ತಿರುವನಂತಪುರಂ: ಕಳ್ಳತನದ ಶಂಕೆ ವ್ಯಕ್ತಪಿಡಸಿ ಕಾರ್ಮಿಕನನ್ನು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ವಲಯಾರ್ ಹತ್ತಿರ ಈ ಘಟನೆ ನಡೆದಿದೆ. ಸ್ಥಳೀಯರ ಗುಂಪೊಂದು 31 ವರ್ಷದ ವಲಸೆ ಕಾರ್ಮಿಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಹತ್ಯೆಯಾಗಿರುವ ಕಾರ್ಮಿಕನನ್ನು ಛತ್ತೀಸ್ ಗಢದ ಬಿಲಾಸ್ ಪುರ ಮೂಲದ ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದೆ.

ಹತ್ಯೆಯಾಗಿರುವ ವ್ಯಕ್ತಿ ಕಾಂಜಿಕೋಡ್ನಲ್ಲಿ ವಾಸಿಸುತ್ತಿದ್ದ. ಕೂಡಲೇ ಕಾರ್ಮಿಕನನ್ನು ಪಾಲಕ್ಕಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಎಫ್ ಐಆರ್ ದಾಖಲಾಗಿದ್ದು,, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಭಯಾರ್ ನಾಲ್ಕು ದಿನಗಳ ಹಿಂದೆ ಕೆಲಸ ಹುಡುಕಿಕೊಂಡು ಕೇರಳಕ್ಕೆ ಬಂದಿದ್ದ. ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಮರಳಿ ಹೋಗಲು ಮುಂದಾಗಿದ್ದ. ಆತ ತಾನು ಬಂದಿದ್ದ ಸ್ಥಳಕ್ಕೆ ಹೊಸಬನಾಗಿದ್ದರಿಂದಾಗಿ ಸರಿಯಾಗಿ ದಾರಿಗೊತ್ತಿರಲಿಲ್ಲ. ಆತನ ವಿರುದ್ಧ ಆತ ಭೇಟಿ ನೀಡಿದ್ದ ಪ್ರದೇಶಕ್ಕೆ ಹೊಸಬ. ಸ್ಥಳಗಳ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ದಾರಿ ತಪ್ಪಿದ್ದ. ಆತನಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಸ್ಥಳೀಯರ ಆ ಗುಂಪು ತೀವ್ರವಾಗಿ ಹಲ್ಲೆ ಮಾಡಿದೆ ಪರಿಣಾಮ ಭಯಾರ್ ನ ಕಾಲಿನಿಂದ ತಲೆಯವರೆಗೆ ಸುಮಾರು 80 ಗಾಯಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆಂದು ವರದಿಯಾಗಿದೆ.

ಹಲ್ಲೆ ನಡೆದ ಸಂದರ್ಭದಲ್ಲಿ ಭಯಾರ್ ಪಾನಮತ್ತನಾಗಿದ್ದ. ಆದರೆ, ಯಾವುದೇ ಕಳ್ಳತನ ಮಾಡಿರಲಿಲ್ಲ ಎಂದು ವರದಿ ಹೇಳಿದೆ. ಹಲ್ಲೆಯ ನಂತರ ಭಯಾರ್ ರಕ್ತವಾಂತಿ ಮಾಡಿಕೊಂಡಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು ಎನ್ನಲಾಗಿದೆ.

Share.
Leave A Reply