ದೇಶದಲ್ಲಿ ಕೊವಿಡ್‌ ಮಹಾಮಾರಿ ಹೆಚ್ಚಾಗುತ್ತಿದೆ. ಕೋವಿಡ್‌ ಸೋಂಕಿನ ಪ್ರಕರಣ ದಿನೇ ದಿನೇ ಏರಿಕೆಯಾಗುತ್ತಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,750ಕ್ಕೆ ಹೆಚ್ಚಾಗಿದ್ದು, 24 ಗಂಟೆಗಳಲ್ಲಿ ನಾಲ್ಕು ಸಾವುಗಳ ಮೂಲಕ ಆತಂಕ ಸೃಷ್ಟಿಯಾಗಿದೆ.

ಈ ಬೆನ್ನಲ್ಲೇ ರಾಜ್ಯದಲ್ಲೂ ಸದ್ಯ ಕೊರೊನಾ(Corona) ಆತಂಕ ಸೃಷ್ಟಿಯಾಗಿದೆ. ಕಳೆದ 24 ಗಂಟೆಯಲ್ಲಿ 61 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 955ಕ್ಕೆ ಏರಿಕೆಯಾಗಿದೆ ಅಂತಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಭಾನುವಾರದಂದು ರಾಜ್ಯದಲ್ಲಿ ಒಟ್ಟು 325 ಜನರನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 61 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು 423 ಸಕ್ರಿಯ ಪ್ರಕರಣಗಳಿವೆ. 416 ಮಂದಿ ಮನೆ ಆರೈಕೆಯಲ್ಲಿದ್ದು, 7 ಮಂದಿ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇದುವರೆಗೆ 9 ಜನ ಮೃತಪಟ್ಟಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ..

ದೈನಂದಿನ ಸೋಂಕಿನಲ್ಲಿ 391 ಮಂದಿ ಉಪತಳಿಯಿಂದ ಬಾಧಿತರಾಗಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆ ಇಂದು ಬೆಳಗ್ಗೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಕಳೆದ ಜನವರಿಯಿಂದ ಈವರೆಗೂ ಕೋವಿಡ್‌ನಿಂದಾಗಿ ಒಟ್ಟು 59 ಜೀವಹಾನಿಯಾಗಿದೆ. ದಿನದ 24 ಗಂಟೆಯಲ್ಲಿ ನಾಲ್ಕು ಮಂದಿಯ ಸಾವು ಎಚ್ಚರಿಕೆಯ ಘಂಟೆಯಾಗಿದೆ.

Share.
Leave A Reply