ಐಪಿಎಲ್ 2025ರ 65ನೇ ಲೀಗ್ ಪಂದ್ಯದ ನಾಲ್ಕನೇ ಸೋಲು ಆರ್‌ಸಿಬಿಯನ್ನು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇರಿಸಿದೆ. ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳನ್ನು ಉಳಿಸಿಕೊಳ್ಳಲು ಮಹತ್ವದ್ದಾಗಿದ್ದ ಪಂದ್ಯದಲ್ಲಿ RCB ಸೋಲು ಕಂಡಿದೆ. ಹಾಗಂತ ಪಾಯಿಂಟ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಬರೋ ಅವಕಾಶವನ್ನು ತಂಡ ಇನ್ನೂ ಕಳೆದುಕೊಂಡಿಲ್ಲ. ಮಂಗಳವಾರ ಲಖ್ನೋ ವಿರುದ್ಧ ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದ್ರೆ ಒಂದೇ ವಾರದಲ್ಲಿ ನಾಲ್ಕು ಪಂದ್ಯಗಳನ್ನ ಆಡುವ ಚಾನ್ಸ್ ಕೂಡ ಇದೆ.
ಎಸ್‌ಆರ್‌ಎಚ್ ವಿರುದ್ಧ ಸೋತರೂ, ಆರ್‌ಸಿಬಿ ಟೇಬಲ್ ಟಾಪರ್ ಆಗಿ ಉಳಿಯುವ ಅವಕಾಶವನ್ನು ಹೊಂದಿರುತ್ತದೆ. ಮಂಗಳವಾರ ಲಕ್ನೋದಲ್ಲಿ ನಡೆಯಲಿರುವ ತಮ್ಮ ಮುಂದಿನ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಜಯಗಳಿಸುವಲ್ಲಿ ಆರ್‌ಸಿಬಿ ಯಶಸ್ವಿಯಾದರೆ, ಪಂಜಾಬ್ ಕಿಂಗ್ಸ್ ತಮ್ಮ ಉಳಿದ ಒಂದು ಲೀಗ್ ಪಂದ್ಯದಲ್ಲಿ ಸೋತರೆ, RCB ಅಂಕಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುತ್ತದೆ.
ಹೀಗಾಗಲೇ ಟೇಬಲ್ ಟಾಪ್ ಟೀಂಗಳನ್ನ ಬಾಟಮ್ ಟೀಂಗಳು ಸೋಲಿನ ರುಚಿ ತೋರಿಸಿರುವುದು ಒಂದು ರೀತಿ ಮೊದಲೆರಡು ಸ್ಥಾನಗಳಿಗೆ ಮತ್ತಷ್ಟು ಕುತೂಹಲ ಹುಟ್ಟಿಸಿದೆ. ಇಂದು ಪಂಜಾಬ್ ಮತ್ತು ಮುಂಬೈ ನಡುವೆ ಮಹತ್ವದ ಪಂದ್ಯ ನಡೆಯುತ್ತಿದ್ದು, ಗೆಲ್ಲುವ ತಂಡ ಟಾಪ್ ಒನ್ ಪ್ಲೇಸ್‌ಗೆ ಹೋಗುತ್ತೆ. ಅದೇ ರೀತಿ ಮಂಗಳವಾರ ನಡೆಯುವ ಪಂದ್ಯದಲ್ಲಿ RCB ತಂಡ ಲಖ್ನೋ ವಿರುದ್ಧ ಗೆಲುವು ಸಾಧಿಸಿದ್ರೆ ಮೊದಲ ಪ್ಲೇಸ್ ಅದಕ್ಕೆ ಫಿಕ್ಸ್ ಆಗುತ್ತೆ.
Also Read: ಇಂದಿನಿಂದ RTPCR ಕಿಟ್‌ಗಳ ಪೊರೈಕೆ: ಆರೋಗ್ಯ ಸಚಿವ Dinesh Gundu Rao
ಹೀಗೇನಾದ್ರೂ ಆದ್ರೆ RCB ತಂಡ ಕೇವಲ ಒಂದೇ ವಾರದಲ್ಲಿ ನಾಲ್ಕು ಪಂದ್ಯಗಳನ್ನ ಎದುರಿಸಿದಂತೆ ಆಗುತ್ತೆ. ಹೇಗೆ ಅಂದ್ರೆ ಮಂಗಳವಾರ ಲಖ್ನೋ ವಿರುದ್ಧ ಗೆದ್ದು ಆರ್‌ಸಿಬಿ ಟೇಬಲ್ ಟಾಪ್ ಆದ್ರೆ, ಸೆಮಿಫೈನಲ್ ಮ್ಯಾಚ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವನ್ನ ಎದುರಿಸಲಿದೆ. ಅಲ್ಲಿ ಏನಾದ್ರೂ ಸೋತರೆ ಎಲಿಮಿನೇಟರ್‌ನಲ್ಲಿ ಗೆಲುವು ಸಾಧಿಸಿದ ತಂಡದ ಜೊತೆ ಸೆಣಸಾಡಿ ಅಲ್ಲಿ ಗೆಲುವು ಸಾಧಿಸಿದರೆ ಫೈನಲ್‌ನಲ್ಲಿ ಪಂದ್ಯವನ್ನ ಎದುರಿಸಲಿದೆ. ಹಾಗಾಗಿ ಒಂದೇ ವಾರದಲ್ಲಿ ಆರ್‌ಸಿಬಿ ನಾಲ್ಕು ಪಂದ್ಯಗಳನ್ನ ಆಡುವ ಚಾನ್ಸ್ ಕೂಡ ಇದೆ. ಇದು ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ತಂದಿದೆ.
ಆರ್‌ಸಿಬಿ ತಂಡವು ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆದರೆ, ಮೇ 29 ರಂದು ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್‌ನಲ್ಲಿ ಆಡಲಿದೆ. ಮೊದಲ ಎರಡು ಸ್ಥಾನಗಳ ಹೊರಗೆ ಸ್ಥಾನ ಪಡೆದರೆ, ರಜತ್ ಪಟಿದಾರ್ ನೇತೃತ್ವದ ತಂಡವು ಮೇ 30 ರಂದು ಮುಲ್ಲನ್‌ಪುರದಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯವನ್ನು ಆಡಲಿದೆ.
ಐಪಿಎಲ್ ನಿಯಮಗಳ ಪ್ರಕಾರ, ಮೊದಲ ಕ್ವಾಲಿಫೈಯರ್‌ನ ವಿಜೇತರು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ, ಆದರೆ ಸೋತವರು ಎರಡನೇ ಕ್ವಾಲಿಫೈಯರ್‌ನಲ್ಲಿ ಎಲಿಮಿನೇಟರ್ ಪಂದ್ಯದ ವಿಜೇತರನ್ನು ಎದುರಿಸುತ್ತಾರೆ. ಈ ವರ್ಷದ ಐಪಿಎಲ್‌ನ ಎರಡನೇ ಕ್ವಾಲಿಫೈಯರ್ ಜೂನ್ 1 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ.
