ಅಕ್ರಮ ಚಿನ್ನ ಸಾಗಣಿಕೆ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್‌ಗೆ 102.55 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ರನ್ಯಾ ಅವರು ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನವನ್ನು ವಿದೇಶದಿಂದ ಅಕ್ರಮವಾಗಿ ಭಾರತಕ್ಕೆ ತಂದಿದ್ದರು. ತನಿಖೆ ವೇಳೆ ರನ್ಯಾ ರಾವ್‌ ಅಕ್ರಮವಾಗಿ 127.3 ಕೆಜಿ ಚಿನ್ನ ಸಾಗಾಟ ಮಾಡಿರುವುದು ದೃಢಪಟ್ಟಿದೆ.

ಇದಕ್ಕೆ ಸಂಬಂಧಪಟ್ಟಂತೆ ರನ್ಯಾಗೆ ಡಿಆರ್‌ಐ ನೋಟಿಸ್ ನೀಡಿದ್ದು, ದಂಡ ಪಾವತಿಸುವಂತೆ ಸೂಚನೆ ನೀಡಿದೆ. ಮಾರ್ಚ್ 4ರಂದು ಗೋಲ್ಡ್ ಸೀಜ್ ಮಾಡಿ ರನ್ಯಾ ರಾವ್ ಅವರನ್ನು ಡಿಆರ್​ಐ ಬಂಧಿಸಿತ್ತು. ಕಳ್ಳಸಾಗಣೆ ವಸ್ತುಗಳನ್ನು 6 ತಿಂಗಳಲ್ಲಿ ಡಿಆರ್​ಐ ಅಧಿಕಾರಿಗಳು ವಸೂಲಿ ಮಾಡಬೇಕಿದೆ. ಇಂದು ಜೈಲಿಗೆ ತೆರಳಿ ರನ್ಯಾ ಸೇರಿ ನಾಲ್ವರೂ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ.

ದಂಡ ಪಾವತಿ ಮಾಡದಿದ್ದರೆ ಆಸ್ತಿ ಮುಟ್ಟುಗೋಲು ಹಾಕಲು ಅವಕಾಶವಿದೆ. ಇನ್ನು ಎ2 ಆರೋಪಿ ತರುಣ್ ಕೊಂಡುರು ರಾಜು 67.6 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವುದು ಧೃಡವಾಗಿದೆ. ಹೀಗಾಗಿ 62 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.

Read Also : ಸ್ಯಾಂಡಲ್‌ವುಡ್‌ನಲ್ಲಿ ಸುನಾಮಿ ಎಬ್ಬಿಸಿದ ʻಸು ಫ್ರಮ್‌ಸೋʼ.. ಬಾಕ್ಸಾಫೀಸ್‌ ಧೂಳೀಪಟ!

Share.
Leave A Reply