ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಮಾಜಿ ಸಂಸದ ಪ್ರತಾಪ್‌ ಸಿಂಹನ ವಿರುದ್ಧ ಗುಡುಗಿದರು. ಪಾಕಿಸ್ತಾನದ ಪರ ಯಾರು ಕೂಗಿದ್ದಾನೋ ಅವನಿಗೆ ಬೇಲು ಸಿಗಬಾರದು ಅಂತಹ ಸೆಕ್ಷನ್ ಹಾಕಿ ಒಳಗೆ ಹಾಕ್ತೀವಿ. ಯಾವನೋ ಕೂಗಿದರೆ ಸರ್ಕಾರ ಏನು ಮಾಡೋಕೆ ಆಗುತ್ತೆ…? ನಾನು ಗೃಹ ಸಚಿವರಿಗೆ ಮನವಿ ಮಾಡಿತ್ತೇನೆ ಅದೇನೋ ಪದ ಬಳಿಸಿದನಲ್ಲ ಆ ಪದ ಬಳಸಲ್ಲ ಶತ್ರು ದೇಶವನ್ನ ಹೇಟ್ ಮಾಡುತ್ತೇನೆ. ಬೇಲ್ ಕೂಡ ಸಿಗದ ಸೆಕ್ಷನ್ ಹಾಕಿ ಒದ್ದು ಒಳಗೆ ಹಾಕಬೇಕು. ೯೯% ಗಣೇಶ ವಿಸರ್ಜನೆ ಆಗಿದೆ ಎಂದು ಹೇಳಿದರು.

ಎಲ್ಲೋ ಒಂದೆರಡು ಕಡೆ ಸಮಸ್ಯೆ ಆಗಿದೆ ತಪ್ಪು ಯಾರು ಮಾಡಿದರು ತಪ್ಪೇ. ಹಿಂದು, ಮುಸ್ಲಿಮ್, ಕ್ರಿಶ್ಚಿಯನ್, ಯಾರು ಮಾಡಿದರು ತಪ್ಪೇ. ಅದಕ್ಕೆ‌ ಧರ್ಮ ಲೇಪನ ಮಾಡುವುದು ಯಾಕೆ..? ಅವರನ್ನ ಅರೆಸ್ಟ್ ಮಾಡಿದ್ದೀವಿ ತಾನೆ ಅವರನ್ನ ಒದ್ದು ಒಳಗೆ ಹಾಕಿದ್ದೇವೆ ಪ್ರತಾಪ್ ಸಿಂಹ ಹೀಗೆ ಸ್ಟ್ರೈಕ್ ಮಾಡಿದರೆ ಆತನನ್ನು ಒದ್ದು ಒಳಕ್ಕೆ ಹಾಕ್ತೀವಿ ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.

ಕಾನೂನು ಕೈಗೆ ತಗೆದುಕೊಂಡರೆ ಪ್ರತಾಪ್ ಆದರೇನು.? ಯತ್ನಾಳ್ ಆದರೇನು.? ಅವರ ಅಪ್ಪ ಆದರೇನು ಅವರ ಅಜ್ಜ ಆದರೇನು ಒದ್ದು ಒಳಗೆ ಹಾಕುತ್ತೇವೆ. ಲಾ ಅಂಡ್ ಆರ್ಡರ್ ಕಂಟ್ರೋಲ್‌ ಗೆ ಬರುವಾಗ ಇವರು ಹೋಗಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.‌ ನಾನು ಯತ್ನಾಳ್‌ಗೆ ಬಹಿರಂಗ ಸವಾಲು ಹಾಕುತ್ತೇನೆ ದೇವಸ್ಥಾನಕ್ಕೆ ಬನ್ನಿ ಹಿಂದು ಧರ್ಮದ ಬಗ್ಗೆ ಚರ್ಚೆ ಮಾಡೋಣ ಸುಮ್ಮನೆ ವಿಭೂತಿ ಹಾಕಿಕೊಂಡು ಬರೋದಲ್ಲ ಎಂದು ಯತ್ನಾಳ್‌ ವಿರುದ್ಧ ಸವಾಲೆಸೆದರು.

ಇನ್ನು ಪ್ರತಾಪ್‌ ಸಿಂಹ ವಿರುದ್ಧ ಮಾತನಾಡಿ, ಪ್ರತಾಪ್ ಸಿಂಹ ನೀವು ರಾಜಕಾರಣದಲ್ಲಿ ಏನು ಆಗಲ್ಲ.. ಸಿದ್ದರಾಮಯ್ಯ ಅವರ ಬಗ್ಗೆ ಮಾತಾಡ್ತೀರ ಅವರ ವಿರುದ್ದ ಕೇಸು ಹಾಕಿದ್ದಾರೆ ಕೇಸು, ಹಾಕೋಕಾದರು ಬರುತ್ತಾ?. ಪ್ರತಾಪ್ ಅವರೆ ಕೋತಿ ತರ ಆಡಬೇಡಿ ಕಮಂಗಿ ತರ ಆಡಬೇಡಿ ಬಾಯಿ ಮುಚ್ಕೊಂಡು ಇರಿ. ಗಣೇಶ ಹಬ್ಬ ಸಂದರ್ಭದಲ್ಲೇ ಯಾಕೆ ಹೀಗೆ ಆಗೋದು ಲಾ ಅಂಡ್ ಆರ್ಡರ್ ಕಂಟ್ರೋಲ್ಗೆ ಬರುವಾಗಲೇ ಒಂದು ಕೋತಿ ಮೈಸೂರಿಂದ ಬರುತ್ತೆ ಇನ್ನೊಂದು ಕೋತಿ ವಿಜಯಪುರದಿಂದ ಬರುತ್ತೆ ಎಂದು ಯತ್ನಾಳ್‌ ಹಾಗೂ ಪ್ರತಾಪ್‌ ಸಿಂಹ ವಿರುದ್ಧ ಭಾರಿ ವಾಗ್ದಾಳಿ ನಡೆಸಿದ್ದಾರೆ.

Read Also : ಒಳಮೀಸಲಾತಿ ಅನ್ಯಾಯ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ತೀವ್ರ ಪ್ರತಿಭಟನೆ : ಮಹಿಳೆ ಸೂಸೈಡ್‌ಗೆ ಯತ್ನ!

Share.
Leave A Reply