ಇತ್ತೀಚಿಗಷ್ಟೇ ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿ ಕನ್ನಡಿಗರನ್ನ ಸೋನು ನಿಗಮ್ ಕೆರಳಿಸಿದ್ರು. ಈ ಬೆನ್ನಲ್ಲೆ ಈಗ ಮತ್ತೋರ್ವ ಖ್ಯಾತ ನಟ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡೋ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ ದ್ದಾರೆ(kamal haasan controversy)
ನಟ ಕಮಲ್ ಹಾಸನ್ ತಮ್ಮ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಕನ್ನಡದ ಬಗ್ಗೆ ಹೇಳಿಕೆ ನೀಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕನ್ನಡಿಗರನ್ನ ಕೆರಳಿಸಿದೆ. ಇದಕ್ಕೆ ಕಮಲ್ ಹಾಸನ್ (kamal haasan controversy)ಕ್ಷಮೆ ಕೇಳಬೇಕು ಅಂತಾ ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇದಕ್ಕೆ ಕರವೇ ಅಧ್ಯಕ್ಷರಾದ ನಾರಯಣಗೌಡರು (Narayanagowda) ಕೂಡ ಕಿಡಿಕಾರಿದ್ದಾರೆ.
ಮಣಿರತ್ನಂ ಮತ್ತು ಕಮಲ್ ಹಾಸನ್ ಅವರ ಪ್ರಮುಖ ಸಿನಿಮಾ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿದ್ದು. ಇದರಲ್ಲಿ ವಿವಿಧ ವಿಚಾರಗಳ ಬಗ್ಗೆ ಕಮಲ್ ಹಾಸನ್ ಅವರು ಮಾತನಾಡಿದ್ದಾರೆ. ಇದರಲ್ಲಿ ಕನ್ನಡ ವಿಚಾರವೂ ಚರ್ಚೆಯಾಗಿದೆ.
ದ್ರಾವಿಡ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ತಮಿಳಿನಿಂದಲೇ ಕನ್ನಡ ಭಾಷೆ ಹಾಗೂ ದಕ್ಷಿಣ ಭಾರತದ ವಿವಿಧ ಭಾಷೆಗಳ ಜನನವಾಗಿದೆ ಎಂದು ತಮಿಳಿಗರು ವಾದ ಮಾಡುವುದು ಇದೆ. ಆದರೆ, ಇದೇ ಮೊದಲ ಬಾರಿಗೆ ಮುಕ್ತ ವೇದಿಕೆಯಲ್ಲಿ ಕನ್ನಡದಲ್ಲೂ ನಟಿಸಿರುವ ಹಾಗೂ ಬಹುಭಾಷ ನಟ ತಮಿಳು ಕನ್ನಡವನ್ನು ಉಲ್ಲೇಖಿಸಿ ಮಾಡಿರುವ ಹೇಳಿಕೆಗೆ ಕನ್ನಡಿಗರು ಆಕ್ರೋಶಿತರಾಗಿದ್ದಾರೆ.
ಇನ್ನು ಈ ಕುರಿತು ಮಾತನಾಡಿದ ಕರವೇ ಅಧ್ಯಕ್ಷರು, ನಟ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಆಡಿದ ಮಾತು ಬಹಳ ದುಬಾರಿಯಾಗಿದೆ. ಸುದ್ದಿಗಾರರೊಂದಿಗೆ ಮಾತಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ ಅವರು, ಕಮಲ್ ಹಾಸನ್ ಕೇವಲ ತಮಿಳರನ್ನು ಓಲೈಸಲು ಮತ್ತು ತನ್ನ ಭಾಷೆಯ ಮೇಲಿನ ದುರಭಿಮಾನದಿಂದ ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ.
Also Read: ರಾಜ್ಯದಲ್ಲಿ Corona ಕಾಟ.. ಶಾಲಾ ಮಕ್ಕಳಿಗೆ ಹೊಸ ಗೈಡ್‌ಲೈನ್ಸ್!?
ಅವರಿಗೆ ಮಾತಾಡುವ ಚಪಲವಿದ್ದರೆ ತಮಿಳು ಭಾಷೆಯ ಬಗ್ಗೆ ಮಾತಾಡಿಕೊಳ್ಳಲಿ, ಕನ್ನಡ ಭಾಷೆ ಕುರಿತು ಮಾತಾಡಲು ಅವರಿಗೆ ಇರುವ ಯೋಗ್ಯತೆಯಾದರೂ ಏನು? ತಾನಾಡಿರುವ ಮಾತುಗಳನ್ನು ಕಮಲ ಹಾಸನ್ ಕೂಡಲೇ ವಾಪಸ್ಸು ತೆಗೆದುಕೊಳ್ಳಬೇಕು ಮತ್ತು ಕನ್ನಡಿಗರನ್ನ ಕ್ಷಮೆ ಕೇಳಬೇಕು ಎಂದು ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.