ಸೆಲೆಬ್ರಿಟಿಗಳ ದಾಸ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (darshan) ಸದ್ಯ ಥೈಲ್ಯಾಂಡ್‌ನಲ್ಲಿ ಡೆವಿಲ್‌ (devil movie) ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ… ಆದ್ರೆ, ರೇಣುಕಾಸ್ವಾಮಿ (renukaswamy case) ಕೊಲೆ ಪ್ರಕರಣ ಮಾತ್ರ ಇನ್ನೂ ಜೀವಂತವಾಗಿದೆ.. ತಲೆ ಮೇಲೆ ತೂಗೋ ಕತ್ತಿಯಂತಿರುವ ಈ ಕೇಸ್‌ ದರ್ಶನ್‌ಗೆ ಸದಾ ತಲೆಬಿಸಿ ಉಂಟು ಮಾಡುತ್ತಿದೆ.. ಯಾಕಂದ್ರೆ, ಬೇಲ್‌ ಮೇಲೆ ನಿಶ್ಚಿಂತೆಯಿಂದಿದ್ದ ದರ್ಶನ್‌ಗೆ ಈಗ ಸುಪ್ರೀಂಕೋರ್ಟ್‌ (supreme court) ಶಾಕ್‌ ನೀಡಿದೆ.. ದರ್ಶನ್‌ & ಗ್ಯಾಂಗ್‌ಗೆ ಹೈಕೋರ್ಟ್‌ ನೀಡಿದ್ದ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ.. ಇದ್ರಿಂದಾಗಿ ದರ್ಶನ್‌ಗೆ ಮತ್ತೆ ಸಂಕಷ್ಟ ಎದುರಾಗೋ ಸಾಧ್ಯತೆ ಇದೆ… ಜೊತೆಗೆ ಅವರ ಡೆವಿಲ್‌ ಸಿನಿಮಾಗೂ ಭಾರಿ ಹೊಡೆತ ಬೀಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.. ಸುಪ್ರೀಂಕೋರ್ಟ್‌ ಹೇಳೋದನ್ನ ಗಮನಿಸಿದ್ರೆ ಈ ಬಾರಿ ದರ್ಶನ್‌ ಜೈಲಿಗೆ ಹೋಗೋದು ಬಹುತೇಕ ಫಿಕ್ಸ್‌ ಅಂತ ಹೇಳಲಾಗ್ತಿದೆ..

ಡಿ ಗ್ಯಾಂಗ್‌ ಜಾಮೀನು ಅರ್ಜಿ ಸಲುವಾಗಿ ಹೈಕೋರ್ಟ್‌ (high court) ನೀಡಿದ್ದ ಆದೇಶದ ಬಗ್ಗೆ ಸುಪ್ರೀಂಕೋರ್ಟ್‌ ತೀವ್ರ ಅಸಮಾಧಾನ ಹೊರಹಾಕಿದೆ.. ಡಿ ಗ್ಯಾಂಗ್‌ಗೆ ಜಾಮೀನು ನೀಡುವಾಗ ಹೈಕೋರ್ಟ್‌ ವಿವೇಚನೆ ಬಳಸಿಲ್ಲ ಅಂತ ಸುಪ್ರೀಂಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೇ ಹೈಕೋರ್ಟ್‌ ಆದೇಶ ನಮಗೆ ನೋವು ಉಂಟುಮಾಡಿದೆ.. ಟ್ರಯಲ್ ಕೋರ್ಟ್ ಜಡ್ಜ್ ತಪ್ಪು ಮಾಡುತ್ತಾರೆಂದರೆ ನಂಬಬಹುದು. ಆದರೆ, ಹೈಕೋರ್ಟ್ ಜಡ್ಜ್​ಗಳಿಂದ ಆ ರೀತಿ ತಪ್ಪು ಆಗಬಾರದು ಅಂತ ಸುಪ್ರೀಂಕೋರ್ಟ್‌ ಹೇಳಿದೆ.. ಹೀಗಾಗಿ ಸುಪ್ರೀಂಕೋರ್ಟ್‌ ನಡೆಯನ್ನು ಗಮನಿಸಿದ್ರೆ ದರ್ಶನ್‌ ಕೇಸ್‌ನಲ್ಲಿ ದೊಡ್ಡ ಶಾಕಿಂಗ್‌ ನಿರ್ಧಾರ ಹೊರಬೀಳಬಹುದು ಅಂತಾ ವಿಶ್ಲೇಷಿಸಲಾಗುತ್ತಿದೆ.

ಇನ್ನೊಂದು ಶಾಕಿಂಗ್‌ ವಿಚಾರ ಅಂದ್ರೆ ಕೊಲೆ ಕೇಸ್‌ನ ಮೊದಲನೇ ಆರೋಪಿ ಪವಿತ್ರಾಗೌಡಗೂ ನ್ಯಾಯಪೀಠ ಸಖತ್‌ ಕ್ಲಾಸ್‌ ತೆಗೆದುಕೊಂಡಿದೆ.. ಈ ಕೇಸ್‌ ಆಗಲು ನೀವೇ ಕಾರಣ. ನೀವಿಲ್ಲದಿದ್ರೆ ದರ್ಶನ್‌ ಆಸಕ್ತಿ ವಹಿಸುತ್ತಿರಲಿಲ್ಲ ಅಂತ ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.. ಇದ್ರಿಂದ ಪವಿತ್ರಾಗೌಡ ಜಾಮೀನು ಕೂಡ ರದ್ದಾಗುವ ಎಲ್ಲಾ ಸಾಧ್ಯತೆಗಳು ಇವೆ..

ಒಟ್ನಲ್ಲಿ ವಾದ ವಿವಾದಗಳನ್ನು ಸಂಪೂರ್ಣವಾಗಿ ಆಲಿಸಿರುವ ನ್ಯಾಯಾಲಯ ಅಂತಿಮ ಆದೇಶವನ್ನು 10 ದಿನಗಳ ಕಾಲ ಕಾಯ್ದಿರಿಸಿದೆ.. ಜೊತೆಗೆ ವಾದ ವಿವಾದಗಳ ಲಿಖಿತ ಪ್ರತಿಗಳನ್ನು ಸಲ್ಲಿಸಲು 1 ವಾರ ಕಾಲಾವಕಾಶ ನೀಡಿದೆ.. 10 ದಿನಗಳ ಬಳಿಕ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್‌ನ ನಡೆ ಗಮನಿಸಿದರೆ ದರ್ಶನ್‌ ಹಾಗೂ ಪವಿತ್ರಾಗೌಡ ಜಾಮೀನು ರದ್ದಾದರೂ ಅಚ್ಚರಿಪಡಬೇಕಿಲ್ಲ.. ಹೀಗಾಗಿ, ದರ್ಶನ್‌ ನಂಬಿಕೊಂಡಿರುವ ಡೆವಿಲ್‌ ಸಿನಿಮಾ ತಂಡಕ್ಕೆ ಸಂಕಷ್ಟ ಎದುರಾಗಲಿದೆ.. ಒಂದೊಮ್ಮೆ ದರ್ಶನ್ ಜೈಲಿಗೆ ಹೋದ್ರೆ ಭಾರಿ ತೊಂದರೆ ಎದುರಿಸುತ್ತಾ ಅಥವಾ ಅಷ್ಟರಲ್ಲಿ ಅವರು ಸಿನಿಮಾ ಶೂಟಿಂಗ್‌ ಪೂರ್ಣಗೊಳಿಸ್ತಾರಾ ಅನ್ನೋದು ಕಾದು ನೋಡಬೇಕಿದೆ..

Share.
Leave A Reply