ದಿನದಿಂದ ದಿನಕ್ಕೆ ಧರ್ಮಸ್ಥಳ ಪ್ರಕರಣವು ಹೊಸ ತಿರುವುಗಳನ್ನ ಪಡೆದುಕೊಳ್ತಿದೆ. ಧರ್ಮಸ್ಥಳದಲ್ಲಿ ಶವಗಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಈಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಹಲವು ವರ್ಷಗಳ ಹಿಂದೆ ಶವಗಳನ್ನು ತಾನು ಹೂತಿದ್ದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿ ಎಸ್ ಐಟಿ ಅಧಿಕಾರಿಗಳ ಮುಂದೆ ಶೋಧಕಾರ್ಯಕ್ಕೆ ಹೋಗುತ್ತಿದ್ದ ಮಾಸ್ಕ್‌ ತೊಟ್ಟ ಅನಾಮಿಕನನ್ನು ಇಂದು ಪೊಲೀಸರು ಬಂಧಿಸಿದ್ದಾರೆ.

ಮಾಸ್ಕ್‌ ಮ್ಯಾನ್‌ ಬಂಧನ!

ಸುಳ್ಳು ಮಾಹಿತಿ ನೀಡಿದ್ದ ಆರೋಪದಡಿ ಬಂಧಿಸಲಾಗಿದ್ದು, ಇಂದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಕೋರ್ಟ್​ಗೆ ಎಸ್​ಐಟಿ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ. ಸಾಕ್ಷಿ ಸಂರಕ್ಷಣಾ ಯೋಜನೆಯಡಿ ರಕ್ಷಣೆ ಪಡೆದಿದ್ದ ಅನಾಮಿಕ ದೂರುದಾರನನ್ನು ಎಸ್‌ಐಟಿ ಬಂಧಿಸಿದೆ. ದೂರಿನಲ್ಲಿ ಸುಳ್ಳು ಮಾಹಿತಿ ಮತ್ತು ತನಿಖೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಹೊಸ ಎಫ್‌ಐಆರ್ ದಾಖಲಾಗಿದೆ. ಸಮಾಧಿ ಸ್ಥಳಗಳಲ್ಲಿ ಅಸ್ತಿಪಂಜರಗಳು ಪತ್ತೆಯಾಗಿಲ್ಲ. ಬಂಧಿತನ ವಿಚಾರಣೆ ಮುಂದುವರೆದಿದೆ.

ಈ ವೇಳೆ ಸತ್ಯದ ಅನಾವರಣವಾಗಿದೆ. ನನಗೆ ಈ ರೀತಿ ಹೇಳಲು ಹೇಳಿದ್ರು, ನಾನು ಈ ರೀತಿ ಹೇಳಿದೆ. ಬುರುಡೆ ತೆಗೆದುಕೊಂಡು ಕೋರ್ಟ್‌ಗೆ ಒಪ್ಪಿಸಿ ಅಂದ್ರು, ನಾನು ಒಪ್ಪಿಸಿದೆ. ಕೋರ್ಟ್‌ಗೆ ಹಾಜರುಪಡಿಸಿದ ಬುರುಡೆ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಹೇಳಿದ್ದಾನೆ.

Read Also : ಧರ್ಮಸ್ಥಳ ಅಸ್ಥಿಪಂಜರ ಕೇಸ್‌ಗೆ ಬಿಗ್‌ ಟ್ವಿಸ್ಟ್ : ಮಹೇಶ್ ತಿಮರೋಡಿ ಅರೆಸ್ಟ್‌.. ‌ಸಮೀರ್‌ಗೆ ಜಾಮೀನು!

Share.
Leave A Reply