಾಚಾರ (Bangladesh violence)ಗಳು ಇದನ್ನು ಜಗಜ್ಜಾಹೀರ ಮಾಡುತ್ತಿವೆ. ಅಲ್ಪಸಂಖ್ಯಾತರ ಮೇಲಿನ ಅಲ್ಲಿನ ಹಿಂಸಾಚಾರ ನಿಲ್ಲುವಂತೆ ಕಾಣುತ್ತಿಲ್ಲ. ಹೀಗಾಗಿ ತನ್ನನ್ನೇ ತಾನು ಬಲಿಕೊಟ್ಟುಕೊಳ್ಳಬಹುದೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗಷ್ಟೇ ಹಿಂದು ಯುವಕ ದೀಪು ಚಂದ್ರದಾಸ್ ಎನ್ನುವ ವ್ಯಕ್ತಿಯನ್ನು ದುರುಳರು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು. ಈಗ ಮತ್ತೋರ್ವ ಹಿಂದು ಧರ್ಮೀಯ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆ. ರಾಜಬರಿ ಜಿಲ್ಲೆಯ ಹೊಸಾಯಿದಂಗ ಓಲ್ಡ್ ಮಾರ್ಕೆಟ್ ಹತ್ತಿರ ಜನರ ಗುಂಪೊಂದು ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್ನ ಮೇಲೆ ಹಲ್ಲೆ ನಡೆಸಿದೆ. 29 ವರ್ಷದ ಅಮೃತ್ ಮಂಡಲ್ ಎಂಬ ವ್ಯಕ್ತಿ ಕೊಲೆಯಾಗಿದ್ದಾನೆ. ಹಿಂದೆ ದೀಪು ಚಂದ್ರದಾಸ್ ಸತ್ತ ನಂತರ ಆತನ ಮೇಲೆ ಆಪಾದನೆ ಮಾಡಿದಂತೆ ಈ ಯುವಕನ ಮೇಲೆಯೂ ಆಪಾದನೆ ಮಾಡುತ್ತಿದ್ದಾರೆ. ಆತ ಓರ್ವ ಸುಲಿಗೆಕೋರನೆಂದು ಸ್ಥಳೀಯ ಪೊಲೀಸರು ಆರೋಪಿಸಿದ್ದಾರೆ. ಸಾಮ್ರಾಟ್ ಮೇಲೂ ಕೂಡ ಸುಲಿಗೆಯ ಆರೋಪ ಹೊರಿಸಿ, ಕೊಲೆಯನ್ನು ಸಮರ್ಥನೆ ಮಾಡಿಕೊಳ್ಳಲು ಯತ್ನಿಸುತ್ತಿರಬಹುದು ಎನ್ನಲಾಗುತ್ತಿದೆ. 2024ರ ಬಾಂಗ್ಲಾ…
ಚಿಕ್ಕಬಳ್ಳಾಪುರ: ಚೇಳೂರು ಪಟ್ಟಣದಲ್ಲಿ ನಡೆದಿದ್ದ 40 ದಿನಗಳ ನವಜಾತ ಗಂಡು ಶಿಶು ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅಜ್ಜಿಯೇ ಮ ತಿರುವು ಸಿಕ್ಕಿದ್ದು, ಮಗು ಸಾವಿನಲ್ಲಿ ಅಜ್ಜಿಯ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿದ್ದು, ಮಗುವಿನ ತಾಯಿ ದೂರು ನೀಡಿದ್ದಾರೆ. ಅನ್ಯಕೋಮಿನ ಅಜ್ಜಿ, ಮೊಮ್ಮಗಳ ನವಜಾತ ಶಿಶು ಕೊಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪ್ರೀತಿಸಿ ಮದುವೆಯಾದ ದಂಪತಿಗೆ ಜನಸಿದ್ದ ಗಂಡು ಮಗು ಡಿ. 21 ರಂದು ಸಾವನ್ನಪ್ಪಿತ್ತು. ಮಗು ಸಾವನ್ನಪ್ಪಿದ್ದಾಗ ಅಜ್ಜಿಯ ಹತ್ತಿರ ಇತ್ತು. ಪೊಲೀಸ್ ಠಾಣೆಗೆ ದೂರು ನೀಡುವ ವಿಚಾರದಲ್ಲಿ ಅಜ್ಜಿ ತಕರಾರು ತೆಗೆದಿದ್ದಳು ಎನ್ನಲಾಗಿದೆ. ಹೀಗಾಗಿ ತಾಯಿ ದೂರು ಸಲ್ಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ನವಜಾತ ಶಿಶುವಿನ ಮೃತದೇಹವನ್ನು ಹೊರತೆಗೆಯಲಾಗಿದ್ದು, ಚೇಳೂರು ತಹಸೀಲ್ದಾರ್ ಶ್ವೇತಾ ಅವರ ನೇತೃತ್ವದಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಲಾಗಿದೆ. ತಾಯಿ ಅಪ್ರಾಪ್ತೆ ಎನ್ನಲಾಗಿದೆ. ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಹಿಂದೂ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ನವಜಾತ…
ರಾಯಚೂರು: ಇಂದು ಗುರುವಾರ ಹಾಗೂ ಕ್ರಿಸ್ ಮಸ್ ಇರುವ ಹಿನ್ನೆಲೆಯಲ್ಲಿ ರಜೆ ಇದೆ. ಹೀಗಾಗಿ ಮಂತ್ರಾಲಯಕ್ಕೆ ಭಕ್ತರು ಹರಿದು ಬಂದಿದ್ದಾರೆ. ಹೀಗಾಗಿ ಭಕ್ತರಿಂದ ಮಂತ್ರಾಲಯ (Mantralaya) ರಾಘವೇಂದ್ರ ಸ್ವಾಮಿ ಮಠ ತುಂಬಿ ತುಳುಕುತ್ತಿದೆ. ಸಾಮಾನ್ಯವಾಗಿ ರಜಾ ದಿನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುತ್ತಾರೆ. ಆದರೆ, ಭಕ್ತರ ಸಂಖ್ಯೆ ಇಂದು ದುಪ್ಪಟ್ಟಾಗಿದೆ. ಒಂದೇ ದಿನ ಲಕ್ಷಾಂತರ ಭಕ್ತರು ಮಠಕ್ಕೆ ಭೇಟಿ ನೀಡಿದ್ದರಿಂದ ಭಕ್ತರಿಗೆ ಸೌಲಭ್ಯ ಒದಗಿಸಲು ತೊಂದರೆ ಪಡುವಂತಾಗಿದೆ. ಬೃಂದಾವನ ದರ್ಶನಕ್ಕೆ ಅವಕಾಶವಿರುವ ಎಲ್ಲ ಬಾಗಿಲುಗಳನ್ನೂ ತೆರೆದು ಮಠದ ಆಡಳಿತ ಮಂಡಳಿ ದರ್ಶನಕ್ಕೆ ಅವಕಾಶ ನೀಡಿದೆ. ಹೀಗಾಗಿ ಗಂಟೆಗಟ್ಟಲೇ ಕ್ಯೂ ನಿಲ್ಲುವಂತಾಗಿತ್ತು. ಶ್ರೀಮಠದ ರೂಂಗಳು ಭರ್ತಿಯಾಗಿದ್ದು, ಡಿ.23ರಿಂದ 2026ರ ಜ.15ರವರೆಗೆ ಯಾವುದೇ ರೂಮ್‌ಗಳು ಲಭ್ಯವಿರುವುದಿಲ್ಲವೆಂದು ಮಠದ ಆಡಳಿತ ಮಂಡಳಿ ಹೇಳಿದೆ.
ಬೆಂಗಳೂರು: ರಾಜ್ಯದಲ್ಲಿ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶಿಕ್ಷಣದ ಗುಣಮಟ್ಟದ ಆತಂಕ ಶುರುವಾಗಿದೆ. ಶೈಕ್ಷಣಿಕ ವರ್ಷದಲ್ಲಿ 6,675ಕ್ಕೆ ಏರಿಕೆ ಕಂಡಿದೆ. ಇಷ್ಟೊಂದು ಶಾಲೆಗಳಲ್ಲಿ ಒಬ್ಬರೇ ಒಬ್ಬ ಶಿಕ್ಷಕರಿದ್ದಾರೆ. ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಇಂತಹ ಶಾಲೆಗಳ ಸಂಖ್ಯೆ ಸುಮಾರು 1,200ರಷ್ಟು ಹೆಚ್ಚಾಗಿವೆ. 2024–25ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ 5,412 ಏಕ ಶಿಕ್ಷಕ ಶಾಲೆಗಳಿದ್ದರೆ, ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ 1,263 ಹೆಚ್ಚಳವಾಗಿವೆ. ಹೀಗಾಗಿ ಬುದ್ಧಿವಂತರು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಸುಮಾರು 49 ಸಾವಿರ ಸರ್ಕಾರಿ ಶಾಲೆಗಳಿದ್ದು, ಹಾಸನದಲ್ಲಿಯೇ ಏಕೋಪಾಧ್ಯಾಯ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ತುಮಕೂರು ಎರಡನೇ ಸ್ಥಾನದಲ್ಲಿದೆ. ಶೈಕ್ಷಣಿಕ ವರ್ಷದಲ್ಲಿ ಸರ್ಕಾರವು 51,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದೆ. ಏಕೋಪಾಧ್ಯಾಯ ಶಾಲೆಗಳ ಪೈಕಿ ಕೆಲವು ಶಾಲೆಗಳಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಇಂತಹ ಶಾಲೆಗಳಲ್ಲಿ ಶಿಕ್ಷಕರು 1 ರಿಂದ 5ನೇ ತರಗತಿಯವರೆಗೆ ಪಾಠ ಮಾಡಬೇಕು. ಆದರೆ, ಒಬ್ಬರೇ ಶಿಕ್ಷಕರು ಒಂದೇ ತರಗತಿಯಲ್ಲಿ ಕೂಡಿಸಿಕೊಂಡು ಅದು ಹೇಗೆ ಪಾಠ ಮಾಡುತ್ತಾರೆ? ಮಕ್ಕಳ ಜ್ಞಾನ ಹೇಗೆ ಸುಧಾರಿಸುತ್ತೆ?…
ಚಿಕ್ಕಬಳ್ಳಾಪುರ: ನಿಲ್ಲಿಸಿದ್ದ ಬಸ್ ನಲ್ಲಿಟ್ಟಿದ್ದ 55 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದ ಖದೀಮರ ಗುಂಪಿನ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಊಟಕ್ಕೆ ನಿಲ್ಲಿಸಿದ್ದ ವೇಳೆ ಬೆಂಗಳೂರು-ಹೈದರಾಬಾದ್ KSRTC ಎಸಿ ಸ್ಲೀಪರ್ ಬಸ್ನಲ್ಲಿದ್ದ 55 ಲಕ್ಷ ರೂ. ಹಣ ದೋಚಿದ್ದ ಗ್ಯಾಂಗ್ ನ ಓರ್ವನ ಬಂಧನವಾಗಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕಳುವಾಗಿದ್ದ ಹಣವನ್ನು ಬಂಧಿತನಿಂದ ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳು ಮಧ್ಯಪ್ರದೇಶದ ಮೂಲದವರು ಎನ್ನಲಾಗಿದೆ. ಮಧ್ಯ ಪ್ರದೇಶದಲ್ಲಿ ಆರೋಪಿ ಅಸ್ಲಂ ಖಾನ್ ಎಂಬಾತನನ್ನು ಬಂಧಿಸಲಾಗಿದ್ದು, ಕದ್ದ ಹಣವನ್ನೂ ವಶಕ್ಕೆ ಪಡೆಯಲಾಗಿದೆ. ಆತನಿಗೆ ಸಹಕಾರ ನೀಡಿದ್ದ ಮಧ್ಯ ಪ್ರದೇಶದ್ದೇ ಮೂಲದವರಾದ ಮನೀರ್ ಖಾನ್, ಅಭ್ಯಾಖಾನ್ ಮತ್ತು ಶೇರು ಪರಾರಿಯಾಗಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಸ್ನಲ್ಲಿ ಪ್ರಯಾಣಿಸುವವರ ಬೆಲೆಬಾಳುವ ವಸ್ತು, ಚಿನ್ನಾಭರಣ, ಹಣ ಕಳ್ಳತನ ಮಾಡುವುದೇ ಈ ಗ್ಯಾಂಗ್ ನ ಕೆಲಸವಾಗಿತ್ತು. ಚಿಕ್ಕಬಳ್ಳಾಪುರದ ಜಿಲ್ಲೆಯ ಬೀಚಗಾನಹಳ್ಳಿ ಕ್ರಾಸ್ ಬಳಿ ಬಾಡಿಗೆಗೆ ಇವರು ರೂಮ್ ಕೂಡ ಪಡೆದಿದ್ದರು. ಕದ್ದ ಹಣವನ್ನು…