ಬೆಳಗಾವಿ: ಬಿಯರ್ (Beer) ಕುಡಿಸಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರಗೈದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ (Life Imprisonment) ವಿಧಿಸಲಾಗಿದೆ.

ಜೀವಾವಧಿ ಶಿಕ್ಷೆ ವಿಧಿಸಿ ಬೆಳಗಾವಿ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. 8 ತಿಂಗಳ ಅವಧಿಯಲ್ಲಿ ಪ್ರಕರಣ ಇತ್ಯರ್ಥಗೊಳಿಸಿ ನಾಲ್ವರಿಗೆ ಕಠಿಣ ಶಿಕ್ಷೆ ಪ್ರಕಟಿಸಲಾಗಿದೆ. ಸಾಕೀಬ್ ನಿಜಾಮಿ (22), ರವಿ ನಾಯ್ಯೋಡಿ ವಿರುದ್ಧ ಆರೋಪ ಸಾಬೀತಾಗಿದ್ದು, ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಅಲ್ಲದೇ, 8.76 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ ರೋಹನ್ ಪಾಟೀಲ್, ಅಶುತೋಷ್ ಪಾಟೀಲ್‌ಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಇಬ್ಬರಿಗೂ 6 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಸಿ.ಎಂ ಪುಷ್ಪಲತಾ ಆದೇಶ ಹೊರಡಿಸಿದ್ದಾರೆ. ಸಂತ್ರಸ್ತೆಗೆ 10 ಲಕ್ಷ ಪರಿಹಾರ ನೀಡುವಂತೆ ಕಾನೂನು ಪ್ರಾಧಿಕಾರಕ್ಕೂ ಸೂಚನೆ ನೀಡಿದ್ದಾರೆ.

ಈ ಘಟನೆ ಬೆಳಗಾವಿಯ ಸಾವಗಾಂವ ಫಾರ್ಮ್ ಹೌಸ್ ನಲ್ಲಿ 2025ರ ಮೇ 10ರಂದು ನಡೆದಿತ್ತು. ಅಪ್ರಾಪ್ತೆ ಎಂದು ಗೊತ್ತಿದ್ದರೂ ಬಿಯರ್ ಕುಡಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಲ್ಲದೇ ಅಪ್ರಾಪ್ತೆಯ ಚಿನ್ನದ ಸರ ದೋಚಿದ್ದರು. ಈ ಕುರಿತು ಸಂತ್ರಸ್ತೆ ಪೋಷಕರು ದೂರು ನೀಡಿದ್ದರು. ಸರ್ಕಾರದ ಪರ ವಿಶೇಷ ಅಭಿಯೋಜಕ ಎಲ್.ವಿ ಪಾಟೀಲ ವಕಾಲತ್ತು ವಹಿಸಿದ್ದರು.

Share.
Leave A Reply