ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಇಂದು ಬೆಂಗಳೂರಿನಲ್ಲಿ ಕೊಡಗಿನ ರೋಷನ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಹಲವು ವರ್ಷಗಳಿಂದ ಅನುಶ್ರೀ ವಿವಾಹದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು.
ಇದೀಗ ಉದ್ಯಮಿ ರೋಶನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಮೂಲಕ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಇನ್ನು ಅನುಶ್ರೀ ರೋಷನ್ ಅದ್ದೂರಿ ಕಲ್ಯಾಣದ ಫೋಟೋಸ್ ಇಲ್ಲಿವೆ.
ನಾನು ನಿಮ್ಮ ಮನೆ ಮಗಳು ಅಂತಾ ಮೈಕ್ ಹಿಡಿದು ಟಿವಿ ಮುಂದೆ ಬಂದು ಪಟಪಟ ಮಾತಾಡೋ ಆ್ಯಂಕರ್ ಅನುಶ್ರೀ ಇಂದು ತಮ್ಮ ಗೆಳೆಯನೊಂದಿಗೆ ವಿವಾಹವಾಗಿದ್ದಾರೆ.
ಅನುಶ್ರೀ ಮದುವೆಗೆ ಇಡೀ ರಾಜ್ಯವೇ ಎದುರು ನೋಡ್ತಾ ಇತ್ತು.. ಅನುಶ್ರೀ ಮದುವೆಗೆ ಕಾಯ್ತಿರೋ ಅಭಿಮಾನಿಗಳಿಗೆ ಇಂದು ಅವರ ಮದುವೆಯ ಕ್ಷಣ ಸಂತಸ ತಂದಿದೆ.
ಇಂದು ಆಪ್ತರ ಸಮ್ಮುಖದಲ್ಲಿ ನವ ಜೋಡಿ ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಹೊಸಬಾಳಿಗೆ ಕಾಲಿಟ್ಟಿದ್ದಾರೆ.
ಕೊಡಗು ಮೂಲದ ರಾಮಮೂರ್ತಿ ಮತ್ತು ಸಿಸಿಲಿಯಾ ಪುತ್ರ ರೋಶನ್ ಅವರನ್ನು ಅನುಶ್ರೀ ಮದುವೆಯಾಗಿದ್ದಾರೆ. ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಬೆಳಗ್ಗೆ 10.56ಕ್ಕೆ ಮಾಂಗಲ್ಯ ಧಾರಣೆ ನಡೆಯಿತು.
ರೋಷನ್ ತಾಳಿ ಕಟ್ಟುತ್ತಿದ್ದಾಗ ಭಾವುಕರಾಗಿ ರೋಷನ್ ಅವರಿಗೆ ಥ್ಯಾಂಕ್ಯು ಎಂದಿದ್ದಾರೆ. ಈ ಖಾಸಗಿ ವಿವಾಹ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನ ತಾರೆಯರು ಹಾಗೂ ಆಪ್ತರು ಭಾಗಿಯಾಗಿದ್ದರು.
ನಟ ರಾಜ್ ಬಿ. ಶೆಟ್ಟಿ, ಜೀ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ಕಾವ್ಯಾ ಶಾ, ಚೈತ್ರಾ ಜೆ. ಆಚಾರ್, ಶರಣ್, ಶಿವರಾಜ್ ಕುಮಾರ್ ದಂಪತಿ, ಹಂಸಲೇಖ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೇ ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ತರುಣ್ ಸುಧೀರ್, ಸೋನಲ್ ಮೊಂಥೆರೋ, ಡಾಲಿ ಧನಂಜಯ್, ನಟಿ ತಾರಾ, ನಟಿ ಪ್ರೇಮಾ ಸೇರಿದಂತೆ ಸ್ಯಾಂಡಲ್‌ವುಡ್ ತಾರಾಗಣವೇ ನವಜೋಡಿಗೆ ಶುಭ ಹಾರೈಸಿದರು.
Read Also : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ..!