ಮೈಸೂರು ಸ್ಯಾಂಡಲ್‌ ಸೋಪ್‌ಗೆ ರಾಯಭಾರಿಯಾಗಿ ಬಹುಭಾಷಾ ನಟಿ Tamanna ಬಾಟಿಯಾ ನೇಮಕ ಮಾಡ ಲಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರದ ಬಗ್ಗೆ ಈಗಾಗ್ಲೇ ಎಲ್ಲೆಡೆ ಆಕ್ರೋಶ ವ್ಯಕ್ತವಾಗ್ತಿದೆ.

ಇದಕ್ಕೆ ಮೋಹತಾರೆ ರಮ್ಯಾ ಕೂಡ ಪೋಸ್ಟ್‌ ಹಾಕಿ ಕಿಡಿಕಾರಿದ್ದಾರೆ. ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಹಾಕಿಕೊಂಡಿದ್ದಾರೆ.

Also Read: Team India: ಭಾರತ ಟೆಸ್ಟ್‌ ತಂಡಕ್ಕೆ ನ್ಯೂ ಕ್ಯಾಪ್ಟನ್‌ : ಗಿಲ್‌ ಬೆಳೆದು ಬಂದ ಹಾದಿಯೇ ರೋಚಕ..!

ಮೈಸೂರು ಸ್ಯಾಂಡಲ್‌ ಸೋಪ್‌ಗೆ (Mysore Sandal Soap) ಪ್ರತಿ ಕನ್ನಡಿಗನೂ ರಾಯಭಾರಿ ಎಂದು ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ (Ramya) ಹೇಳಿಕೊಂಡಿದ್ದಾರೆ. ಮೈಸೂರು ಸ್ಯಾಂಡಲ್‌ ಸೋಪ್‌ಗೆ ರಾಯಭಾರಿನೇ ಬೇಕಿಲ್ಲ. ಸುಮ್ನೆ ದುಡ್ಡು ವೇಸ್ಟ್ ನೋಡಿ. ಕಾರಣ, ಮೈಸೂರು ಸ್ಯಾಂಡಲ್‌ ಸೋಪ್ ಕನ್ನಡಿಗರ ಸೋಪ್ ಆಗಿದೆ.

ಹಾಗಾಗಿಯೇ ಪ್ರತಿಯೊಬ್ಬರು ಈ ಸೋಪ್‌ನ ರಾಯಭಾರಿಗಳೇ ಆಗಿದ್ದಾರೆ. ಅದಕ್ಕೇನೆ ಈ ಸೋಪ್‌ಗೆ ರಾಯಭಾರಿ ಬೇಕಿಲ್ಲ ಅನ್ನೋ ಅರ್ಥದಲ್ಲಿಯೇ ರಮ್ಯಾ ಬರೆದುಕೊಂಡಿದ್ದಾರೆ.

ಅಲ್ಲದೇ, ಮೈಸೂರು ಸ್ಯಾಂಡಲ್‌ ಸೋಪ್ ವಿಷಯದಲ್ಲಿ ಎಲ್ಲರೂ ತೊಡಗಿಕೊಳ್ಳವಂತೆ ಮಾಡಿದ್ರೆ ಸಾಕು. ಅವರು ಈ ಒಂದು ಸೋಪ್‌ ಅನ್ನಇಡೀ ಜಗತ್ತಿಗೆ ಪರಿಚಯಿಸೋ ಕೆಲಸ ಮಾಡುತ್ತಾರೆ.

ಅದು ಉಚಿತವಾಗಿಯೇ ಅಂತಲೇ ಸ್ಯಾಂಡಲ್‌ ವುಡ್ ಕ್ವೀನ್ ರಮ್ಯಾ ಬರೆದುಕೊಂಡಿದ್ದಾರೆ. ಸದ್ಯ ನಟಿ ರಮ್ಯಾ ಮಾಡಿರುವ ಈ ಪೋಸ್ಟ್‌ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ..

Share.
Leave A Reply