ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಪ್ರಯಾಣಕ್ಕೆ ಒಂದು ಬಾರಿ ಪಾವತಿ ವ್ಯವಸ್ಥೆಯನ್ನು ಪರಿಚಯಿಸಬಹುದಾದ ಹೊಸ ಟೋಲ್ ನೀತಿಯನ್ನು ಅಭಿವೃದ್ಧಿಪಡಿಸುವ ಚಿಂತನೆ ನಡೆಸಿದೆ(3000).
ವಾಹನ ಮಾಲೀಕರಿಗೆ ಸುಗಮ ಮತ್ತು ಯಾವುದೇ ಅಡೆತಡೆವಿಲ್ಲದೆ ಪ್ರಯಾಣದ ಉದ್ದೇಶದಿಂದ ಹೊಸ ಟೋಲ್ ನೀತಿ ಜಾರಿಗೆ ತರಲು ಮುಂದಾಗಿದೆ. ಇದರಿಂದ ವಾಹನ ಮಾಲೀಕರು ಒಂದು ಬಾರಿ 3000 ರೂಪಾಯಿ ಕಾರ್ಡ್‌ಗೆ ರಿಚಾರ್ಜ್ ಮಾಡಿಸಿದರೆ, ಒಂದು ವರ್ಷದ ಅವಧಿಯಲ್ಲಿ ಟ್ರೋಲ್ ಫ್ರೀಯಾಗಿ ಸಂಚರಿಸಬಹುದು.

ಇದರಿಂದಾಗಿ ಅವರು ವರ್ಷವಿಡೀ ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು ಮತ್ತು ರಾಜ್ಯ ಎಕ್ಸ್‌ಪ್ರೆಸ್‌ವೇಗಳಲ್ಲಿ ಮುಕ್ತವಾಗಿ ಮತ್ತು ನಿರ್ಬಂಧಗಳಿಲ್ಲದೆ ಪ್ರಯಾಣಿಸಲು ಅವಕಾಶ ದೊರೆಯಲಿದೆ. ಹೆಚ್ಚುವರಿ ಯಾವುದೇ ಶುಲ್ಕವನ್ನು ನೀವು ಪಾವತಿಸಬೇಕಾಗಿಲ್ಲ.. ಶೀಘ್ರದಲ್ಲೇ ಈ ನಿಯಮ ಜಾರಿಗೆ ಬರಲಿದೆ ಅಂಥಾ ಹೇಳಲಾಗ್ತಿದೆ.
ಈ ಯೋಜನೆಯಡಿ, ವಾಹನ ಮಾಲಿಕರು ವಾರ್ಷಿಕ ₹3,000 ಪಾವತಿಸಿ, ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಬಂಧವಿಲ್ಲದೆ ಪ್ರಯಾಣಿಸಬಹುದಾಗಿದೆ. ಈ ಪಾಸ್‌ಗಳು ಈಗಾಗಲೇ ಇರುವ ಫಾಸ್ಟ್ಯಾಗ್ ವ್ಯವಸ್ಥೆಯೊಂದಿಗೆ ಸಂಯೋಜಿತವಾಗಿದ್ದು, ಯಾವುದೇ ಹೆಚ್ಚುವರಿ ಸಾಧನಗಳ ಅಗತ್ಯವಿಲ್ಲ.

ವಾರ್ಷಿಕ ಪಾಸ್: ₹3,000 ಪಾವತಿಸಿ, ಒಂದು ವರ್ಷ ಕಾಲದವರೆಗೆ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಬಂಧವಿಲ್ಲದೆ ಪ್ರಯಾಣಿಸಬಹುದು.
ನಿರಂತರ ಪ್ರಯಾಣ: ವಾಹನ ಮಾಲಿಕರು ಯಾವುದೇ ಹೆಚ್ಚುವರಿ ಪಾವತಿ ಇಲ್ಲದೆ ನಿರಂತರವಾಗಿ ಹೆದ್ದಾರಿಗಳಲ್ಲಿ ಪ್ರಯಾಣಿಸಬಹುದು.
ಟೋಲ್ ಪ್ಲಾಜಾ ಗೊಂದಲ ಕಡಿತ: ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸಾಲುಗಳನ್ನು ಕಡಿಮೆ ಮಾಡಿ, ಸಂಚಾರವನ್ನು ಸುಗಮಗೊಳಿಸುತ್ತದೆ.
ಡಿಜಿಟಲ್ ಪಾವತಿ ಉತ್ತೇಜನ: ಹೆಚ್ಚು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಮೂಲಕ, ಹಸ್ತಚಾಲಿತ ಪಾವತಿಗಳ ಅವಶ್ಯಕತೆ ಕಡಿಮೆಗೊಳಿಸುತ್ತದೆ.
Also Read: Tamanna ರಾಯಭಾರಿಗೆ ಮೋಹಕತಾರೆ ಬೇಸರ : ಪ್ರತಿ ಕನ್ನಡಿಗನೂ ರಾಯಭಾರಿ ಎಂದ ರಮ್ಯಾ
ಈ ಹೊಸ ಪಾಸ್‌ಗಳು ಈಗಾಗಲೇ ಇರುವ ಫಾಸ್ಟ್ಯಾಗ್ ವ್ಯವಸ್ಥೆಯೊಂದಿಗೆ ಸಂಯೋಜಿತವಾಗಿದ್ದು, ಯಾವುದೇ ಹೆಚ್ಚುವರಿ ದಾಖಲೆ ಅಥವಾ ಸಾಧನಗಳ ಅಗತ್ಯವಿಲ್ಲ. ಹಾಲಿ ಫಾಸ್ಟ್ಯಾಗ್ ಬಳಕೆದಾರರು ತಮ್ಮ ಪ್ರಸ್ತುತ ಖಾತೆಗಳ ಮೂಲಕ ಈ ಹೊಸ ಯೋಜನೆಗೆ ಸೇರುವ ಅವಕಾಶವನ್ನು ಪಡೆಯುತ್ತಾರೆ.
ಈ ಹೊಸ ಟೋಲ್ ಪಾಸ್ ಯೋಜನೆ, ವಾಹನ ಮಾಲಿಕರಿಗೆ ಸುಲಭ ಮತ್ತು ನಿರಂತರ ಹೆದ್ದಾರಿ ಪ್ರಯಾಣವನ್ನು ಒದಗಿಸುವ ಮೂಲಕ, ದೇಶಾದ್ಯಾಂತ ಸಂಚಾರವನ್ನು ಸುಗಮಗೊಳಿಸಲು ಸಹಾಯ ಮಾಡಲಿದೆ.
