ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ತಂಡ(India Test Squad)ವನ್ನು ಆಯ್ಕೆ ಮಾಡಲಾಗಿದೆ.. ಟೆಸ್ಟ್ ತಂಡದ ನಾಯಕರಾಗಿ ಯಂಗ್ ಬ್ಯಾಟರ್ ಶುಭಮನ್ ಗಿಲ್ ಆಯ್ಕೆಯಾಗಿದ್ರೆ, ವಿಕೆಟ್ ಕೀಪರ್ ರಿಷಬ್ ಪಂತ್‌ಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.. ತಂಡದಲ್ಲಿ ಬಹುತೇಕರು ಯಂಗ್‌ಸ್ಟರ್‌ಗಳೇ ಇದ್ದು, ರವೀಂದ್ರ ಜಡೇಜಾ, ಬೂಮ್ರಾ ಮಾತ್ರ ಅನುಭವಿ ಆಟಗಾರರೇ ಇರೋದು ವಿಶೇಷ.. ಇನ್ನು, ಯಶಸ್ವಿ ಜೈಸ್ವಾಲ್ ಹಾಗೂ ನಿತೀಶ್‌ಕುಮಾರ್ ರೆಡ್ಡಿ ಸ್ಥಾನ ಪಡೆದಿದ್ದಾರೆ.
ಇದ್ರ ಜೊತೆಗೆ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಸಾಯಿ ಸುದರ್ಶನ್ ಕೂಡ ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.. ಇನ್ನೊಂದು ಅಚ್ಚರಿ ಅಂದ್ರೆ ಮೂವರು ಕನ್ನಡಿಗರಿಗೆ ಟೀಂ ಇಂಡಿಯಾ ಟೆಸ್ಟ್ ಬಾಗಿಲು ತೆರೆದಿದೆ.. ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಕರುಣ್ ನಾಯರ್ ಹಾಗೂ ವೇಗಿ ಪ್ರಸಿದ್ಧ ಕೃಷ್ಣಗೆ ಇಂಗ್ಲೆಂಡ್ ಪ್ರವಾಸದ ಟಿಕೆಟ್ ಸಿಕ್ಕಿದೆ..



ಇದ್ರ ಜೊತೆಗೆ ಇಬ್ಬರು ವಿಕೆಟ್ ಕೀಪರ್‌ಗಳಿಗೆ ಚಾನ್ಸ್ ನೀಡಿದ್ದು, ಉಪನಾಯಕ ಪಂತ್ ಜತೆಗೆ ಧ್ರುವ್ ಜುರೇಲ್‌ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಲಾಗಿದೆ.. ಮತ್ತೊಂದೆಡೆ, ಅನುಭವಿ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಹಾಗೂ ವಾಶಿಂಗ್ಟನ್ ಸುಂದರ್ ಹಾಗೂ ಶಾರ್ದುಲ್ ಠಾಕೂರ್‌ಗೆ ತಂಡದಲ್ಲಿ ಸಿಕ್ಕಿದೆ..
Also Read: ಮತ್ತೆ ಬಂತು Corona.. ಹೊಸ ಗೈಡ್‌ಲೈನ್ಸ್ ಜಾರಿ.. ಏನೆಲ್ಲಾ ರೂಲ್ಸ್..!

ಮತ್ತೊಂದೆಡೆ, ವೇಗಿಗಳಾದ ಜಸ್ಪ್ರಿತ್ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್ ಸ್ಥಾನ ಪಡೆದಿದ್ದಾರೆ. ಸ್ಪಿನ್ ಬೌಲರ್ ಆಗಿ ಕುಲ್ದೀಪ್ ಯಾದವ್ ಜವಾಬ್ದಾರಿ ನಿರ್ವಹಿಸಲಿದ್ದಾರೆ..
