ಐಪಿಎಲ್ 18ನೇ ಸೀಸನ್‌ನ ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ RCB ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಆರ್‌ಸಿಬಿ ಟಾಪ್‌ 2 ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆದ್ರೆ ಈ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಮಾಡಿದ ಜಿತೇಶ್‌ ಶರ್ಮಾ ಅವರ ಹಳೇ ಹೇಳಿಕೆ ಯೊಂದು ಸಾಕಷ್ಟು ವೈರಲ್‌ ಆಗ್ತಿದೆ.

ನಿನ್ನೆಯ ಪಂದ್ಯದಲ್ಲಿ ನಾಯಕ ಜಿತೇಶ್ ಶರ್ಮಾ, ಮಯಾಂಕ್ ಅಗರ್ವಾಲ್ ಮತ್ತು ವಿರಾಟ್ ಕೊಹ್ಲಿ ಅವರ ಅಬ್ಬರದ ಇನ್ನಿಂಗ್ಸ್​ನಿಂದಾಗಿ ಆರ್​ಸಿಬಿ ಜಯದ ನಗೆ ಬೀರಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡ ಆರ್‌ಸಿಬಿಗೆ 228 ರನ್‌ಗಳ ಗುರಿಯನ್ನು ನೀಡಿತು. ಜಯ ಸಾಧಿಸುವ ಮೂಲಕ ಕೊನೆಗೂ ಆರ್​ಸಿಬಿ ಪಾಯಿಂಟ್ಸ್​ ಟೇಬಲ್​​ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಇನ್ನು, ಪ್ಲೇ-ಆಫ್​ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಟ ನಡೆಸಲಿದ್ದು, ಇಲ್ಲಿ ಗೆದ್ದರೆ ನೇರವಾಗಿ ಫೈನಲ್​​ಗೆ ಎಂಟ್ರಿ ನೀಡಲಿದೆ.

ಈ ಗೆಲುವಿನ ಬೆನ್ನಲ್ಲೇ ನಾಯಕ ಜಿತೇಶ್‌ ಶರ್ಮಾ ಪಾಡ್‌ಕಾಸ್ಟ್‌ ವೊಂದರಲ್ಲಿ ಹೇಳಿರುವ ವಿಡಿಯೋವೊಂದು ಸಖ್ಖತ್‌ ವೈರಲ್‌ ಆಗಿದೆ. ಅಂದ್ರೆ ಸಂದರ್ಶಕ ಆರ್‌ಸಿಬಿ ಟೀಂ ಮತ್ತು ಫ್ಯಾನ್ಸ್‌ ಬಗ್ಗೆ ಏನ್‌ ಹೇಳ್ತೀರಾ ಎಂದಾಗ, ಅದಕ್ಕೆ ಉತ್ತರಿಸಿದ ಜಿತೇಶ್‌ RCB ಫ್ಯಾನ್ಸ್‌ ಡೋಂಟ್‌ವರಿ ನಾನಿದ್ದೀನಿ ಅಂತ ಹೇಳಿರುವ ವೀಡಿಯೋ ಈಗ ಸಖ್ಖತ್‌ ವೈರಲ್‌ ಆಗಿದೆ. ಕಾರಣ ನಿನ್ನೆ ಪಂದ್ಯದಲ್ಲಿ ಅವರ ಬ್ಯಾಟಿಂಗ್‌ ಕೂಡ ಅದೇ ರೀತಿ ಇತ್ತು.

Also Read: ದಾಖಲೆಯ ಚೇಸಿಂಗ್‌.. RCB ಆರ್ಭಟ, ಲಖ್ನೋ ಧೂಳೀಪಟ!

ಇನ್ನು ಗೆದ್ದ ಖುಷಿಯಲ್ಲಿ ಮಾತನಾಡಿರುವ ಕ್ಯಾಪ್ಟನ್ ಜಿತೇಶ್ ಶರ್ಮಾ, ನಿಜ ಹೇಳಬೇಕು ಅಂದರೆ ನನಗೆ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ತುಂಬಾ ಖುಷಿ ಆಗುತ್ತಿದೆ. ಕ್ರೀಸ್​ನಲ್ಲಿದ್ದಾಗ ಆ ಕ್ಷಣದಲ್ಲಿ ಏನು ಮಾಡಬೇಕು ಅದನ್ನು ಮಾತ್ರ ಯೋಚಿಸುತ್ತಿದ್ದೆ. ಕೊಹ್ಲಿ ಔಟ್ ಆದಾಗ ಆಟವನ್ನು ಡೀಪ್ ಆಗಿ ತೆಗೆದುಕೊಂಡು ಹೋಗಲು ನಿರ್ಧರಿಸಿದೆ.

ನನ್ನ ಮೆಂಟರ್ ದಿನೇಶ್ ಕಾರ್ತಿಕ್ ಹೇಳುವುದು ಅದನ್ನೇ. ಇರುವ ಸಾಮರ್ಥ್ಯದಿಂದ ನಾನು ಯಾವುದೇ ಸಂದರ್ಭದಲ್ಲೂ ಆಟವನ್ನು ಮುಗಿಸಬಲ್ಲೆ. RCB ತುಂಬಾನೇ ದೊಡ್ಡ ಫ್ರಾಂಚೈಸಿ. ಪಂದ್ಯದ ಒತ್ತಡವನ್ನು ಆನಂದಿಸುತ್ತಿದ್ದೇನೆ. ವಿರಾಟ್, ಕೃನಾಲ್ ಮತ್ತು ಭುವಿ ಅವರನ್ನು ನೋಡಿದಾಗ ಆಡಲು ಇನ್ನಷ್ಟು ಉತ್ಸಾಹ ಹೆಚ್ಚುತ್ತದೆ. ಅವರೊಂದಿಗೆ ಆಡಲು ಅವಕಾಶ ಸಿಗುತ್ತಿರೋದಕ್ಕೆ ಉತ್ಸುಕನಾಗಿದ್ದೇನೆ. ಈ ಬಾರಿ ಕಪ್‌ ಗೆಲ್ತೀವಿ ಅಂತ ಹೇಳಿದ್ದಾರೆ.

Share.
Leave A Reply