ದರ್ಶನ್ (Darshan Thoogudeepa) ಕೇಸ್‌ನಿಂದ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಬಿರುಗಾಳಿ ಎದ್ದಿರೋದು ಎಲ್ರಿಗೂ ಗೊತ್ತಿದೆ.. ಆದ್ರೆ ಅಪರಾಧ ಸಾಬೀತಾಗೋವರೆಗೂ ನಮಗ್ಯಾಕೆ ಬೇಕಪ್ಪಾ.. ಯಾರ್ ಪರನೂ ಬೇಡ.. ವಿರೋಧನೂ ಬೇಡ ಅಂತ.. ಅಂತ ಚಂದನವನದ ಸಾಕಷ್ಟು ಮಂದಿ ಸೈಲೆಂಟ್ ಆಗ್ಬಿಟ್ಟಿದ್ದಾರೆ.. ಅದ್ರಲ್ಲೂ ದರ್ಶನ್ ವಿರೋಧ ನಮಗೆ ಬೇಡಪ್ಪ ಅಂತ ಸುಮ್ಮನಾಗ್ತಾರೆ ಆದ್ರೆ ಸ್ಯಾಂಡಲ್‌ವುಡ್ ಕ್ವೀನ್ ಮಾತ್ರ ಬಾಕ್ಸ್ ಆಫೀಸ್ ಸುಲ್ತಾನನ ವಿರುದ್ಧ ಧ್ವನಿ ಎತ್ತುತ್ತಲೇ ಇದ್ದಾರೆ.. ಇದೀಗ ಸುಪ್ರೀಂಕೋರ್ಟ್ (Supreme Court) ದರ್ಶನ್‌ಗೆ ಶಾಕ್ ಕೊಟ್ಟ ಬೆನ್ನಲ್ಲೇ ರಮ್ಯಾ ಪೋಸ್ಟ್ ಹಾಕಿದ್ದು, ಸಖತ್ ವೈರಲ್ ಆಗುತ್ತಿದೆ… ದರ್ಶನ್ ಅಭಿಮಾನಿಗಳಂತೂ ಪದ್ಮಾವತಿ ವಿರುದ್ಧ ಸಿಡಿದೆದ್ದಿದ್ದಾರೆ.. ನಿಜಕ್ಕೂ ರಮ್ಯಾ (Ramya) ಪೋಸ್ಟ್‌ನಲ್ಲೇನಿದೆ? ಡಿ ಫ್ಯಾನ್ಸ್ ರೊಚ್ಚಿಗೆದ್ದಿದ್ದು ಯಾಕೆ..?

ಈಗಾಗಲೇ ಸುಪ್ರೀಂಕೋರ್ಟ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (renukaswamy case) ಡಿ ಗ್ಯಾಂಗ್ ಜಾಮೀನು ಆದೇಶವನ್ನು ಕಾಯ್ದಿರಿಸಿದೆ.. ಆದ್ರೆ ಬೇಲ್ ಕೊಟ್ಟ ಹೈಕೋರ್ಟ್ ನಡೆಯನ್ನು ಖಂಡಿಸಿದ್ದು, ದರ್ಶನ್ ಬೇಲ್ ರದ್ದಾಗಬಹುದು ಅಂತಲೇ ಚರ್ಚೆಯಾಗುತ್ತಿದೆ.. ಇಂತಾ ಹೊತ್ತಲ್ಲಿ ನಟಿ ರಮ್ಯಾ ಧ್ವನಿ ಎತ್ತಿದ್ದಾರೆ.. ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.. ಭಾರತದ ಸಾಮಾನ್ಯ ಜನರಿಗೆ ಸುಪ್ರೀಂಕೋರ್ಟ್ ಆಶಾಕಿರಣವಿದ್ದಂತೆ.. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಅಂತ ಪೋಸ್ಟ್ ಮಾಡಿದ್ದಾರೆ.. ಇದ್ರಿಂದ ಅವರು ದರ್ಶನ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.. ಅವರು ನಿಜವಾಗಿಯೂ ನ್ಯಾಯದ ಪರ ಧ್ವನಿ ಎತ್ತಿದ್ದಾರೋ.. ಅಥವಾ ದರ್ಶನ್ ವಿರುದ್ಧ ಮಾತನಾಡ್ತಿದ್ದಾರೋ ಅಂತ ಆಕ್ರೋಶ ಹೊರಹಾಕ್ತಿದ್ದಾರೆ..

ಈ ಹಿಂದೆಯೂ ರಮ್ಯಾ: ದರ್ಶನ್ ಕೇಸ್‌ನಲ್ಲಿ ಧ್ವನಿ ಎತ್ತಿದ್ರು.. 2024ರಲ್ಲಿ ದರ್ಶನ್ ವಿರುದ್ಧ ಆರೋಪ ಕೇಳಿಬಂದಾಗ ರಮ್ಯಾ ಇದೇ ರೀತಿ ಮಾತನಾಡಿದ್ರು.. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ.. ಕಾನೂನಿನ ಮೂಲಕ ಹೋಗುವ ಬದಲು ಜನರನ್ನು ಹೊಡೆದು ಸಾಯಿಸಲು ಆಗುವುದಿಲ್ಲ.. ಕಾನೂನಿನ ಮೇಲೆ ಇಟ್ಟಿರುವ ನಂಬಿಕೆಯನ್ನು ಪೊಲೀಸರು ಉಳಿಸುತ್ತಾರೆ ಅಂತ ನಂಬಿಕೆ ಇಟ್ಟಿದ್ದೇನೆ ಅಂತ ರಮ್ಯಾ ಪೋಸ್ಟ್ ಮಾಡಿದ್ರು.. ಹೀಗೆ ರಮ್ಯಾ ಪದೇ ಪದೆ ದರ್ಶನ್ ವಿರುದ್ಧ ಮಾತನಾಡ್ತಿರೋದ್ಯಾಕೆ..? ಅದರ ಹಿಂದಿರೋ ಕಾರಣ ಏನು..? ಅವರು ನಿಜವಾಗಿಯೂ ನ್ಯಾಯದ ಪರ ನಿಂತಿದ್ದಾರಾ..? ಅಥವಾ ಅವರಿಗೆ ದರ್ಶನ್ ಮೇಲೆ ಏನಾದ್ರೂ ದ್ವೇಷ ಇದ್ಯಾ ಅಂತ ಫ್ಯಾನ್ಸ್ ಪ್ರಶ್ನೆ ಮಾಡ್ತಿದ್ದಾರೆ. ಒಟ್ನಲ್ಲಿ ರಮ್ಯಾ ಮಾಡಿರುವ ಪೋಸ್ಟ್ ಹಿಂದಿನ ಉದ್ದೇಶ ಅವರಿಗೆ ಮಾತ್ರ ಗೊತ್ತು.. ಆದ್ರೆ ಆ ಪೋಸ್ಟ್‌ನಿಂದ ಮತ್ತಷ್ಟು ಅವಾಂತರಗಳು ಆಗುತ್ತಾ..? ದರ್ಶನ್ ಕೇಸ್ ಯಾವ ಹಂತಕ್ಕೆ ತಲುಪುತ್ತೆ..? ಸ್ಯಾಂಡಲ್‌ವುಡ್ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದು ಸದ್ಯದ ಪ್ರಶ್ನೆ..
