ಬೆಂಗಳೂರು: ವ್ಯಕ್ತಿಯೋರ್ವ ಲೇಡಿ ಫಿಟ್ನೆಸ್ ಇನ್‌ಫ್ಲೂಯೆನ್ಸರ್‌ಗೆ ಅಶ್ಲೀಲ ಮೆಸೆಜ್ ಮಾಡಿ ಮಾನಸಿಕವಾಗಿ ಹಿಂಸೆ ಮಾಡಿ ಹರಿಯಾಣದಿಂದ ಕರ್ನಾಟಕಕ್ಕೆ ಬಂದು ಪೊಲೀಸರ ಅತಿಥಿಯಾಗಿದ್ದಾನೆ.

ಪಾಗಲ್ ಪ್ರೇಮಿಯನ್ನು ಹರಿಯಾಣ ಮೂಲದ ಸುಧೀರ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಯುವತಿಗೆ ಅಶ್ಲೀಲ ಮೆಸೆಜ್ ಮಾಡಿ, ಕಿರುಕುಳ ನೀಡಿದ್ದಾನೆ. ಅಲ್ಲದೇ, ದೂರದ ಹರಿಯಾಣದಿಂದ ಕರ್ನಾಟಕಕ್ಕೆ ಬಂದಿದ್ದಾನೆ. ಸಂತ್ರಸ್ತ ಯುವತಿ ಬೆಂಗಳೂರಲ್ಲಿ ಲೇಡಿ ಫಿಟ್ನೆಸ್, ನ್ಯೂಟ್ರೀಷಿಯನ್ ಇನ್‌ಫ್ಲೂಯೆನ್ಸರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಯುವತಿಗೆ ಬಂಧಿತ ಆರೋಪಿ ಇನ್‌ಸ್ಟಾ ಮೂಲಕ ಲೈಂಗಿಕವಾಗಿ ಪ್ರಚೋದಿಸುವಂತೆ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ.

ಮೊದಲು ಇನ್‌ಸ್ಟಾದಲ್ಲಿ ಯುವತಿಗೆ ಅಶ್ಲೀಲ ಮೆಸೆಜ್ ಮಾಡಿ ಹಿಂಸೆ ನೀಡಿದ್ದಾನೆ. ನಂತರ ವಾಟ್ಸಪ್ ನಂಬರ್ ಪಡೆದು ಅದರಲ್ಲೂ ಅಶ್ಲಿಲ ಮೆಸೆಜ್ ಮಾಡಿದ್ದಾನೆ. ಯುವತಿಯನ್ನು ಹುಡುಕಿಕೊಂಡು ಹರಿಯಾಣದಿಂದ ಕರ್ನಾಟಕಕ್ಕೆ ಬಂದಿದ್ದ. ಬೆಂಗಳೂರಿಗೆ ಬಂದು ಜಿಮ್ ಸಹೋದ್ಯೋಗಿಗಳ ಬಳಿ ವಿಚಾರಿಸಿದ್ದ. ವಿಚಾರ ತಿಳಿಯುತ್ತಿದ್ದಂತೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ದೂರಿನ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗ ಮಹಿಳಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Share.
Leave A Reply