ಆನ್‌ಲೈನ್‌ ಫುಡ್‌ ಅಥವಾ ಯಾವುದೇ ವಸ್ತುವನ್ನು ನಾವು ಆರ್ಡರ್‌ ಮಾಡಿದ್ರೆ ಸ್ವಲ್ಪ ಹೊತ್ತಲ್ಲೇ ಅದು ನಮ್ಮ ಮನೆ ಬಾಗಿಲಿಗೆ ಬಂದಿರುತ್ತೆ.. ಇದ್ರಿಂದ ನಮ್ಮ ಗಂಟೆಗಟ್ಟಲೇ ಸಮಯ ವ್ಯರ್ಥವಾಗೋದು ಉಳಿಯುತ್ತೆ.. ಆದ್ರೆ, ಇದಕ್ಕೆಲ್ಲಾ ಕಾರಣ ಕಾರ್ಮಿಕರು.. ಅಂದರೆ ಫುಡ್‌ ಡೆಲಿವರಿ ಬಾಯ್ಸ್‌, ಅಮೆಜಾನ್, ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್, ಇತ್ಯಾದಿ ವಿತರಣಾ ಕೆಲಸಗಾರರು..

ಜನರನ್ನು ಸುಲಭವಾಗಿ ಇನ್ನೊಂದು ಜಗತ್ತಿಗೆ ಕನೆಕ್ಟ್‌ ಮಾಡೋದು ಇವರ ಕಾಯಕ.. ಆದ್ರೆ, ಇಷ್ಟೊಂದು ಕಷ್ಟಪಟ್ಟು ದುಡಿಯುವ ಇವರಿಗೆ ಸಂಬಳ ಬಿಟ್ಟರೆ ಯಾವುದೇ ಬೇರೆ ಯಾವ ಸೌಲಭ್ಯವೂ ಇಲ್ಲ.. ಇದುವರೆಗೆ ಸರ್ಕಾರವಾಗ್ಲಿ, ಸಂಘ ಸಂಸ್ಥೆಗಳಾಗಲಿ ಇವರ ಕಲ್ಯಾಣಕ್ಕೆ ಮನಸು ಮಾಡಿರಲಿಲ್ಲ.. ಇದೀಗ ಕಾರ್ಮಿಕ ಸಚಿವರಾದ ಮಾನ್ಯ ಸಂತೋಷ್‌ ಲಾಡ್‌ ಅವರು ಈ ಕಾರ್ಮಿಕರ ಕಲ್ಯಾಣಕ್ಕೆ ಮುಂದಡಿ ಇಟ್ಟಿದ್ದಾರೆ.. ಅವರ ಜೀವನೋದ್ಧಾರಕ್ಕೆ ಹಿಂದೆಂದೂ ಆಗದ ಕೆಲಸ ಮಾಡಿ ತೋರಿಸಿದ್ದಾರೆ..

ಕಾರ್ಮಿಕರ ಉದ್ಧಾರಕ್ಕಾಗಿಯೇ‌ ಸಚಿವರಾದ ಸಂತೋಷ್‌ ಲಾಡ್ ಅವರು ಪಣ ತೊಟ್ಟವರು. ದುಡಿಯುವ ಕೈಗಳಿಗೆ ಬಲ ತುಂಬಲೆಂದೇ ಲಾಡ್‌ ಅವರು ಹೈಕಮಾಂಡ್‌ ಮುಂದೆ ಹಠ ಹಿಡಿದು, ಕಾರ್ಮಿಕ ಖಾತೆಯನ್ನೇ ಪಡೆದಿದ್ದಾರೆ.. ಈಗ 2 ವರ್ಷದಿಂದ ಕಾರ್ಮಿಕ ಇಲಾಖೆ ಖಾತೆಯನ್ನು ಸಂತೋಷ್‌ ಲಾಡ್‌ ಅವರು ತುಂಬಾ ಅಚ್ಚುಕಟ್ಟಾಗಿ, ಜವಾ ಬ್ದಾರಿಯುತವಾಗಿ ಮುನ್ನಡೆಸುತ್ತಿದ್ದಾರೆ.. ಲಾಡ್‌ ಅವರ ಕಠಿಣ ಶ್ರಮ, ಬದ್ಧತೆ, ಜನಪರ ಕಾಳಜಿಯಿಂದಾಗಿ ಈಗ ಗಿಗ್‌ ಕಾರ್ಮಿಕರ (Gig Workers) ಕಲ್ಯಾಣಕ್ಕಾಗಿ ಹೊಸ ಯೋಜನೆ ಜನ್ಮ ತಳೆದಿದೆ..

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜುಲೈ 7, 2023ರಂದು ಕರ್ನಾಟಕದ 14 ನೇ ಬಜೆಟ್‌ನಲ್ಲಿ ಗಿಗ್ ವರ್ಕರ್ಸ್ ವಿಮಾ ಯೋಜನೆ ಘೋಷಣೆ ಮಾಡಿದ್ದರು.. ಇದೀಗ ಕಾಂಗ್ರೆಸ್‌ ಸರ್ಕಾರದ ಭಾಗವಾಗಿ ಕಾರ್ಮಿಕ ಇಲಾಖೆಯಡಿ ಗಿಗ್‌ ವರ್ಕರ್ಸ್‌ಗೆ ಅನುಕೂಲವಾಗುವಂತಹ ಯೋಜನೆಗಳನ್ನು ಲಾಡ್‌ ಅವರು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.. ಮಾನ್ಯ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಈ ಮಸೂದೆಗಳಿಗೆ ಅಂಕಿತ ಹಾಕಿದ್ದು, ರಾಜ್ಯ ಸರ್ಕಾರ ವೂ ಒಂದು ಕ್ಷಣ ತಡಮಾಡದೇ ಕಾರ್ಮಿಕರ ಅನುಕೂಲಕ್ಕಾಗಿ ಹೊಸ ಕಾನೂನು ಜಾರಿಗೆ ತಂದಿದೆ.. ಗಿಗ್ ಕಾರ್ಮಿಕರ ಕಾಯ್ದೆ ಜೊತೆಗೆ ಗಿಗ್‌ ಕಾರ್ಮಿಕರಿಗಾಗಿಯೇ ಹೊಸ ಮಂಡಳಿ ರಚನೆ ಮಾಡಲಾಗಿದೆ..

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ‌ಯಶಸ್ವಿಯಾಗಿ 2 ವರ್ಷಗಳನ್ನು ಪೂರೈ ಸಿದೆ.. ಇಂತಹ ಸುಸಂದರ್ಭದಲ್ಲಿ ಬಡವರ ಬಾಳು ಬೆಳಗುವಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಹೆಮ್ಮೆ ಅನ್ನಿಸುತ್ತಿದೆ.. ಅದರಲ್ಲೂ ಗಿಗ್‌ ಕಾರ್ಮಿಕರ ವ್ಯಾಪ್ತಿಯಲ್ಲಿ ಬರುವ ಅಮೆಜಾನ್, ಫ್ಲಿಪ್‌ಕಾರ್ಟ್, ಜೊಮ್ಯಾಟೊ, ಸ್ವಿಗ್ಗಿ, ಸ್ನ್ಯಾಪ್‌ಡೀಲ್, ಇತ್ಯಾದಿ ವಿತರಣಾ ಕೆಲಸಗಾರರು ಗಿಗ್ ಕಾರ್ಮಿಕರ ವಿಮಾ ಯೋಜನೆಯ ಪ್ರಯೋಜನ ಪಡೆಯುತ್ತಾರೆ.

ಗಿಗ್‌ ಕಾರ್ಮಿಕರ ಸವಲತ್ತು!

  • ಗಿಗ್‌ ಕಾರ್ಮಿಕರ 4 ಲಕ್ಷದವರೆಗೆ ವಿಮೆ
  • 2 ಲಕ್ಷ ಮೌಲ್ಯದ ಜೀವ ವಿಮೆ & 2 ಲಕ್ಷ ಆಕಸ್ಮಿಕ ವಿಮೆ
  • ಅಪಘಾತದಿಂದ ಅಂಗವೈಕಲ್ಯಕ್ಕೆ 2 ಲಕ್ಷ ರೂ.ವರೆಗೆ ಪರಿಹಾರ
  • 1 ಲಕ್ಷದವರೆಗಿನ ಆಸ್ಪತ್ರೆ ವೆಚ್ಚಗಳ ಮರುಪಾವತಿಗೆ ಅವಕಾಶ

ಸಚಿವರಾದ ಸಂತೋಷ್‌ ಲಾಡ್‌ ಅವರು ಜಾರಿಗೆ ತಂದಿರುವ ಈ ಯೋಜನೆಗಳು ಗಿಗ್‌ ಕಾರ್ಮಿಕರ ಬಾಳಿಗೆ ಆಧಾರವಾಗಲಿ… ಅವರ ಜೀವನದ ಸಂಕಷ್ಟಗಳು ದೂರಾಗಲಿ.. ಅವರ ಹೆಂಡ್ತಿ, ಮಕ್ಕಳು, ಕುಟುಂಬಸ್ಥರು ನಿಶ್ಚಿಂತೆಯಿಂದ ಜೀವನ ನಡೆಸಲಿದೆ ಅನ್ನೋದು ಲಾಡ್‌ ಅವರ ಉದ್ದೇಶ ಮತ್ತು ಕಳಕಳಿ..

ಈಗಾಗ್ಲೇ ಈ 30 ಸಾವಿರಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಹೆಚ್ಚೆಚ್ಚು ಗಿಗ್‌ ಕಾರ್ಮಿಕರು ತಮ್ಮ ಹೆಸರು ನೋಂದಾಯಿಸಿಕೊಂಡು, ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲಿ ಲಾಡ್ ಅವರ ಆಶಯ.. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ..

Share.
Leave A Reply