ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿ ಘೋಷಿಸಿದ ನಂತರ, ನಾಯಕತ್ವ ಸ್ಥಾನ ಯಾರಿಗೆ ಎನ್ನುವ ಕುತೂಹಲಕ್ಕೆ ಸದ್ಯ ತರೆಬಿದ್ದಿದೆ.. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI ) ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಮಹತ್ವದ ಸರಣಿಗೆ ಭಾರತ ತಂಡ(Team India Test Squad)ವನ್ನು ಅಧಿಕೃತವಾಗಿ ಪ್ರಕಟಿಸಿದೆ. ಟೆಸ್ಟ್ ಕ್ರಿಕೆಟ್‌ನ 37ನೇ ನಾಯಕನ ಸ್ಥಾನವನ್ನು ಶುಭಮನ್‌ ಗಿಲ್ ತಂಡವನ್ನ ಮುನ್ನಡೆಸಲಿದ್ದಾರೆ. ಉಪನಾಯಕನಾಗಿ‌ ರಿಷಬ್‌ ಪಂತ್ ಆಯ್ಕೆ ಆಗಿದ್ದಾರೆ.

ರೋಹಿತ್ ಶರ್ಮಾ ನಿವೃತ್ತಿ ಬಳಿಕ ಭಾರತ ತಂಡದ ನಾಯಕತ್ವ ಜಸ್ಪ್ರೀತ್ ಬುಮ್ರಾಗೆ ಸಿಗಲಿದೆ ಎನ್ನಲಾಗಿತ್ತು. ಆದರೆ ಭವಿಷ್ಯದ ದೃಷ್ಟಿಯಿಂದ ಆಯ್ಕೆ ಸಮಿತಿ ಗಿಲ್‌ಗೆ ಕ್ಯಾಪ್ಟನ್ ಪಟ್ಟ ನೀಡಿದೆ. ಶುಭಮನ್‌ ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ‌ 32 ಪಂದ್ಯಗಳನ್ನು ಆಡಿದ್ದು, ಐದು ಶತಕ ಸೇರಿ ಈವರೆಗೆ 1,893 ರನ್‌ ಗಳಿಸಿದ್ದಾರೆ.

ಶುಭಮನ್ ಗಿಲ್ – ನೂತನ ನಾಯಕ

ಗಿಲ್‌ ನೇತೃತ್ವದಲ್ಲಿ ಭಾರತ ತಂಡ ಇಂಗ್ಲೆಂಡ್‌ನ ಭಾರೀ ಸವಾಲುಗಳನ್ನು ಎದುರಿಸಲು ಸಜ್ಜಾಗಿದೆ. 32 ಟೆಸ್ಟ್ ಪಂದ್ಯಗಳಲ್ಲಿ 1,893 ರನ್ ಗಳಿಸಿರುವ ಗಿಲ್, ಐದು ಶತಕಗಳನ್ನು ಸಿಡಿಸಿದ್ದಾರೆ. ಭವಿಷ್ಯದ ನಾಯಕನಾಗಿ ಅವರ ಆಯ್ಕೆ ಬಿಸಿಸಿಐಗೆ ಮುಂದಾಳತ್ವದ ದೃಷ್ಟಿಯಿಂದ ಮಹತ್ವದ್ದಾಗಿದೆ. ಗಿಲ್ ಜೊತೆಗೆ ಉಪನಾಯಕನ ಸ್ಥಾನಕ್ಕೆ ರಿಷಭ್ ಪಂತ್ ಆಯ್ಕೆಯಾಗಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಗಳ ವಿವರ

ಈ ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಜೂನ್ 20ರಿಂದ 24ರವರೆಗೆ ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯಲಿದೆ. ಇತರ ಪಂದ್ಯಗಳು ಕ್ರಮವಾಗಿ ಬರ್ಮಿಂಗ್ಹ್ಯಾಮ್, ಲಾರ್ಡ್ಸ್, ಮ್ಯಾಂಚೆಸ್ಟರ್ ಮತ್ತು ದಿ ಓವಲ್‌ನಲ್ಲಿ ನಡೆಯಲಿವೆ. ಇಂಗ್ಲೆಂಡ್‌ನ ಹವಾಮಾನ ಮತ್ತು ಪಿಚ್ ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಆಟಗಾರರನ್ನು ಈಗಿನಿಂದಲೇ ಅಲ್ಲಿ ಹೊಂದಿಕೊಳ್ಳಲು ಅವಕಾಶ ನೀಡಲಾಗಿದೆ.

Also Read: RCB ವಿರುದ್ಧ ಗೆದ್ದು ಬೀಗಿದ ಸನ್‌ರೈಸರ್ಸ್‌ ಹೈದರಾಬಾದ್‌.. ಸೋಲಿಗೆ ಇದೇ ಕಾರಣನಾ?

ಭಾರತ ತಂಡದ ಪಟ್ಟಿ:

  • ನಾಯಕ: ಶುಭಮನ್ ಗಿಲ್
  • ಉಪನಾಯಕ: ರಿಷಭ್ ಪಂತ್
  • ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ ಜುರೆಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್
Share.
Leave A Reply