ಐಪಿಎಲ್‌ ಹಣಾಹಣಿಯ ನಡುವೆ ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ(Team India) ನೂತನ ನಾಯಕ ಯಾರು ಎಂಬ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಮುಂಬರುವ ಇಂಗ್ಲೆಂಡ್‌ ಸರಣಿಯಿಂದ ಟೆಸ್ಟ್‌ ತಂಡದ ನಾಯಕನಾಗಿ ಶುಭಮನ್‌ ಗಿಲ್‌ರನ್ನ ಆಯ್ಕೆ ಮಾಡಲಾಗಿದೆ. ಆಯ್ಕೆಯಾಗಿರುವ ಪ್ರಿನ್ಸ್‌ ಶುಭಮನ್‌ ಗಿಲ್‌ ತಮ್ಮ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಕಂಡ ಹಲವಾ ರು ಏಳುಬೀಳುಗಳನ್ನ ಮೆಟ್ಟಿ ನಿಂತು ಸದ್ಯ ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಪ್ರಿನ್ಸ್ ಶುಭಮನ್ ಗಿಲ್ 8 ಸೆಪ್ಟೆಂಬರ್ 1999 ರಂದು ಪಂಜಾಬ್‌ನ ಫಾಜಿಲ್ಕಾದಲ್ಲಿ ಜನಿಸಿದರು. ಅವರ ತಂದೆ ಲಖ್ವಿಂದರ್ ಸಿಂಗ್ ಗಿಲ್ ಕೃಷಿಕರು ಮತ್ತು ತಾಯಿ ಕಿರಾತ್ ಗಿಲ್ ಗೃಹಿಣಿ. ಅವರ ಸಹೋದರಿ ಶಹನೀಲ್ ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಶುಭಮನ್ ಗಿಲ್ ಚಿಕ್ಕ ವಯಸ್ಸಿನಲ್ಲೇ ಟೀಂ ಇಂಡಿಯಾದಲ್ಲಿ ಸ್ಥಾನ ಗಳಿಸುವುದರೊಂದಿಗೆ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.

ಶುಬ್ಮನ್ ಗಿಲ್ ಟಿವಿಯಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನು ನೋಡುತ್ತಾ ಬೆಳೆದರು, ಇದು ಅವರಲ್ಲಿ ಕ್ರಿಕೆಟಿಗನಾಗುವ ಬಯಕೆಯನ್ನು ಹುಟ್ಟುಹಾಕಿತು. ಶುಬ್ಮಾನ್ ಅವರ ತಂದೆ ಕೂಡ ಕ್ರಿಕೆಟಿಗನಾಗಲು ಬಯಸಿದ್ದರು ಆದರೆ ಅವರ ಕನಸನ್ನು ನನಸಾಗಿಸಲು ಸಾಧ್ಯವಾಗಲಿಲ್ಲವಂತೆ. ಬಾಲ್ಯದಲ್ಲಿ ತಂದೆಯ ಕೃಷಿ ಜಮೀನಿನಲ್ಲೇ ಅಭ್ಯಾಸ ನಡೆಸುತ್ತಿದ್ದರಂತೆ. ಒಂದು ಕಡೆ ತಂದೆ-ತಾಯಿ ಕೃಷಿ ಕೆಲಸದಲ್ಲಿ ತಲ್ಲೀನರಾಗಿದ್ದರೆ, ತನ್ನ ಅಕ್ಕನ ಜತೆ ಗಿಲ್‌ ಅದೇ ಜಮೀನಿನಲ್ಲಿ ಕ್ರಿಕೆಟ್‌ ಆಟ ಆಡ್ತಿದ್ದರಂತೆ.

ಕ್ರಿಕೆಟ್‌ನತ್ತ ಒಲವು ಕಂಡ ಪೋಷಕರು ಅವರನ್ನು ಫಾಜಿಲ್ಕಾದಿಂದ ಮೊಹಾಲಿಗೆ ಕರೆದೊಯ್ದರು. ಅಲ್ಲಿ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಐಎಸ್ ಬಿಂದ್ರಾ ಸ್ಟೇಡಿಯಂ ಬಳಿ ಬಾಡಿಗೆಗೆ ಮನೆ ತೆಗೆದುಕೊಂಡಿದ್ದರು. ಶುಭಮನ್ ಗಿಲ್ ತಮ್ಮ ಆರಂಭಿಕ ಶಿಕ್ಷಣವನ್ನು ಪಂಜಾಬ್‌ನ ಮೊಹಾಲಿಯ ಮಾನವ್ ಮಂಗಲ್ ಸ್ಮಾರ್ಟ್ ಸ್ಕೂಲ್‌ನಲ್ಲಿ ಮಾಡಿದರು. 3ನೇ ವಯಸ್ಸಿನಿಂದ ಕ್ರಿಕೆಟ್ ಆಡಲು ಆರಂಭಿಸಿದ ಶುಭ್‌ಮನ್, 8ನೇ ವಯಸ್ಸಿನಿಂದಲೇ ಕ್ರಿಕೆಟ್‌ನ ವೃತ್ತಿಪರ ತರಬೇತಿ ಪಡೆಯಲು ಆರಂಭಿಸಿದರು.

Also Read: CET Results 2025 : ಫಸ್ಟ್ ರ್ಯಾಂಕ್ ಯಾರು? ವಿವಿಧ ಸೆಕ್ಷನ್​​ಗಳ ರ್ಯಾಂಕಿಂಗ್ ವಿವರ ಇಲ್ಲಿದೆ.

ಶುಬ್ಮನ್ ಗಿಲ್ ಕೇವಲ 11 ನೇ ವಯಸ್ಸಿನಲ್ಲಿ U-16 ಪಂಜಾಬ್ ಕ್ರಿಕೆಟ್ ತಂಡದಲ್ಲಿ ಜಿಲ್ಲಾ ಮಟ್ಟದಲ್ಲಿ ಆಡಲು ಆಯ್ಕೆಯಾದರು. ಅವರ ಮೊದಲ ಸರಣಿಯಲ್ಲಿ, ಅವರು ಐದು ಪಂದ್ಯಗಳಲ್ಲಿ 330 ರನ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದರು. 2017 ರಲ್ಲಿ ಭಾರತದ U-19 ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ಅವರು 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ 2018ಗೆ ಉಪನಾಯಕರಾಗಿ ಆಯ್ಕೆಯಾದರು. ಸಧ್ಯ ಐಪಿಎಲ್‌ನಲ್ಲಿ ಗಿಲ್‌ ಗುಜರಾತ್‌ ತಂಡದ ನಾಯಕನಾಗಿಯೂ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿರುವ ಅನುಭವ ಇರುವುದರಿಂದ ಇದು ಕೂಡ ಗಿಲ್‌ ಟೆಸ್ಟ್‌ ತಂಡದ ನಾಯಕನಾಗಿ ಆಯ್ಕೆ ಆಗಲು ಕಾರಣ ಆಯ್ತು ಅಂತ ಹೇಳಬಹುದು.

Share.
Leave A Reply