ಬೆಂಗಳೂರು: ಪತಿ ಹಾಗೂ ಪತ್ನಿ ಮಧೆ ಶುರುವಾದ ಜಗಳ ಕೊಲೆಯಾಗಿರುವ ಘಟನೆ ನಡೆದಿದೆ.
ಹೆಂಡತಿ ಜೊತೆ ಜಗಳ ಮಾಡಿದ ವ್ಯಕ್ತಿ ಗನ್ ತೆಗೆದು ಶೂಟ್ ಮಾಡಿದ್ದಾನೆ. ಸಿಲಿಕಾನ್ ಸಿಟಿಯ ಬಸವೇಶ್ವರ ನಗರದ ಹೋಟೆಲ್ ಹತ್ತಿರ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬಾಲಮುರುಗನ್ ತನ್ನ ಪತ್ನಿ ಮೇಲೆ ಗುಂಡು ಹಾರಿಸಿದ ವ್ಯಕ್ತಿ. ಭುವನೇಶ್ವರಿ ಸಾವನ್ನಪ್ಪಿರುವ ಮಹಿಳೆ. ಇಬ್ಬರೂ ತಮಿಳುನಾಡಿನ ಮೂಲದವರು ಎನ್ನಲಾಗಿದೆ. ಬಾಲಮುರುಗನ್ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ರಿಸೈನ್ ಮಾಡಿದ್ದ ಎನ್ನಲಾಗಿದೆ. ಭುವನೇಶ್ವರಿ ಬ್ಯಾಂಕ್ ಉದ್ಯೋಗಿ. ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಪತಿ-ಪತ್ನಿ ನಡುವೆ ಕೋರ್ಟ್ನಲ್ಲಿ ಡಿವೋರ್ಸ್ ಕೇಸ್ ನಡೆಯುತ್ತಿತ್ತು. ಇಬ್ಬರೂ ಕೋರ್ಟ್ಗೆ ಹಾಜರಾಗಿದ್ದರು. ಕೋರ್ಟ್ ಕೇಸ್ ಮುಗಿಸಿ ಹೊರ ಬಂದಿದ್ದರು. ಆಗ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಅದು ತಾರಕ್ಕೇರಿದೆ. ಆ ವೇಳೆ ಬಾಲ ಮುರುಗನ್ ಪತ್ನಿ ಮೇಲೆ ಗನ್ ತೆಗೆದು ಗುಂಡಿನ ದಾಳಿ ನಡೆಸಿದ್ದಾನೆ. ಕೊಲೆ ಮಾಡಿದ ನಂತರ ಆರೋಪಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
