Team India: ಅದೊಂದು ಕಾಲವಿತ್ತು… ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ, ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌, ಜಹೀರ್‌ ಖಾನ್‌, ವೀರೇಂದ್ರ ಸೆಹ್ವಾಗ್‌, ಗೌತಮ್‌ ಗಂಭೀರ್‌, ಹರ್ಭಜನ್‌ ಸಿಂಗ್‌ ಮುಂತಾದ ಆಟಗಾರರು ಟೆಸ್ಟ್‌ ಹಾಗೂ ಏಕದಿನ ಫಾರ್ಮ್ಯಾಟ್‌ನಲ್ಲಿ ಟೀಮ್‌ ಇಂಡಿಯಾವನ್ನು ಏಕ ಕಾಲದಲ್ಲಿ ಪ್ರತಿನಿಧಿಸ್ತಾ ಇದ್ರು.

ಆಮೇಲೂ, ಮಹೇಂದ್ರ ಸಿಂಗ್‌ ಧೋನಿ, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಯುವರಾಜ್‌ ಸಿಂಗ್‌, ರವೀಂದ್ರ ಜಡೇಜಾ, ಆರ್‌. ಅಶ್ವಿನ್‌, ಜಸ್ಪ್ರೀತ್‌ ಬುಮ್ರಾ ಇವರೆಲ್ಲ ಟೆಸ್ಟ್‌, ವನ್‌ಡೇ ಮಾತ್ರವಲ್ಲದೆ ಟಿ20ಯಲ್ಲೂ ಟೀಮ್‌ ಇಂಡಿಯಾದ ಕಾಯಂ ಆಟಗಾರರಾಗಿದ್ರು. ಗಂಗೂಲಿ, ಧೋನಿ, ಕೊಹ್ಲಿ, ರೋಹಿತ್‌ ಅಂತೂ ಒಂದೇ ಅವಧಿಯಲ್ಲಿ ಎಲ್ಲಾ ಫರ್ಮ್ಯಾಟ್‌ಗಳಲ್ಲೂ ತಂಡದ ನಾಯಕರಾಗಿದ್ರು. ಆದ್ರೀಗ ಕಾಲ ಬದಲಾಗಿದೆ. ಟೀಮ್‌ ಇಂಡಿಯಾದ ಮೂರೂ ಫಾರ್ಮ್ಯಾಟ್‌ಗೆ ಮೂವರು ಭಿನ್ನ ಕ್ಯಾಪ್ಟನ್‌ಗಳಿದ್ದಾರೆ.

ರೆಡ್‌ ಬಾಲ್‌ ಹಾಗೂ ವೈಟ್‌ಬಾಲ್‌ಗೆ ಭಿನ್ನ ತಂಡಗಳನ್ನು ಆಯ್ಕೆ ಮಾಡೋ ಪದ್ಧತಿ ಅಸ್ಟ್ರೇಲಿಯಾ, ಇಂಗ್ಲೆಂಡ್‌ ಸೇರಿ ಹಲವು ರಾಷ್ಟ್ರಗಳಲ್ಲಿ ಬಹಳ ಬೇಗ ಅರಂಭ ಆಗಿತ್ತು. ಆದ್ರೆ ಟೀಮ್‌ ಇಂಡಿಯಾ ಮಾತ್ರ ಇದಕ್ಕೆ ಭಿನ್ನವಾಗಿತ್ತು. ಟಿ20 ನಾಯಕತ್ವದಿಂದ ಇಳಿಸಿದ್ರು ಅಂತ ವಿರಾಟ್‌ ಕೊಹ್ಲಿ ಟೆಸ್ಟ್‌ ನಾಯಕತ್ವ ತೊರೆದ್ರೆ, ಏಕದಿನ ಕ್ಯಾಪ್ಟೆನ್ಸಿಯಿಂದಲೂ ಕೊಕ್‌ ಕೊಡಲಾಗಿತ್ತು.

ಅಲ್ಲಿಂದ ಕಳೆದ ಟಿ20 ವರ್ಲ್ಡ್‌ ಕಪ್‌ ವರೆಗೆ ಮೂರೂ ಫಾರ್ಮ್ಯಾಟ್‌ನಲ್ಲಿ ರೋಹಿತ್‌ ಶರ್ಮಾರದ್ದೇ ರಾಜ್ಯಭಾರ. ಇದೀಗ ಚಿತ್ರಣ ಸಂಪೂರ್ಣ ಬದಲಾಗಿದೆ. ಸೂರ್ಯಕುಮಾರ್‌ ಯಾದವ್‌ ಟಿ20 ಕ್ಯಾಪ್ಟನ್‌ ಆಗಿದ್ರೆ, ರೋಹಿತ್‌ ಶರ್ಮಾ ಸದ್ಯದ ಮಟ್ಟಿಗಷ್ಟೇ ವನ್‌ಡೇ ಫಾರ್ಮ್ಯಾಟ್‌ನ ನಾಯಕರಾಗಿದ್ದಾರೆ. ಇದೀಗ ಟೆಸ್ಟ್‌ನಲ್ಲಿ ಶುಭ್‌ಮನ್‌ ಗಿಲ್‌ಗೆ ನಾಯಕತ್ವ ಒಲಿದು ಬಂದಿರೋದು ಹಳೆ ಹುಲಿಗಳ ಯುಗಾಂತ್ಯಕ್ಕೆ ಸಾಕ್ಷಿಯಾಗಿದೆ.

Team India Test Squad

ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಆಯ್ಕೆಯಾಗಿರೋ 18 ಆಟಗಾರರ ಪೈಕಿ ಬಹುತೇಕರು ಯಂಗ್‌ಸ್ಟರ್ಸ್‌. ಸದ್ಯ ಮೂರೂ ಪ್ರಕಾರಗಳಲ್ಲಿ ಟೀಮ್‌ ಇಂಡಿಯಾಗೆ ಆಡ್ತಿರೋ ಪ್ಲೇಯರ್ಸ್‌ ಎಷ್ಟು ಗೊತ್ತಾ? ಕೇವಲ ನಾಲ್ಕು! ಅವರೆಂದ್ರೆ- ಶುಭ್‌ಮನ್‌ ಗಿಲ್‌, ಜಸ್ಪ್ರೀತ್‌ ಬುಮ್ರಾ, ವಾಷಿಂಗ್ಟನ್‌ ಸುಂದರ್‌ ಹಾಗೂ ಅರ್ಶ್‌ದೀಪ್‌ ಸಿಂಗ್‌. ರೋಹಿತ್‌, ವಿರಾಟ್‌ರಂತ ಹಿರಿಯರು ವನ್‌ಡೇಗೇ ಮಾತ್ರ ಸೀಮಿತ.

Also Read: IPL 2025 : ಆರ್‌ಸಿಬಿ ಆಪತ್ಭಾಂದವ ಪ್ಲೇಆಫ್‌ ಆಡೋದು ಡೌಟ್‌!

ರವೀಂದ್ರ ಜಡೇಜಾ, ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌, ಕುಲ್ದೀಪ್‌ ಯಾದವ್‌ರಂತ ಹಿರಿಯರು ಟೆಸ್ಟ್‌ ಹಾಗೂ ವನ್‌ಡೇ ತಂಡದಲ್ಲಿದ್ದು, ಟಿ20ಗೆ ಪರಿಗಣಿಸಿಲ್ಲ. ಯಶಸ್ವಿ ಜೈಸ್ವಾಲ್‌, ನಿತೀಶ್‌ ಕುಮಾರ್‌ ರೆಡ್ಡಿಯಂತವರು ಟೆಸ್ಟ್‌ನಲ್ಲಿ ಸ್ಥಾನ ಪಡೆದ್ರೂ ಏಕದಿನ ತಂಡದಲ್ಲಿ ಅವಕಾಶವಿಲ್ಲ. ಹಾರ್ದಿಕ್‌ ಪಾಂಡ್ಯ, ಶ್ರೇಯಸ್‌ ಅಯ್ಯರ್‌, ಅಕ್ಷರ್‌ ಪಟೇಲ್‌ ಸದ್ಯ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿಲ್ಲ.

ಇದೀಗ ಶುಭ್‌ಮನ್‌ ಗಿಲ್‌ಗೆ ಟೆಸ್ಟ್‌ ಕ್ಯಾಪ್ಟನ್ಸಿ ನೀಡಿ ಏಕದಿನದಲ್ಲಿ ಉಪನಾಯಕನ ಜವಾಬ್ದಾರಿ ಕೊಡಲಾಗಿದೆ. ಆ ಮೂಲಕ ಭಾರತ ತಂಡದ ಭವಿಷ್ಯದ ಸೂಪರ್‌ಸ್ಟಾರ್‌ ಆಗಿ ಇವರನ್ನ ರೂಪಿಸ್ತಿರೋದು ಖಚಿತವಾಗಿದೆ. ರೋಹಿತ್‌ ನಿವೃತ್ತಿ ನಂತರ ಏಕದಿನದಲ್ಲಿ ಹಾಗೂ ಮುಂದಿನ ವರ್ಷ ನಡೆಯೋ ಟಿ20 ವಿಶ್ವಕಪ್‌ ಬಳಿಕ ಈ ಫಾರ್ಮ್ಯಾಟ್‌ಗೂ ಗಿಲ್‌ ಕ್ಯಾಪ್ಟನ್‌ ಆದ್ರೆ ಅಚ್ಚರಿಯಿಲ್ಲ.

Share.
Leave A Reply