IPL 2025 ಪ್ಲೇ ಆಪ್ ರೇಸ್ ಮುಗಿದಿದ್ದು ಇನ್ನೇನಿದ್ದರೂ ಟಾಪ್​-2 ಸ್ಥಾನ ತಲುಪಲು ತಂಡಗಳ ನಡುವೆ ಬಿಗ್ ಫೈಟ್ ನಡೆದಿದೆ. ಲಕ್ನೋ ವಿರುದ್ಧ ಗುಜರಾತ್ ಟೈಟನ್ಸ್​ ಸೋಲು ಕಂಡಿದ್ದರಿಂದ ಈಗ ರಾಯಲ್ ಚಾಲೆಂಜರ್ಸ್​ ಬೆಂಗಳೂರಿಗೆ(RCB) ಸುವರ್ಣಾವಕಾಶ ಇದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರೆ ಹೀಗೆ ಮಾಡಲೇಬೇಕು.

ಗುಜರಾತ್ ಟೈಟನ್ಸ್​, ಲಕ್ನೋ ತಂಡದ ವಿರುದ್ಧ ಸೋಲುಂಡಿದ್ದರಿಂದ 18 ಅಂಕಗಳಲ್ಲೇ ಇದ್ದು ಈ ತಂಡಕ್ಕೆ ಕೇವಲ ಇನ್ನೊಂದು ಪಂದ್ಯ ಮಾತ್ರ ಬಾಕಿ ಇದೆ. ಒಂದು ವೇಳೆ ಗುಜರಾತ್ ಇನ್ನೊಂದು ಪಂದ್ಯ ಗೆದ್ದರೇ 20 ಅಂಕಗಳನ್ನು ಪಡೆಯಲಿದೆ. ಹೀಗಾಗಿ RCB ತಂಡ ಕೂಡ ಸದ್ಯ 17 ಅಂಕ ಪಡೆದಿದ್ದರಿಂದ ಇಂದಿನ ಪಂದ್ಯ ಸೇರಿ ಇನ್ನು ಎರಡು ಪಂದ್ಯಗಳು ಇವೆ. ಈ ಎರಡರಲ್ಲೂ ಗೆಲುವು ಪಡೆದರೆ 21 ಪಾಯಿಂಟ್​ಗಳಿಂದ ಅಗ್ರಸ್ಥಾನ ಪಡೆಯಬಹುದು. ಪಂಜಾಬ್​ ಎರಡು ಪಂದ್ಯ ಗೆದ್ದರೂ ರನ್​​ರೇಟ್​ನಿಂದ ಆರ್​ಸಿಬಿಯ ಹಿಂದಿನ ಸ್ಥಾನ ಪಡೆಯುತ್ತದೆ.

ಈ ಎರಡು ಪಂದ್ಯಗಳಲ್ಲಿ ಆರ್​ಸಿಬಿ ಗೆಲುವು ಸಾಧಿಸಿದರೆ 21 ಅಂಕಗಳಿಂದ ಐಪಿಎಲ್​ನ ಪಾಯಿಂಟ್ ಟೇಬಲ್​ನ ಟಾಪ್​-2 ಸ್ಥಾನದಲ್ಲಿ ದಕ್ಕುತ್ತದೆ. ಇದರಿಂದ ನೇರ ಫೈನಲ್​ಗೆ ಹೋಗುವ ಅವಕಾಶ ಇರುತ್ತದೆ. ಇದರಿಂದ ಹೈದ್ರಾಬಾದ್ ವಿರುದ್ಧ ಇಂದು ನಡೆಯುವ ಪಂದ್ಯದಲ್ಲಿ ಆರ್​ಸಿಬಿ ವಿಜಯ ಸಾಧಿಸಲೇಬೇಕು. ಜೊತೆಗೆ ಮುಂದಿನ ಪಂದ್ಯವನ್ನು ಕೂಡ ಗೆದ್ದುಕೊಂಡರೇ ಆರ್​ಸಿಬಿಗೆ ದೊಡ್ಡ ಅದೃಷ್ಟ ಒಲಿದು ಬರಲಿದೆ.

Also Read: Madenur Manu ಬಗ್ಗೆ ಭಯಾನಕ ಸತ್ಯ ಬಿಚ್ಚಿಟ್ಟ ಸಂತ್ರಸ್ತೆ!

ಪಂಜಾಬ್​ ಕಿಂಗ್ಸ್​ ಕೂಡ 17 ಅಂಕ ಪಡೆದಿದ್ದು ಆ ತಂಡಕ್ಕೂ 2 ಪಂದ್ಯಗಳು ಬಾಕಿ ಇವೆ. ಆದರೆ ರನ್​ ರೇಟ್​ ಅನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಪಂಜಾಬ್​ ಕಿಂಗ್ಸ್​ಗಿಂತಲೂ ಆರ್​ಸಿಬಿ ಉತ್ತಮ ರನ್​ ರೇಟ್​ ಹೊಂದಿದೆ. ಮುಂದಿನ ಎರಡು ಮ್ಯಾಚ್​ಗಳಲ್ಲಿ ಇದನ್ನೇ ಮುಂದುವರೆಸಿಕೊಂಡು ಹೋದರೆ ಟಾಪ್​-2 ಏನು, ಅಗ್ರಸ್ಥಾನವೇ ಆರ್​ಸಿಬಿ ಪಾಲಾಗುವುದರಲ್ಲಿ ಯಾವುದೇ ಸಂಶಯ ಬೇಡ. ​

ಒಂದು ವೇಳೆ ಆರ್​ಸಿಬಿ ಒಂದು ಪಂದ್ಯವನ್ನು ಗೆದ್ದು ಇನ್ನೊಂದು ಪಂದ್ಯದಲ್ಲಿ ಸೋತರೆ ಒಟ್ಟು 19 ಪಾಯಿಂಟ್​ ಪಡೆಯುತ್ತದೆ. ಗುಜರಾತ್ ಮುಂದಿನ ಪಂದ್ಯ ಗೆಲುವು ಸಾಧಿಸಿದರೆ 20 ಅಂಕ ಪಡೆಯುತ್ತದೆ. ಪಂಜಾಬ್​ ಕೂಡ ಎರಡರಲ್ಲೂ ಗೆಲುವು ಪಡೆದರೆ 21 ಅಂಕ ಪಡೆಯುತ್ತದೆ. ಆಗ ಆರ್​ಸಿಬಿ ಫೈನಲ್​ಗೆ ಹೋಗುವುದು ಭಾರೀ ಕಷ್ಟವಾಗುತ್ತದೆ. ಈ ಹಂತದಲ್ಲಿ ಒಂದು ಮ್ಯಾಚ್​ನಲ್ಲಿ ಎಡವಿದರೂ ಆರ್​ಸಿಬಿಯ ಟ್ರೋಫಿ ಕನಸು ನುಚ್ಚು ನೂರಾಗಲಿದೆ.

Share.
Leave A Reply