ಗುಜರಾತ್​​ನ ಅಹ್ಮದಾಬಾದ್​​ನಿಂದ ಬೆಂಗಳೂರಿನ ಹೆಚ್​ಎಎಲ್​ಗೆ ಬಂದಿಳಿದ ಆರ್​ಸಿಬಿ ಆಟಗಾರರನ್ನು ಸರ್ಕಾರದ ಪರವಾಗಿ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಸ್ವಾಗತಿಸಿದರು.

ಇಂಡಿಯನ್ ಪ್ರೀಮಿಯರ್ ಲೀಗ್ 2025ರ (IPL 2025) ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳ ಅಂತರದಲ್ಲಿ ಬಗ್ಗುಬಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ಯ ಬೆಂಗಳೂರಿಗೆ (Bangalore) ಆಗಮಿಸಿದೆ.

ಅಹಮದಾಬಾದ್‌ನಿಂದ ನೇರವಾಗಿ ಹೆಚ್‌ಎಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಜತ್ ಪಾಟಿದಾರ್ (Rajat Patidar) ನೇತೃತ್ವದ ಆರ್‌ಸಿಬಿ (RCB) ತಂಡವನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಸ್ವಾಗತಿಸಿದರು. ಅಲ್ಲಿಂದ ನೇರವಾಗಿ ಆಟಗಾರರಿಗಾಗಿ ಸಿದ್ಧಪಡಿಸಿದ್ದ ವಿಶೇಷ ಬಸ್ ಮೂಲಕ ತಾಜ್ ವೆಸ್ಟ್ ಎಂಡ್ ಹೋಟೆಲ್‌ನತ್ತ ಆಟಗಾರರು ತೆರಳಿದ್ದಾರೆ..

ಕನಕಪುರದಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಬಂದ ಡಿಸಿಎಂ ಡಿಕೆಶಿ ಆರ್‌ಸಿಬಿ ತಂಡದ ಆಟಗಾರರನ್ನು ಸ್ವಾಗತಿಸಲು ಸೇರಿದ್ದ ಸಾವಿರಾರು ಅಭಿಮಾನಿಗಳತ್ತ ಕೈಬೀಸಿ ಮುಂದೆ ಹೋದರು.

Share.
Leave A Reply