ರಾಜ್ಯದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನವಾಗಿದ್ದು ಅಕ್ರಮ ಮತಗಳು ಚಲಾವಣೆಯಾಗಿವೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಾಜಿ ಶಾಸಕ ಅರವಿಂದ ಲಿಂಬಾವಳಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿರುವ ಮಾಜಿ ಶಾಸಕ ಅರವಿಂದ ಲಿಂಬಾವಳಿ, ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆ ಸ್ವಾಗತೀಸಬೇಕೋ ಏನು ಮಾತನಾಡಬೇಕು ಎಂದು ಗೊತ್ತಾಗುತ್ತಿಲ್ಲ. ಮಹದೇವಪುರದಲ್ಲಿ ವಲಸಿಗರೇ ಹೆಚ್ಚು ಇದ್ದಾರೆ. ಹೀಗಾಗಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ರಾಹುಲ್ ಗಾಂಧಿ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.

2008 ರಿಂದ ಬಿಜೆಪಿ 4 ಬಾರಿ ಮಹದೇವಪುರ ವಿಧಾನಸಭೆ ಎಲೆಕ್ಷನ್ ನಲ್ಲಿ ಗೆಲುವು ಸಾಧಿಸಿದೆ. 4 ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಮಹದೇವಪುರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ ಎಂದಿದ್ದಾರೆ. ಆದರೆ ಚುನಾವಣೆ ವೇಳೆ ಗಾಂಧಿ ನಗರ, ರಾಜಾಜಿನಗರ, ಸಿವಿ ರಾಮನ್ ನಗರ, ಮಹದೇವಪುರದಲ್ಲಿ ಲೀಡ್ ಇತ್ತು. ಮಹದೇವಪುರ ವೇಗವಾಗಿ ಬೆಳಯುತ್ತಿರುವ ಕ್ಷೇತ್ರವಾಗಿದೆ ಎಂದರು.

ಗುರುಕಿರತ್ ಸಿಂಗ್ ಡ್ಯಾಂಗ್ 4 ಬೂತ್ ಗಳಲ್ಲಿ ಹೆಸರಿದೆ ಎಂದು ಆರೋಪವಿದೆ. ಮೊದಲ ಬಾರಿ ವೂಟರ್ ಲಿಸ್ಟ್ ಗೆ ಗುರುಕಿರತ್ ಅರ್ಜಿ ಸಲ್ಲಿಸಿದ್ದರು. ಗುರುಕಿರತ್ ಸಿಂಗ್ ಕನ್ನಮಂಗಲ ಸೀಗೆಹಳ್ಳಿಯಲ್ಲಿ ವಾಸವಾಗಿದ್ದಾರೆ. ಸದ್ಯಕ್ಕೆ ಚೆನ್ನೈನಲ್ಲಿ ಇದ್ದಾರೆ. ಮೊದಲ ಬಾರಿ, ಎರಡನೇ ಬಾರಿ ವೋಟರ್ ಲೀಸ್ಟ್ ಗೆ ಅಪ್ಲೆ ಮಾಡಿದರೂ ರಿಜೆಕ್ಟ್ ಆಗಿತ್ತು. ನಾಲ್ಕನೇ ಬಾರಿ ಅಪ್ಲೈ ಮಾಡಿದರೂ ಗುರುಕಿರತ್ ಸಿಂಗ್ ಅರ್ಜಿ ರಿಜೆಕ್ಟ್ ಆಗಿದೆ. ನಂತರ ನಾಲ್ಕುಸಾರಿ ಹೆಸರು ಅಪ್ಲೋಡ್ ಆಗಿದೆ ಎಂದು ಹೇಳಿದರು.

Share.
Leave A Reply