ರಕ್ಷಣಾ ಸಚಿವ ರಾಜನಾಥ್ ಸಿಂಗ್ಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ. ವಿಶ್ವವಿಖ್ಯಾತ ಮೈಸೂರು ದಸರಾ-2025ರ ಅಂಗವಾಗಿ ಮೈಸೂರಿನಲ್ಲಿ ಭಾರತೀಯ ವಾಯುಪಡೆಯಿಂದ ವಾಯು ಪ್ರದರ್ಶನವನ್ನು ಆಯೋಜಿಸಲು ರಕ್ಷಣಾ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಪ್ಪಿಕೊಂಡಿದ್ದಕ್ಕಾಗಿ ಪತ್ರದ ಮೂಲಕ ಕೃತಜ್ಞತೆ ತಿಳಿಸಿದ್ದಾರೆ..
ಸಿಎಂ ಸಿದ್ದರಾಮಮಯ್ಯ ಪತ್ರದಲ್ಲೇನಿದೆ?
ಕರ್ನಾಟಕ ಸರ್ಕಾರ ಮತ್ತು ಜನರ ಪರವಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನಿಜಕ್ಕೂ, ನೀವು ಈ ಕಾರ್ಯಕ್ರಮವನ್ನು ವೈಯಕ್ತಿಕವಾಗಿ ಅಲಂಕರಿಸಲು ಸಾಧ್ಯವಾದರೆ ಅದು ಒಂದು ದೊಡ್ಡ ಗೌರವ. ನಿಮ್ಮ ಈ ಗೌರವಯುತ ಉಪಸ್ಥಿತಿಯು ಕರ್ನಾಟಕದ ನಾಗರಿಕರಿಗೆ ಅಪಾರ ಪ್ರೋತ್ಸಾಹ ನೀಡಿದಂತಾಗಲಿದೆ. ಜೊತೆಗೆ ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನಾವು ಹೊಂದಿರುವ ಗೌರವ ಮತ್ತು ಮೆಚ್ಚುಗೆಯು ಮತ್ತಷ್ಟು ಬಲಪಡಿಸುತ್ತದೆ.
ಐತಿಹಾಸಿಕ ದಸರಾ ಆಚರಣೆಯ ಸಮಯದಲ್ಲಿ ಮೈಸೂರಿನಲ್ಲಿ ನಿಮ್ಮನ್ನು ಸ್ವಾಗತಿಸಲು ಮತ್ತು ಆತಿಥ್ಯ ವಹಿಸಲು ಎದುರು ನೋಡುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಇನ್ನು ಈ ಮೂಲಕ ಸಿಎಂ ಸಿದ್ದರಾಮಯ್ಯ ಈ ಬಾರಿಯ ಮೈಸೂರು ದಸರಾಗೆ ರಾಜನಾಥ್ ಸಿಂಗ್ರನ್ನ ಆಹ್ವಾನಿಸಿದ್ದಾರೆ.
Read Also : ಅಮಿತ್ ಶಾ ಮಂಡಿಸಿದ ಮಸೂದೆಗೆ ತೀವ್ರ ವಿರೋಧ, ಮಸೂದೆ ಹರಿದು.. ಶಾ ಕಡೆಗೆ ಎಸೆದು.. ಪ್ರತಿಪಕ್ಷಗಳ ಆಕ್ರೋಶ
