ಅಧಿಕಾರ ಹಂಚಿಕೆ ಮತ್ತು ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾರ್ಮಿಕ ಉತ್ತರ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್, ನೀವೇ ಹೇಳಿದ ಹಾಗೆ ಡ್ರಾಮಾ ನಡೆಯುತ್ತಿದೆ ಅಷ್ಟೆ. ನನಗೆ ಡ್ರಾಮಾ ಕಂಪನಿ ಓಪನ್ ಮಾಡೋಕೆ ಇಷ್ಟ ಇಲ್ಲ. ಪದೇ ಪದೇ ಈ ಬಗ್ಗೆ ಚರ್ಚೆ ಹೇಳಿಕೆ ಕೊಡಬಾರದು. ನನೊಂದು ಹೇಳೋದು ಮತ್ತೊಬ್ಬರು ಒಂದು ಹೇಳೋದು ಆಗಬಾರದು. ನಾನು ಇರೋದೆ ಸಾಫ್ಟ್. ಸುಮ್ಮನೆ ಡ್ರಾಮಾ ಕಂಪನಿ ಓಪನ್ ಮಾಡಲು ನನಗೆ ಇಷ್ಟ ಇಲ್ಲ ಎಂದರು.

ನಮ್ಮ ಹೈಕಮಾಂಡ್ ನವರು ಎಲ್ಲವನ್ನೂ ಗಮನಿಸ್ತಾರೆ ಸಂದರ್ಭ ಬಂದಾಗ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ ಈಗ ಅಂತಹ ಸಂದರ್ಭ ಇದೆಯಾ ಅಂತ ಹೇಳೋಕೆ ಹೋಗಲ್ಲ. ಏನು ಮಾಡಬೇಕೋ ಅದನ್ನ ಹೈಕಮಾಂಡ್ ಮಾಡುತ್ತದೆ. ಸಿಎಂ ಸಿದ್ದರಾಮಯ್ಯ ಸರಿಯಾಗಿ, ಉತ್ತಮವಾಗಿ ಆಡಳಿತ ಮಾಡುತ್ತಿದ್ದಾರೆ ಎಂದರು.

Share.
Leave A Reply