IPL 2025: ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿವೆ. ಆದರೆ, ಪ್ಲೇಆಫ್‌ಗೆ ಸಿದ್ಧವಾಗುತ್ತಿರುವ ಆರ್‌ಸಿಬಿಗೆ ಈಗ ದೊಡ್ಡ ತಲೆನೋವು ಶುರುವಾಗಿದೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ತಂಡದ ಸ್ಟಾರ್ ಆಟಗಾರನೊಬ್ಬ ಗಾಯಗೊಂಡಿದ್ದು, ಪ್ಲೇಆಫ್ ವೇಳೆಗೆ ಅವರು ಚೇತರಿಸಿಕೊಳ್ಳದಿದ್ದರೆ ಆರ್‌ಸಿಬಿಗೆ ಭಾರಿ ಹಿನ್ನಡೆಯಾಗೋದು ಪಕ್ಕಾ ಎನ್ನಲಾಗ್ತಿದೆ.
ಆರ್‌ಸಿಬಿಗೆ ಆಪತ್ಭಾಂದವ ಆಗಿದ್ದ ಟಿಮ್ ಡೇವಿಡ್‌ಗೆ ಗಾಯಗೊಂಡಿದ್ದಾರೆ,ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಮಾಡುವಾಗ, ಬೌಂಡರಿ ಗೆರೆಯ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಟಿಮ್ ಡೇವಿಡ್ ಗಾಯಗೊಂಡರು. ಓಡಿ ಹೋಗಿ ಚೆಂಡು ಹಿಡಿಯುವಾಗ ಅವರ ತೊಡೆಯ ಸ್ನಾಯುಗಳು ಬಿಗಿಯಾದವು.ನೋವು ತಡೆಯಲಾರದೆ ತಕ್ಷಣವೇ ಮೈದಾನದಿಂದ ಹೊರನಡೆದರು. ನಂತರ ಅವರು ಕೊನೆಯಲ್ಲಿ ಬ್ಯಾಟಿಂಗ್ ಮಾಡಲು ಬಂದರೂ, ಗಾಯದಿಂದಾಗಿ ಸರಿಯಾಗಿ ಓಡಲು ಸಾಧ್ಯವಾಗಲಿಲ್ಲ. ಇದೇ ಈಗ ಆರ್‌ಸಿಬಿ ಅಭಿಮಾನಿಗಳ ನಿದ್ದೆ ಕೆಡಿಸಿದೆ.

ಈ ಸೀಸನ್‌ನಲ್ಲಿ ಟಿಮ್ ಡೇವಿಡ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಕೊನೆಯಲ್ಲಿ ಬೃಹತ್ ಹೊಡೆತಗಳನ್ನು ಸಿಡಿಸಿ, ತಂಡಕ್ಕೆ ಸೂಪರ್ ಫಿನಿಶಿಂಗ್ ಟಚ್ ಕೊಡುತ್ತಿದ್ದಾರೆ. ಗೆಲ್ಲಲು ಬೇಕಾದ ರನ್‌ಗಳನ್ನು ಸುಲಭವಾಗಿ ಹೊಡೆಯುವ ಸಾಮರ್ಥ್ಯ ಅವರಲ್ಲಿದೆ.
Also Read: India Test Squad : ಇಂಗ್ಲೆಂಡ್ ಟೆಸ್ಟ್ ಸರಣಿ, ಮೂವರು ಕನ್ನಡಿಗರಿಗೆ ಸಿಕ್ತು ಚಾನ್ಸ್!
ಈಗ ಪ್ಲೇಆಫ್‌ಗೂ ಮುನ್ನ ಟಿಮ್ ಡೇವಿಡ್ ಗಾಯಗೊಂಡಿರುವುದು ತಂಡದ ಬ್ಯಾಟಿಂಗ್ ಲೈನ್‌ಅಪ್‌ಗೆ ದೊಡ್ಡ ಹೊಡೆತ ಬಿಳಲ್ಲಿದೆ.ಪ್ಲೇಆಫ್‌ಗೆ ಟಿಮ್ ಡೇವಿಡ್ ಲಭ್ಯವಿಲ್ಲದಿದ್ದರೆ? ಒಂದು ವೇಳೆ ಪ್ಲೇಆಫ್ ವೇಳೆಗೆ ಟಿಮ್ ಡೇವಿಡ್ ಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೆ, ಆರ್‌ಸಿಬಿ ತಂಡ ಗಂಭೀರ ನಷ್ಟ ಅನುಭವಿಸುವುದು ಖಚಿತ.
ಈಗಾಗಲೇ ತಂಡದಲ್ಲಿ ಕೆಲವು ಸಮಸ್ಯೆಗಳಿರುವಾಗ, ಟಿಮ್ ಡೇವಿಡ್ ಗಾಯ ಮತ್ತಷ್ಟು ಕಷ್ಟ ತಂದೊಡ್ಡ ಬಹುದು.ಇದರ ಜೊತೆಗೆ, ಇನ್ನೊಂದು ದೊಡ್ಡ ತಲೆನೋವು ಆರ್‌ಸಿಬಿಗೆ ಕಾದಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಕಾರಣ, ಇಂಗ್ಲೆಂಡ್ ಆಟಗಾರರು ತಮ್ಮ ಮನೆಗೆ ಮರಳಲಿದ್ದಾರೆ.
ಇದರಿಂದ ಆರ್‌ಸಿಬಿ ತಂಡ ಇನ್ನಷ್ಟು ದುರ್ಬಲಗೊಳ್ಳುವ ಸಾಧ್ಯತೆಯಿದೆ. ಈಗ ಬಲಿಷ್ಠವಾಗಿ ಕಾಣುತ್ತಿರುವ ಆರ್‌ಸಿಬಿ, ಪ್ಲೇಆಫ್ (IPL 2025)ಬರುವ ಹೊತ್ತಿಗೆ ಪ್ರಮುಖ ಆಟಗಾರರಿಲ್ಲದೆ ಸೊರಗಬಹುದು ಎಂಬ ಆತಂಕ ಅಭಿಮಾನಿಗಳಲ್ಲಿ ಮನೆ ಮಾಡಿದೆ.
