IPL 2025 Playoffs Schedule: ಮೇ 23ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಐಪಿಎಲ್ 2025 ಪಂದ್ಯವು ನಿರಂತರ ಮಳೆಯ ಕಾರಣದಿಂದ ಲಕ್ನೋಗೆ ಸ್ಥಳಾಂತರಿಸಲಾಗಿದೆ. ಬೆಂಗಳೂರು ನಗರದಲ್ಲಿ ಹವಾಮಾನ ಇಲಾಖೆ ನೀಡಿದ ಎಲ್ಲೋ ಎಚ್ಚರಿಕೆ ಮತ್ತು ಇತ್ತಿಚೆಗೆ ನಡೆದ ಕೋಲ್ಕತ್ತಾ ವಿರುದ್ಧದ ಪಂದ್ಯವೂ ಮಳೆಯಿಂದ ರದ್ದುಗೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಪಂದ್ಯವು ಲಕ್ನೋದಲ್ಲಿ ಭರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ .

ಬೆಂಗಳೂರಿನಲ್ಲಿ ನಡೆಯಬೇಕಿದ್ದ ಈ ಪಂದ್ಯವು ಈಗ ಲಕ್ನೋಗೆ ಸ್ಥಳಾಂತರವಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಮ್ಯಾಚ್‌ ನೋಡಲಿಕ್ಕೆ ಹಾತೊರೆದಿದ್ದ ಆರ್‌ಸಿಬಿ ಫ್ಯಾನ್ಸ್‌ಗೆ ನಿರಾಸೆಯಾಗಿದೆ. ಆಲ್‌ರೆಡಿ ಮ್ಯಾಚ್‌ಗಾಗಿನೇ ಟಿಕೆಟ್‌ನ್ನ ಫ್ರಿ ಬುಕ್‌ ಮಾಡಿದ್ದ ಫ್ಯಾನ್ಸ್‌ ಈಗ ಟಿಕೆಟ್‌ ಕ್ಯಾನ್ಸಲ್‌ ಮಾಡಿಕೊಳ್ಳುತ್ತಿದ್ದಾರೆ.

ಹೀಗಾಗಿ, ಆರ್‌ಸಿಬಿ ಫ್ಯಾನ್ಸ್‌ ತಮ್ಮ ಖರೀದಿಸಿದ ಟಿಕೆಟ್‌ಗಳನ್ನು ಲಕ್ನೋ ಪಂದ್ಯಕ್ಕೆ ಬಳಸಲು ಸಾಧ್ಯವಿಲ್ಲ. RCB ತಂಡವು ಈ ಬಗ್ಗೆ ಅಧಿಕೃತವಾಗಿ ಟಿಕೆಟ್‌ಗಳಿಗೆ ಪೂರ್ಣ ರಿಫಂಡ್ ಘೋಷಣೆ ಮಾಡಿದೆ.

ಇನ್ನುಈ ಪಂದ್ಯವು RCB ತಂಡಕ್ಕೆ ಮಹತ್ವಪೂರ್ಣವಾಗಿದೆ, ಯಾಕಂದ್ರೆ ಈ ಮ್ಯಾಚ್‌ನಲ್ಲಿ ಯಾರು ವಿನ್‌ ಆಗ್ತಾರೋ ಅವರು ಟಾಪ್-2 ಸ್ಥಾನವನ್ನು ತಲುಪುತ್ತಾರೆ. ಇದು ನೇರವಾಗಿ ಮೊದಲ ಕ್ವಾಲಿಫೈಯರ್‌ಗೆ ಪ್ರವೇಶ ನೀಡುತ್ತದೆ.

Also Read: Protein Imbalance: ದೇಹದಲ್ಲಿ ಪ್ರೋಟೀನ್‌ ಕೊರತೆ ಇದ್ಯಾ? ಈ ಲಕ್ಷಣಗಳಿಂದ ತಿಳಿದುಕೊಳ್ಳಿ

ಈಗ, RCB ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೇ 27ರಂದು ಮತ್ತೊಂದು ಪಂದ್ಯವನ್ನು ಆಡಲಿದೆ. ಜೂನ್ 3ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ .

ಇನ್ನು ಅಭಿಮಾನಿಗಳು ತಮ್ಮ ಟಿಕೆಟ್‌ಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗಾಗಿ RCB ಅಧಿಕೃತ ವೆಬ್‌ಸೈಟ್ ಅಥವಾ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು.

Share.
Leave A Reply