ENG vs IND : ಜೂನ್‌ 20ರಿಂದ ಆರಂಭವಾಗಲಿರುವ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ಸಜ್ಜಾಗ್ತಿದೆ. ಕೊಹ್ಲಿ, ರೋಹಿತ್‌ ಇಲ್ಲದೇ ಇರುವುದು ಮತ್ತಷ್ಟು ತಲೆಬಿಸಿಯಾಗಿರೋದ್ರಿಂದ ಅಳೆದು ತೂಗಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ.. ಇದರ ಪೂರ್ವಭಾವಿಯಾಗಿ ಭಾರತ A ತಂಡವನ್ನು ಪ್ರಕಟಿಸಲಾಗಿದೆ. ಟೆಸ್ಟ್‌ ಸರಣಿಗೂ ಮುನ್ನ ಮೇ 30ರಿಂದ ಭಾರತ ಎ ತಂಡ ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಅಭಿಮನ್ಯು ಈಶ್ವರನ್‌ಗೆ ಕ್ಯಾಪ್ಟೆನ್ಸಿ ನೀಡಲಾಗಿದ್ದು, ಕನ್ನಡಿಗ ಕರುಣ್‌ ನಾಯರ್‌ಗೆ ಅವಕಾಶ ನೀಡಲಾಗಿದೆ. ಇದಲ್ಲದೆ ಅನುಭವಿಗಳಾದ ಶಾರ್ದುಲ್‌ ಠಾಕೂರ್‌, ಯಶಸ್ವಿ ಜೈಸ್ವಾಲ್‌, ಇಶನ್‌ ಕಿಷನ್‌, ನಿತೀಶ್ ಕುಮಾರ್‌ ರೆಡ್ಡಿ, ಋತುರಾಜ್‌ ಗಾಯಕ್‌ವಾಡ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟೀಮ್‌ ಇಂಡಿಯಾದ ಟೆಸ್ಟ್‌ ತಂಡದ ನಾಯಕತ್ವ ರೇಸ್‌ನಲ್ಲಿ ಮುಂದಿರುವ ಶುಭ್‌ಮನ್‌ ಗಿಲ್‌ ಹಾಗೂ ಐಪಿಎಲ್‌ನಲ್ಲಿ ಅದ್ಭುತವಾಗಿ ಆಡುತ್ತಿರುವ ಸಾಯಿ ಸುದರ್ಶನ್‌ರನ್ನು ಎರಡನೇ ಅಭ್ಯಾಸ ಪಂದ್ಯಕ್ಕೆ ಆಯ್ಕೆ ಮಾಡಿರುವುದು ವಿಶೇಷ.

ಐಪಿಎಲ್ ಪ್ಲೇಆಫ್‌ನಿಂದ ಹೊರಬಿದ್ದಿರುವ ರಾಜಸ್ಥಾನ, ಹೈದರಾಬಾದ್‌ ಮುಂತಾದ ತಂಡಗಳ ಆಟಗಾರರನ್ನು ಭಾರತದ ಎ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅಭಿಮನ್ಯು ಈಶ್ವರನ್, ಧ್ರುವ್‌ ಜುರೇಲ್‌, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ಶಾರ್ದೂಲ್ ಠಾಕೂರ್, ತನುಷ್ ಕೋಟ್ಯಾನ್, ಮುಖೇಶ್ ಕುಮಾರ್, ಆಕಾಶ್ ದೀಪ್, ಖಲೀಲ್ ಅಹ್ಮದ್, ಅನ್ಶುಲ್ ಕಾಂಬೋಜ್, ಮನವ್ ಸುತಾರ್, ಹರ್ಷಿತ್‌ ರಾಣಾ, ಋತುರಾಜ್‌ ಗಾಯಕ್ವಾಡ್‌, ಸರ್ಫರಾಜ್‌ ಖಾನ್, ತುಷಾರ್‌ ದೇಶಪಾಂಡೆ, ಹರ್ಷ್‌ ದುಬೆ ಒಳಗೊಂಡ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

Also Read: ಭಾವಿ ಮೈದುನನಿಗೆ ಫ್ರೀಯಾಗಿ ಹೆಲ್ಪ್‌ ಮಾಡಿದ Rashmika Mandanna

ಈ ಎರಡೂ ಪಂದ್ಯಗಳು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಮಹತ್ವದ ಪಾತ್ರ ವಹಿಸಲಿವೆ. ಎರಡನೇ ಪಂದ್ಯಕ್ಕೆ ಶುಭಮನ್‌ ಗಿಲ್ ಮತ್ತು ಸಾಯಿ ಸುದರ್ಶನ್‌ ತಂಡವನ್ನು ಕೂಡಿಕೊಳ್ಳಲಿದ್ದಾರೆ.

Share.
Leave A Reply