ಐಪಿಎಲ್ 2025ರ ಕೊನೇ ಲೀಗ್ ಮ್ಯಾಚ್‌ನಲ್ಲಿ RCB ಲಖನೌ ತಂಡದ ರಿಷನ್ ಪಂತ್ ವಿಲನ್ ಆಗಿದ್ದಾರೆ.. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆರ್‌ಸಿಬಿ, ಲಖನೌ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು.. ಮೊದಲು ಬ್ಯಾಟಿಂಗ್‌ಗೆ ಬಂದ ಲಖನೌ, 41 ರನ್‌ಗೆ ಮೊದಲ ವಿಕೆಟ್ ಪತಗೊಂಡಿತು..
ಇದಾದ ನಂತರದಲ್ಲಿ ಜೊತೆಯಾದ ಮಿಚೆಲ್ ಮಾರ್ಷ್ ಹಾಗೂ ರಿಷಬ್ ಪಂತ್ ಆರ್‌ಸಿಬಿ ಬೌಲರ್‌ಗಳಿಗೆ ವಿಲನ್ ಆದರು.. ಆರಂಭದಿಂದಲೇ ಆರ್ಭಟಿಸಿದ ಪಂತ್, ಶತಕ ಸಿಡಿಸಿ ಸಂಭ್ರಮಿಸಿದರು.. 37 ಎಸೆತಗಳಲ್ಲಿ 67 ರನ್ ಗಳಿಸಿ ಮಿಚೆಲ್ ಮಾರ್ಷ್ ಔಟಾದರು.. ಆದ್ರೆ, ರಿಷತ್ ಪಂತ್ ಮಾತ್ರ ಆರ್‌ಸಿಬಿ ಬೌಲರ್‌ಗಳನ್ನು ಸರಿಯಾಗಿ ಬೆಂಡೆತ್ತಿದರು.
Also Read: ಪಾರು ಸೀರಿಯಲ್ ನಟ Sridhar ನಿಜಕ್ಕೂ ಏನಾಗಿತ್ತು? : ಪತ್ನಿ ಹೀಗಂದಿದ್ಯಾಕೆ?
61 ಬಾಲ್‌ಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್ ಸಮೇತ 118 ರನ್ ಗಳಿಸಿ ಅಜೇಯರಾಗಿ ಉಳಿದರು.. ಮಾರ್ಷ್ ಹಾಗೂ ಪಂತ್ ಅಬ್ಬರದ ಬ್ಯಾಟಿಂಗ್‌ನಿಂದ ಎಲ್‌ಎಸ್‌ಜಿ 3 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿದ್ದು, ಆರ್‌ಸಿಬಿ 228 ರನ್ ಟಾರ್ಗೆಟ್ ಚೇಸ್ ಮಾಡುತ್ತಿದೆ..