Karave Narayana Gowda: ಬೆಂಗಳೂರಿನ ಎಸ್‌ಬಿಐ ಶಾಖೆಯ ಮ್ಯಾನೇಜರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ‘ನಾನು ಎಂದಿಗೂ ಕನ್ನಡ ಮಾತನಾಡುವುದಿಲ್ಲ, ಕನ್ನಡ ಬೇಡ, ಹಿಂದಿಯಲ್ಲೇ ಮಾತನಾಡಿ’ ಎಂಬ ಹೇಳಿಕೆಯಿಂದ ಗ್ರಾಹಕರೊಂದಿಗೆ ಕಿರಿಕ್ ಮಾಡಿರುವ ಮಹಿಳಾ ಮ್ಯಾನೇಜರ್ ವಿಡಿಯೋ ವೈರಲ್ ಆಗಿದ್ದು, ಕನ್ನಡಿಗರ ಕೆಂಗಣ್ಣಿಗರಿಯಾಗಿದ್ದಾರೆ.
ನಾನು ಕನ್ನಡ ಮಾತನಾಡುವುದಿಲ್ಲ ಎಂದು ದರ್ಪ ತೋರಿರುವ ಮಹಿಳಾ ಮ್ಯಾನೇಜರ್ ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಈ ಘಟನೆಯು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಇನ್ನು ಕರವೇ ಹಾಗೂ ಕನ್ನಡಪರ ಹೋರಾಟಗಾರರು ಎಸ್‌ಬಿಐ ವಿರುದ್ಧ ಕಿಡಿಕಾರಿದ್ದಾರೆ.
Also Read: IPL 2025 Playoffs Schedule : ಪ್ಲೇಆಫ್ ವೇಳಾಪಟ್ಟಿ ಪ್ರಕಟ : ಟಾಪ್ 2ನಲ್ಲೇ ನಿಲ್ಲುತ್ತಾ ಆರ್‌ಸಿಬಿ
ಇನ್ನು ಈ ಬಗ್ಗೆ ಕರವೇ ನಾರಾಯಣಗೌಡರು ಪ್ರತಿಕ್ರಿಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳಾ ಮ್ಯಾನೇಜರ್ ವಿರುದ್ಧ ಕಿಡಿಕಾರಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕರವೇ ಅಧ್ಯಕ್ಷರಾದ ನಾರಾಯಣ ಗೌಡರು, ಬೆಂಗಳೂರಿನಲ್ಲಿರುವ ಎಸ್‌ಬಿಐ ಪ್ರಧಾನ ಕಚೇರಿಯ ಪ್ರಧಾನ ವ್ಯವಸ್ಥಾಪಕರಿಗೆ ಖಡಕ್ ಪತ್ರ ಬರೆದಿದ್ದಾರೆ. ಕನ್ನಡದಲ್ಲಿ ವ್ಯವಹರಿಸಲು ಇಷ್ಟವಿಲ್ಲವೆನ್ನುವ ಸಿಬ್ಬಂದಿಯನ್ನು ಅವರ ಮಾತೃ ರಾಜ್ಯಗಳಿಗೆ ಕೂಡಲೇ ರಾಜ್ಯದಿಂದ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಮುಂದೆ ಸಂಭವಿಸುವ ಅನಾಹುತಗಳಿಗೆ ತಾವೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ್ದು, ಮ್ಯಾನೇಜರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
