Author: Bosstv News Desk

ಮಸೀದಿಯೊಂದರ ಉತ್ಖನನ ವೇಳೆ ರಾಮ ಹಾಗೂ ಸೀತಾ ವಿಗ್ರಹ ಪತ್ತೆಯಾಗಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಈ ಘಟನೆ ಮಧ್ಯಪ್ರದೇಶದ (Madhya Pradesh) ಸಾಗರ್ ಎಂಬಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಸಂಸ್ಕೃತ ಬಚಾವೋ ಮಂಚ್ ನ ನಾಯಕರೊಬ್ಬರು ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಹಾಗೂ ಮುಖಂಡರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸ್ಥಳದಲ್ಲಿ ಹಿಂದೆ ಹಿಂದೂ ದೇವಾಲಯವಿತ್ತು. ಆನಂತರ ಅದನ್ನು ಮುಸ್ಲಿಂ ಸಮುದಾಯದವರು ವಶಪಡಿಸಿಕೊಂಡಿರಬಹುದು. ಹೀಗಾಗಿ ಈ ಸ್ಥಳದಲ್ಲಿ ಮತ್ತೆ ಹಿಂದೂ ದೇವಾಲಯವನ್ನು ನಿರ್ಮಿಸಬೇಕು ಎಂದು ಹಿಂದೂ ಮುಖಂಡರು ಆಗ್ರಹಿಸುತ್ತಿದ್ದಾರೆ. ಹಿಂದೂ ಮುಖಂಡರು ಹಾಗೂ ಜನರು ಸ್ಥಳಕ್ಕೆ ಆಗಮಿಸಿ ದೇವಸ್ಥಾನ ನಿರ್ಮಿಸಬೇಕೆಂದು ಆಗ್ರಹಿಸುತ್ತಿದ್ದಂತೆ ಮುಸ್ಲಿಂ ಸಮುದಾಯದವರು ಕೂಡ ಸ್ಥಳಕ್ಕೆ ಆಗಮಿಸಿದ್ದರು. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಹಿಂದೂ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆಯ ವೇದಿಕೆ ತೆಗೆಯುವಂತೆ ಮುಸ್ಲಿಂರು ಆಗ್ರಹಿಸುತ್ತಿದ್ದು, ಸ್ಥಳದಲ್ಲಿ ಪೊಲೀಸರು ಠಿಕಾಣಿ ಹೂಡಿದ್ದು,…

Read More

ಬೆಂಗಳೂರು: ಇತ್ತೀಚೆಗೆ ಚಿನ್ನದ ಬೆಲೆ ಗಗನಕ್ಕೇ ಏರಿಕೆ ಕಂಡಿತ್ತು. ಹಲವು ಸಂದರ್ಭಗಳಲ್ಲಿ ಹಾವು-ಏಣಿ ಆಟಕ್ಕೆ ಸಾಕ್ಷಿಯಾಗಿತ್ತು. ಆದರೂ ಚಿನ್ನದ ಬೆಲೆ ಏರುತ್ತ ಸಾಗಿದ್ದು, ಚಿನ್ನದ ಪ್ರಿಯರಿಗೆ ನೋವು ತಂದಿತ್ತು. ಆದರೆ, ಇಂದು ಏಕಾಏಕಿ ಕುಸಿತ ಕಂಡಿದೆ. 24 ಗ್ರಾಂ ಶುದ್ದ ಚಿನ್ನದ ಬೆಲೆ 12,200 ರೂ. ನಿಂದ 12,862 ರ ವರೆಗೆ ಏರಿಳಿತ ಕಂಡು ಬರುತ್ತಿದೆ. ಒಂದೇ ದಿನ ಚಿನ್ನದ ಬೆಲೆಯಲ್ಲಿ 1,740 ರೂ ಕಡಿತ ಆಗಿದೆ. ಮಂಗಳವಾರ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,366 ರೂಪಾಯಿ ಇದ್ದು, ಇಂದು 174 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,23,660 ರೂ. ಆಗಿದೆ. ಅಂದರೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 1,740 ರೂ. ಕಡಿತವಾಗಿದೆ. 22 ಕ್ಯಾರೆಟ್ 1 ಗ್ರಾಂ ಬೆಲೆ 11,335 ರೂ. ಆಗಿದ್ದು, 160 ರೂ.ನಷ್ಟು ಕಡಿಮೆ ಆಗಿದೆ. 10 ಗ್ರಾಂ ಬೆಲೆ 1,13,350 ರೂಪಾಯಿ ಇದೆ.…

Read More

ಚಿಕ್ಕಬಳ್ಳಾಪುರ: ಕುಡಿದು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹುದುಗೂರು ಎಂಬಲ್ಲಿ ನಡೆದಿದೆ. ಪಾವನಿ(30) ಕೊಲೆಯಾಗಿರುವ ದುರ್ದೈವಿ ಎನ್ನಲಾಗಿದ್ದು, ಪತಿ ರಾಘವೇಂದ್ರ ಕೊಲೆ ಮಾಡಿರುವ ಪಾಪಿ ಪತಿ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 5 ವರ್ಷಗಳ ಹಿಂದೆ ಬಂಧಿತ ಆರೋಪಿ ರಾಘವೇಂದ್ರ ಹಾಗೂ ಕೊಲೆಯಾಗಿರುವ ಪಾವನಿ ಮದುವೆಯಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಗಂಡು ಮಗು ಇದೆ. ಇತ್ತೀಚೆಗೆ ಪಾಪಿ ಪತಿಯೂ ಪತ್ನಿಯ ಊರಿಗೆ ಹೋಗಿದ್ದಾನೆ. ಆದರೆ, ಮನೆಗೆ ಹೋಗಿಲ್ಲ. ಈ ವಿಷಯ ತಿಳಿದು ಪಾವನಿ ಪ್ರಶ್ನಿಸಿದ್ದಾರೆ. ಊರಿಗೆ ಬಂದರೂ ಮನೆಗೆ ಏಕೆ ಬಂದಿಲ್ಲ? ಎಂದು ಪ್ರಶ್ನಿಸಿದ್ದಾರೆ. ಈ ಕಾರಣಕ್ಕೆ ಪತಿ ಹಾಗೂ ಪತ್ನಿಯ ಮಧ್ಯೆ ಜೋರು ಗಲಾಟೆ ನಡೆದಿದೆ ಎನ್ನಲಾಗಿದೆ. ಗಲಾಟೆ ವಿಕೋಪಕ್ಕೆ ತೆರಳಿ ಪತಿಯು ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆ ಪಾಪಿ ಪತಿಯು ಪತ್ನಿಯ ಕುತ್ತಿಗೆಗೆ ಕುತ್ತಿಗೆಗೆ ವೇಲ್ ನಿಂದಿ ಬಿಗಿದು ಕೊಲೆ…

Read More

ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ತಂಡ ಈಗಾಗಲೇ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ. ಹೀಗಾಗಿ ಮಹಿಳಾ ಕ್ರಿಕೆಟ್ ಕ್ರೇಜ್ ಕೂಡ ದೇಶದಲ್ಲಿ ಹೆಚ್ಚಾಗಿದೆ. ಏಕದಿನ ವಿಶ್ವಕಪ್ ಗೆದ್ದಿರುವ ಮಹಿಳಾ ತಂಡ ಈಗ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು, ಅದಕ್ಕೂ ಮುಂಚೆ ಡಬ್ಲ್ಯೂಪಿಎಲ್ ಸೆಣಸಾಟಕ್ಕೆ ಸಿದ್ಧವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚರ್ಚೆಗಳು ಕೂಡ ಜೋರಾಗಿವೆ. ಪುರುಷರ ಟಿ20 ವಿಶ್ವಕಪ್ ಗೂ ಮುನ್ನ ಮಹಿಳಾ ಪ್ರೀಮಿಯರ್ ಲೀಗ್ ನ ನಾಲ್ಕನೇ ಸೀಸನ್ ನ್ನು ನಡೆಸಲು ಬಿಸಿಸಿಐ ನಿರ್ಧರಿಸಿದೆ. ಕೇವಲ ಎರಡು ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಡಬ್ಲ್ಯೂಪಿಎಲ್ 2026ರ ಟೂರ್ನಿ ಮುಂಬೈ ಹಾಗೂ ಬರೋಡದಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 2026ರ ಟಿ20 ವಿಶ್ವಕಪ್ ಫೆ. 7ರಿಂದ ಆರಂಭವಾಗಲಿದೆ. ಹೀಗಾಗಿ ಅದಕ್ಕೂ ಮುಂಚೆಯೇ ಮಹಿಳೆಯರ ಪ್ರೀಮಿಯರ್ ಲೀಗ್ ಮುಗಿಸಬೇಕು ಎನ್ನುವುದು ಬಿಸಿಸಿಐ ಲೆಕ್ಕಾಚಾರವಾಗಿದೆ. ಹೀಗಾಗಿ ವುಮೆನ್ಸ್ ಪ್ರೀಮಿಯರ್ ಲೀಗ್ 2026 ಜನವರಿ 7 ರಿಂದ ಶುರುವಾಗಲಿದ್ದು, ಫೆಬ್ರವರಿ 3ಕ್ಕೆ ಅಂತ್ಯವಾಗಲಿದೆ. ಫೆಬ್ರವರಿಯ ಮೊದಲ ವಾರದಲ್ಲೇ…

Read More