ತಮಿಳು ಖ್ಯಾತ ನಟ ಕಮಲ್ ಹಾಸನ್ ಅವರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಗೊತ್ತೇ ಇದೆ. ಚೆನ್ನೈನಲ್ಲಿ ನಡೆದ ಇವೆಂಟ್ನಲ್ಲಿ ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು, ಕನ್ನಡ ಭಾಷೆ ಹುಟ್ಟಿದ್ದೇ ತಮಿಳಿನಿಂದ ಎಂದಿ ದ್ದರು. ಬಹುಭಾಷಾ ನಟ ಕಮಲ್ ಹಾಸನ್ (kamal haasan controversy) ಆಡಿದ ಆ ಒಂದು ಮಾತು ಈಗ ಎರಡು ಭಾಷೆಗಳ ನಡುವೆ ದೊಡ್ಡ ವಾಗ್ಯುದ್ಧಕ್ಕೆ ಕಾರಣವಾಗಿದೆ. ಕರ್ನಾಟಕದಾದ್ಯಂತೆ ಸ್ಟಾರ್ಸ್, ರಾಜಕಾರಣಗಳು, ಕನ್ನಡಪರ ಹೋರಾಟಗಾರರು ಸಿಡಿದೆದ್ದಿದ್ದಾರೆ.

ನಟ ಕಮಲ್ ಹಾಸನ್(Kamal Haasan) ಹೇಳಿಕೆಗೆ ಕರುನಾಡು ಕೆಂಡಾಮಂಡಲಗೊಂಡಿದೆ. ಕಮಲ್ ಆಡಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅದಷ್ಟೇ ಅಲ್ಲ, ಕಮಲ್ ಹಾಸನ್ ಕ್ಷಮೆಯಾಚಿಸಬೇಕು ಇಲ್ಲದಿದ್ರೆ ‘ಥಗ್ ಲೈಫ್’ ಸಿನಿಮಾಗೆ ತಡೆ ನೀಡೋದಾಗಿ ಅವರ ಚಿತ್ರಗಳನ್ನು ಬ್ಯಾನ್ ಮಾಡೋ ದಾಗಿ ಕರವೇ ಮತ್ತು ಕನ್ನಡಪರ ಸಂಘಟನೆ ಎಚ್ಚರಿಕೆ ನೀಡಿದೆ. ರಾಜ್ಯದ ಹಲವೆಡೆ ಕನ್ನಡಪರ ಸಂಘಟನೆಗಳ ಕಾರ್ಯ ಕರ್ತರು ನಟ ಕಮಲ್ ವಿರುದ್ಧ ಪ್ರತಿಭಟನೆ ನಡೆಸಿ ನಟ ಕ್ಷಮೆ ಕೋರಬೇಕು ಎಂದು ಎಚ್ಚರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಚಿವ ಶಿವರಾಜ್ ತಂಗಡಗಿ, ಸಚಿವರಾದ ಸಂತೋಷ್ ಲಾಡ್, ಮಧು ಬಂಗಾರಪ್ಪ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಸೇರಿ ಹಲವು ರಾಜಕಾರಣಿಗಳು, ಸಾಹಿತಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಕಮಲ್ ಹಾಸನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಸ್ಯಾಂಡಲ್ ಸ್ಟಾರ್ಸ್‌ಗಳು ಕೂಡ ಕಮಲ್ ಹಾಸನ್ ಹೇಳಿಕೆಗೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ರು.
ಭಾಷೆಗಳ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲದ ನಟ ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಕನ್ನಡಪರ ಸಂಘಟನೆಗಳು ಹಾಗೂ ಕನ್ನಡದ ನಟ, ನಟಿಯರು ಆಗ್ರಹಿಸಿದ್ದಾರೆ. ಕಮಲ್ ಹಾಸನ್ ಸೃಷ್ಟಿಸಿದ ಭಾಷಾ ವಿವಾದಕ್ಕೆ ನಟಿ ರಮ್ಯಾ ಇದೀಗ ಎಂಟ್ರಿ ಕೊಟ್ಟಿದ್ದಾರೆ. ಎಲ್ಲರೂ ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ರೆ, ಸ್ಯಾಂಡಲ್‌ವುಡ್ ಪದ್ಮಾವತಿ ಕಮಲ್ ಪರ ಬ್ಯಾಟ್ ಬೀಸಿದ್ದಾರೆ..

ಕಮಲ್ ಪರ ಬ್ಯಾಟ್ ಬೀಸಿದ ಸ್ಯಾಂಡಲ್‌ವುಡ್ ಕ್ವೀನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಬಹುಶಃ ಕಮಲ್ ಕನ್ನಡ, ತಮಿಳು, ತೆಲುಗು ಎಲ್ಲವೂ ಒಂದೇ ಮೂಲದಿಂದ ಬಂದಿವೆ ಅಂತ ಹೇಳಿದ್ದಾರೆ. ಎಲ್ಲಾ ದ್ರಾವಿಡ ಭಾಷೆಗಳಿಗೆ ಒಂದೇ ಬೇರು ಅನ್ನೋದು ಅವರ ಮಾತಿನ ಅರ್ಥ. ಇದಕ್ಕಾಗಿ ಅವರ ಸಿನಿಮಾ ಥಗ್ ಲೈಫ್ ಬ್ಯಾನ್ ಮಾಡೋದು ತಪ್ಪು ಎಂದಿದ್ದಾರೆ. ಆದರೆ, ರಮ್ಯಾ ಬಳಸಿದ ಬಹುಶಃ ಪದದ ಅರ್ಥವೇನು ಎಂಬುದು ಇದೀಗ ಸೋಷಿಯಲ್ ಮೀಡಿಯಾ ದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಜೊತೆಗೆ ಉರಿಯುತ್ತಿರುವ ಬೆಂಕಿಗೆ ಪದ್ಮಾವತಿ ತುಪ್ಪ ಸುರಿದ್ದಾರೆ.. ಇದಕ್ಕೆ ನೆಟ್ಟಿಗರು ಮೋಹಕ ತಾರೆ ರಮ್ಯಾರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ನಟ ಕಮಲ್ ಹಾಸನ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರ ಬಗ್ಗೆ ನಟಿ ಜಯಮಾಲಾ ಅವರು ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅವರು ಮಾತನಾಡಿ ದರು. ‘ಭಾಷೆ ಬಗ್ಗೆ ಯಾವುದೇ ರೀತಿಯ ವಿವಾದ ಎದ್ದಾಗ ಕನ್ನಡಿಗರೆಲ್ಲ ಒಂದಾಗುತ್ತೇವೆ, ಒಂದಾಗ ಲೇಬೇಕು. ಅದು ನಮ್ಮ ಧರ್ಮ. ಕಮಲ್ ಹಾಸನ್ ಅವರು ಹೇಗೆ ಹೇಳಿದರೋ ಗೊತ್ತಿಲ್ಲ. ಆದರೆ ತಮಿಳಿನಿಂದ ಕನ್ನಡ ಹುಟ್ಟಿಲ್ಲ. ಅದಂತೂ ಸತ್ಯ. ನಮ್ಮಲ್ಲಿ ಭಾಷಾ ತಜ್ಞರು ಇದ್ದಾರೆ. ಅವರು ಈ ಬಗ್ಗೆ ಹೇಳಿಕೆ ನೀಡಿ ಮಾರ್ಗದರ್ಶನ ನೀಡಲಿ. ಪ್ರತಿ ಬಾರಿ ಕನ್ನಡಕ್ಕೆ ಧಕ್ಕೆ ಬಂದಾಗ ನಾವು ಮನದಟ್ಟು ಮಾಡಿಕೊಡಬೇಕು’ ಎಂದು ನಟಿ ಜಯಮಾಲಾ (Jayamala) ಕಿಡಿಕಾರಿದ್ದಾರೆ.

ಕನ್ನಡಕ್ಕೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದ್ದು, ತಮಿಳಿನಿಂದ ಕನ್ನಡ ಹುಟ್ಟಿದೆ ಎಂದ ಕಮಲ್ ಹಾಸನ್ ಮಾತನ್ನು ಒಪ್ಪಲ್ಲ ಎಂದು ಸೋಷಿಯಲ್ ಮೀಡಿಯಾ ದಲ್ಲಿ ಜಗ್ಗೇಶ್ (Jaggesh) ಖಂಡಿಸಿದ್ದಾರೆ. ಕಲೆಗೆ ಜಾತಿ ಇಲ್ಲ. ಎಲ್ಲಾ ಭಾಷೆಯ ಕಲಾವಿದರು ಶಾರದಾಸುತರು ಒಪ್ಪುತ್ತೇವೆ. ಆ ನಿಟ್ಟಿನಲ್ಲಿ ಕಮಲ್ ಹಾಸನ್ (Kamal Haasan) ಅವರನ್ನು ಮೆಚ್ಚಿದ್ದೇವೆ. ಹಾಗಂತ ಕನ್ನಡ ತಮಿಳಿಂದ ಹುಟ್ಟಿದೆ ಎಂದ ಅವರ ಮಾತು ಒಪ್ಪಲ್ಲ. ಕನ್ನಡಕ್ಕೆ ಎರಡೂವರೆ ಸಾವಿರ ವರ್ಷದ ಇತಿಹಾಸವಿದೆ. ಅಷ್ಟೇಕೆ ಹನುಮದೇವರು ಕನ್ನಡ ಕಲಿಪುಂಗವ ಅವನ ಕಾಲ ರಾಮಾಯಣ ಇಷ್ಟು ಅರ್ಥವಾದರೆ ಸಾಕಲ್ಲವೆ ಸಾರ್ ಎಂದು ಜಗ್ಗೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವರನಟ ಡಾ. ರಾಜ್‌ಕುಮಾರ್ ಪುತ್ರ ಶಿವಣ್ಣ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಆರಂಭ ಆಗಿದೆ. ಹೀಗಿದ್ದಾಗಲೇ, ಮುಖ್ಯಮಂತ್ರಿ ಚಂದ್ರು ಅವರು ಕೂಡ ನಟ ಕಮಲ್ ಹಾಸನ್ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದು. ಶಿವಣ್ಣ ಅವರ ಬಗ್ಗೆಯೂ ಖಾಸಗಿ ಸಂದರ್ಶನ ಒಂದರಲ್ಲಿ ಪ್ರತಿಕ್ರಿಯೆ ನೀಡಿರುವುದು ಈಗ ವೈರಲ್ ಆಗುತ್ತಿದೆ. ಅದರಲ್ಲೂ ಕನ್ನಡದ ಬಗ್ಗೆ ಯಾರೂ ಹೀಗೆ ಮಾತನಾಡಬಾರದು ಅಂತಾ ಇದೀಗ ಕನ್ನಡಿಗರು ಆಗ್ರಹ ಮಾಡುತ್ತಿದ್ದು, ನಟ ಶಿವಣ್ಣ ಅವರು ಕಮಲ್ ಹಾಸನ್ ಹೇಳಿಕೆ ಖಂಡಿಸಬೇಕು ಎಂದು ನೆಟ್ಟಿಗರು ಆಗ್ರಹ ಮಾಡುತ್ತಿದ್ದಾರೆ. ಇನ್ನು ನಟ ಶ್ರೀ ನಾಥ್, ನಟ ಪ್ರಥಮ್, ಹೀಗೆ ಹಲವಾಋಉ ನಟ ನಟಿಯರು ಕಮಲ್ ಹೇಳಿಕೆ ಖಂಡಿಸಿದ್ದಾರೆ.
Also Read: ಪ್ಲೇಯರ್ ಆಫ್ ದಿ ಮ್ಯಾಚ್.. RCB ಯದ್ದೇ ದಾಖಲೆ!

ಕನ್ನಡ ಭಾಷೆಯ ಉಗಮದ ಬಗ್ಗೆ ಕಮಲ್ ಹಾಸನ್ ಮಾತಾಡಿದ್ದು ತಪ್ಪು, ಮಾತಾಡುವ ಮೊದಲು ಅವರು ಯೋಚನೆ ಮಾಡಬೇಕಿತ್ತು, ನಟ ಹೇಳಿದ್ದು ಅವರ ಅಭಿಪ್ರಾಯ, ಅವರೇನೂ ಭಾಷಾ ತಜ್ಞರಲ್ಲ, ಹಾಗಂತ ಅವರಾಡಿದ ಮಾತಿನಿಂದ ನಮ್ಮ ಭಾಷೆಯ ಘನತೆಗೇನೂ ಧಕ್ಕೆ ಬರಲ್ಲ ಎಂದು ಮಾಜಿ ಸಂಸದೆ ಸುಮಲತಾಅಂಬರೀಷ್ ತಿರುಗೇಟು ನೀಡಿದ್ದಾರೆ. ಕಮಲ್ ಆಡಿದ ಮಾತನ್ನು ಕನ್ನಡಿಗರ್ಯಾರೂ ಒಪ್ಪಲ್ಲ, ತಾವಾಡಿದ ಮಾತಿಗೆ ಕಮಲ್ ಹಾಸನ್ ಕ್ಷಮೆ ಕೇಳಿದರೂ ಆಡಿದ ಮಾತು ತಪ್ಪೇ, ಭಾಷೆಗಳ ಉಗಮ, ಇತಿಹಾಸದ ಬಗ್ಗೆ ನಮಗ್ಯಾರಿಗೂ ಗೊತ್ತಿಲ್ಲ, ಹಾಗಾಗಿ ಗೊತ್ತಿಲ್ಲದ ವಿಚಾರಗಳನ್ನು ಮಾತಾಡಬಾರದು ಎಂದು ಸುಮಲತಾ ಹೇಳಿದ್ರು.
