ಬೆಂಗಳೂರು, ಅಕ್ಟೋಬರ್ 16, 2026: ಬೆಂಗಳೂರಿನ ಪ್ರಮುಖ ಶಾಪಿಂಗ್ ಮತ್ತು ಲೈಫ್‌ಸ್ಟೈಲ್ ತಾಣಗಳಲ್ಲಿ ಒಂದಾದ ಮಂತ್ರಿ ಸ್ಕ್ವೇರ್ ಮಾಲ್, ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅವರ ಉಪಸ್ಥಿತಿಯಲ್ಲಿ ‘ಮಂತ್ರಿ ಶಾಪಿಂಗ್ ಫೆಸ್ಟಿವಲ್ 2026’ (MSF 3.0) ಅನ್ನು ಮಲ್ಲೇಶ್ವರದ ಮಾಲ್‌ನಲ್ಲಿ ಅದ್ಧೂರಿಯಾಗಿ ಉದ್ಘಾಟಿಸಲಾಯಿತು.

ಅಕ್ಟೋಬರ್ 16, 2026 ರಿಂದ 2027 ಜನವರಿ 3 ರವರೆಗೆ ನಡೆಯಲಿರುವ ಈ ಹಬ್ಬದ ಶಾಪಿಂಗ್ ಸಂಭ್ರಮವು, ಭೇಟಿ ನೀಡುವವರಿಗೆ ಶಾಪಿಂಗ್, ಮನರಂಜನೆ ಮತ್ತು ರೋಮಾಂಚಕಾರಿ ಬಹುಮಾನಗಳ ಅನನ್ಯ ಅನುಭವವನ್ನು ನೀಡಲಿದೆ.
ಮಾಲ್‌ನ ಉದ್ಘಾಟನಾ ಸಮಾರಂಭದಲ್ಲಿ ಮಂತ್ರಿ ಡೆವಲಪರ್ಸ್‌ನ ರಿಟೇಲ್, ಕಮರ್ಷಿಯಲ್ ಮತ್ತು ಹಾಸ್ಪಿಟಾಲಿಟಿ ವಿಭಾಗದ ಮುಖ್ಯ ಕಾರ್ಯತಂತ್ರ ಅಧಿಕಾರಿ ಕಾಮಾಕ್ಷಿ ಮಂತ್ರಿ ಅವರೊಂದಿಗೆ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಪಾಲ್ಗೊಂಡಿದ್ದರು. ಈ ವೇಳೆ ಉತ್ಸವದ ಶಾಪ್ಪರ್ ರಿವಾರ್ಡ್ಸ್ ಮತ್ತು ಅಭಿಯಾನದ ವಿಶೇಷತೆಗಳನ್ನು ಅನಾವರಣಗೊಳಿಸಲಾಯಿತು, ಇದು ಮಾಲ್‌ನಲ್ಲಿ ಹಬ್ಬದ ಶಾಪಿಂಗ್ ಋತುವಿಗೆ ಅಧಿಕೃತ ಚಾಲನೆ ನೀಡಿತು.

ಈ ಮಹೋತ್ಸವವು ಹಬ್ಬದ ಶಾಪಿಂಗ್ ಅನ್ನು ಇನ್ನಷ್ಟು ಆಕರ್ಷಕವಾಗಿಸುವ ಗುರಿಯನ್ನು ಹೊಂದಿದ್ದು, ಭಾಗವಹಿಸುವ ವಿವಿಧ ಬ್ರಾಂಡ್‌ಗಳ ಮೇಲೆ ವಿಶೇಷ ಕೊಡುಗೆಗಳು, ಯೆಜ್ಡಿ ಬೈಕ್ ಗೆಲ್ಲುವ ಸುವರ್ಣ ಅವಕಾಶವಿರುವ ಲಕ್ಕಿ ಡ್ರಾ ಮತ್ತು ಪ್ರತಿ ವಾರದ ಗರಿಷ್ಠ ಖರೀದಿದಾರರಿಗೆ ವಿಶೇಷ ಬಹುಮಾನಗಳನ್ನು ನೀಡಲಿದೆ.

ಲಕ್ಕಿ ಡ್ರಾ ಭಾಗವಾಗಿ ಇಬ್ಬರು ವಿಜೇತರು ಯೆಜ್ಡಿ ಬೈಕ್ ಗೆಲ್ಲುವ ಅವಕಾಶವನ್ನು ಪಡೆಯಲಿದ್ದಾರೆ (ಅಭಿಯಾನದ ನಿಯಮಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ).

ಈ ಹಬ್ಬದ ಕುರಿತು ಮಾತನಾಡಿದ ಮಂತ್ರಿ ಗ್ರೂಪ್‌ನ ಮುಖ್ಯ ಕಾರ್ಯತಂತ್ರ ಅಧಿಕಾರಿ ಕಾಮಾಕ್ಷಿ ಮಂತ್ರಿ ಅವರು, “ಶಾಪಿಂಗ್, ಆಚರಣೆಗಳು ಮತ್ತು ಹಂಚಿಕೊಂಡ ಅನುಭವಗಳ ಮೂಲಕ ಜನರನ್ನು ಒಟ್ಟುಗೂಡಿಸಲು ಹಬ್ಬದ ಸೀಸನ್ ಉತ್ತಮ ಅವಕಾಶವಾಗಿದೆ. ಮಂತ್ರಿ ಶಾಪಿಂಗ್ ಫೆಸ್ಟಿವಲ್ 2026 ರೊಂದಿಗೆ, ವರ್ಷದ ಅತ್ಯಂತ ಪ್ರಮುಖ ಅವಧಿಯಲ್ಲಿ ನಮ್ಮ ಚಿಲ್ಲರೆ ಪಾಲುದಾರರನ್ನು ಬೆಂಬಲಿಸುವ ಜೊತೆಗೆ, ಗ್ರಾಹಕರಿಗೆ ಅತ್ಯಾಕರ್ಷಕ ಮತ್ತು ಲಾಭದಾಯಕ ಅನುಭವವನ್ನು ನೀಡುವುದು ನಮ್ಮ ಗಮನ. ಆಕರ್ಷಕ ಕೊಡುಗೆಗಳು, ಬಹುಮಾನಗಳು ಮತ್ತು ರೋಮಾಂಚಕ ವಾತಾವರಣದೊಂದಿಗೆ ಮುಂಬರುವ ತಿಂಗಳುಗಳಲ್ಲಿ ಮಂತ್ರಿ ಸ್ಕ್ವೇರ್ ಮಾಲ್‌ಗೆ ಆಗಮಿಸುವ ಎಲ್ಲರಿಗೂ ಸ್ವಾಗತ ಕೋರುತ್ತೇವೆ” ಎಂದರು.

ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಮಾತನಾಡಿ, “ಹಬ್ಬದ ಸೀಸನ್ ಅಂದರೆ ಪ್ರೀತಿಪಾತ್ರರೊಂದಿಗೆ ಆಚರಿಸುವುದು, ವಿಶೇಷವಾದುದನ್ನು ಕಂಡುಕೊಳ್ಳುವುದು ಮತ್ತು ಮರೆಯಲಾಗದ ನೆನಪುಗಳನ್ನು ಸೃಷ್ಟಿಸುವುದು. ಶಾಪಿಂಗ್ ಈ ಆಚರಣೆಗಳ ಪ್ರಮುಖ ಭಾಗವಾಗಿದೆ, ಮತ್ತು ಮಂತ್ರಿ ಶಾಪಿಂಗ್ ಫೆಸ್ಟಿವಲ್‌ನಂತಹ ಉಪಕ್ರಮಗಳು ಆಕರ್ಷಕ ಕೊಡುಗೆಗಳು ಹಾಗೂ ಬಹುಮಾನಗಳೊಂದಿಗೆ ಈ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಈ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ಎಲ್ಲರಿಗೂ ಅದ್ಭುತವಾದ ಹಬ್ಬದ ಶುಭಾಶಯಗಳು” ಎಂದು ತಿಳಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಪಮ್ ಟಿ. ಅವರು ಮಾತನಾಡಿ, “ಕೇವಲ ಶಾಪಿಂಗ್‌ಗೆ ಮಾತ್ರವಲ್ಲದೆ, ಮಂತ್ರಿ ಸ್ಕ್ವೇರ್ ಮಾಲ್ ಅನ್ನು ಒಂದು ಪರಿಪೂರ್ಣ ಮನರಂಜನಾ ತಾಣವನ್ನಾಗಿ ರೂಪಿಸುವುದೇ ನಮ್ಮ ಮುಂದುವರಿದ ಗುರಿಯಾಗಿದೆ. ಚಿಲ್ಲರೆ ವ್ಯಾಪಾರ, ವಿರಾಮ ಮತ್ತು ಹಬ್ಬದ ಆಚರಣೆಗಳನ್ನು ಒಟ್ಟಿಗೆ ತರುವ ಸಮಗ್ರ ಅನುಭವವನ್ನು ಸಂದರ್ಶಕರು ಆನಂದಿಸಬೇಕೆಂದು ನಾವು ಬಯಸುತ್ತೇವೆ. ಈ ಉತ್ಸವವು ಗ್ರಾಹಕರನ್ನು ಸ್ವಾಗತಿಸಲು, ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಲು ಮತ್ತು ನಮ್ಮ ಗ್ರಾಹಕರು ಹಾಗೂ ಚಿಲ್ಲರೆ ಪಾಲುದಾರರೊಂದಿಗೆ ಬಾಂಧವ್ಯವನ್ನು ಗಟ್ಟಿಗೊಳಿಸಲು ಒಂದು ಉತ್ತಮ ಅವಕಾಶವಾಗಿದೆ” ಎಂದರು.

ವಿವಿಧ ರೀತಿಯ ಬ್ರಾಂಡ್‌ಗಳು, ರುಚಿಕರವಾದ ಭೋಜನದ ಆಯ್ಕೆಗಳು ಮತ್ತು ಮನರಂಜನಾ ಸೌಲಭ್ಯಗಳೊಂದಿಗೆ ಮಂತ್ರಿ ಸ್ಕ್ವೇರ್ ಮಾಲ್ ಎಲ್ಲಾ ವರ್ಗದ ಗ್ರಾಹಕರಿಗೆ ಮತ್ತು ಕುಟುಂಬಗಳಿಗೆ ನೆಚ್ಚಿನ ತಾಣವಾಗಿದೆ. ಮಂತ್ರಿ ಶಾಪಿಂಗ್ ಫೆಸ್ಟಿವಲ್ 2026 ರ ಮೂಲಕ, ಮಾಲ್ ಹಬ್ಬದ ಉತ್ಸಾಹವನ್ನು ಹೆಚ್ಚಿಸಲು, ಪುನರಾವರ್ತಿತ ಭೇಟಿಗಳನ್ನು ಪ್ರೋತ್ಸಾಹಿಸಲು ಮತ್ತು ಗ್ರಾಹಕರಿಗೆ ತಮ್ಮ ಕಾಲೋಚಿತ ಆಚರಣೆಗಳ ಪ್ರಮುಖ ಭಾಗವಾಗಲು ಹೆಚ್ಚಿನ ಕಾರಣಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಉತ್ಸವದ ಅವಧಿಯಲ್ಲಿ ಗ್ರಾಹಕರು ಮಲ್ಲೇಶ್ವರದಲ್ಲಿರುವ ಮಂತ್ರಿ ಸ್ಕ್ವೇರ್ ಮಾಲ್‌ಗೆ ಭೇಟಿ ನೀಡಿ, ವಿವಿಧ ಬ್ರಾಂಡ್‌ಗಳ ಹಬ್ಬದ ಕೊಡುಗೆಗಳನ್ನು ಅನ್ವೇಷಿಸಬಹುದು ಮತ್ತು ಶಾಪಿಂಗ್ ರಿವಾರ್ಡ್ಸ್ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು.

ಮಂತ್ರಿ ಸ್ಕ್ವೇರ್ ಕುರಿತು:
ಮಂತ್ರಿ ಸ್ಕ್ವೇರ್ ಮಾಲ್ ಭಾರತದ ಅತಿ ದೊಡ್ಡ ರಿಟೇಲ್ ತಾಣಗಳಲ್ಲಿ ಒಂದಾಗಿದ್ದು, ಒಂದೇ ರೂಫ್ ಅಡಿಯಲ್ಲಿ ಸಂಪೂರ್ಣ ಶಾಪಿಂಗ್, ಡೈನಿಂಗ್ ಮತ್ತು ಮನರಂಜನೆಯ ಅನುಭವವನ್ನು ನೀಡುತ್ತದೆ.

300 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮತ್ತು ಭಾರತೀಯ ಬ್ರಾಂಡ್‌ಗಳು, ಮಲ್ಟಿಪ್ಲೆಕ್ಸ್ ಮತ್ತು ವಿಸ್ತಾರವಾದ ಆಹಾರ ಹಾಗೂ ವಿರಾಮದ ಆಯ್ಕೆಗಳೊಂದಿಗೆ, ಇದು ಕುಟುಂಬಗಳು ಮತ್ತು ಫ್ಯಾಷನ್ ಪ್ರಿಯರ ಪ್ರಮುಖ ಆದ್ಯತೆಯ ತಾಣವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: www.mantrisquare.com

Share.
Leave A Reply