ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ರಾಮಾಯಣ ಸಿನಿಮಾ ಶೂಟಿಂಗ್‌ ಹಂತದಲ್ಲೇ ಸಾವಿರ ಕೋಟಿಗೂ ಹೆಚ್ಚು ಗಳಿಸಿ ದಾಖಲೆ ಬರೆದಿದೆ.. ಈಗಾಗ್ಲೇ ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ರಾಮಾಯಣ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. 1600 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿನಿಮಾ ರೆಡಿಯಾಗ್ತಿದ್ದು, ಶೂಟಿಂಗ್‌ ಹಂತದಲ್ಲೇ ಸಿನಿಮಾ ಭರ್ಜರಿ ಗಳಿಕೆ ತಂದುಕೊಟ್ಟಿದೆ. ಹೌದು.. ಪ್ರೈಮ್ ಫೋಕಸ್ ಕಂಪನಿಯ ಷೇರು ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.

ರಾಮಾಯಣ ಸಿನಿಮಾದಲ್ಲಿ ಬಾಲಿವುಡ್‌ ನಟ ರಣಬೀರ್ ಕಪೂರ್ ರಾಮನಾಗಿ, ರಾಕಿಂಗ್‌ ಸ್ಟಾರ್ ಯಶ್ ರಾವಣನಾಗಿ ಆಗಿ ದೊಡ್ಡ ಪರದೆಯ ಮೇಲೆ ‌ಮಿಂಚಲಿದ್ದಾರೆ. ಫಸ್ಟ್‌ ಲುಕ್‌ ಟೀಸರ್‌ ರಿಲೀಸ್‌ ಆದಾಗಿಂದಲೂ ಸಿನಿಮಾ ಭಾರಿ ಸೆನ್ಸೇಷನ್‌ ಸೃಷ್ಟಸಿದೆ.. ರಾಮಾಯಣದ ಎರಡೂ ಭಾಗಗಳ ಬಜೆಟ್ 1600 ಕೋಟಿ ರೂಪಾಯಿ ಆಗಿದ್ದು, ಮೊದಲ ಭಾಗಕ್ಕೆ 835 ಕೋಟಿ ರೂ. ಎರಡನೇ ಭಾಗಕ್ಕೆ 700 ಕೋಟಿ ರೂಪಾಯಿ ಅಂತಾ ಚಿತ್ರತಂಡ ಮೀಸಲಿಟ್ಟಿದೆ. 2026 ರ ದೀಪಾವಳಿಯಂದು ಬಿಡುಗಡೆಯಾಗುತ್ತಿರುವ ರಾಮಾಯಣ ಸಿನಿಮಾ, ಈಗಾಗ್ಲೇ 1000 ಕೋಟಿ ರೂಪಾಯಿ ವ್ಯವಹಾರ ಮಾಡಿದೆ.

ಇನ್ನು, ರಾಮಾಯಣ ಚಿತ್ರವನ್ನು ಪ್ರೈಮ್ ಫೋಕಸ್ ಕಂಪನಿಯ ಮೂಲಕ ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ. ಈ ಕಂಪನಿಯು 2006 ರಿಂದ ಭಾರತೀಯ ಷೇರು ವಿನಿಮಯ ಕೇಂದ್ರದಲ್ಲಿ ಸದ್ದು ಮಾಡ್ತಿದೆ. ಈಗ, ಕೆಲವು ದಿನಗಳ ಹಿಂದೆ ರಾಮಾಯಣದ ಟೀಸರ್‌ ಗ್ಲಿಂಪ್ಸ್‌ ರಿಲೀಸ್ ಆಗಿದ್ದು, ಕಂಪನಿಯ ಷೇರು ಬೆಲೆ ಶೇಕಡಾ 30ರಷ್ಟು ಹೆಚ್ಚಾಗಿದೆ. ಜೂನ್ 25 ರಿಂದ ಜುಲೈ 1ರ ನಡುವೆ ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್’ ಚಿತ್ರದ ಪಾಲು ಶೇಕಡಾ 30 ರಷ್ಟು ಏರಿಕೆಯಾಗಿದೆ.

113.47 ರೂಪಾಯಿ ಇದ್ದ ಶೇರು. 149.69 ಕ್ಕೆ ಏರಿಕೆಯಾಗಿದ್ದು, ಸಾವಿರ ಕೋಟಿಗೂ ಹೆಚ್ಚು ಆದಾಯ ಬಂದಿದೆ.. ಶೂಟಿಂಗ್‌ ಹೊತ್ತಲ್ಲೇ ರಾಮಾಯಣ ಸಿನಿಮಾದ ಸಾಧನೆ ಭಾರಿ ಸೆನ್ಸೇಷನ್‌ ಸೃಷ್ಟಿಸಿದೆ. ಮತ್ತೊಂದ್ಕಡೆ, ರಾಮಾಯಣ ಸಿನಿಮಾ ಬಗ್ಗೆ ವಿವಾದವೊಂದು ಹುಟ್ಟಿಕೊಂಡಿದೆ. ಬೀಫ್‌ ಸೇವನೆ ಮಾಡುವ ರಣಬೀರ್‌ ಕಪೂರ್‌ ರಾಮನ ಪಾತ್ರ ಮಾಡಿದ್ಯಾಕೆ ಅಂತಾ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ..

Share.
Leave A Reply