ಭಾನುವಾರ ನಡೆದ ಐಪಿಎಲ್ 2025 ರ 50ನೇ ಪಂದ್ಯದಲ್ಲಿ ಕನ್ನಡಿಗ KL Rahul Century ಐಪಿಎಲ್ 50ನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅಬ್ಬರ, ಕೊಹ್ಲಿ ದಾಖಲೆ ಉಡೀಸ್ ! ಹೊಸದೊಂದು ಇತಿಹಾಸ ಸೃಷ್ಠಿಸಿದ್ದಾರೆ. ಯಾವ ಕ್ರಮಾಂಕದಲ್ಲೂ ಸಹ ಆಡಬಲ್ಲ ರಾಹುಲ್ ನಿನ್ನೆ ನಡೆದ ಪಂದ್ಯದಲ್ಲಿ ಭರ್ಜರಿ ಆಟವಾಡಿ ವಿಶ್ವ ಶ್ರೆಷ್ಠ ಆಟಗಾರರ ದಾಖಲೆಗಳನ್ನ ಉಡೀಸ್ ಮಾಡಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತ ಡೆಲ್ಲಿ ಮೊದಲು ಬ್ಯಾಟಿಂಗ್ ಮಾಡಿ 199 ರನ್ ಕಲೆ ಹಾಕಿ ಭರ್ಜರಿ ಟಾರ್ಗೆಟ್ ನೀಡ್ತು. ಡೆಲ್ಲಿ ಪರ ಆರಂಭಿಕನಾಗಿ ಬ್ಯಾಟಿಂಗ್‌ಗೆ ಬಂದ ರಾಹುಲ್ ಕೇವಲ 65 ಎಸೆತಗಳಲ್ಲಿ 112 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಶತಕದೊಂದಿಗೆ ಅನೇಕರ ದಾಖಲೆಗಳನ್ನ ಪುಡಿಗಟ್ಟಿ, ಕನ್ನಡಿಗರ ಹೆಮ್ಮೆಗೆ ಪಾತ್ರರಾದರು.
ಭಾನುವಾರ ನಡೆದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಟಿ20 ಕ್ರಿಕೆಟ್ನಲ್ಲಿ 8000 ರನ್ ಪೂರ್ಣಗೊಳಿಸಿದ ಭಾರತದ ಆರನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ. ರಾಹುಲ್‌ಗು ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಸುರೇಶ್ ರೈನಾ ಮತ್ತು ಸೂರ್ಯಕುಮಾರ್ ಯಾದವ್ ಈ ಸಾಧನೆ ಮಾಡಿದ್ದು, ನಿನ್ನೆ ನಡೆದ ಪಂದ್ಯದಲ್ಲಿ 33 ರನ್ ಬಾರಿಸಿ, 8000 ರನ್ ಪೂರ್ಣಗೊಳಿಸಿದವರ ಸಾಲಿಗೆ ಸೇರಿಕೊಂಡರು.
Also Read: ‘kohliʼಗೆ ಭಾರತ ರತ್ನಕ್ಕೆ ಒತ್ತಾಯ : ಇದಕ್ಕೆ ನೀವು ಏನಂತೀರಾ?
ಇದರ ಜೊತೆಯಲ್ಲಿ ವಿರಾಟ್ ಕೊಹ್ಲಿಯ ದಾಖಲೆಯನ್ನೂ ಮುರಿದರು. ಟಿ20 ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 8000 ರನ್ ಪೂರೈಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ಆದರೆ ಭಾನುವಾರ ನಡೆದ DC vs GT ನಡುವೆ ನಡೆದ ಪಂದ್ಯದಲ್ಲಿ ರಾಹುಲ್ ಈ ದಾಖಲೆಯನ್ನ ಸರಿಗಟ್ಟಿದ್ದಾರೆ.
ಕೊಹ್ಲಿ 243 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ಸೃಷ್ಟಿಸಿದರೆ, ರಾಹುಲ್ ಕೇವಲ 224 ಇನ್ನಿಂಗ್ಸ್‌ಗಳಲ್ಲಿ 8000 ರನ್ ಪೂರೈಸಿ ಕಿಂಗ್ ಕೊಹ್ಲಿ ದಾಖಲೆಯನ್ನ ಹಿಂದಿಕ್ಕಿದ್ದಾರೆ. ಈ ಪಂದ್ಯದಲ್ಲಿ ರಾಹುಲ್ ಶತಕ ಬಾರಿಸಿದರು ಸಹ ಟೈಟಾನ್ಸ್ ವಿರುದ್ಧ DC ಸೋಲುಣಬೇಕಾಯಿತು.
